Krishna Janmashtami 2022: ಕೃಷ್ಣ ಜನ್ಮಾಷ್ಟಮಿ ಹಬ್ಬದ ದಿನಾಂಕ, ಸಮಯದ ಮಾಹಿತಿ ಇಲ್ಲಿದೆ

ಪ್ರಪಂಚದಾದ್ಯಂತದ ಭಕ್ತರು ಕೃಷ್ಣ ಜನ್ಮಾಷ್ಟಮಿಯ ದಿನವನ್ನು ಬಹಳ ಉತ್ಸಾಹದಿಂದ ಆಚರಿಸುತ್ತಾರೆ. ಪವಿತ್ರ ಸ್ಥಳಗಳಾದ ಬೃಂದಾವನ ಮತ್ತು ಮಥುರಾದಲ್ಲಿ ಈ ದಿನದಂದು ವಿಶೇಷ ಉತ್ಸವಗಳನ್ನು ಆಚರಿಸಲಾಗುತ್ತದೆ.

Krishna Janmashtami 2022: ಕೃಷ್ಣ ಜನ್ಮಾಷ್ಟಮಿ ಹಬ್ಬದ ದಿನಾಂಕ, ಸಮಯದ ಮಾಹಿತಿ ಇಲ್ಲಿದೆ
ಕೃಷ್ಣ ಜನ್ಮಾಷ್ಟಮಿ
Follow us
TV9 Web
| Updated By: ಸುಷ್ಮಾ ಚಕ್ರೆ

Updated on:Aug 09, 2022 | 11:03 AM

ಕೃಷ್ಣ ಜನ್ಮಾಷ್ಟಮಿಯು (Krishna Janmashtami) ದೇಶದಾದ್ಯಂತ ಆಚರಿಸಲಾಗುವ ಪ್ರಮುಖ ಹಬ್ಬಗಳಲ್ಲಿ ಒಂದಾಗಿದೆ. ಈ ದಿನ, ಭಕ್ತರು ಹಿಂದೂ ದೇವರಾದ ಶ್ರೀಕೃಷ್ಣನ ಜನ್ಮದಿನವನ್ನು ಆಚರಿಸುತ್ತಾರೆ. ದೃಕ್ ಪಂಚಾಂಗದ ಪ್ರಕಾರ, ಈ ವರ್ಷ ಕೃಷ್ಣ ಜನ್ಮಾಷ್ಟಮಿ ಆಗಸ್ಟ್ 18ರಂದು ಬರುತ್ತದೆ. ಜನ್ಮಾಷ್ಟಮಿಯ ಆಚರಣೆಗಳು ಮತ್ತು ಸಂಪ್ರದಾಯಗಳನ್ನು ಅನುಸರಿಸಿ, ಭಕ್ತರು ರೋಹಿಣಿ ನಕ್ಷತ್ರ ಮತ್ತು ಅಷ್ಟಮಿ ತಿಥಿಯವರೆಗೆ ಉಪವಾಸವನ್ನು ಆಚರಿಸುತ್ತಾರೆ.

ಪ್ರಪಂಚದಾದ್ಯಂತದ ಭಕ್ತರು ಕೃಷ್ಣ ಜನ್ಮಾಷ್ಟಮಿಯ ದಿನವನ್ನು ಬಹಳ ಉತ್ಸಾಹದಿಂದ ಆಚರಿಸುತ್ತಾರೆ. ಪವಿತ್ರ ಸ್ಥಳಗಳಾದ ಬೃಂದಾವನ ಮತ್ತು ಮಥುರಾದಲ್ಲಿ ಈ ದಿನದಂದು ವಿಶೇಷ ಉತ್ಸವಗಳನ್ನು ಆಚರಿಸಲಾಗುತ್ತದೆ. ಆಗಸ್ಟ್​ 18ರಂದು ಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಲಾಗುತ್ತದೆ. ಆಗಸ್ಟ್​ 18ರ ಮಧ್ಯರಾತ್ರಿ 12.04ರಿಂದ ಆಗಸ್ಟ್​ 19ರ ಮಧ್ಯರಾತ್ರಿ 12.48ರವರೆಗೆ ಪೂಜೆಯ ಮುಹೂರ್ತವಿರಲಿದೆ.

ಕೃಷ್ಣ ಜನ್ಮಾಷ್ಟಮಿ ವಿಶೇಷ: ಕೃಷ್ಣ ಜನ್ಮಾಷ್ಟಮಿಯ ದಿನ ಶ್ರೀಕೃಷ್ಣನ ಜೀವನದ ಘಟನೆಗಳನ್ನು ನೆನಪಿಸಿಕೊಳ್ಳುವ ದಿನವಾಗಿದೆ. ರಾಕ್ಷಸ ಪ್ರವೃತ್ತಿಯನ್ನು ಹತ್ತಿಕ್ಕುವ ಮಹಾನ್ ಶಕ್ತಿ ಹುಟ್ಟಿದ ದಿನವಿದು. ನಕಾರಾತ್ಮಕತೆಯನ್ನು ತೊಡೆದುಹಾಕಿ ಧನಾತ್ಮಕತೆಯನ್ನು ಸ್ಥಾಪಿಸುವ ದಿನ ಇದಾಗಿದೆ. ಶ್ರೀ ಕೃಷ್ಣ ಜನ್ಮಾಷ್ಟಮಿಯಂದು ಕೃಷ್ಣನನ್ನು ಅಲಂಕರಿಸುವವರು ಇಡೀ ದಿನ ಉಪವಾಸವನ್ನು ಆಚರಿಸುವ ಮೂಲಕ ಹಬ್ಬಕ್ಕೆ ಸಿದ್ಧರಾಗಬೇಕು. ಈ ದಿನ ಮನೆಯ ಬಾಗಿಲುಗಳನ್ನು ಮಾವಿನ ತೋರಣ ಅಥವಾ ಅಶೋಕ ಮರದ ಎಲೆಗಳು ಇತ್ಯಾದಿಗಳಿಂದ ಅಲಂಕರಿಸಬೇಕು ಮತ್ತು ಬಾಗಿಲಿಗೆ ಮಂಗಳ ಕಲಶವನ್ನು ಸ್ಥಾಪಿಸಬೇಕು.

ಇದನ್ನೂ ಓದಿ: Varamahalakshmi Vratha 2022: ಲಕ್ಷ್ಮೀ ಹಬ್ಬದ, ಆಚರಣೆ, ಶುಭ ಮುಹೂರ್ತ ಮತ್ತು ಪೂಜಾ ವಿಧಿ ಇಲ್ಲಿದೆ

ಶ್ರಾವಣ ಮಾಸದಲ್ಲಿ ಒಂದರ ಮೇಲೊಂದು ಹಬ್ಬಗಳು ಬರುತ್ತಲೇ ಇರುತ್ತವೆ. ವರಮಹಾಲಕ್ಷ್ಮಿ ಮತ್ತು ರಕ್ಷಾಬಂಧನದ ನಂತರ ಬರುವ ಮುಖ್ಯವಾದ ಹಬ್ಬ ಎಂದರೆ ಅದು ಕೃಷ್ಣ ಜನ್ಮಾಷ್ಟಮಿ. ಹಿಂದೂ ಪುರಾಣಗಳಲ್ಲಿ, ಭಗವಾನ್ ವಿಷ್ಣುವಿನ ಅವತಾರವಾದ ಶ್ರೀಕೃಷ್ಣನಿಗೆ ಪವಿತ್ರವಾದ ಸ್ಥಾನವಿದೆ. ಆತನನ್ನು ಜನರು ಪರಮಾತ್ಮನೆಂದು ಆರಾಧಿಸುತ್ತಾರೆ. ಕೃಷ್ಣನ ಜನ್ಮದಿನವನ್ನು ಪ್ರತಿವರ್ಷ ಜನ್ಮಾಷ್ಟಮಿಯಾಗಿ ಆಚರಣೆ ಮಾಡಲಾಗುತ್ತದೆ.

ಹಿಂದೂ ಪಂಚಾಂಗದ ಪ್ರಕಾರ, ಶ್ರೀಕೃಷ್ಣನ ಜನ್ಮದಿನವನ್ನು ಪ್ರತಿವರ್ಷ ಭಾದ್ರಪದ ತಿಂಗಳಿನ ಕೃಷ್ಣ ಪಕ್ಷದ 8ನೇ ದಿನದಂದು ಆಚರಿಸಲಾಗುತ್ತದೆ. ಇದು ಇಂಗ್ಲಿಷ್ ಕ್ಯಾಲೆಂಡರ್ ಪ್ರಕಾರ ಆಗಸ್ಟ್ -ಸೆಪ್ಟೆಂಬರ್‌ನಲ್ಲಿ ಬರುತ್ತದೆ. ಈ ಸಂದರ್ಭದಲ್ಲಿ, ಭಕ್ತರು ಉಪವಾಸ ಆಚರಣೆ ಮಾಡುತ್ತಾರೆ. ಶ್ರೀಕೃಷ್ಣನು ಈ ದಿನ ಮಥುರಾ ನಗರದಲ್ಲಿ ಜನಿಸಿದನು. ಕೃಷ್ಣ ಹುಟ್ಟಿದ ಘಳಿಗೆಯಿಂದ ಅವನ ಚಿಕ್ಕಪ್ಪ ಕಂಸನಿಂದ ಆತನ ಜೀವಕ್ಕೆ ಅಪಾಯವಿತ್ತು. ಕೃಷ್ಣನನ್ನು ರಕ್ಷಿಸುವ ಸಲುವಾಗಿ ಅವನ ತಂದೆ ವಾಸುದೇವ ಅವನನ್ನು ಸಣ್ಣ ಬುಟ್ಟಿಯಲ್ಲಿ ಮಲಗಿಸಿ ಯಮುನಾ ನದಿಯ ಮೂಲಕ ಬೃಂದಾವನಕ್ಕೆ ಕರೆದೊಯ್ದನು. ಕೃಷ್ಣನ್ನು ಯಶೋಧ ಮತ್ತು ನಂದಾ ಪುತ್ರನಾಗಿ ದತ್ತು ಪಡೆದನು.

ಇದನ್ನೂ ಓದಿ: Muharram 2022: ಹಿಂದೂ-ಮುಸ್ಲಿಂರ ಭಾವೈಕ್ಯತೆ ಸಾರುವ ಮೊಹರಂ ಹಬ್ಬವನ್ನು ಕಣ್ಣೀರಿನ ಹಬ್ಬವೆಂದೂ ಕರೆಯುತ್ತಾರೆ

ಹಿಂದೂ ಪುರಾಣಗಳ ಪ್ರಕಾರ ಈ ದಿನ ಮಹತ್ವದ ದಿನವಾಗಿದೆ. ಶ್ರೀ ಕೃಷ್ಣನ ಭಕ್ತರು ಈ ದಿನದ ವಿಶೇಷವಾಗಿ ಕೃಷ್ಣನ ದೇಗುಲಗಳಿಗೆ ಭೇಟಿ ನೀಡುತ್ತಾರೆ. ವಿಶೇಷ ಪೂಜೆ ಕೈಗೊಳ್ಳುವ ಮೂಲಕ ಸಂಭ್ರಮದಿಂದ ಆಚರಿಸಲಾಗುತ್ತದೆ. ಇನ್ನು ಕೆಲವರು ಉಪವಾಸ ಕೈಗೊಳ್ಳುವ ಮೂಲಕ ಶ್ರೀಕೃಷ್ಣನ ಮೊರೆ ಹೋಗುತ್ತಾರೆ.

ಇನ್ನಷ್ಟು ಧಾರ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:02 am, Tue, 9 August 22

ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್