ನವರಾತ್ರಿಯ ಮೂರನೇ ದಿನ: ದೇವಿಯನ್ನು ಚಂದ್ರಘಂಟಾ ಎನ್ನುವುದೇಕೆ? ಇದರ ಹಿನ್ನಲೆ ಏನು? ಪೂಜಾ ಮಹತ್ವ ಬಗ್ಗೆ ತಿಳಿದುಕೊಳ್ಳಿ

| Updated By: ಅಕ್ಷಯ್​ ಪಲ್ಲಮಜಲು​​

Updated on: Oct 17, 2023 | 6:15 AM

ನವರಾತ್ರಿಯ ಮೂರನೇ ದಿನ ನವದುರ್ಗೆಯರಲ್ಲಿ ಮೂರನೇ ಶಕ್ತಿಯಾದ ಚಂದ್ರಘಂಟಾ ದೇವಿಯನ್ನು ಆರಾಧಿಸಲಾಗುತ್ತದೆ. ಭಕ್ತರ ಕಷ್ಟಗಳನ್ನು ಕ್ಷಣಮಾತ್ರದಲ್ಲೇ ನಿವಾರಿಸಿ, ಸಂತೋಷ, ಸಮೃದ್ಧಿಯನ್ನು ನೀಡುವ ತಾಯಿ ಎಂದು ಚಂದ್ರಘಂಟಾ ದೇವಿಯನ್ನು ಉಪಾಸನೆ ಮಾಡಲಾಗುತ್ತದೆ. ದುರ್ಗಾ ಮಾತೆಯ ರೌದ್ರಸ್ವರೂಪವಾಗಿ ಚಂದ್ರಘಂಟೆ ಕಾಣಸಿಗುತ್ತಾಳೆ. ದುಷ್ಟಶಕ್ತಿಗಳಿಗೆ ಸಿಂಹಸ್ವಪ್ನವಾಗಿಯೂ, ತನ್ನ ಭಕ್ತರನ್ನು ಪ್ರೀತಿಯಿಂದ ಸಲಹುವ ತಾಯಿಯಾಗಿಯೂ ಎಲ್ಲರನ್ನು ರಕ್ಷಿಸುತ್ತಾಳೆ.

ನವರಾತ್ರಿಯ ಮೂರನೇ ದಿನ: ದೇವಿಯನ್ನು ಚಂದ್ರಘಂಟಾ ಎನ್ನುವುದೇಕೆ? ಇದರ ಹಿನ್ನಲೆ ಏನು? ಪೂಜಾ ಮಹತ್ವ ಬಗ್ಗೆ ತಿಳಿದುಕೊಳ್ಳಿ
ಸಾಂದರ್ಭಿಕ ಚಿತ್ರ (ಟಿವಿ9 ಕನ್ನಡ)
Follow us on

ನವರಾತ್ರಿಯಲ್ಲಿ ಆದಿಶಕ್ತಿಯ ಆರಾಧನೆ ಎಲ್ಲೆಡೆ ನಡೆಯುತ್ತದೆ. ಪ್ರತಿದಿನವೂ ಒಂದೊಂದು ಶಕ್ತಿ ದೇವತೆಯನ್ನು ಪೂಜಿಸಿ ಆಶೀರ್ವಾದ ಪಡೆಯಲಾಗುತ್ತದೆ. ನವರಾತ್ರಿಯ ಮೂರನೇ ದಿನ ನವದುರ್ಗೆಯರಲ್ಲಿ ಮೂರನೇ ಶಕ್ತಿಯಾದ ಚಂದ್ರಘಂಟಾ ದೇವಿಯನ್ನು ಆರಾಧಿಸಲಾಗುತ್ತದೆ. ಭಕ್ತರ ಕಷ್ಟಗಳನ್ನು ಕ್ಷಣಮಾತ್ರದಲ್ಲೇ ನಿವಾರಿಸಿ, ಸಂತೋಷ, ಸಮೃದ್ಧಿಯನ್ನು ನೀಡುವ ತಾಯಿ ಎಂದು ಚಂದ್ರಘಂಟಾ ದೇವಿಯನ್ನು ಉಪಾಸನೆ ಮಾಡಲಾಗುತ್ತದೆ. ದುರ್ಗಾ ಮಾತೆಯ ರೌದ್ರಸ್ವರೂಪವಾಗಿ ಚಂದ್ರಘಂಟೆ ಕಾಣಸಿಗುತ್ತಾಳೆ. ದುಷ್ಟಶಕ್ತಿಗಳಿಗೆ ಸಿಂಹಸ್ವಪ್ನವಾಗಿಯೂ, ತನ್ನ ಭಕ್ತರನ್ನು ಪ್ರೀತಿಯಿಂದ ಸಲಹುವ ತಾಯಿಯಾಗಿಯೂ ಎಲ್ಲರನ್ನು ರಕ್ಷಿಸುತ್ತಾಳೆ.

ಚಂದ್ರಘಂಟಾ ಅಂದರೆ ಘಂಟೆಯಾಕಾರದ ಚಂದ್ರನನ್ನು ಮಸ್ತಕದಲ್ಲಿ ಧರಿಸಿದವಳು ಎಂಬ ಅರ್ಥವನ್ನು ಸೂಚಿಸುತ್ತದೆ ಹಾಗೂ ಈ ದೇವಿಯ ಮೂರನೇ ಕಣ್ಣು ತೆರೆದೇ ಇದ್ದು ಯಾವ ಸಮಯದಲ್ಲಿ ಆದರೂ ದುಷ್ಟ ಶಕ್ತಿಗಳ ನಿಗ್ರಹಕ್ಕೆ ಸಿದ್ಧಳಾಗಿರುವಂತೆ ಕಾಣುತ್ತಾಳೆ. ಚಂದ್ರಘಂಟೆಯನ್ನು ಚಂದ್ರಿಕಾ, ಚಂಡಿಕಾ, ರಣಚಂಡಿ ಎಂದೂ ಕರೆಯುತ್ತಾರೆ. ಇವಳಿಗೆ ಹತ್ತು ಕೈಗಳಿದ್ದು, ಒಂಬತ್ತು ಕೈಗಳಲ್ಲಿ ಶಸ್ತ್ರಾಸ್ತ್ರವನ್ನು ಹಿಡಿದುಕೊಂಡಿದ್ದು ಇನ್ನೊಂದು ಕೈ ಆಶೀರ್ವಾದ ಮಾಡುವ ಭಂಗಿಯಲ್ಲಿದ್ದು ಸಿಂಹವಾಹಿನಿಯಾಗಿ ರಾರಾಜಿಸುತ್ತಾಳೆ. ಇದು ಶೌರ್ಯ ಮತ್ತು ಧೈರ್ಯವನ್ನು ಪ್ರತಿನಿಧಿಸುತ್ತದೆ. ಇವಳ ಆರಾಧನೆಯಿಂದ ಸಂಪತ್ತು ಹಾಗೂ ಸಮೃದ್ಧಿಯನ್ನು ಕೂಡ ಪಡೆಯಬಹುದು.

ಚಂದ್ರಘಂಟೆಯ ಪುರಾಣ ಕಥೆ

ಹಿಮವಂತ ಹಾಗೂ ಮೈನಾ ದೇವಿಯ ಪುತ್ರಿಯಾಗಿ ಜನಿಸಿದ ಪಾರ್ವತಿಯು ಶಿವನನ್ನು ಪಡೆಯಲು ಕಠಿಣ ತಪಸ್ಸನ್ನು ಕೈಗೊಳ್ಳುತ್ತಾಳೆ. ಪಾರ್ವತಿಯ ಕಠೋರ ತಪಸ್ಸನ್ನು ಮೆಚ್ಚಿದ ಶಿವನು ಮದುವೆಯಾಗಲು ಒಪ್ಪಿಕೊಳ್ಳುತ್ತಾನೆ. ವಿವಾಹ ಸಂದರ್ಭದಲ್ಲಿ ಕೈಲಾಸದ ಗಣಗಳೊಂದಿಗೆ ಶಿವನು ಪಾರ್ವತಿಯೊಂದಿಗೆ ಅರಮನೆಯನ್ನು ಪ್ರವೇಶಿಸುತ್ತಾನೆ. ಅತಿ ಭಯಂಕರನಾಗಿ ಕಾಣುತ್ತಿದ್ದ ಶಿವನನ್ನು ನೋಡಿ ಪಾರ್ವತಿ ದೇವಿಯ ತಾಯಿ ಮೂರ್ಛೆಹೋಗುತ್ತಾಳೆ. ಆಗ ಪಾರ್ವತಿಯು ಚಂದ್ರಘಂಟಾ ರೂಪದಲ್ಲಿ ಶಿವನ ಮುಂದೆ ಪ್ರತ್ಯಕ್ಷಳಾಗಿ ಶಿವನು ರಾಜಕುಮಾರನ ರೂಪವನ್ನು ತಾಳಬೇಕಾಗಿ ವಿನಂತಿಸಿಕೊಳ್ಳುತ್ತಾಳೆ. ಹೀಗೆ ಶಿವನು ಸುಂದರ ವರನ ರೂಪವನ್ನು ತಾಳಿದ ನಂತರ ಶಿವ ಪಾರ್ವತಿಯ ಮದುವೆ ನೆರವೇರುತ್ತದೆ.

ಪೂಜೆಯ ಮಹತ್ವ

ನವರಾತ್ರಿಯ ಮೂರನೇ ದಿನ ಚಂದ್ರಘಂಟಾ ದೇವಿಯ ಪೂಜೆ ಮಾಡುವುದರಿಂದ ಸಂಪತ್ತು ಹಾಗೂ ಸಮೃದ್ಧಿ ದೊರೆಯುತ್ತದೆ. ಜೊತೆಗೆ ಮನಸ್ಸಿನಲ್ಲಿರುವ ಭಯವೆಲ್ಲಾ ನಿವಾರಣೆಯಾಗಿ ಜೀವನದ ಮೇಲೆ ವಿಶ್ವಾಸ ಬೆಳೆಯುತ್ತದೆ. ದೇವಿಯ ಮಸ್ತಕದಲ್ಲಿರುವ ಚಂದ್ರಘಂಟೆಯ ನಾದವು ಋಣಾತ್ಮಕ ಶಕ್ತಿ, ದುಷ್ಟಶಕ್ತಿಗಳನ್ನೆಲ್ಲಾ ದೂರ ಮಾಡುತ್ತದೆ ಹಾಗಾಗಿ ಚಂದ್ರಘಂಟೆಯ ಪೂಜೆಯನ್ನು ಮಾಡಿದರೆ ಮನೆಯಲ್ಲಿರುವ ನಕಾರಾತ್ಮಕ ಶಕ್ತಿಗಳೆಲ್ಲಾ ದೂರವಾಗಿ ಮನೆ, ಮನಸ್ಸು ಶುದ್ಧಿಯಾಗುತ್ತದೆ. ಜೊತೆಗೆ ಯಾರು ವ್ಯವಹಾರದಲ್ಲಿ ಹೊಸ ಹಾದಿಯಲ್ಲಿ ಹೋಗಲು ಇಚ್ಛಿಸುತ್ತಾರೋ ಅವರು ಚಂದ್ರಘಂಟೆಯ ಪೂಜೆ ಮಾಡಿದರೆ ಅವರು ಯಶಸ್ಸಿನ ಮೆಟ್ಟಿಲನ್ನು ಏರುತ್ತಾರೆ. ಹೀಗಾಗಿ ಚಂದ್ರಘಂಟೆಯ ಪೂಜೆ ಮಾಡಿ, ಮಾತೆಯ ಆಶೀರ್ವಾದ ಪಡೆದುಕೊಳ್ಳಿ

ಇದನ್ನೂ ಓದಿ:ಕರಾವಳಿ ಕರ್ನಾಟಕದ ನವರಾತ್ರಿ ಹಬ್ಬದಲ್ಲಿ ಹುಲಿಕುಣಿತ  ಪ್ರಮುಖ ಆಕರ್ಷಣೆ, ಇದರ ವಿಶೇಷತೆಗಳೇನು? 

ಚಂದ್ರಘಂಟಾ ದೇವಿಯನ್ನು ಪೂಜಿಸುವಾಗ ಯಾವ ಪೂಜಾ ಮಂತ್ರವನ್ನು ಪಠಿಸಬೇಕು?

– ಓಂ ದೇವಿ ಚಂದ್ರಘಂಟಯೇ ನಮಃ

– ಓಂ ದೇವಿ ಚಂದ್ರಘಂಟಾಯೈ ನಮಃ

-ಅಪಾದುದ್ಧಾರಿಣಿ ತ್ವಂಹೀ ಆದ್ಯ ಶಕ್ತಿಃ ಶುಭ್‌ಪರಂ

– ಪಿಂದಾಜ ಪ್ರವರಾರುಧ ಚಂದಕೋಪಸ್ತ್ರಕೈರ್ಯುತ
ಪ್ರಸಾದಂ ತನುತೇ ಮಧ್ಯಮ ಚಂದ್ರಘಂಟತಿ ವಿಶ್ರುತಾ

– ಯಾ ದೇವಿ ಸರ್ವ ಭೂತೇಷು ಚಂದ್ರಘಂಟಾ ರೂಪೇಣ ಸಂಸ್ಥಿತಾ
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ

– ಓಂ ದೇವಿ ಚಂದ್ರಘಂಟಾಯೈ ನಮಃ ಪಿಂದಾಜ ಪ್ರವರಾರುಧ ಚಂದಕೋಪಸ್ತ್ರಕೈರ್ಯುತ
ಪ್ರಸಾದಂ ತನುತೇ ಮಧ್ಯಮ ಚಂದ್ರಘಂಟತಿ ವಿಶ್ರುತಾ

-ಏಂ ಶ್ರೀಂ ಶಕ್ತಾಯೈ ನಮಃ

-ಆಹ್ಲಾದಕಾರಿಣಿ ಚಂದ್ರಭೂಷಣಾ ಹಸ್ತೇ ಪದ್ಮಧಾರಿಣೀ
ಘಂಟಾ ಶೂಲ ಹಲಾನೀ ದೇವೀ ದುಷ್ಟ ಭಾವ ವಿನಾಶಿನೀ

ಚಂದ್ರಘಂಟಾ ದೇವಿಯ ಧ್ಯಾನ ಶ್ಲೋಕ:

ವಂದೇ ವಂಚಿತಾಲಭಯ ಚಂದ್ರಧಾಕೃತ್ರಶೇಖರಂ
ಸಿಂಹರೂಢ ಚಂದ್ರಘಂಟ ಯಶಸ್ವಿನೀಂ
ಮಣಿಪುರಾ ಸ್ಥಿತಂ ತೃತಿಯಾ ದುರ್ಗಾ ತ್ರಿನೇತ್ರಂ
ಶಂಖ, ಗಧಾ, ತ್ರಿಶೂಲ, ಚಪಶರ, ಪದ್ಮಕಮಂಡಲು ಮಾಲಾ ವರಭಿತಕರಂ
ಪತಂಬರಾ ಪರಿಧಿಂ ಮೃದುಹಾಸ ನಾನಾಲಂಕಾರ ಭೂಷಿತಂ
ಮಂಜೀರಾ, ಹರಾ, ಕೆಯುರಾ, ಕಿಕಿಂಣಿ, ರತ್ನಾಕುಂಡಲ ಮಂಡಿಯಂ
ಪ್ರಫುಲ್ಲ ವಂದನಾ ಬಿಬಾಧಾರ ಕಾಂತಾ ಕಪೋಲಂ ತುಗಂ ಕುಚಂ
ಕಾಮನಿಯಂ ಲಾವಣ್ಯಂ ಕ್ಷಿನಾಕತಿ ನಿತಂಬನಿಂ

ಮತ್ತಷ್ಟು ಅಧ್ಯಾತ್ಮದ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: