ಗಣೇಶನನ್ನು ಮನೆಗೆ ಕರೆತರುವಾಗ ಅಕ್ಷತೆ ಬಳಸುತ್ತಾರೆ ಯಾಕೆ? ಮಧ್ಯಾಹ್ನದ ಪೂಜೆ ವಿನಾಯಕನಿಗೆ ಶ್ರೇಷ್ಠ ಏಕೆ?
Ganesha Chaturthi 2021: ಗಣಪತಿಯ ಪೂಜೆಯಲ್ಲಿ ಅಕ್ಷತೆಗೆ ವಿಶೇಷ ಮಹತ್ವ ಇದೆ. ಗಣೇಶನನ್ನು ಮನೆಗೆ ಕರೆತರುವಾಗ ಸರಳವಾಗಿ ಆದರೆ ಮಹತ್ವದ ಪೂಜೆ ನೆರವೇರಿಸಲಾತ್ತದೆ. ಅರಿಶಿನ ಮತ್ತು ಕುಂಕುಮದಿಂದ ಲೇಪಿತ ಅಕ್ಕಿ ಕಾಳನ್ನು ಅಕ್ಷತೆಯ ರೂಪದಲ್ಲಿ ಬಳಸುತ್ತಾರೆ.
ಪ್ರತಿ ವರ್ಷ ವಿನಾಯಕ ಮೂರ್ತಿಯ ಜನ್ಮೋತ್ಸವದ ಕಾರ್ಯಕ್ರಮದ ಅಂಗವಾಗಿ ಗಣೇಶ ಚತುರ್ಥಿಯಿಂದ ಹಿಡಿದು ಅನಂತ ಚತುರ್ದಶಿ (Anant Chaturdashi) ವರೆಗೂ ಗಣಪತಿಯ ಮಹೋತ್ಸವವನ್ನು ಧಾಮ್ಧೂಮ್ ಎಂದು ಆಚರಿಸಲಾಗುತ್ತದೆ. ಈ ಬಾರಿ ಗಣೇಶ ಚತುರ್ಥಿಯನ್ನು ಸೆಪ್ಟೆಂಬರ್ 10ರಂದು ಶುಕ್ರವಾರ ಆಚರಿಸಲಾಗುತ್ತದೆ. ಅನಂತ ಚತುರ್ದಶಿ ಸೆಪ್ಟೆಂಬರ್ 19 ಶುಕ್ರವಾರ ಬರುತ್ತದೆ. ಗಣೇಶನ ಹಬ್ಬದ ಅಂಗವಾಗಿ ಈ ಬಾರಿ ಸೆಪ್ಟೆಂಬರ್ 10ರ ಮಹತ್ವ ತಿಳಿದುಕೊಳ್ಳೋಣ.
10 ದಿನಗಳ ಕಾಲ ಭವ್ಯವಾಗಿ ನಡೆಯುವ ಗಣೇಶ ಮಹೋತ್ಸವಕ್ಕೆ ವಿಶೇಷ ಮಹತ್ವವಿದೆ. ಗಣಪನನ್ನು ಮನೆಗೆ ತಂದು ಪ್ರತಿಷ್ಠಾಪಿಸುತ್ತಾರೆ. ಶಕ್ತಿ ಭಕ್ತಿ ಅನುಸಾರ 5, 7 ಅಥವಾ 9 ದಿನಗಳ ಕಾಲ ಗಣೇಶನನ್ನು ಮನೆಯಲ್ಲಿಟ್ಟುಕೊಳ್ಳುತ್ತಾರೆ. ಅಥವಾ ಕೆಲವರು ಮೊದಲ ದಿನವೇ ವಿಸರ್ಜನೆ ಮಾಡುತ್ತಾರೆ. ಈ ಸಂದರ್ಭದಲ್ಲಿ ಪ್ರಥಮ ಪೂಜೆ ಮಾಡಿಸಿಕೊಳ್ಳುವ ಗಜಾನನ ದೇವನಿಗೆ ಸಕಲ ಸೇವೆಗಳು ಭಕ್ತಿಯಿಂದ ನಡೆಯುತ್ತವೆ. ಪೂಜಾರ್ಚನೆಗಳು ಕಾಲಕಾಲಕ್ಕೆ ನೆರವೇರುತ್ತವೆ.
ಗಣಪತಿಯ ಪೂಜೆಯಲ್ಲಿ ಅಕ್ಷತೆಗೆ ವಿಶೇಷ ಮಹತ್ವ ಇದೆ. ಗಣೇಶನನ್ನು ಮನೆಗೆ ಕರೆತರುವಾಗ ಸರಳವಾಗಿ ಆದರೆ ಮಹತ್ವದ ಪೂಜೆ ನೆರವೇರಿಸಲಾತ್ತದೆ. ಅರಿಶಿನ ಮತ್ತು ಕುಂಕುಮದಿಂದ ಲೇಪಿತ ಅಕ್ಕಿ ಕಾಳನ್ನು ಅಕ್ಷತೆಯ ರೂಪದಲ್ಲಿ ಬಳಸುತ್ತಾರೆ.
ಅಕ್ಷತೆಯ ಬಳಕೆ ಏಕೆ ಮಾಡುತ್ತಾರೆ ಅಂದರೆ ಗಣಪತಿಯನ್ನು ಶುಭಕರ್ತಾ ಎಂದು ಪರಿಗಣಿಸಲಾಗುತ್ತದೆ. ಅಕ್ಷತೆ ಅಂದರೆ ಅದು ಖುಷಿ ಮತ್ತು ಸಮೃದ್ಧಿಯ ಸಂಕೇತ. ಗಣೇಶನನ್ನು ಮನೆಗೆ ಕರೆತರುವಾಗ ಆತನ ಮೇಲೆ ಅಕ್ಷತೆ ಅಥವಾ ಅಕ್ಕಿಯನ್ನು ಹಾಕುವುದರಿಂದ ಮನೆಯಲ್ಲಿನ ಎಲ್ಲ ಬಾಧೆಗಳು ದೂರವಾಗುತ್ತವೆ. ಅಲ್ಲಿಂದ ಶುಭ ಮನೆ ಮಾಡುತ್ತದೆ. ಸಮೃದ್ಧಿ ನೆಲೆಸುತ್ತದೆ.
ಇದರ ಹೊರತಾಗಿ ಅಕ್ಷತೆ ಹಾಕುವುದರಿಂದ ಗಣೇಶನ ಜೊತೆಗೆ ಎಲ್ಲ ದೇವಿ-ದೇವರುಗಳ ಆಶೀರ್ವಾದ ಲಭಿಸುತ್ತದೆ. ಮನೆಯಲ್ಲಿ ಇದರಿಂದ ಸಕಾರಾತ್ಮಕ ಭಾವ ಬೆಳೆಯುತ್ತದೆ. ಅಕ್ಕಿಯನ್ನು ಹಾಗೆಯೇ ಹಾಕುವಂತಿಲ್ಲ. ಅದಕ್ಕೆ ಕುಂಕುಮ ಅಥವಾ ಅರಿಶಿನವನ್ನು ಲೇಪಿಸಬೇಕು. ಇನ್ನೊಂದು ಮುಖ್ಯವಾದ ಸಂಗತಿಯೆಂದರೆ ಅಕ್ಕಿ ಚೂರು ಚೂರು ಆಗಿರಬಾರದು. ಹಾಗಾಗಿ ಈ ಬಾರಿ ಗಣೇಶನನ್ನು ನಿಮ್ಮ ಮನೆಗೆ ಕರೆತರುವಾಗ ಈ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಪಾಲಿಸಿ.
ಮಧ್ಯಾಹ್ನದ ಪೂಜೆ ಗಣೇಶನಿಗೆ ಶ್ರೇಷ್ಠ ಹೇಗೆ? ಗಣೇಶನಿಗೆ ಮಧ್ಯಾಹ್ನದ ಪೂಜೆ ಶ್ರೇಷ್ಠ ಹೇಗೆಂದರೆ ಗಣೇಶ ಚತುರ್ಥಿಯೆಂದರೆ ಗಣೇಶನ ಜನ್ಮೋತ್ಸವ ಎಂದರ್ಥ. ಗಣಪತಿಯ ಜನನ ಭಾದ್ರಮಾಸದ ಶುಕ್ಲ ಪಕ್ಷ ಚತುರ್ಥಿಯಂದು ಮಧ್ಯಾಹ್ನ ಆಗಿದೆ. ಹಾಗಾಗಿ ಮಹಾಗಣಪನಿಗೆ ಅಂದು ಮಧ್ಯಾಹ್ನದ ಮೇಲೆ ವಿಶೇಷ ಪೂಜೆ ಪುನಸ್ಕಾರಗಳು ನಡೆದರೆ ಹೆಚ್ಚು ಫಲವಿರುತ್ತದೆ.
ಸಾಮಾನ್ಯವಾಗಿ ಮನೆ-ಮಂದಿರಗಳಲ್ಲಿ 12 ಗಂಟೆಯ ನಂತರ ಪೂಜಾಕಾರ್ಯಗಳು ನೆರವೇರುವುದಿಲ್ಲ. ಆದರೆ ಗಣೇಶ ಚತುರ್ಥಿಯ ದಿನ ಮಧ್ಯಾಹ್ನ ಪೂಜೆ ನೆರವೇರಿಸುವುದಕ್ಕೆ ಹೆಚ್ಚು ಅರ್ಥ ಬರುವುದರಿಂದ ಅಂದು ಮಾತ್ರ ಮಧ್ಯಾಹ್ನದ ವೇಳೆ ಪೂಜೆ ಅನುವು ಮಾಡಿಕೊಡುತ್ತಾರೆ. ಗಣೇಶನ ಹಬ್ಬದ ದಿನ ಗಣೇಶನ ಪ್ರತಿಷ್ಠಾಪನೆಗೆ ಮಧ್ಯಾಹ್ನ 12.17 ರಿಂದ ರಾತ್ರಿ 10 ವರೆಗೂ ಶ್ರೇಷ್ಠ ಕಾಲ ಎಂಬಂತಾಗಿದೆ.
(why akshat or rice is used during the arrival of lord ganesh facts)
Published On - 7:41 am, Wed, 8 September 21