ಬೆಳಗ್ಗೆ (morning) ಸುಖವಾಗಿ ನಿದ್ರೆ (Sleep) ಬರುವ ಸಮಯ. ಎದ್ದು ಇಂತಹ ಸುಖವನ್ನು ಕಳೆದುಕೊಳ್ಳುವುದು ಮೂರ್ಖತನವಾಲ್ಲವೇ? ಅರಾಮಾಗಿ ಮಲಗಿದರೆ ಏನಾಗುತ್ತದೆ? ಅಷ್ಟು ಮುಂಚೆ ಎದ್ದು ಮಾಡುವುದಾದರೂ ಏನು ಅಂತ ಬೇಡವೇ? ಎಂಬೆಲ್ಲ ಪ್ರಶ್ನೆಗಳು ಏಳುವುದು ಸಹಜ ತಾನೇ? ವಸ್ತುಸ್ಥಿತಿಯೂ ಹಾಗೆಯೇ ಇರುತ್ತದೆ. ಆದರೆ ಇದಕ್ಕಿಂತ ಭಿನ್ನವಾದ ಆಲೋಚನೆ ಭಾರತೀಯರದ್ದು. ಅವರ ಪ್ರಕಾರ ಯಾಕೆ ಹಾಗೆ ಎನ್ನುವುದನ್ನು ಮೊದಲು ತಿಳಿಯೋಣ.
ಪ್ರಪಂಚದಲ್ಲಿ ಬುದ್ಧಿ ಇರುವ ಪ್ರಾಣಿ ಮನುಷ್ಯ. ಆದರೆ ಬುದ್ಧಿ ಇಲ್ಲದಂತೆ ವರ್ತಿಸುವವನೂ ಅವನೇ. ಹಾಗಾಗಿ ಅವನಿಗೆ ನಿಯಮಗಳನ್ನು ಹೇಳಿದ್ದಾರೆ. ಏಕೆಂದರೆ ಒಂದೇ ರೀತಿಯಲ್ಲಿ ಅವನಿರಬೇಕು ಎಂದು.
ಸೂರ್ಯನು ಎಲ್ಲರಿಗಿಂತ ಶ್ರೇಷ್ಠ. ಕಣ್ಣಿಗೆ ಕಾಣುವ ದೇವರು ಆತ. ಆದರೆ ಕೈಗೆ ಸಿಗನು. ಆ ದೇವರು ಬರುವಾಗ ನಾವು ಹೇಗಿರಬೇಕು? ಮನೆಗೆ ಹಿರಿಯರು ಬರುತ್ತಾರೆಂದು ಗೊತ್ತಿದ್ದರೆ, ಮನೆಗೆ ಅತಿಥಿಗಳು ಬರುತ್ತಾರೆಂದು ಗೊತ್ತಿದ್ದರೆ ನಾವು ಹೇಗಿರುತ್ತೇವೆ? ಮಲಗಿಕೊಂಡು, ಮನೆಯನ್ನು ಹೇಗಾದೂ ಹರಡಿಕೊಂಡು ಇರುವುದಿಲ್ಲ ತಾನೆ? ಮನುಷ್ಯ ವಿಚಾರಕ್ಕೇ ಇಷ್ಟಾದರೆ ಜಗತ್ತನ್ನು ಬೆಳಗುವ, ಕತ್ತಲೆಯನ್ನು ದೂರ ಮಾಡುವ, ಎಲ್ಲರಿಗೂ ಚೈತನ್ಯವನ್ನು ತಂದುಕೊಡುವ ಸೂರ್ಯದೇವ ಬರುವಾಗ ನಾವು ಹೇಗಿರಬೇಕು? ಆತನ ಸ್ವಾಗತಕ್ಕೆ ನಾವು ಸಜ್ಜಾಗುವುದು ಬೇಡವಾ? ಬೇಕು ತಾನೇ? ಹಾಗಿದ್ದರೆ ಆತನಿಗಿಂತ ಮೊದಲು ನಾವು ತಯಾರಾಗಬೇಕು.
ಇದನ್ನೂ ಓದಿ: Sankashti Chaturthi: ಸಂಕಷ್ಟ ಚತುರ್ಥಿಯ ದಿನಾಂಕ, ಶುಭ ಸಮಯ, ಮಹತ್ವ
ಹಳಸಲು ಮುಖವನ್ನು ಬಿಟ್ಟು, ಹೊಲಸು ಮೈಯ್ಯನ್ನು ತೊಳೆದು, ಮನಸ್ಸನ್ನು ಶುದ್ಧ ವಿಚಾರದಿಂದ ಉಜ್ಜಿ, ಹೊಳಪಿನ ವಸ್ತ್ರ ಧರಿಸಿ ಇರಬಾರದೇ? ಅಂತ ಸೂರ್ಯನೇ ವರ್ಷ ಪೂರ್ತಿ ಬೆಳಗುತ್ತಲೇ ಇರುವಾಗ ನಮಗೆ ಇರುವ ವಿಶ್ರಾಂತಿಯಿಂದ ಏಳಲು ಅಸಾಧ್ಯವೇ? ಆತ ಕೊಡುವ ಶಕ್ತಿಯು ನಮ್ಮ ಪೂರ್ಣವಾಗಿ ಇಡೀ ದಿನಕ್ಕೆ ಸಾಕಾಗುವಷ್ಟು ಇರುತ್ತದೆ. ನಾವು ಆಮೇಲೆ ಎಂದು ಬೇಗ ಚೈತನ್ಯವನ್ನು ಉತ್ಸಾಹವನ್ನು ಕಳೆದುಕೊಳ್ಳುತ್ತೇವೆ. ಇದು ಒಂದು ಭಾಗವಾದರೆ. ಇದರ ಇನ್ನೊಂದು ಅಂಶವೂ ಇದೆ.
ಬೆಳಗ್ಗೆ ಎದ್ದು ಏನು ಮಾಡಬೇಕು ಎಂದು ಕೇಳಿದರೆ ತನ್ನ ಬಗ್ಗೆ ಚಿಂತೆ ಮಾಡಿ. ನಾನು ಯಾರು? ನನ್ನ ಇಂದಿನ ಕರ್ತವ್ಯಗಳೇನು ಎಂಬುದರ ನಿರ್ಧಾರವನ್ನು ಮೊದಲೇ ಮಾಡಿಕೊಳ್ಳಬೇಕಾಗಿದೆ. ಸೂರ್ಯೋದಯದ ಅನಂತರ ಕಾರ್ಯಪ್ರವೃತ್ತರಾಗಿ ಕೆಲಸವನ್ನು ಆರಂಭಿಸಬೇಕು. ಅದಕ್ಕೂ ಮೊದಲು ನಾವೊಂದು ಯೋಜನೆಯನ್ನು ಸಿದ್ಧಪಡಿಸಿಕೊಳ್ಳುವ ಪ್ರಕ್ರಿಯೆಯು ಸಂತೆಯಲ್ಲಿ ಆಗದು. ಏಕಾಂತ ಬೇಕು. ಅದು ಸೂರ್ಯೋದಯದ ಮೊದಲು ಸೃಷ್ಟಿಯಲ್ಲಿ ಸಹಜವಾಗಿ ಇರುವುದು. ಅದನ್ನು ಬಳಸಿಕೊಳ್ಳಬೇಕಾಗಿರುವುದು ಮನುಷ್ಯನ ಕರ್ತವ್ಯ. ಹಾಗಾಗಿಯೇ ಹೇಳಿದ್ದು “ಬ್ರಾಹ್ಮೀ ಮುಹೂರ್ತೇ ಚೋತ್ಥಾಯ ಚಿಂತಯೇದಾತ್ಮನೋ ಹಿತಮ್’ ಎಂದು.
ಇದನ್ನೂ ಓದಿ: Dream Astrology: ಕನಸಿನಲ್ಲಿ ಹಾವನ್ನು ನೋಡುವುದು ಮಂಗಳಕರವೇ ಅಥವಾ ಅಶುಭವೇ? ಈ ಕನಸು ಭವಿಷ್ಯ ನಿರ್ಧಾರ ಮಾಡುತ್ತದೆಯೇ?
ನಿಮ್ಮನ್ನು ಯಾರಾದರೂ ಬೆಳಗ್ಗೆ ಎದ್ದು ಏನು ಮಾಡಬೇಕು ಅಂತ ಯಾರಾದರೂ ಕೇಳಿದರೆ ‘ಏನೂ ಮಾಡಬೇಡ. ಎದ್ದು ಸುಮ್ಮನೆ ಕೂಳಿತುಕೊಳ್ಳಿ. ಸ್ವಲ್ಪ ಹೊತ್ತಾದ ಬಳಿಕೆ ನಾನು ಯಾರು ನಾನೇನು ಮಾಡಬೇಕು ಎನ್ನುವ ಆಲೋಚನೆ ತಾನಾಗಿಯೇ ಬರುತ್ತದೆ. ಎದ್ದು ಕಾರ್ಯವನ್ನು ಮಾಡು ಎಂದು ಹೇಳಿ.
ಇದೆಲ್ಲ ಏನೇನೇ ಅಂದರೂ ಹೇಳುವುದು ಸುಲಭ, ಏಳೋದು ಕಷ್ಟ ಅಲ್ವಾ?
ಮತ್ತಷ್ಟು ಆಧ್ಯಾತ್ಮ ಲೇಖನಗಳನ್ನು ಓದಲು ಇಲ್ಲಿ ಕ್ಲಿಕ ಮಾಡಿ.
Published On - 9:06 pm, Wed, 5 July 23