ಮದುವೆಗೆ ಗಂಡ ಮತ್ತು ಹೆಂಡತಿಯ ನಡುವಿನ ವಯಸ್ಸಿನ ಅಂತರ ಎಷ್ಟಿರಬೇಕು?
Chanakya Niti -age gap for ideal marriage: ಆಚಾರ್ಯ ಚಾಣಕ್ಯರ ಪ್ರಕಾರ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಪತಿ-ಪತ್ನಿಯರ ಸಂಬಂಧ ಅತ್ಯಗತ್ಯ. ಇಬ್ಬರ ನಡುವೆ ದೊಡ್ಡ ವಯಸ್ಸಿನ ಅಂತರವಿದ್ದರೆ ಸಮಸ್ಯೆಗಳು ಎದುರಾಗುತ್ತವೆ. ಆಚಾರ್ಯ ಚಾಣಕ್ಯರ ಪ್ರಕಾರ, ವಯಸ್ಸಿನಲ್ಲಿ ಹಿರಿಯ ಪುರುಷನು ಕಿರಿಯ ಹುಡುಗಿಯನ್ನು ಮದುವೆಯಾಗಬಾರದು. ಹೀಗಾಗಿಯೇ ಮದುವೆಗಳು ಹೆಚ್ಚು ಕಾಲ ಉಳಿಯುವುದಿಲ್ಲ.
ಮದುವೆಯ ಸಮಯದಲ್ಲಿ ಅನೇಕ ಆಚಾರ ವಿಚಾರಗಳು ಪದ್ದತಿಗಳನ್ನು ಆಚರಿಸಲಾಗುತ್ತದೆ. ಅದರಲ್ಲಿ ಗಂಡು ಹೆಣ್ಣಿನ ವಯಸ್ಸು ಪ್ರಮುಖ ಅಂಶವಾಗಿದೆ. ಇಬ್ಬರ ನಡುವಿನ ವಯಸ್ಸಿನ ವ್ಯತ್ಯಾಸವೇನು? ಇದನ್ನು ಆಗಾಗ್ಗೆ ಚರ್ಚಿಸಲಾಗುತ್ತದೆ. ಆಚಾರ್ಯ ಚಾಣಕ್ಯ ತನ್ನ ನೀತಿ ಶಾಸ್ತ್ರದಲ್ಲಿ ಮದುವೆಗೆ ವಯಸ್ಸಿನ ಅಂತರದ ಬಗ್ಗೆ ಮಹತ್ವದ ಅಂಶ ಹೇಳಿದ್ದಾರೆ.
ಮದುವೆಯನ್ನು ಏರ್ಪಡಿಸುವಾಗ ಅನೇಕ ವಿಷಯಗಳನ್ನು ಗಮನಿಸಲಾಗುತ್ತದೆ. ಜಾತಿ, ಆರ್ಥಿಕ ಪರಿಸ್ಥಿತಿ, ಆದ್ಯತೆಗಳು, ಜಾತಕ ಹೀಗೆ ಹಲವು ವಿಷಯಗಳನ್ನು ಪರಿಶೀಲಿಸಲಾಗುತ್ತದೆ. ಅದರಲ್ಲಿ ವಯಸ್ಸಿನ ಅಂತರ ಎಷ್ಟಿರಬೇಕು ಎಂಬುದೂ ಮುಖ್ಯವಾಗುತ್ತದೆ.
ಆಚಾರ್ಯ ಚಾಣಕ್ಯ ಅವರು ನೀತಿ ಶಾಸ್ತ್ರದಲ್ಲಿ ಪತಿ-ಪತ್ನಿಯರ ನಡುವಿನ ವಯಸ್ಸಿನ ಅಂತರದ ಬಗ್ಗೆ ಹೇಳಿದ್ದಾರೆ. ಮದುವೆಯ ಸಮಯದಲ್ಲಿ ಇಬ್ಬರ ನಡುವಿನ ವಯಸ್ಸಿನ ಅಂತರ ಎಷ್ಟಿರಬೇಕು? ಈ ಬಗ್ಗೆ ಅಭಿಪ್ರಾಯ ವ್ಯಕ್ತವಾಗಿದೆ. ಚಾಣಕ್ಯನ ಪ್ರಕಾರ, ಇಬ್ಬರ ನಡುವೆ ವಯಸ್ಸಿನ ಅಂತರ, ವ್ಯತ್ಯಾಸ ಇರಬಾರದು.
Also Read: ಇಂತಹ ಜನರಿಗೆ ಹಣದ ಸಮಸ್ಯೆ ಎದುರಾಗುವುದಿಲ್ಲ, ಕಡಿಮೆ ಸಮಯದಲ್ಲಿ ಶ್ರೀಮಂತರಾಗುವುದು ಹೇಗೆ?
ಆಚಾರ್ಯ ಚಾಣಕ್ಯರ ಪ್ರಕಾರ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಪತಿ-ಪತ್ನಿಯರ ಸಂಬಂಧ ಅತ್ಯಗತ್ಯ. ಇಬ್ಬರ ನಡುವೆ ದೊಡ್ಡ ವಯಸ್ಸಿನ ಅಂತರವಿದ್ದರೆ ಸಮಸ್ಯೆಗಳು ಎದುರಾಗುತ್ತವೆ. ಆಚಾರ್ಯ ಚಾಣಕ್ಯರ ಪ್ರಕಾರ, ವಯಸ್ಸಿನಲ್ಲಿ ಹಿರಿಯ ಪುರುಷನು ಕಿರಿಯ ಹುಡುಗಿಯನ್ನು ಮದುವೆಯಾಗಬಾರದು. ಹೀಗಾಗಿಯೇ ಮದುವೆಗಳು ಹೆಚ್ಚು ಕಾಲ ಉಳಿಯುವುದಿಲ್ಲ.
Also Read: Gold Ring Good Luck – ಚಿನ್ನದ ಉಂಗುರವು ಈ 4 ರಾಶಿಯವರಿಗೆ ಭಾರೀ ಅದೃಷ್ಟವನ್ನು ತರುತ್ತದೆ!
ಆಚಾರ್ಯ ಚಾಣಕ್ಯರ ಪ್ರಕಾರ, ಮದುವೆಯ ನಂತರ ಪುರುಷ ಮತ್ತು ಮಹಿಳೆಯ ನಡುವೆ ಹೆಚ್ಚಿನ ವಯಸ್ಸಿನ ಅಂತರವಿದ್ದರೆ, ಸಮಸ್ಯೆಗಳು ಹೆಚ್ಚಾಗುತ್ತವೆ. ಇಂತಹ ಪರಿಸ್ಥಿತಿಯಲ್ಲಿ ಇಬ್ಬರ ಮನಸ್ಥಿತಿಯೂ ಬೇರೆ ಬೇರೆ ಆಗಿರುವುದರಿಂದ ಬಾಂಧವ್ಯ ದುರ್ಬಲವಾಗುತ್ತದೆ.
ಮದುವೆಯ ಸಮಯದಲ್ಲಿ ಪತಿ ಮತ್ತು ಹೆಂಡತಿಯ ನಡುವಿನ ವಯಸ್ಸಿನ ವ್ಯತ್ಯಾಸವು ಕಡಿಮೆಯಿದ್ದಷ್ಟೂ, ಇಬ್ಬರ ಮನಸ್ಥಿತಿಯಲ್ಲಿ ಹೆಚ್ಚಿನ ವ್ಯತ್ಯಾಸ ಇರುವುದಿಲ್ಲ. ಇಬ್ಬರೂ ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳುತ್ತಾರೆ. ಹಾಗಾಗಿ ಸಂಬಂಧ ಉತ್ತಮವಾಗಿರುತ್ತೆ.
ಮತ್ತಷ್ಟು ಆಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ