AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಚಲಿತ ಯುಗಧರ್ಮಕ್ಕೆ ಹೆಚ್ಚು ಸಮಂಜಸ – ಪ್ರಾಣಿ ಪಶು ಪಕ್ಷಿಗಳಲ್ಲಿ ಇರುವ ಬುದ್ಧಿ ಮನುಷ್ಯರಲ್ಲಿ ಏಕೆ ಇಲ್ಲ!?

ತಾಯಿ ಪಾರಿವಾಳ ನಕ್ಕು ಹೇಳಿತು: ಮಗು ನಾವು ಅವರಿಗಿಂತ ಎತ್ತರದಲ್ಲಿದ್ದೇವೆ. ವಿಶಾಲವಾದ ಪ್ರಪಂಚದಲ್ಲಿ ಜೀವಿಸುತ್ತಿದೇವೆ ನಮ್ಮದು ನಿಷ್ಕಲ್ಮಶ ಸ್ವೇಚ್ಛಾ ಜಗತ್ತು. ಎಲ್ಲ ಜೀವಿಗಳಲ್ಲಿ ಮೇಧಾವಿಯಾದ ಮಾನವ ಮಾತ್ರ - ಕಣ್ಣಿಗೆ ಕಾಣದ ಅಮಾನವೀಯ ಕುಲ ಮತ ಜಾತಿ ಲಿಂಗ ವರ್ಗ ಎಂಬ ಗೋಡೆಯನ್ನು ನಿರ್ಮಿಸಿಕೊಂಡಿದ್ದಾನೆ.

ಪ್ರಚಲಿತ ಯುಗಧರ್ಮಕ್ಕೆ ಹೆಚ್ಚು ಸಮಂಜಸ - ಪ್ರಾಣಿ ಪಶು ಪಕ್ಷಿಗಳಲ್ಲಿ ಇರುವ ಬುದ್ಧಿ ಮನುಷ್ಯರಲ್ಲಿ ಏಕೆ ಇಲ್ಲ!?
ಇಂದಿನ ವರ್ತಮಾನಕ್ಕೊಂದು ಮಾರ್ಮಿಕ ಬರಹ ಇಲ್ಲಿದೆ - ಪ್ರಾಣಿ ಪಶು ಪಕ್ಷಿಗಳಲ್ಲಿರುವ ಬುದ್ಧಿ ಮನುಷ್ಯರಲ್ಲೇಕೆ ಇಲ್ಲ!?
TV9 Web
| Edited By: |

Updated on:Apr 16, 2022 | 3:25 PM

Share

ಒಂದು ಪಾರಿವಾಳದ ಗುಂಪು ಮಸೀದಿ ಮೇಲೆ ಗೂಡು ಕಟ್ಟಿಕೊಂಡು ವಾಸವಾಗಿದ್ದವು. ರಂಜಾನ್ ಬಂತು ಮಸೀದಿಗೆ ಸುಣ್ಣಬಣ್ಣ ಬಳಿಯಲು ಎಲ್ಲಾ ಸ್ವಚ್ಛಗೊಳಿಸತೊಡಗಿದರು. ಆಗ ಆ ಪಾರಿವಾಳಗಳು ಅಲ್ಲಿಂದ ಹಿಂದೂ ದೇವಾಲಯಕ್ಕೆ ಹೋಗಿ ವಾಸವಾದವು. ಕೆಲದಿನಗಳಲ್ಲಿ ದಸರಾ ಹಬ್ಬ ಬಂತು. ಅಲ್ಲಿಂದ ಪಾರಿವಾಳಗಳು ಹಾರಿಹೋಗಿ, ಚರ್ಚ್ ಮೇಲೆ ನೆಲೆಸಿದವು. ಕ್ರಿಸ್ ಮಸ್ ವೇಳೆಗೆ ಮತ್ತೆ ಮಸೀದಿಗೆ ನೆಲೆ ಬದಲಾಯಿಸಿದವು. ಒಂದು ದಿನ ಮಸೀದಿ ಮುಂದೆ ಕೋಮುಗಲಭೆ ನಡೆಯಿತು. ಆಗ ಅದನ್ನು ನೋಡಿದ ಮರಿ ಪಾರಿವಾಳವು ತಾಯಿ ಪಾರಿವಾಳವನ್ನು ಕೇಳಿತು… ಯಾರು ಅವರು ಬಡಿದಾಡಿಕೊಳ್ಳುತ್ತಿರುವುದು? (Why is the human race unable to live in harmony)

ತಾಯಿ ಪಾರಿವಾಳ ಹೇಳಿತು -ಅವರು ಮನುಷ್ಯರು ಮಗು. ಮರಿ ಪಾರಿವಾಳಕೇಳಿತು -ಯಾಕೆ ಅವರು ಜಗಳವಾಡುತ್ತಿದ್ದಾರೆ? ತಾಯಿ ಪಾರಿವಾಳ ವಿವರಿಸಿತು -ಮಸೀದಿಗೆ ಹೋಗುವವರು ಮುಸ್ಲಿಮರಂತೆ; ಗುಡಿಗೆ ಹೋಗುವವರು ಹಿಂದೂಗಳಂತೆ; ಚರ್ಚ್ ಗೆ ಹೋಗುವವರು ಕ್ರೈಸ್ತರಂತೆ. ಇದು ಅವರೊಳಗಿನ ಮತ-ಮತಗಳ ಸಂಘರ್ಷಣೆ.

ಮರಿ ಪಾರಿವಾಳಕ್ಕೆ ಆಶ್ಚರ್ಯವಾಯಿತು! ಮತ್ತು ಸ್ವಗತದಲ್ಲಿ ಹೇಳಿತು: ನಾವು ಕೂಡ ಮಸೀದಿ ಮೇಲೆ ವಾಸಿಸುತ್ತೇವೆ. ಗುಡಿ ಗುಂಡಾರಗಳ ಮೇಲೆ ವಾಸಿಸುತ್ತೇವೆ. ಚರ್ಚ್ ಮೇಲೆಯೂ ವಾಸಿಸುತ್ತೇವೆ! ನಾವು ಎಲ್ಲಿಗೇ ಹೋದರೂ ಕೂಡ ಪಾರಿವಾಳವೇ ಆಗಿದ್ದೇವೆ! ಆದರೆ ಈ ಮನುಷ್ಯರು ಯಾಕೆ ಹೀಗೆ? ಅವರು ಮನುಷ್ಯರು… ಎಲ್ಲಿಗೆ ಹೋದರೂ ಮನುಷ್ಯರೇ ಅಲ್ಲವೇ?

ಅದಕ್ಕೆ ತಾಯಿ ಪಾರಿವಾಳ ನಕ್ಕು ಹೇಳಿತು: ಮಗು ನಾವು ಅವರಿಗಿಂತ ಎತ್ತರದಲ್ಲಿದ್ದೇವೆ. ವಿಶಾಲವಾದ ಪ್ರಪಂಚದಲ್ಲಿ ಜೀವಿಸುತ್ತಿದೇವೆ ನಮ್ಮದು ನಿಷ್ಕಲ್ಮಶ ಸ್ವೇಚ್ಛಾ ಜಗತ್ತು. ಎಲ್ಲ ಜೀವಿಗಳಲ್ಲಿ ಮೇಧಾವಿಯಾದ ಮಾನವ ಮಾತ್ರ – ಕಣ್ಣಿಗೆ ಕಾಣದ ಅಮಾನವೀಯ ಕುಲ ಮತ ಜಾತಿ ಲಿಂಗ ವರ್ಗ ಎಂಬ ಗೋಡೆಯನ್ನು ನಿರ್ಮಿಸಿಕೊಂಡಿದ್ದಾನೆ.

ಎಲ್ಲವನ್ನೂ ಬಿಟ್ಟರೆ ಮಾತ್ರ ಅವನು ನಮ್ಮ ‘ಎತ್ತರ’ಕ್ಕೆ ಬರುತ್ತಾನೆ. ಇಂತಹ ಕೋಮು ಘರ್ಷಣೆಗಳು ಯಾವಾಗ ಅಂತ್ಯವಾಗುತ್ತವೆಯೊ ಅಂದು ಮನುಕುಲ ಸುಖವಾಗಿ ನೆಮ್ಮದಿಯಾಗಿ ಬದುಕುತ್ತದೆ. (ಮಾರ್ಮಿಕ ಬರಹ: ಆಶಾ ನಾಗಭೂಷಣ)

ಇದೂ ಓದಿ: Anjaneya Wedding: ವಾಯುಪುತ್ರ ಆಂಜನೇಯ ಸ್ವಾಮಿಯ ವೈವಾಹಿಕ ಜೀವನ ಮತ್ತು ಆತನ ಸುಪುತ್ರನ ಬಗ್ಗೆ ಇಲ್ಲಿದೆ ಮಾಹಿತಿ

ಇದೂ ಓದಿ: ಶಿವಮೊಗ್ಗ ಹರ್ಷ ಕೊಲೆಗೆ ಪ್ರತೀಕಾರವಾಗಿ ಕೊಲೆಗೆ ಸಂಚು; ಮತ್ತೊಂದು ಕೋಮುಗಲಭೆ ಸೃಷ್ಟಿಗೆ ಹೊಂಚು

Published On - 3:17 pm, Sat, 16 April 22

ಪಾರ್ಶ್ವವಾಯು ಪೀಡಿತ ಮಹಿಳೆಯನ್ನು ಏರ್​​ಲಿಫ್ಟ್​ ಮಾಡಿದ ವಾಯುಪಡೆ
ಪಾರ್ಶ್ವವಾಯು ಪೀಡಿತ ಮಹಿಳೆಯನ್ನು ಏರ್​​ಲಿಫ್ಟ್​ ಮಾಡಿದ ವಾಯುಪಡೆ
‘ಔಟಾದೆ, ಹೋಗಪ್ಪ’; ಕಿಚ್ಚನ ಸ್ಲೆಡ್ಜಿಂಗ್​​ಗೆ ಎದುರಾಳಿ ತಂಡದವರು ಕಂಗಾಲು
‘ಔಟಾದೆ, ಹೋಗಪ್ಪ’; ಕಿಚ್ಚನ ಸ್ಲೆಡ್ಜಿಂಗ್​​ಗೆ ಎದುರಾಳಿ ತಂಡದವರು ಕಂಗಾಲು
ವೈಎಸ್​ಆರ್​ಸಿಪಿ ನಾಯಕ ಜೋಗಿ ರಮೇಶ್ ಮನೆಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು
ವೈಎಸ್​ಆರ್​ಸಿಪಿ ನಾಯಕ ಜೋಗಿ ರಮೇಶ್ ಮನೆಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು
ಸಿಸಿಎಲ್​ ಗೆಲುವನ್ನು ತಮ್ಮದೇ ಸ್ಟೈಲ್​​​ನಲ್ಲಿ ಸೆಲೆಬ್ರೇಟ್ ಮಾಡಿದ ಸುದೀಪ್
ಸಿಸಿಎಲ್​ ಗೆಲುವನ್ನು ತಮ್ಮದೇ ಸ್ಟೈಲ್​​​ನಲ್ಲಿ ಸೆಲೆಬ್ರೇಟ್ ಮಾಡಿದ ಸುದೀಪ್
ದೇವಾಲಯಗಳಲ್ಲಿ ಸೆಲ್ಫಿ ಅಥವಾ ಗರ್ಭಗುಡಿ ಫೋಟೋ ತೆಗೆಯಬಾರದು!
ದೇವಾಲಯಗಳಲ್ಲಿ ಸೆಲ್ಫಿ ಅಥವಾ ಗರ್ಭಗುಡಿ ಫೋಟೋ ತೆಗೆಯಬಾರದು!
ಇಂದು ಈ ರಾಶಿಯವರಿಗೆ ಆಪ್ತರಿಂದಲೇ ಮೋಸ
ಇಂದು ಈ ರಾಶಿಯವರಿಗೆ ಆಪ್ತರಿಂದಲೇ ಮೋಸ
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು