Sankashti Chaturthi: ಸಂಕಷ್ಟ ಚತುರ್ಥಿಯ ದಿನಾಂಕ, ಶುಭ ಸಮಯ, ಮಹತ್ವ

ಹಿಂದೂ ಪಂಚಾಂಗದ ಪ್ರಕಾರ, ಸಂಕಷ್ಟ ಚತುರ್ಥಿ ಉಪವಾಸವನ್ನು ಪ್ರತಿ ತಿಂಗಳ ಕೃಷ್ಣ ಪಕ್ಷದ ಚತುರ್ಥಿಯ ದಿನದಂದು ಆಚರಿಸಲಾಗುತ್ತದೆ. ಅದರಲ್ಲೂ ಶ್ರಾವಣ ಮಾಸ ಸಂಕಷ್ಟ ಚತುರ್ಥಿಯು ಹೆಚು ಮಹತ್ವದ್ದಾಗಿದೆ. ಏಕೆಂದರೆ ಈ ತಿಂಗಳು ಶಿವ ದೇವರಿಗೆ ಸಮರ್ಪಿತವಾಗಿದೆ. ಮತ್ತು ಈ ಪವಿತ್ರ ಮಾಸದಲ್ಲಿ ದೇವರನ್ನು ಪೂಜಿಸುವುದು ಉತ್ತಮ ಎಂದು ಪರಿಗಣಿಸಲಾಗಿದೆ. ಈ ಬಾರಿಯ ಸಂಕಷ್ಟ ಚತುರ್ಥಿ ಯಾವಾಗ ಮತ್ತು ಪೂಜೆಯ ಶುಭ ಸಮಯ ಯಾವುದು ಎಂದು ತಿಳಿಯೋಣಾ.

Sankashti Chaturthi: ಸಂಕಷ್ಟ ಚತುರ್ಥಿಯ ದಿನಾಂಕ, ಶುಭ ಸಮಯ, ಮಹತ್ವ
ಸಾಂದರ್ಭಿಕ ಚಿತ್ರ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on:Jul 05, 2023 | 3:49 PM

ಸಂಕಷ್ಟಿ ಚತುರ್ಥಿಯು ವಿಘ್ನನಿವಾರಕ ಗಣೇಶನಿಗೆ ಸಮರ್ಪಿತವಾದ ಮಂಗಳಕರ ಹಬ್ಬವಾಗಿದೆ. ಪ್ರತಿ ತಿಂಗಳು ಕೃಷ್ಣ ಪಕ್ಷದ ಚತುರ್ಥಿಯ ದಿನದಂದು ಸಂಕಷ್ಟಿ ಚತುರ್ಥಿಯನ್ನು ಆಚರಿಸಲಾಗುತ್ತದೆ. ಈ ದಿನವು ಸಂಪೂರ್ಣವಾಗಿ ಗಣಪತಿಗೆ ಸಮರ್ಪಿತವಾಗಿದ್ದು, ಭಕ್ತರು ಈ ದಿನದಂದು ಸಂಪೂರ್ಣ ಭಕ್ತಿ ಮತ್ತು ಸಮರ್ಪಣೆಯಿಂದ ಗಣಪತಿಯನ್ನು ಪೂಜಿಸುತ್ತಾರೆ. ಈ ವ್ರತವನ್ನು ಆಚರಿಸುವುದರಿಂದ ಜೀವನದಲ್ಲಿ ಎಲ್ಲಾ ರೀತಿಯ ದುಃಖಗಳು ದೂರವಾಗುತ್ತದೆ ಹಾಗೂ ಮನೆಯಲ್ಲಿ ಸಂತೋಷ, ಸಮೃದ್ಧಿ ಮತ್ತು ಸಂಪತ್ತು ಬರುತ್ತದೆ ಎಂಬ ನಂಬಿಕೆಯಿದೆ. ನೀವು ಸಹ ಗಣೇಶನ ಕೃಪೆಗೆ ಪಾತ್ರರಾಗಲು, ಶ್ರಾವಣ ಸಂಕಷ್ಟ ಚತುರ್ಥಿಯ ಶುಭ ದಿನದಂದು ಗಣೇಶನನ್ನು ಪೂಜಿಸಿ.

ಸಂಕಷ್ಟ ಚತುರ್ಥಿ ಜುಲೈ 2023 ದಿನಾಂಕ:

ಸಂಕಷ್ಟ ಚತುರ್ಥಿ ವ್ರತವನ್ನು ಶ್ರಾವಣ ಮಾಸದ ಕೃಷ್ಣ ಪಕ್ಷದ ಚತುರ್ಥಿ ತಿಥಿಯಂದು ಆಚರಿಸಲಾಗುತ್ತದೆ. ಈ ವರ್ಷ ಈ ದಿನಾಂಕವು ಜುಲೈ 6 ರ ಗುರುವಾರ ಬೆಳಗ್ಗೆ 6.30 ಕ್ಕೆ ಪ್ರಾರಂಭವಾಗುತ್ತದೆ ಮತ್ತು ಜುಲೈ 7 ಶುಕ್ರವಾರದಂದು ಬೆಳಗ್ಗೆ 3.12 ಕ್ಕೆ ಕೊನೆಗೊಳ್ಳುತ್ತದೆ. ಈ ದಿನಾಂಕದ ಪ್ರಕಾರ ನೋಡುವುದಾದರೆ ಜುಲೈ 6 ರಂದು ಗಜಾನನ ಸಂಕಷ್ಟ ಚತುರ್ಥಿಯ ಉಪವಾಸ ನಡೆಯಲಿದೆ. ಈ ಉಪವಾಸವು ಗಣಪತಿ ದೇವರಿಗೆ ಸಮರ್ಪಿತವಾಗಿದ್ದು, ಈ ದಿನ ವಿಧಿ ವಿಧಾನಗಳೊಂದಿಗೆ ಪೂಜೆ ಮಾಡಿದರೆ ಗಣಪತಿಯೊಂದಿಗೆ ಶಿವನ ಅನುಗ್ರಹವು ನಿಮಗೆ ಲಭಿಸುತ್ತದೆ ಎಂದು ಹೇಳಲಾಗುತ್ತದೆ.

ಸಂಕಷ್ಟ ಚತುರ್ಥಿಯ ಶುಭ ಸಮಯ:

ಪಂಚಾಂಗದ ಪ್ರಕಾರ ಸಂಕಷ್ಟಿ ಚತುರ್ಥಿಯ ದಿನದಂದು ಬೆಳಗ್ಗೆ 10.41 ರಿಂದ ಮದ್ಯಾಹ್ನ 12.26 ರ ವರೆಗೆ ಪೂಜೆಗೆ ಶುಭ ಮುಹೂರ್ತವಿದೆ. ಇದಾದ ನಂತರ ಸಂಜೆ 7.23 ರಿಂದ 8.29 ವರೆಗೆ ದೇವರ ಪೂಜೆಗೆ ಶುಭ ಮುಹೂರ್ತವಿದೆ. ಜುಲೈ 6 ರಂದು ಚಂದ್ರೋದಯದ ಸಮಯ ರಾತ್ರಿ 10.12 ಕ್ಕೆ ಚಂದ್ರನಿಗೆ ನೀರನ್ನು ಅರ್ಪಿಸಿದ ನಂತರ ಉಪವಾಸವನ್ನು ಮುರಿದು ಆಹಾರವನ್ನು ಸೇವಿಸಬಹುದು.

ಇದನ್ನೂ ಓದಿ: Sankashti Chaturthi 2023: ಇಂದು ಸಂಕಷ್ಟ ಚತುರ್ಥಿ, ಪೂಜೆಯ ವಿಧಿ ವಿಧಾನಗಳು, ಶುಭ ಮುಹೂರ್ತದ ಕುರಿತು ಮಾಹಿತಿ ಇಲ್ಲಿದೆ

ಸಂಕಷ್ಟ ಚತುರ್ಥಿಯ ಮಹತ್ವ:

ಗಣೇಶನನ್ನು ವಿಘ್ನ ನಿವಾರಕ ಎಂದ ಪೂಜಿಸಲಾಗುತ್ತದೆ. ಮತ್ತು ಪುರಾಣಗಳ ಪ್ರಕಾರ, ಸಂಕಷ್ಟಿಯ ದಿನದಂದು ಶಿವ ದೇವರು ತಮ್ಮ ಮಗನಾದ ಗಣಪತಿಯನ್ನು ವಿಷ್ಣು, ಲಕ್ಷ್ಮೀ ದೇವಿ, ಪಾರ್ವತಿ ದೇವಿ ಮತ್ತು ಶಿವ ಸೇರಿದಂತೆ ಎಲ್ಲಾ ದೇವರುಗಳಿಗಿಂತ ಅತ್ಯಂತ ಶ್ರೇಷ್ಠ ಎಂದು ಘೋಷಿಸಿದರು. ಗಣಪತಿಯನನು ಸಮೃದ್ಧಿ, ಬುದ್ಧಿವಂತಿಕೆ ಮತ್ತು ಅದೃಷ್ಟದ ದೇವರೆಂದು ಪೂಜಿಸಲಾಗುತ್ತದೆ. ಅಲ್ಲದೇ ಎಲ್ಲಾ ಶುಭ ಸಂದರ್ಭದಲ್ಲಿನ ಪ್ರಥಮ ಪೂಜೆಯನ್ನು ವಿಘ್ನ ನಿವಾರಕನಿಗೆ ಸಮರ್ಪಿಸಲಾಗಿದೆ. ಗಣೇಶನನ್ನು ಪೂಜಿಸುವುದರಿಂದ ವಿಘ್ನಗಳೆಲ್ಲಾ ದೂರವಾಗುತ್ತದೆ ಎಂಬ ನಂಬಿಕೆಯಿದೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 3:44 pm, Wed, 5 July 23

ನಾನ್ಯಾಕೆ ಬೇಡವಾಗಿದ್ದೇನೆಂದು ಕುಮಾರಸ್ವಾಮಿಯೇ ಹೇಳಬೇಕು: ದೇವೇಗೌಡ
ನಾನ್ಯಾಕೆ ಬೇಡವಾಗಿದ್ದೇನೆಂದು ಕುಮಾರಸ್ವಾಮಿಯೇ ಹೇಳಬೇಕು: ದೇವೇಗೌಡ
ಜಾಗೃತಿ ಅಭಿಯಾನಕ್ಕಾಗಿ ವಿಜಯೇಂದ್ರ 3 ತಂಡಗಳನ್ನು ರಚಿಸಿದ್ದಾರೆ: ಯಡಿಯೂರಪ್ಪ
ಜಾಗೃತಿ ಅಭಿಯಾನಕ್ಕಾಗಿ ವಿಜಯೇಂದ್ರ 3 ತಂಡಗಳನ್ನು ರಚಿಸಿದ್ದಾರೆ: ಯಡಿಯೂರಪ್ಪ
ನಂಬಿಕೆಗಳ ಮಹಾ ತರ್ಕ, ಲೆಕ್ಕಚಾರ ಮಾಡಲು ಬಂದ ಸುದೀಪ್
ನಂಬಿಕೆಗಳ ಮಹಾ ತರ್ಕ, ಲೆಕ್ಕಚಾರ ಮಾಡಲು ಬಂದ ಸುದೀಪ್
ವಕ್ಫ್ ಭೂವಿವಾದ; ಬಿಜೆಪಿಯ ಪ್ರಸ್ತಾಪಿತ ಜಾಗೃತಿ ಜಾಥಾಗೆ ಸಮನ್ವಯತೆಯ ಕೊರತೆ
ವಕ್ಫ್ ಭೂವಿವಾದ; ಬಿಜೆಪಿಯ ಪ್ರಸ್ತಾಪಿತ ಜಾಗೃತಿ ಜಾಥಾಗೆ ಸಮನ್ವಯತೆಯ ಕೊರತೆ
ರೌಡಿಶೀಟರ್ ಸ್ನೇಹಮಯಿ ಕೃಷ್ಣರನ್ನು ಗಡಿಪಾರು ಮಾಡುವಂತೆ ದೂರಿನಲ್ಲಿ ಕೋರಿಕೆ
ರೌಡಿಶೀಟರ್ ಸ್ನೇಹಮಯಿ ಕೃಷ್ಣರನ್ನು ಗಡಿಪಾರು ಮಾಡುವಂತೆ ದೂರಿನಲ್ಲಿ ಕೋರಿಕೆ
ದೆಹಲಿಯಲ್ಲಿ ಮಿತಿ ಮೀರಿದ ವಾಯುಮಾಲಿನ್ಯ, ಪರಿಸ್ಥಿತಿ ಗಂಭೀರ
ದೆಹಲಿಯಲ್ಲಿ ಮಿತಿ ಮೀರಿದ ವಾಯುಮಾಲಿನ್ಯ, ಪರಿಸ್ಥಿತಿ ಗಂಭೀರ
ಕುಮಾರಸ್ವಾಮಿ ತಮ್ಮ ಹೇಳಿಕೆಗಳನ್ನು ತಿರುಚುವುದು ಹೊಸದೇನಲ್ಲ: ಜಮೀರ್ ಅಹ್ಮದ್
ಕುಮಾರಸ್ವಾಮಿ ತಮ್ಮ ಹೇಳಿಕೆಗಳನ್ನು ತಿರುಚುವುದು ಹೊಸದೇನಲ್ಲ: ಜಮೀರ್ ಅಹ್ಮದ್
ಜಮೀರ್ ಪದಬಳಕೆ ವಿಷಯವನ್ನು ಶಿವಕುಮಾರ್ ನೋಡಿಕೊಳ್ಳುತ್ತಾರೆ: ಪರಮೇಶ್ವರ್
ಜಮೀರ್ ಪದಬಳಕೆ ವಿಷಯವನ್ನು ಶಿವಕುಮಾರ್ ನೋಡಿಕೊಳ್ಳುತ್ತಾರೆ: ಪರಮೇಶ್ವರ್
ಸಂಜು ಸಿಕ್ಸರ್​ಗೆ ಮಹಿಳೆ ಕಣ್ಣೀರು: ಕ್ಷಮೆ ಕೇಳಿದ ಸ್ಯಾಮ್ಸನ್
ಸಂಜು ಸಿಕ್ಸರ್​ಗೆ ಮಹಿಳೆ ಕಣ್ಣೀರು: ಕ್ಷಮೆ ಕೇಳಿದ ಸ್ಯಾಮ್ಸನ್
ಜಮೀರ್ ಮಾತಾಡಿದ್ದು ತಪ್ಪು ಎಂದು ಕೊನೆಗೂ ಅಂಗೀಕರಿಸಿದ ಡಿಕೆ ಶಿವಕುಮಾರ್
ಜಮೀರ್ ಮಾತಾಡಿದ್ದು ತಪ್ಪು ಎಂದು ಕೊನೆಗೂ ಅಂಗೀಕರಿಸಿದ ಡಿಕೆ ಶಿವಕುಮಾರ್