AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Muharram 2022: ಹಿಂದೂ-ಮುಸ್ಲಿಂರ ಭಾವೈಕ್ಯತೆ ಸಾರುವ ಮೊಹರಂ ಹಬ್ಬವನ್ನು ಕಣ್ಣೀರಿನ ಹಬ್ಬವೆಂದೂ ಕರೆಯುತ್ತಾರೆ

ರಂಜಾನ್ ನಂತರ ಮೊಹರಂ ಇಸ್ಲಾಮಿಕ್ ಕ್ಯಾಲೆಂಡರ್‌ನ ಪವಿತ್ರ ತಿಂಗಳು. ಈ ತಿಂಗಳಲ್ಲಿ, ಶಿಯಾ ಮುಸ್ಲಿಮರು ಯುದ್ಧಭೂಮಿಯಲ್ಲಿ ಆದ ಪ್ರವಾದಿ ಮುಹಮ್ಮದ್ ಅವರ ಮೊಮ್ಮಗ ಇಮಾಮ್ ಹುಸೇನ್ ಅವರ ಮರಣಕ್ಕೆ ಶೋಕಿಸುತ್ತಾರೆ.

Muharram 2022: ಹಿಂದೂ-ಮುಸ್ಲಿಂರ ಭಾವೈಕ್ಯತೆ ಸಾರುವ ಮೊಹರಂ ಹಬ್ಬವನ್ನು ಕಣ್ಣೀರಿನ ಹಬ್ಬವೆಂದೂ ಕರೆಯುತ್ತಾರೆ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Aug 09, 2022 | 6:30 AM

Share

ಇಸ್ಲಾಮಿಕ್ ಕ್ಯಾಲೆಂಡರ್‌ನ(Islamic Calendar) ಪ್ರಕಾರ ಮೊಹರಂ(Muharram) ಮೊದಲ ತಿಂಗಳಾಗಿದೆ. ಅಂದರೆ ಹೊಸ ವರ್ಷಾ ಹೀಗಾಗಿ ಮೊಹರಂ ಅನ್ನು ಹಿಜ್ರಿ ಎಂದೂ ಸಹ ಕರೆಯುತ್ತಾರೆ. ಮೊಹರಂ ಇಸ್ಲಾಂನಲ್ಲಿ ಅಪಾರ ಪ್ರಾಮುಖ್ಯತೆಯನ್ನು ಹೊಂದಿರುವ ತಿಂಗಳು ಮತ್ತು ಮುಸ್ಲಿಂ ಸಮುದಾಯದವರು ಆಚರಿಸುವ ಪವಿತ್ರ ತಿಂಗಳುಗಳಲ್ಲಿ ಇದೂ ಒಂದು. ಮೊಹರಂ ಹಿಂದೂ-ಮುಸ್ಲಿಂರ ಭಾವೈಕ್ಯತೆ ಸಾರುವ ಹಬ್ಬ. ಈ ಹಬ್ಬದಲ್ಲಿ ಯಾವುದೇ ತಾರತಮ್ಯವಿಲ್ಲದೇ, ಸರ್ವಧರ್ಮೀಯರು ಪಾಲ್ಗೊಂಡು ಹಬ್ಬವನ್ನು ಆಚರಿಸುತ್ತಾರೆ. ಹತ್ತು ದಿನಗಳವರೆಗೆ ಮೊಹರಂ ಆಚರಣೆ ನಡೆಯುತ್ತದೆ. ಈ ವರ್ಷ ಮೊಹರಂ ಜುಲೈ 29 ರಂದು ಪ್ರಾರಂಭವಾಗಿದೆ ಮತ್ತು ಆಗಸ್ಟ್ 28ಕ್ಕೆ ಕೊನೆಗೊಳ್ಳುತ್ತದೆ.

ಮೊಹರಂ ಇತಿಹಾಸ

ರಂಜಾನ್ ನಂತರ ಮೊಹರಂ ಇಸ್ಲಾಮಿಕ್ ಕ್ಯಾಲೆಂಡರ್‌ನ ಪವಿತ್ರ ತಿಂಗಳು. ಈ ತಿಂಗಳಲ್ಲಿ, ಶಿಯಾ ಮುಸ್ಲಿಮರು ಯುದ್ಧಭೂಮಿಯಲ್ಲಿ ಆದ ಪ್ರವಾದಿ ಮುಹಮ್ಮದ್ ಅವರ ಮೊಮ್ಮಗ ಇಮಾಮ್ ಹುಸೇನ್ ಅವರ ಮರಣಕ್ಕೆ ಶೋಕಿಸುತ್ತಾರೆ. ಕರ್ಬಲಾ ಯುದ್ಧವು ಇಮಾಮ್ ಹುಸೇನ್ ಮತ್ತು ಉಮಯ್ಯದ್ ಖಲೀಫ್ ಯಾಜಿದ್ I ನಡುವೆ ನಡೆಯಿತು. ಯುದ್ಧದ ಸಮಯದಲ್ಲಿ, ಇಮಾಮ್ ಹುಸೇನ್ ರನ್ನು ಮೋಸದಿಂದ ಕೊಲ್ಲಲಾಯಿತು. ಅವರ ಹುತಾತ್ಮತೆಯನ್ನು ಅಶುರಾ ಎಂದು ಕರೆಯಲಾಗುವ ಈ ತಿಂಗಳ ಹತ್ತನೇ ದಿನದಂದು ಶೋಕ ಮೆರವಣಿಗೆಗಳೊಂದಿಗೆ ಆಚರಿಸಲಾಗುತ್ತದೆ.

ಇದನ್ನೂ ಓದಿ: Muharram 2021: ಮೊಹರಂ ಹಬ್ಬದ ಇತಿಹಾಸ, ಮಹತ್ವವೇನು?

ಅಶುರಾ ಮಹತ್ವ

ಕರ್ಬಲಾ ಯುದ್ಧದಲ್ಲಿ ಇಮಾಮ್ ಹುಸೇನ್ ಅವರು ಮರಣ ಹೊಂದುತ್ತಾರೆ. ಮೊಹರಂ 10ನೇ ದಿನ ಇದರ ದುಃಖವನ್ನು ವ್ಯಕ್ತಪಡಿಸುತ್ತ ಮೆರವಣಿಗೆಗಳನ್ನು ನಡೆಸುತ್ತಾರೆ. ಅಂದು ಶಿಯಾ ಪಂಗಡದ ಮುಸ್ಲಿಮರು ಕಪ್ಪು ಬಣ್ಣದ ಬಟ್ಟೆಗಳನ್ನು ಧರಿಸಿ “ಯಾ ಅಲಿ” ಮತ್ತು “ಯಾ ಹುಸೇನ್” ಎಂದು ಜಪಿಸುತ್ತ ದೇಹ ದಂಡಿಸುತ್ತಾರೆ. ಶಿಯಾ ಮುಸ್ಲಿಮರಿಗೆ, ಮೊಹರಂ ತಿಂಗಳು, ಪ್ರವಾದಿ ಮೊಹಮ್ಮದ್ ಪೈಗಂಬರ್ರ ಮೊಮ್ಮಗ ಹುಸೇನ್ ಇಬ್ನ್ ಅಲಿಯ ಸಾವನ್ನು ನೆನಪಿಸುತ್ತದೆ. ಖಲೀಫಾ ಯಜಿದ್ನಿಂದ ಕ್ರಿಸ್ತಶಕ 680 ರಲ್ಲಿ ಆಶುರಾ ದಿನದಂದು ಕರುಬಲಾ ಎಂಬ ಮರುಭೂಮಿಯಲ್ಲಿ ನಡೆದ ತುಮುಲ ಯುದ್ಧದಲ್ಲಿ ಹುಸೇನ್ ನನ್ನು ಕೊಲ್ಲಲಾಯಿತು. ಹೀಗಾಗಿ ಅನೇಕ ಶಿಯಾಗಳು ಈ ತಿಂಗಳ ಪ್ರವಾದಿಯ ಕುಟುಂಬದ ಶೌರ್ಯವನ್ನು ನೆನಪಿಸಿಕೊಂಡು ದುಃಖಿಸುತ್ತಾರೆ.

ಮೊಹರಂ ಅನ್ನು ಹೇಗೆ ಆಚರಿಸಲಾಗುತ್ತದೆ

ಅನೇಕ ಮುಸ್ಲಿಮರು ಆಶುರಾ ದಿನದಂದು ಉಪವಾಸವನ್ನು ಮಾಡುತ್ತಾರೆ, ಹಾಗೆಯೇ ಮೊಹರಂ ತಿಂಗಳಲ್ಲಿ ಕೃತಜ್ಞತೆಯನ್ನು ಸಲ್ಲಿಸುತ್ತಾರೆ. ಶಿಯಾ ಮುಸ್ಲಿಮರು ಸಹ ಶೋಕಾಚರಣೆಗಳಲ್ಲಿ ತೊಡಗುತ್ತಾರೆ. ಸಾರ್ವಜನಿಕ ಆಚರಣೆಗಳನ್ನು ಮಾಡುತ್ತಾರೆ, ಈ ವೇಳೆ ಆಲಾಯಿ ಕುಣಿತ, ಮೊಹರಂ ಪದಗಳು ಹಾಡುವುದು, ದೇವರ ಕುಣಿತ, ಬೆಂಕಿಯಲ್ಲಿ ನಡೆದಾಡುವುದು ಸೇರಿದಂತೆ ಕೆಲವು ಆಚರಣೆಯನ್ನು ಮಾಡಲಾಗುತ್ತೆ.

ಇದನ್ನೂ ಓದಿ: Islamic New Year 2021: ಇಂದಿನಿಂದ ಮುಸ್ಲಿಮರ ಹೊಸ ವರ್ಷ ಆರಂಭ, ವರ್ಷಾಚರಣೆಯ ಹಿಂದಿದೆ ವೀರ ಹುತಾತ್ಮನ ದುಃಖದ ಕಥೆ

Follow Us
ಇರಾನ್ ಯುದ್ಧನೌಕೆ ಮೇಲೆ ದಾಳಿ ಹೇಗಿತ್ತು? ವಿಡಿಯೋ ಬಿಡುಗಡೆ ಮಾಡಿದ ಅಮೆರಿಕ
ಇರಾನ್ ಯುದ್ಧನೌಕೆ ಮೇಲೆ ದಾಳಿ ಹೇಗಿತ್ತು? ವಿಡಿಯೋ ಬಿಡುಗಡೆ ಮಾಡಿದ ಅಮೆರಿಕ
ಹೊರ್ಮುಜ್ ಜಲಸಂಧಿಯಲ್ಲಿ 10 ತೈಲ ಹಡಗುಗಳನ್ನು ಉಡಾಯಿಸಿದ ಇರಾನ್
ಹೊರ್ಮುಜ್ ಜಲಸಂಧಿಯಲ್ಲಿ 10 ತೈಲ ಹಡಗುಗಳನ್ನು ಉಡಾಯಿಸಿದ ಇರಾನ್
ಮೌಲ್ವಿ ಮೇಲೆ ಹಿಂದೂ ಯುವಕರ ಹಲ್ಲೆ: ಮುಸ್ಲಿಮರಿಂದ ಬೃಹತ್ ಪ್ರತಿಭಟನೆ
ಮೌಲ್ವಿ ಮೇಲೆ ಹಿಂದೂ ಯುವಕರ ಹಲ್ಲೆ: ಮುಸ್ಲಿಮರಿಂದ ಬೃಹತ್ ಪ್ರತಿಭಟನೆ
ವೈರಲ್ ವಿಡಿಯೋಗೆ ನಟಿಯರ ಆಕ್ರೋಶ; ಪ್ರತಿಕ್ರಿಯೆ ನೀಡಿದ ಎಸ್. ನಾರಾಯಣ್
ವೈರಲ್ ವಿಡಿಯೋಗೆ ನಟಿಯರ ಆಕ್ರೋಶ; ಪ್ರತಿಕ್ರಿಯೆ ನೀಡಿದ ಎಸ್. ನಾರಾಯಣ್
ಬಣ್ಣ ತೊಳೆಯಲು ಕೆರೆಗೆ ಇಳಿದ ಯುವಕರು ನೀರುಪಾಲು
ಬಣ್ಣ ತೊಳೆಯಲು ಕೆರೆಗೆ ಇಳಿದ ಯುವಕರು ನೀರುಪಾಲು
ಹಾಳಾದ ಲಿಫ್ಟ್​​ನಲ್ಲಿ ಸಿಲುಕಿದ ವ್ಯಕ್ತಿಯ ಶಾಕಿಂಗ್ ವಿಡಿಯೋ ಇಲ್ಲಿದೆ
ಹಾಳಾದ ಲಿಫ್ಟ್​​ನಲ್ಲಿ ಸಿಲುಕಿದ ವ್ಯಕ್ತಿಯ ಶಾಕಿಂಗ್ ವಿಡಿಯೋ ಇಲ್ಲಿದೆ
ಕ್ಲಾಸ್ ರೂಂನಲ್ಲೇ ಶಿಕ್ಷಕನಿಗೆ ಹೊಡೆದ 10ನೇ ತರಗತಿ ವಿದ್ಯಾರ್ಥಿ!
ಕ್ಲಾಸ್ ರೂಂನಲ್ಲೇ ಶಿಕ್ಷಕನಿಗೆ ಹೊಡೆದ 10ನೇ ತರಗತಿ ವಿದ್ಯಾರ್ಥಿ!
ಆಗ್ರಾ-ಲಖನೌ ಎಕ್ಸ್‌ಪ್ರೆಸ್‌ವೇಯಲ್ಲಿ ಭೀಕರ ಅಪಘಾತ: ವಿಡಿಯೋ ವೈರಲ್
ಆಗ್ರಾ-ಲಖನೌ ಎಕ್ಸ್‌ಪ್ರೆಸ್‌ವೇಯಲ್ಲಿ ಭೀಕರ ಅಪಘಾತ: ವಿಡಿಯೋ ವೈರಲ್
ಪ್ರತಿದಿನ ಆಕೆ ಹಿಂಸೆ ನೀಡುತ್ತಾಳೆ ಎಂದ ಶಾಲೆ ಮುಖ್ಯ ಶಿಕ್ಷಕ
ಪ್ರತಿದಿನ ಆಕೆ ಹಿಂಸೆ ನೀಡುತ್ತಾಳೆ ಎಂದ ಶಾಲೆ ಮುಖ್ಯ ಶಿಕ್ಷಕ
ಹಾರ್ಮುಜ್ ಜಲಸಂಧಿ ಕ್ಲೋಸ್: ಪರ್ಷಿಯನ್ ಕೊಲ್ಲೀಲಿ ಸಿಲುಕಿದ ಭಾರತದ 37 ಹಡಗು
ಹಾರ್ಮುಜ್ ಜಲಸಂಧಿ ಕ್ಲೋಸ್: ಪರ್ಷಿಯನ್ ಕೊಲ್ಲೀಲಿ ಸಿಲುಕಿದ ಭಾರತದ 37 ಹಡಗು