Daily Devotional: ದೇವಾಲಯದಲ್ಲಿ ಕೊಡುವ ಕುಂಕುಮದ ವಿಶೇಷತೆ ಏನು? ಈ ವಿಡಿಯೋ ನೋಡಿ
ಸನಾತನ ಹಿಂದೂ ಧರ್ಮದಲ್ಲಿ ಕುಂಕುಮಕ್ಕೆ ವಿಶೇಷವಾದ ಸ್ಥಾನವಿದೆ. ಹಿಂದೂ ಧರ್ಮದ ಪ್ರತಿಯೊಂದು ಧಾರ್ಮಿಕ ಆಚರಣೆಯಲ್ಲಿ ಕುಂಕುಮ ಬಳಸುತ್ತಾರೆ. ದೇವಸ್ಥಾನದಲ್ಲಿರುವ ಕುಂಕುಮವನ್ನು ಏಕೆ ಹಚ್ಚಿಕೊಳ್ಳಬೇಕು? ಇದರ ಪ್ರಾಮುಖ್ಯವೇನು ಎಂಬುವುದನ್ನು ಬಸವರಾಜ ಗುರೂಜಿ ತಿಳಿಸಿದ್ದಾರೆ.
ಸನಾತನ ಹಿಂದೂ ಧರ್ಮದಲ್ಲಿ ಕುಂಕುಮಕ್ಕೆ ವಿಶೇಷವಾದ ಸ್ಥಾನವಿದೆ. ಹಿಂದೂ ಧರ್ಮದ ಪ್ರತಿಯೊಂದು ಧಾರ್ಮಿಕ ಆಚರಣೆಯಲ್ಲಿ ಕುಂಕುಮ ಬಳಸುತ್ತಾರೆ. ಹಿಂದೂ ಧರ್ಮದಲ್ಲಿ ಹಣೆಗೆ ಕುಂಕುಮ ಹಚ್ಚಿಕೊಳ್ಳುವ ರೂಢಿಯೂ ಇದೆ. ಶಿವನ ಆರಾಧಕರು ಸಾಮಾನ್ಯವಾಗಿ ಮೂರು ವೀಭೂತಿ ಪಟ್ಟೆಗಳನ್ನು ಅಡ್ದಲಾಗಿ ಎಳೆದು ಅದರ ಮಧ್ಯದಲ್ಲಿ ಕುಂಕುಮವನ್ನು ಗುಂಡಾಗಿ ಹಚ್ಚಿಕೊಳ್ಳುತ್ತಾರೆ. ವಿಷ್ಣುವಿನ ಆರಾಧಕರು ಎರಡು ಬಿಳಿಯ ನಾಮಗಳನ್ನು ಕೊಂಬಿನಾಕಾರದಲ್ಲಿ ಹಚ್ಚಿಕೊಂಡು, ಮಧ್ಯದಲ್ಲಿ ಕುಂಕುಮವನ್ನು ಗೆರೆಯ ರೀತಿ ಹಚ್ಚಿಕೊಳ್ಳುತ್ತಾರೆ. ಬಿಳಿಯ ನಾಮಗಳನ್ನು U ಆಕಾರದಲ್ಲಿ ಹಚ್ಚಿಕೊಳ್ಳುವ ಪದ್ದತಿಯೂ ಹಲವರಲ್ಲಿ ಇದೆ. ಸ್ವಾಮಿನಾರಾಯಣ ಅನುಯಾಯಿಗಳು ಕುಂಕುಮವನ್ನು ಕೊಂಬಿನಾಕಾರದಲ್ಲಿ ತಿಲಕದ ಮಧ್ಯದಲ್ಲಿ ಹಣೆಯ ಮಧ್ಯದಲ್ಲಿ ಇರುವಂತೆ ಇಟ್ಟುಕೊಳ್ಳುತ್ತಾರೆ. ಸಾಮಾನ್ಯವಾಗಿ ತಿಲಕವು ಹಳದಿಯಾಗಿದ್ದು ಶ್ರೀಗಂಧದಿಂದ ತಯಾರಿಸಿರುತ್ತಾರೆ. ದೇವಸ್ಥಾನದಲ್ಲಿರುವ ಕುಂಕುಮವನ್ನು ಏಕೆ ಹಚ್ಚಿಕೊಳ್ಳಬೇಕು? ಇದರ ಪ್ರಾಮುಖ್ಯವೇನು ಎಂಬುವುದನ್ನು ಬಸವರಾಜ ಗುರೂಜಿ ತಿಳಿಸಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ