ರಂಜಾನ್(Ramadan) ನಂತರ ಇಸ್ಲಾಮಿಕ್ ಅಥವಾ ಹಿಜ್ರಿ ಕ್ಯಾಲೆಂಡರ್(Islamic Calendar) ಪ್ರಕಾರ ಎರಡನೇ ಪವಿತ್ರ ತಿಂಗಳು ಎಂದರೆ ಅದು ಮೊಹರಂ(Muharram) ಎಂದು ಪರಿಗಣಿಸಲಾಗಿದೆ. ಈ ತಿಂಗಳ ಮೊದಲ ದಿನವನ್ನು ಹಿಜ್ರಿ ಅಥವಾ ಅರೇಬಿಕ್ ಹೊಸ ವರ್ಷ ಎಂದೂ ಕರೆಯಲಾಗುತ್ತದೆ. ಮೊಹರಂ ಮುಸ್ಲಿಂ ಸಮುದಾಯಗಳಲ್ಲಿ ಮಹತ್ತರವಾದ ಪ್ರಾಮುಖ್ಯತೆಯನ್ನು ಹೊಂದಿದೆ ಮತ್ತು ಮೊಹರಂ ಮುಸ್ಲಿಮರಿಗೆ ಹೊಸ ವರ್ಷವಾದ್ರೂ ಈ ತಿಂಗಳು ಮುಸ್ಲಿಮರಿಗೆ ಶೋಕ ಮತ್ತು ತೀವ್ರ ದುಃಖದ ಅವಧಿಯಾಗಿದ್ದು ಮೊಹರಂ ಅನ್ನು ದುಃಖದ ಅಥವಾ ಕಣ್ಣೀರಿನ ಹಬ್ಬವಾಗಿ ಆಚರಿಸಲಾಗುತ್ತದೆ. ಈ ವರ್ಷ ಮೊಹರಂ ತಿಂಗಳು ಜುಲೈ 31 ರ ಭಾನುವಾರದಿಂದ ಪ್ರಾರಂಭವಾಗಿದೆ.
ಹಿಜ್ರಿ ಕ್ಯಾಲೆಂಡರ್ ಎಂದೂ ಕರೆಯಲ್ಪಡುವ ಇಸ್ಲಾಮಿಕ್ ಕ್ಯಾಲೆಂಡರ್ ಮುಖ್ಯವಾಗಿ ಚಂದ್ರನ ವೀಕ್ಷಣೆಯ ಮೇಲೆ ಅವಲಂಬಿತವಾಗಿದೆ ಮತ್ತು ಒಟ್ಟು 12 ತಿಂಗಳುಗಳನ್ನು ಒಳಗೊಂಡಿದೆ. ಹಾಗಾದ್ರೆ ಬನ್ನಿ ಇಸ್ಲಾಮಿಕ್ ಕ್ಯಾಲೆಂಡರ್ನ ಮೊದಲ ಮತ್ತು ಕೊನೆಯ ತಿಂಗಳ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲವೂ ಅಂಶಗಳು ಇಲ್ಲಿದೆ.
ಇಸ್ಲಾಮಿಕ್ ಕ್ಯಾಲೆಂಡರ್ನ ಮೊದಲ ತಿಂಗಳು ಮೊಹರಂ
ಮೊಹರಂ, ಇಸ್ಲಾಮಿಕ್ ಕ್ಯಾಲೆಂಡರ್ನ ಮೊದಲ ತಿಂಗಳಾಗಿದೆ. ಅರೇಬಿಕ್‌ನಲ್ಲಿ ಇದರ ಅರ್ಥ ‘ನಿಷೇಧಿತ’. ಇನ್ನು ಈ ತಿಂಗಳ ಹತ್ತನೇ ದಿನದಂದು ಅಶುರಾ ಮೊದಲ ಇಸ್ಲಾಮಿಕ್ ರಜಾದಿನವನ್ನು ಆಚರಿಸಲಾಗುತ್ತದೆ. ಈ ದಿನದಂದು ಉಪವಾಸ ಮಾಡಿ ಮತ್ತು ದುಃಖಿಸುತ್ತಾರೆ.
ಇನ್ನು ಇಸ್ಲಾಮಿಕ್ ಕ್ಯಾಲೆಂಡರ್‌ನಲ್ಲಿ ಹನ್ನೆರಡನೆಯ ಮತ್ತು ಕೊನೆಯ ತಿಂಗಳನ್ನು ದುಲ್ ಹಿಜ್ಜಾ ಎಂದು ಕರೆಯಲಾಗುತ್ತದೆ. ಅರೇಬಿಕ್ ಭಾಷೆಯಲ್ಲಿ ಧುಲ್ ಹಿಜ್ಜಾದ ಅರ್ಥವು ‘ತೀರ್ಥಯಾತ್ರೆಗಾಗಿ’ ಎಂದಾಗಿದೆ. ಹೆಸರೇ ಸೂಚಿಸುವಂತೆ, ಪ್ರಪಂಚದಾದ್ಯಂತದ ಬಹುಪಾಲು ಮುಸ್ಲಿಮರು ಕಾಬಾವನ್ನು ಭೇಟಿ ಮಾಡಲು ಮೆಕ್ಕಾಗೆ ಪ್ರಯಾಣಿಸುತ್ತಾರೆ. ಈ ತಿಂಗಳ ಎಂಟನೇ, ಒಂಬತ್ತನೇ ಮತ್ತು ಹತ್ತನೇ ದಿನದಂದು, ಹಜ್ ಯಾತ್ರೆ ಕೈಗೊಳ್ಳಲಾಗುತ್ತದೆ. ಈದ್ ಅಲ್-ಅಧಾ(ಬಕ್ರೀದ್) ಎಂದೂ ಕರೆಯಲ್ಪಡುವ ತ್ಯಾಗದ ಹಬ್ಬವು ಧುಲ್ ಹಿಜ್ಜಾದ ಹತ್ತನೇ ದಿನದಂದು ಪ್ರಾರಂಭವಾಗುತ್ತದೆ ಮತ್ತು ಸೂರ್ಯಾಸ್ತದ ನಂತರ ಹನ್ನೆರಡನೆಯ ದಿನದಂದು ಕೊನೆಗೊಳ್ಳುತ್ತದೆ.
ಇಸ್ಲಾಮಿಕ್ ಕ್ಯಾಲೆಂಡರ್‌ನ ಎಲ್ಲಾ ತಿಂಗಳುಗಳ ಹೆಸರು
ಮೊಹರಂ ಅನ್ನು ದುಃಖದ ಹಬ್ಬವನ್ನಾಗಿ ಏಕೆ ಆಚರಿಸಲಾಗುತ್ತದೆ?
ಪ್ರವಾದಿ ಇಮಾಮ್ ಹುಸೇನ್ ಅವರ ಮರಣವನ್ನು ಕಂಡ ಕರ್ಬಲಾ ಯುದ್ಧವು ಈ ತಿಂಗಳಲ್ಲಿ ನಡೆಯಿತು ಎಂದು ಹೇಳಲಾಗುತ್ತದೆ. ಅವರ ಮರಣವನ್ನು ಮುರ್ರಾ ಎಂದು ಆಚರಿಸಲಾಗುತ್ತದೆ, ಇದು ಶೋಕ ಮತ್ತು ದುಃಖದ ಅವಧಿಯಾಗಿದೆ.