Dog -Pet animal: ನಾಯಿಗೆ ಯಾರು ಆಹಾರ ಹಾಕುತ್ತಾರೋ ಅಂತಹವರ ಬಳಿಗೆ ಶನಿಮಹಾತ್ಮ ಸುಳಿಯುವುದಿಲ್ಲ! ಏನೀ ಶ್ವಾನ ಮಹಾತ್ಮೆ?

ನಾಯಿಗಳನ್ನು ಕಾಲಿನಿಂದ ಒದೆಯಬಾರದು. ಹಾಗೆ ಮಾಡಿದರೆ ಲಕ್ಷ್ಮೀ ದೇವಿಯು ದೂರ ಸರಿಯುತ್ತಾಳೆ. ನಾಯಿಗಳಿಗೆ ಪ್ರತಿದಿನವೂ ಆಹಾರ ನೀಡುವವರ ಹತ್ತಿರಕ್ಕೂ ಶನಿಮಹಾತ್ಮ ಸುಳಿಯುವುದಿಲ್ಲ. ನಾಯಿಗಳನ್ನು ನೀವು ಸಾಕಿಸಲಹುವ ಸ್ಥಿತಿಯಲ್ಲಿ ಇಲ್ಲದಿದ್ದರೂ ಪರವಾಗಿಲ್ಲ... ಆದರೆ ನಾಯಿಗಳನ್ನು ಎಂದಿಗೂ ಹಿಂಸಿಸಬೇಡಿ.

Dog -Pet animal: ನಾಯಿಗೆ ಯಾರು ಆಹಾರ ಹಾಕುತ್ತಾರೋ ಅಂತಹವರ ಬಳಿಗೆ ಶನಿಮಹಾತ್ಮ ಸುಳಿಯುವುದಿಲ್ಲ! ಏನೀ ಶ್ವಾನ ಮಹಾತ್ಮೆ?
ನಾಯಿಗಳಿಗೆ ಪ್ರತಿದಿನವೂ ಆಹಾರ ನೀಡುವವರ ಹತ್ತಿರಕ್ಕೆ ಶನಿಮಹಾತ್ಮ ಸುಳಿಯುವುದಿಲ್ಲ! ಏನೀ ಶ್ವಾನ ಮಹಾತ್ಮೆ!
Follow us
TV9 Web
| Updated By: ಸಾಧು ಶ್ರೀನಾಥ್​

Updated on: Aug 09, 2022 | 6:06 AM

ನಾಯಿಯನ್ನು “ಸಾರಮೇಯ” ಎನ್ನುತ್ತಾರೆ. ವೇದಗಳಲ್ಲಿಯೂ ಸಾರಮೇಯದ ಬಗ್ಗೆ ಉಲ್ಲೇಖ ಇದೆ. ಸಾವಿರಾರು ವರ್ಷಗಳ ಹಿಂದೆ ಮನುಷ್ಯರು ಅರಣ್ಯವಾಸಿಗಳಾಗಿದ್ದರು. ಈಗ ಇರುವ ಪಟ್ಟಣ, ಗ್ರಾಮಗಳು ಯಾವುವೂ ಆಗ ಇರಲಿಲ್ಲ. ಎಲ್ಲವೂ ಅರಣ್ಯಮಯವಾಗಿತ್ತು. ಈಗಿರುವ ಭಾಷೆಗಳು ಆಗ ಇನ್ನೂ ಇರಲಿಲ್ಲ. ಅಂದಿನ ಮನುಷ್ಯರಿಗೆ ಇರುವ ಸಮಸ್ಯೆಗಳೆಂದರೆ ಎರಡೇ ಎರಡು, ಒಂದು ಹಸಿವು! ಎರಡು ರಕ್ಷಣೆ! ಈ ಎರಡು ಸಮಸ್ಯೆಗಳ ಪರಿಹಾರಕ್ಕಾಗಿ ಆಗವರಿಗೆ ಸಿಕ್ಕಿದ ಪ್ರಾಣಿಯೇ -ಸಾಕು ನಾಯಿ! ಮಾನವ ಸಮಸ್ಯೆಗಳಿಗೂ ನಾಯಿಗೂ ಏನು ಸಂಬಂಧ! ಅದನ್ನೇ ವಿಚಾರಿಸೋಣ!

ಅಂದಿನ ದಿನಗಳಲ್ಲಿ ಎಲ್ಲರಿಗೂ ಮಾಂಸಾಹಾರವೇ ಮುಖ್ಯ ಆಹಾರವಾಗಿತ್ತು. ಬೇಟೆಗೆ ಹೋಗಿ ಜಿಂಕೆ, ಕಾಡುಕೋಳಿ, ಕಾಡುಕುರಿ, ಮೊಲ, ಕಾಡುಹಂದಿ, ಮತ್ತು ಮೀನು ಮುಂತಾದವುಗಳ ಹಿಂದೆ ಬಿದ್ದು, ಹಿಡಿಯಬೇಕಾಗಿತ್ತು. ಒಂದೊಂದು ಬಾರಿ ನಿರಾಶೆಯಿಂದ ಹಿಂದಿರುಗಿ ಬರಬೇಕಾಗುತ್ತಿತ್ತು. ಅಂಥಾ ಸಮಯದಲ್ಲಿ ನಮ್ಮವರಿಗೆ ಸಹಕಾರಿಯಾಗಿ ನಾಯಿ ಎಂಬ ವಿಶ್ವಾಸೀ ಪ್ರಾಣಿ ಸಿಕ್ಕಿಬಿಟ್ಟಿತು. ಬೇಟೆಯ ಸಮಯದಲ್ಲಿ ಮನುಷ್ಯರಿಗಿಂತಲೂ ಮುಂದೆ ಓಡಿಹೋಗಿ ಪ್ರಾಣಿಗಳನ್ನು ಹಿಡಿದು ಸಹಕಾರ ಕೊಡುತ್ತಿತ್ತು. ಮನೆಯವರಿಗೆಲ್ಲ ಹೊಟ್ಟೆ ತುಂಬಾ ಆಹಾರ ಸಿಗುತ್ತಿತ್ತು. ಈ ರೀತಿಯಿಂದ ನಮ್ಮ ಪೂರ್ವಜರ ಗೆಳೆತನದ ಮೊದಲನೆ ಪ್ರಾಣಿಯೇ ಈ “ನಾಯಿ”.

ಆಕಾಲದಲ್ಲಿ ಯಾರಿಗೂ ಸ್ಥಿರ ನಿವಾಸವಿಲ್ಲ. ನದೀಪ್ರಾಂತಗಳಲ್ಲಿ ಅಲೆದಾಡುತ್ತಾ ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ ನಿವಾಸಗಳನ್ನು ಬದಲಾಯಿಸುತ್ತಿದ್ದರು. ಚಳಿ-ಮಳೆಗಾಲಗಳು ಬಂದಾಗ ಗುಡ್ಡಗಾಡು ಪ್ರಾಂತಗಳಿಗೂ… ಬೇಸಿಗೆ ಬಂದಾಗ ನದೀ ಪ್ರಾಂತಗಳಿಗೂ ತಮ್ಮ ನಿವಾಸಗಳನ್ನು ಬದಲಾಯಿಸುತ್ತಿದ್ದರು. ಉಪ್ಪು ಹುಳಿ ಖಾರಗಳು ಅವರಿಗಿನ್ನೂ ಪರಿಚಯವೇ ಇಲ್ಲದ ಕಾಲದಲ್ಲಿ ಬೆಂಕಿಯನ್ನು ಸೃಷ್ಟಿಸಿ ಹಸಿಮಾಂಸವನ್ನು ಬೆಂಕಿಯಲ್ಲಿ ಬೇಯಿಸಿ ತಿನ್ನುವುದೇ ಅಂದಿನ ನಾಗರಿಕತೆಯಾಗಿತ್ತು. ಈ ಸಮಯದಲ್ಲಿ ಇವರಿಗೆ ಬಂದ ತೊಂದರೆ ಏನೆಂದರೆ ನೂರು, ಇನ್ನೂರು ಜನ ಸೇರಿ ಒಂದು ಗುಂಪಾಗಿ ಒಗ್ಗಟ್ಟಾಗಿ ಬದುಕುವ ಸಮಯದಲ್ಲಿ ಒಂದು ಗುಂಪಿನಿಂದ ಮತ್ತೊಂದು ಗುಂಪಿಗೆ ಜಗಳಗಳು ನಡೆಯುತ್ತಿದ್ದವು. ಈ ಗುಂಪಿನಲ್ಲಿರುವ ಹೆಂಗಸರನ್ನು ಮತ್ತೊಂದು ಗುಂಪಿನವರು ಕಣ್ತಪ್ಪಿಸಿ ಬಂದು ಹೊತ್ತೊಯ್ದು ಅನುಭವಿಸುತ್ತಿದ್ದರು.

ಇದನ್ನು “ಆಟವಿಕ ನ್ಯಾಯ” ಎನ್ನುತ್ತಾರೆ. ಆಟವಿಕ ನ್ಯಾಯದಲ್ಲಿ ದೇಹಶಕ್ತಿ ಇರುವವನದೇ ನ್ಯಾಯ. ಶಕ್ತಿವಂತರಿಗೆ ಎಲ್ಲರೂ ಬಗ್ಗಿ ಬದುಕಬೇಕು. ಈ ನ್ಯಾಯದಲ್ಲಿ ಬಾಂಧವ್ಯದ ಪ್ರಶ್ನೆಯೇ ಇಲ್ಲ. ದಾಕ್ಷಿಣ್ಯದ ವಿಷಯವೂ ಇಲ್ಲ.

ಆ ಗುಂಪಿನವರ ಹೆಂಗಸರನ್ನು ಈ ಗುಂಪಿನವರು, ಈ ಗುಂಪಿನ ಹೆಂಗಸರನ್ನು ಆ ಗುಂಪಿನವರು ಕಳವು ಮಾಡುವುದನ್ನು ನಿರೋಧಿಸಲಿಕ್ಕೆ ಆತ್ಮೀಯ ಸಹಕಾರಿಯಾಗಿದ್ದು “ನಾಯಿ”, ಬೇರೆ ಗುಂಪಿನವರು ದೂರದಲ್ಲಿ ಬರುವುದನ್ನು ನೋಡಿ ಬೌ! ಬೌ! ಎಂದು ಕೂಗುತ್ತಾ ಎಲ್ಲರನ್ನೂ ಎಚ್ಚರಿಸುತ್ತಿತ್ತು. ಮುಂದಕ್ಕೆ ಓಡಿಹೋಗಿ ಶತೃಗಳನ್ನು ವಿರೋಧಿಸುತ್ತಿತ್ತು. ಈ ವಿಧವಾಗಿ ‘ನಾಯಿ’ ಮನುಷ್ಯರ ಮಿತ್ರತ್ವ ಗಳಿಸಿತು.

ಅ ಕಾಲದಲ್ಲಿ ಗಂಡುಹೆಣ್ಣು ಬೇಧವಿಲ್ಲದೇ ಬೇಟೆಗೆ ಹೋಗುತ್ತಿದ್ದರು. ಗುಡ್ಡದ ಗುಹೆಗಳಲ್ಲಿ ಮುದುಕರು ಕೆಲವೊಂದು ಹೆಂಗಸರು ಉಳಿಯುತ್ತಿದ್ದರು. ಅಂಥಾ ಸಮಯದಲ್ಲಿ ಹುಲಿ, ಕರಡಿ ಮುಂತಾದ ಪ್ರಾಣಿಗಳಿಂದ ಗುಹೆಗಳಲ್ಲಿರುವ ಮಕ್ಕಳು, ಮುದುಕರಿಗೆ ರಕ್ಷಣೆಯನ್ನು ನೀಡಿ ಕಾಪಾಡುತ್ತಿದ್ದವು. ರಾತ್ರಿ ಸಮಯಗಳಲ್ಲಿ ಎಲ್ಲರೂ ನಿದ್ದೆಯಲ್ಲಿ ಮೈಮರೆತಿದ್ದಾಗ ಬರುವ ಎಲ್ಲ ಆಪಾಯಗಳಿಂದಲೂ ಎಚ್ಚರವಹಿಸಿ ರಕ್ಷಣೆ ಕೊಡುತ್ತಿದ್ದವು.

ಇಂಥಾ ಉಪಕಾರೀ ನಾಯಿಗಳನ್ನು ಹೊಡೆಯಬಹುದೇ ? ನಮ್ಮ ಪೂರ್ವಜರಿಗೆ ರಕ್ಷಣೆಯಾಗಿ ನಿಂತಿರುವ ನಾಯಿಗಳನ್ನು ಹಿಂಸಿಸಬಹುದೇ? ಉಪಕಾರಿಗೆ ಅಪಕಾರ ಮಾಡಬಹುದೇ ?

ಸಾವಿರಾರು ವರ್ಷಗಳಿಂದಲೂ ನಾಯಿ ಎಂಬ ಪ್ರಾಣಿ ಮನುಷ್ಯನ ಗೃಹಬಂಧು ಆಗಿದೆ. ಈ ಕಾರಣದಿಂದಲೇ ಯಾರೂ ನಾಯಿಯ ಮಾಂಸವನ್ನು ತಿನ್ನಬಾರದೆಂದು ಹಿರಿಯರು ನಿಷೇಧವನ್ನು ವಿಧಿಸಿದ್ದಾರೆ. ಅಂದಿನಿಂದ ಇಂದಿನವರೆಗೂ ಯಾರೂ ನಾಯಿಯ ಮಾಂಸವನ್ನು ತಿನ್ನುವುದಿಲ್ಲ. ಅಲ್ಲದೇ ನಾಯಿಯ ಸಮೀಪ ಬಂಧುವಾಗಿರುವ ನರಿ ಮಾಂಸವನ್ನೂ ಯಾರೂ ಮುಟ್ಟುವುದಿಲ್ಲ. ಹೀಗಿರುವಾಗ ಹಗಲಿರುಳು ಮನೆಯನ್ನು ನಂಬಿಕೊಂಡು ಮನೆಯೊಳಗೆ ಯಾರೂ ಬರದಂತೆ ರಕ್ಷಣೆ ಮಾಡುತ್ತಿದ್ದರೂ ಮನೆಯವರು ತುತ್ತು ಅನ್ನವನ್ನು ಹಾಕದೇ ಇರುವುದು ಸರಿಯೇ?

ಪ್ರಕೃತಿಯಿಂದ ಸಂಭವಿಸುವ ಉಪದ್ರವಗಳನ್ನು ಕೆಲವು ಗಂಟೆಗಳ ಮುಂಚಿತವಾಗಿಯೇ ನಾಯಿಗಳು ಕಂಡುಹಿಡಿಯುತ್ತವೆ. ಭೂಕಂಪನಗಳು, ತೂಫಾನು, ಸುನಾಮಿ, ಉಲ್ಕಾಪಾತಗಳು, ಸೂರ್ಯ ಚಂದ್ರ ಗ್ರಹಣಗಳು ಮುಂತಾದವನ್ನು ನಾಯಿಗಳು ಮುಂಚಿತವಾಗಿಯೇ ಕಂಡುಹಿಡಿಯುತ್ತವೆ. ಆರು ಕಿ.ಮೀ. ದೂರದಲ್ಲಿ ನಡೆಯುವ ವಿಷಯವನ್ನು ಇಲ್ಲಿಂದಲೇ ಪತ್ತೆ ಮಾಡುತ್ತವೆ. ಸರಕಾರದ ಪೊಲೀಸ್ ಇಲಾಖೆಯಲ್ಲಿ ಅಪರಾಧಿಗಳನ್ನು ಪತ್ತೆ ಹಚ್ಚುವಲ್ಲಿ ಶ್ವಾನದಳದ ಸೇವೆ ಅಭೂತಪೂರ್ವವಾಗಿದೆ ಎಂಬುದನ್ನು ನೆನಪಿಗೆ ತಂದುಕೊಳ್ಳಬಹುದು. ಹಾಗೇ ಮಿಲಿಟರಿಯಲ್ಲಿ ಬಾಂಬ್ ಮತ್ತು ನೆಲಬಾಂಬ್ ಪತ್ತೆ ಹಚ್ಚುವಲ್ಲಿ ಶ್ವಾನಗಳು ಪ್ರಮುಖ ಪಾತ್ರ ವಹಿಸುತ್ತವೆ.

ನಾಯಿಯನ್ನು ‘ಕಾಲಜ್ಞಾನಿ’ ಎಂದು ಹೇಳುತ್ತಾರೆ:

ಜಾವಾ ದ್ವೀಪದಲ್ಲಿ ಮತ್ತು ಹಿಮಾಲಯ ಪ್ರಾಂತದಲ್ಲಿ ಇಂದಿಗೂ ನಾಯಿಯನ್ನು ದೇವತೆಯೆಂದು ನಂಬಿ ಪೂಜಿಸುತ್ತಾರೆ. ನಮ್ಮ ಹಿಂದೂಗಳಲ್ಲಿಯೂ ನಾಯಿಯನ್ನು ಕೆಲವು ಪ್ರತ್ಯೇಕ ಸಂದರ್ಭಗಳಲ್ಲಿ ಪೂಜೆ ಮಾಡುವುದನ್ನು ಗಮನಿಸಬಹುದು. ರಾತ್ರಿ ಸಮಯದಲ್ಲಿ ನಮ್ಮ ಮನೆಯ ಹತ್ತಿರ ದುಷ್ಟ ಗ್ರಹಗಳು ತಿರುಗಾಡುತ್ತಿದ್ದರೆ, ನಾಯಿಗಳು ಕೂಗಿ ಗಲಾಟೆ ಮಾಡುತ್ತವೆ ಎಂದು ಜ್ಯೋತಿಷಿಗಳು ಹೇಳುತ್ತಾರೆ.

ಯಾವುದೇನೇ ಆದರೂ ಅನವಶ್ಯಕವಾಗಿ ನಾಯಿಗಳನ್ನು ಹೊಡೆದು.. ಅವು ನೋವಿನಿಂದ ಕೂಗಾಡುತ್ತಿದ್ದರೆ ಖುಷಿ ಪಡುವುದು ಅನಾಗರಿಕ ಪದ್ಧತಿ. ಎಂದೂ ನಾಯಿಗಳನ್ನು ಕಾಲಿನಿಂದ ಒದೆಯಬಾರದು. ಹಾಗೆ ಮಾಡಿದರೆ ಲಕ್ಷ್ಮೀ ದೇವಿಯು ದೂರ ಸರಿಯುತ್ತಾಳೆ. ನಾಯಿಗಳಿಗೆ ಪ್ರತಿದಿನವೂ ಆಹಾರ ನೀಡುವವರ ಹತ್ತಿರಕ್ಕೂ ಶನಿಮಹಾತ್ಮ ಸುಳಿಯುವುದಿಲ್ಲ. ನಾಯಿಗಳನ್ನು ನೀವು ಸಾಕಿಸಲಹುವ ಸ್ಥಿತಿಯಲ್ಲಿ ಇಲ್ಲದಿದ್ದರೂ ಪರವಾಗಿಲ್ಲ… ಆದರೆ ನಾಯಿಗಳನ್ನು ಎಂದಿಗೂ ಹಿಂಸಿಸಬೇಡಿ. ನಾಯಿ ನಮ್ಮ ಶತೃವಲ್ಲ! ವಿಶ್ವಾಸದ ಗೃಹಬಂಧು ! ನಾಯಿಗಳನ್ನು ಹೊಡೆಯುವುದು ಪಾಪ! (ಲೇಖನ ಮೂಲ- ಸದ್ವಿಚಾರ ತರಂಗಿಣಿ)

ಬಿಬಿಎಲ್ ಫೈನಲ್‌ನಲ್ಲಿ ದಾಖಲೆಯ ಶತಕ ಸಿಡಿಸಿದ ಮಿಚೆಲ್ ಓವನ್
ಬಿಬಿಎಲ್ ಫೈನಲ್‌ನಲ್ಲಿ ದಾಖಲೆಯ ಶತಕ ಸಿಡಿಸಿದ ಮಿಚೆಲ್ ಓವನ್
ಮಾಧ್ಯಮದವರು ಪ್ರಶ್ನೆ ಕೇಳಿದಾಗ ಹನುಮಂತನಿಂದ ಅದೇ ಮುಗ್ಧತೆಯ ಉತ್ತರ!
ಮಾಧ್ಯಮದವರು ಪ್ರಶ್ನೆ ಕೇಳಿದಾಗ ಹನುಮಂತನಿಂದ ಅದೇ ಮುಗ್ಧತೆಯ ಉತ್ತರ!
ಫೈನಾನ್ಸ್ ಸಂಸ್ಥೆ ಪ್ರತಿನಿಧಿಗಳೊಂದಿಗೆ ಸಭೆ ನಡೆಸಲು ಜಿಲ್ಲಾಡಳಿತಕ್ಕೆ ಸೂಚನೆ
ಫೈನಾನ್ಸ್ ಸಂಸ್ಥೆ ಪ್ರತಿನಿಧಿಗಳೊಂದಿಗೆ ಸಭೆ ನಡೆಸಲು ಜಿಲ್ಲಾಡಳಿತಕ್ಕೆ ಸೂಚನೆ
ವಿಜಯೇಂದ್ರರನ್ನೇ ರಾಜ್ಯಾಧ್ಯಕ್ಷನಾಗಿ ಮುಂದುವರಿಸಿದರೆ ಯತ್ನಾಳ್ ನಡೆ ಏನು?
ವಿಜಯೇಂದ್ರರನ್ನೇ ರಾಜ್ಯಾಧ್ಯಕ್ಷನಾಗಿ ಮುಂದುವರಿಸಿದರೆ ಯತ್ನಾಳ್ ನಡೆ ಏನು?
ಬಿಗ್ ಬಾಸ್ ಟ್ರೋಫಿ ಗೆದ್ದ ಬಳಿಕ ಹನುಮಂತ ಮೊದಲ ಪ್ರೆಸ್ ಮೀಟ್; ಇಲ್ಲಿದೆ ಲೈವ್
ಬಿಗ್ ಬಾಸ್ ಟ್ರೋಫಿ ಗೆದ್ದ ಬಳಿಕ ಹನುಮಂತ ಮೊದಲ ಪ್ರೆಸ್ ಮೀಟ್; ಇಲ್ಲಿದೆ ಲೈವ್
ಮುಂದಿನ 3-4 ತಿಂಗಳಲ್ಲಿ ಹನುಮಂತನ ಮದುವೆ: ಊರಿನ ಜನರ ಖುಷಿ ನೋಡಿ..
ಮುಂದಿನ 3-4 ತಿಂಗಳಲ್ಲಿ ಹನುಮಂತನ ಮದುವೆ: ಊರಿನ ಜನರ ಖುಷಿ ನೋಡಿ..
ವೈಶಾಲಿ ಜೊತೆಗೆ ಕೈಕುಲುಕದಿರಲು ಕಾರಣ ತಿಳಿಸಿದ ಯಾಕುಬೊವ್
ವೈಶಾಲಿ ಜೊತೆಗೆ ಕೈಕುಲುಕದಿರಲು ಕಾರಣ ತಿಳಿಸಿದ ಯಾಕುಬೊವ್
ಮಹಾಕುಂಭದಲ್ಲಿ ತ್ರಿವೇಣಿ ಸಂಗಮದಲ್ಲಿ ಗೃಹ ಸಚಿವ ಅಮಿತ್ ಶಾ ತೀರ್ಥ ಸ್ನಾನ
ಮಹಾಕುಂಭದಲ್ಲಿ ತ್ರಿವೇಣಿ ಸಂಗಮದಲ್ಲಿ ಗೃಹ ಸಚಿವ ಅಮಿತ್ ಶಾ ತೀರ್ಥ ಸ್ನಾನ
ಯಾರೇ ಬಂದರೂ ನನ್ನನ್ನು ತುಳಿಯಲಾಗಲ್ಲ: ಸತೀಶ್ ಜಾರಕಿಹೊಳಿ, ಸಚಿವ
ಯಾರೇ ಬಂದರೂ ನನ್ನನ್ನು ತುಳಿಯಲಾಗಲ್ಲ: ಸತೀಶ್ ಜಾರಕಿಹೊಳಿ, ಸಚಿವ
ಶಿವಣ್ಣ ಶೀಘ್ರದಲ್ಲೇ ಶೂಟಿಂಗ್ ಮಾಡಬಹುದು: ಖುಷಿ ಹಂಚಿಕೊಂಡ ಡಾಲಿ
ಶಿವಣ್ಣ ಶೀಘ್ರದಲ್ಲೇ ಶೂಟಿಂಗ್ ಮಾಡಬಹುದು: ಖುಷಿ ಹಂಚಿಕೊಂಡ ಡಾಲಿ