Garbhagudi Importance : ದೇವಸ್ಥಾನದಲ್ಲೇಕೆ ಗರ್ಭಗುಡಿ ಇರುತ್ತೆ? ಇದನ್ನು ಪ್ರವೇಶಿಸುವಾಗ ಪಾಲಿಸಬೇಕಾದ ನಿಯಮಗಳೇನು?
ಯಾವುದೇ ಹಿಂದೂ ದೇವಾಲಯಗಳಿಗೆ ಭೇಟಿ ನೀಡಿದರು ಅಲ್ಲಿ ಗರ್ಭಗುಡಿಯನ್ನು ನೋಡಬಹುದಾಗಿದೆ. ಇವುಗಳನ್ನು ನೋಡಿದಾಗ ನಿಮ್ಮ ಮನಸ್ಸಿನಲ್ಲಿ ದೇವಸ್ಥಾನಗಳಲ್ಲಿ ಗರ್ಭಗುಡಿಯನ್ನೇಕೆ ನಿರ್ಮಿಸಿದ್ದಾರೆ ಎಂಬ ಬಗ್ಗೆ ಪ್ರಶ್ನೆ ಸೃಷ್ಟಿಯಾಗಿರಬಹುದು. ಅಷ್ಟಕ್ಕೂ ದೇವಸ್ಥಾನಗಳಲ್ಲಿ ಗರ್ಭಗುಡಿಯನ್ನು ಏಕೆ ನಿರ್ಮಿಸಲಾಗಿರುತ್ತದೆ ಗೊತ್ತೇ? ಅದಕ್ಕೂ ಮುನ್ನ...
ಯಾವುದೇ ಹಿಂದೂ ದೇವಾಲಯಗಳಿಗೆ ಭೇಟಿ ನೀಡಿದರು ಅಲ್ಲಿ ಗರ್ಭಗುಡಿಯನ್ನು ನೋಡಬಹುದಾಗಿದೆ. ಅದರಲ್ಲೂ ಹೆಚ್ಚಾಗಿ ದೊಡ್ಡ ದೊಡ್ಡ ದೇವಾಲಯಗಳಲ್ಲಿ ಖಂಡಿತವಾಗಿಯೂ ನೋಡುತ್ತೀರಿ. ಇವುಗಳನ್ನು ನೋಡಿದಾಗ ನಿಮ್ಮ ಮನಸ್ಸಿನಲ್ಲಿ ದೇವಸ್ಥಾನಗಳಲ್ಲಿ ಗರ್ಭಗುಡಿಯನ್ನೇಕೆ ನಿರ್ಮಿಸಿದ್ದಾರೆ ಎಂಬ ಬಗ್ಗೆ ಪ್ರಶ್ನೆ ಸೃಷ್ಟಿಯಾಗಿರಬಹುದು. ಅಷ್ಟಕ್ಕೂ ದೇವಸ್ಥಾನಗಳಲ್ಲಿ ಗರ್ಭಗುಡಿಯನ್ನು ಏಕೆ ನಿರ್ಮಿಸಲಾಗಿರುತ್ತದೆ ಗೊತ್ತೇ? ಅದಕ್ಕೂ ಮುನ್ನ…
Importance of Garbhagudi in templeL ಗರ್ಭಗುಡಿ ಎಂದರೇನು?
ಧಾರ್ಮಿಕ ಗ್ರಂಥಗಳಲ್ಲಿ ದೇವಾಲಯದ ಗರ್ಭಗುಡಿಯನ್ನು ಆ ದೇವಾಲಯದ ಹೃದಯ ಸ್ಥಳ ಅಥವಾ ಬ್ರಹ್ಮ ಸ್ಥಳವೆಂದು ಕರೆಯಲಾಗಿದೆ. ಆಯಾ ದೇವಾಲಯದ ದೇವರ ಅಥವಾ ದೇವತೆಯ ಮೂಲ ವಿಗ್ರಹವನ್ನು ಈ ಗರ್ಭಗುಡಿಯಲ್ಲಿಟ್ಟು ಪೂಜಿಸಲಾಗುತ್ತದೆ. ಈ ಸ್ಥಳವು ದೇವರು ಮತ್ತು ದೇವತೆಗಳಿಗೆ ಆಹಾರ, ಅಭಿಷೇಕ ಮತ್ತು ವಿಶ್ರಾಂತಿ ನೀಡುವ ಸ್ಥಳವಾಗಿದೆ. ಯಾವಾಗ ದೇವಾಲಯದ ಈ ಸ್ಥಳದಲ್ಲಿ ದೇವರ ಪ್ರತಿಷ್ಠಾಪನೆಯನ್ನು ಮಾಡಲಾಗುತ್ತದೆಯೋ ಅಂದಿನಿಂದ ಇದು ಪವಿತ್ರ ಸ್ಥಳವೆಂದು ಕರೆಸಿಕೊಳ್ಳುತ್ತದೆ.
Importance of Garbhagudi in temple: ಗರ್ಭಗುಡಿಯ ವಿನ್ಯಾಸ:
ಯಾವುದೇ ಹಿಂದೂ ದೇವಾಲಯಗಳಲ್ಲಿ ಗರ್ಭಗುಡಿಯನ್ನು ನಿರ್ಮಾಣ ಮಾಡುವಾಗ ವಾಸ್ತು ಶಾಸ್ತ್ರದ ಪ್ರಕಾರ, ವಾಸ್ತು ನಿಯಮಗಳನ್ನು ಗಮನದಲ್ಲಿಟ್ಟುಕೊಂಡು ನಿರ್ಮಾಣ ಮಾಡಲಾಗುತ್ತದೆ. ಇದರಲ್ಲಿ ದೇವರ ಪೂಜೆಯನ್ನು ಮಾತ್ರವಲ್ಲ, ಭಕ್ತರಿಗೆ ದೇವರ ದರ್ಶನ ಮಾಡುವುದಕ್ಕೆ ಹಾಗೂ ದೇವರಿಗೆ ಪ್ರದಕ್ಷಿಣೆ ಹಾಕಲು ಸ್ಥಳವನ್ನು ನೀಡಲಾಗಿರುತ್ತದೆ. ಯಾವಾಗಲೂ ಗರ್ಭಗುಡಿಯ ಪ್ರವೇಶ ದ್ವಾರವು ಚಿಕ್ಕದಾಗಿ ಹಾಗೂ ಚೌಕ ಅಥವಾ ಆಯಾತಾಕಾರದಲ್ಲಿ ಇರುತ್ತದೆ. ಗರ್ಭಗುಡಿ ಪ್ರವೇಶಿಸುವಾಗ ದೊಡ್ಡವರೇ ಇರಲಿ, ಚಿಕ್ಕವರೇ ಇರಲಿ ತಮ್ಮ ತಲೆಯನ್ನು ತಗ್ಗಿಸಿ ಬರಬೇಕಾಗುತ್ತದೆ. ಇದರರ್ಥ ಅಹಂನ್ನು ತೊರೆದು ದೇವರಿಗೆ ತಲೆಬಾಗಿ ಒಳಗೆ ಬರಬೇಕೆಂಬುದಾಗಿದೆ.
ಇನ್ನಷ್ಟು ಪ್ರೀಮಿಯಂ ಲೇಖನಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Importance of Garbhagudi in temple: ಗರ್ಭಗುಡಿಯಲ್ಲಿನ ದೇವರು:
ಗರ್ಭಗುಡಿಯೊಳಗೆ ಮುಖ್ಯ ದೇವರ ವಿಗ್ರಹದ ಜೊತೆಗೆ ಅವರ ಕುಟುಂಬದ ಇತರೆ ಸದಸ್ಯರ ವಿಗ್ರಹಗಳನ್ನೂ ಪ್ರತಿಷ್ಠಾಪಿಸಿರಲಾಗುತ್ತದೆ. ಶಿವನ ದೇವಾಲಯಗಳಲ್ಲಿ ಶಿವ, ಪಾರ್ವತಿ ಹಾಗೂ ಅವರ ಮಕ್ಕಳ ವಿಗ್ರಹಗಳು ಇರುವಂತೆ, ವಿಷ್ಣು ದೇವಾಲಯಗಳಲ್ಲಿ ಲಕ್ಷ್ಮಿ ವಿಗ್ರಹ ಹಾಗೂ ರಾಮನ ದೇವಾಲಯಗಳಲ್ಲಿ ಸೀತೆಯ ವಿಗ್ರಹಗಳೂ ಇರುತ್ತವೆ. ಇದಲ್ಲದೆ ಗರ್ಭಗುಡಿಯ ಬಾಗಿಲು ತೆರೆಯುವ ಮತ್ತು ಮುಚ್ಚುವ ನಿಯಮವೂ ಇರುತ್ತದೆ. ಬೆಳಿಗ್ಗೆ ನಿಗದಿತ ಸಮಯದಲ್ಲಿ ಬಾಗಿಲು ತೆರೆಯಲಾಗುತ್ತದೆ ಮತ್ತು ಮುಚ್ಚಲಾಗುತ್ತದೆ.
Importance of Garbhagudi in temple: ದೇವಾಲಯಗಳಲ್ಲಿ ಗರ್ಭಗುಡಿ ಇರಲು ಕಾರಣವೇನು?
ಹಿಂದೂ ಧರ್ಮದ ಪ್ರತಿಯೊಂದು ದೊಡ್ಡ ದೇವಾಲಯಗಳಲ್ಲಿ ಗರ್ಭಗುಡಿಯನ್ನು ತಪ್ಪದೇ ನಿರ್ಮಿಸಲಾಗಿರುತ್ತದೆ. ಇದು ಆ ಸ್ಥಳದ ಪಾವಿತ್ರತೆಯನ್ನು ಕಾಪಾಡಿಕೊಳ್ಳಲು ಸಹಕಾರಿಯಾಗಿದೆ. ಸಂಪೂರ್ಣ ಶುದ್ಧತೆಯನ್ನು ಕಾಪಾಡಿಕೊಂಡ ಅರ್ಚಕರು ಮಾತ್ರವೇ ಗರ್ಭಗುಡಿಯಲ್ಲಿ ದೇವರಿಗೆ ನೈವೇದ್ಯವನ್ನು ಅರ್ಪಿಸುತ್ತಾರೆ. ಎಲ್ಲರಿಗೂ ಈ ಸ್ಥಳಕ್ಕೆ ಪ್ರವೇಶಿಸಲು ಅವಕಾಶವಿಲ್ಲ, ಪ್ರತಿಯೊಬ್ಬ ವ್ಯಕ್ತಿಯೂ ಈ ಸ್ಥಳಕ್ಕೆ ಪ್ರವೇಶ ಮಾಡುವಂತಿದ್ದರೆ ದೇವಸ್ಥಾನದ ಪಾವಿತ್ರ್ಯತೆಗೆ ಧಕ್ಕೆಯಾಗಬಹುದು ಎಂಬುದು ಕಾರಣಕ್ಕಾಗಿ ಈ ನಿಯಮವನ್ನು ಅನುಸರಿಸಲಾಗುತ್ತದೆ.
Also Read: Toe Rings – ವಿವಾಹಿತ ಮಹಿಳೆಯರು ಏಕೆ ಕಾಲುಂಗುರ ಧರಿಸುತ್ತಾರೆ ಗೊತ್ತಾ? ಅದಕ್ಕಿರುವ ಕಾಳಜಿ-ಕಾರಣವೇನು?
ದೇವರ ಪ್ರಾಣ ಪ್ರತಿಷ್ಠೆಯ ನಂತರ ಗರ್ಭಗುಡಿಯಲ್ಲಿ ಯಾವಾಗಲೂ ಸಕಾರಾತ್ಮಕ ಶಕ್ತಿ ಇರುತ್ತದೆ. ಯಾರಾದರೂ ಶುದ್ಧತೆಯನ್ನು ಕಾಪಾಡಿಕೊಂಡು ಈ ಸ್ಥಳಕ್ಕೆ ಪ್ರವೇಶಿಸಿದರೆ ಅವರ ಎಲ್ಲಾ ದುಃಖಗಳು ಕೊನೆಗೊಳ್ಳುತ್ತವೆ ಎಂದು ನಂಬಲಾಗಿದೆ. ಇದು ಶಕ್ತಿ ಮತ್ತು ಶಾಂತಿ ನೆಲೆಸಿರುವ ಸ್ಥಳವಾಗಿದೆ. ಅಲ್ಲದೆ, ಕೆಲವೇ ಜನರಿಗೆ ಈ ಸ್ಥಳಕ್ಕೆ ಪ್ರವೇಶಿಸಲು ಅವಕಾಶವಿರುತ್ತದೆ. ಆದ್ದರಿಂದ ಪ್ರತಿ ದೇವಾಲಯವು ಕಡ್ಡಾಯವಾಗಿ ಗರ್ಭಗುಡಿಯನ್ನು ಹೊಂದಿರುತ್ತದೆ.
ಮತ್ತಷ್ಟು ಆಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
(ಗಮನಿಸಿ: ಈ ಲೇಖನವು ರೂಢಿಗತ, ಜನಪ್ರಿಯ ನಂಬಿಕೆಗಳನ್ನು ಆಧರಿಸಿದೆ. ಈ ಸುದ್ದಿಯಲ್ಲಿ ಒಳಗೊಂಡಿರುವ ಮಾಹಿತಿ ಮತ್ತು ಸತ್ಯಗಳ ನಿಖರತೆಗೆ ಟಿವಿ9 ಜವಾಬ್ದಾರರಾಗಿರುವುದಿಲ್ಲ)