ಪ್ರಸಿದ್ಧ ರಾಜರಾಜೇಶ್ವರ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಅನಂತ್ ಅಂಬಾನಿಯಿಂದ 12 ಕೋಟಿ ರೂ; ಶಿಥಿಲಗೊಂಡ ಗೋಪುರದ ಪುನಃಸ್ಥಾಪನೆಗೆ ನೆರವು

Anant Ambani Donates ₹12 Cr for Kerala's Rajarajeswara Temple Restoration: ಅನಂತ್ ಅಂಬಾನಿ ಕೇರಳದ ಐತಿಹಾಸಿಕ ರಾಜರಾಜೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ₹3 ಕೋಟಿ ಚೆಕ್ ನೀಡಿದರು. ದೇವಸ್ಥಾನದ ಜೀರ್ಣೋದ್ಧಾರ, ವಿಶೇಷವಾಗಿ ಶಿಥಿಲಗೊಂಡ ಪೂರ್ವ ಗೋಪುರದ ಪುನಃಸ್ಥಾಪನೆಗೆ ಒಟ್ಟು ₹12 ಕೋಟಿ ನೆರವು ನೀಡಲು ಭರವಸೆ ನೀಡಿದ್ದಾರೆ. ನೆಯ್ಯಾಮೃತು, ಅಶ್ವಮೇಧ ನಮಸ್ಕಾರ ಸೇರಿದಂತೆ ವಿವಿಧ ಸೇವೆಗಳನ್ನು ಸಲ್ಲಿಸಿದರು. ಈ ಭೇಟಿ ಭಕ್ತರಲ್ಲಿ ಹರ್ಷ ತಂದಿದೆ. ಇದು ದೇವಸ್ಥಾನದ ಸಮಗ್ರ ಅಭಿವೃದ್ಧಿಗೆ ಸಹಕಾರಿ.

ಪ್ರಸಿದ್ಧ ರಾಜರಾಜೇಶ್ವರ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಅನಂತ್ ಅಂಬಾನಿಯಿಂದ 12 ಕೋಟಿ ರೂ; ಶಿಥಿಲಗೊಂಡ ಗೋಪುರದ ಪುನಃಸ್ಥಾಪನೆಗೆ ನೆರವು
ಅನಂತ್ ಅಂಬಾನಿ

Updated on: Apr 07, 2026 | 11:51 AM

ಮುಂಬೈ: ಭಾರತದ ಗಣ್ಯ ಉದ್ಯಮಿಯಾದ ಮುಕೇಶ್ ಅಂಬಾನಿ ಅವರ ಮಗ ಅನಂತ್ ಅಂಬಾನಿ (Anant Ambani) ಅವರು ಕೇರಳದ ಕಣ್ಣೂರು ಜಿಲ್ಲೆಯ ತಳಿಪರಂಬದಲ್ಲಿರುವ ಐತಿಹಾಸಿಕ ರಾಜರಾಜೇಶ್ವರ ದೇವಸ್ಥಾನಕ್ಕೆ (Rajarajeshwara temple) ಕಳೆದ ವಾರ (ಏಪ್ರಿಲ್ 2) ಭೇಟಿ ನೀಡಿದರು. ಸಾಕಷ್ಟು ಸಂಖ್ಯೆಯಲ್ಲಿ ದೇವಸ್ಥಾನದ ಭಕ್ತರು ಮತ್ತು ಅವರ ಹಿತೈಷಿಗಳು ಗುರುವಾರ ಸಂಜೆ 8 ಗಂಟೆಗೆ ಅವರ ಭೇಟಿಗೆ ಸಾಕ್ಷಿಯಾಗಿದ್ದರು.

ಮುಕೇಶ್ ಅಂಬಾನಿಯವರ ಕಿರಿಯ ಮಗನಾದ ಅನಂತ್ ಅಂಬಾನಿ ಅವರು ದೇವಸ್ಥಾನದಲ್ಲಿ ವಿವಿಧ ಸೇವೆಗಳನ್ನು ಸಲ್ಲಿಸಿದರು. ಪೊನ್ನುಂಕುಡಂ, ಪಟ್ಟಂ, ಥಾಲಿ, ನೆಯ್ಯಾಮೃತು ಮೊದಲಾದವನ್ನು ದೇವರಿಗೆ ಅರ್ಪಿಸಿದರು. ಅಶ್ವಮೇಧ ನಮಸ್ಕಾರ ಮಾಡಿದರು. ಮಂದಿರದ ಜೀರ್ಣೋದ್ಧಾರಕ್ಕಾಗಿ 3 ಕೋಟಿ ರೂ ಮೊತ್ತದ ಚೆಕ್ ಅನ್ನೂ ನೀಡಿದರು.

Anant Ambani Donates ₹12 Cr for Kerala's Rajarajeswara Temple Restoration

ಅನಂತ್ ಅಂಬಾನಿಯಿಂದ ಅಶ್ವಮೇಧ ನಮಸ್ಕಾರ

ಈ ಐತಿಹಾಸಿಕ ದೇವಸ್ಥಾನದ ಪಾರಂಪರಿಕ ರಚನೆಗಳನ್ನು ಸಂರಕ್ಷಿಸುವ ಬದ್ಧತೆಯನ್ನು ಅನಂತ್ ಅಂಬಾನಿ ನೀಡಿದರು. ದೇವಸ್ಥಾನದ ಪೂರ್ವಭಾಗದ ಗೋಪುರವು ಬಹಳ ಮಹತ್ವದ್ದಾಗಿದೆ. ಇದು ದೇವಸ್ಥಾನದಷ್ಟೇ ಹಳೆಯದು ಎಂದು ನಂಬಲಾಗಿದೆ. ಈ ಗೋಪುರಂಗೆ ಶತಮಾನಗಳ ಹಿಂದೆ ಒಂದಷ್ಟು ಹಾನಿಯಾಗಿದೆ. ಎರಡು ಶತಮಾನಗಳಿಗೂ ಹೆಚ್ಚು ಕಾಲ ಇದು ದುರಸ್ತಿ ಕಾಣದೇ ಹಾಗೇ ಉಳಿದಿದೆ. ಕಳೆದ ಎರಡೂವರೆ ದಶಕಗಳಿಂದ ದೇವಸ್ಥಾನದ ಅಧಿಕಾರಿಗಳು ಈ ಗೋಪುರ ಪುನಃಸ್ಥಾಪನೆಗೆ ನಿರಂತರ ಪ್ರಯತ್ನ ಮಾಡುತ್ತಾ ಬಂದಿದ್ದಾರೆ. ಆದರೆ, ಹಣಕಾಸು ಸಂಪನ್ಮೂಲ ಕೊರತೆಯಿಂದಾಗಿ ಈ ಕಾರ್ಯ ಪೂರ್ಣವಾಗಲು ಸಾಧ್ಯವಾಗಿಲ್ಲ. ದೇವಸ್ಥಾನದ ಸನ್ನಿಧಿಗೆ ಬಂದಿದ್ದ ಅನಂತ್ ಅಂಬಾನಿ ಅವರಿಗೆ ಈ ವಿಚಾರ ತಿಳಿಯಿತು. ಗೋಪುರ ಪುನಃಸ್ಥಾಪನೆಗೆ ಹಣಕಾಸು ನೆರವು ಒದಗಿಸುವುದಾಗಿ ಅವರು ಭರವಸೆ ನೀಡಿದರು. ಅನಂತ್ ಅವರ ಈ ಬದ್ಧತೆಯ ಪ್ರದರ್ಶನಕ್ಕೆ ಅಲ್ಲಿದ್ದ ಭಕ್ತರು ಮತ್ತು ಜನರು ಸಂತಸಗೊಂಡರು.

Anant Ambani Donates ₹12 Cr for Kerala's Rajarajeswara Temple Restoration

ಕೇರಳದ ಕಣ್ಣೂರಿನ ರಾಜರಾಜೇಶ್ವರ ದೇವಸ್ಥಾನದಲ್ಲಿ ಅನಂತ್ ಅಂಬಾನಿ

ದೇವಸ್ಥಾನಕ್ಕೆ ಅವರು ನೀಡಿರುವ ಮತ್ತು ನೀಡಲಿರುವ ಕೊಡುಗೆಯ ಒಟ್ಟು ಮೊತ್ತ 12 ಕೋಟಿ ರೂ ಆಗಿದೆ. ಪೂರ್ವಭಾಗದ ಗೋಪುರದ ಪುನಃಸ್ಥಾಪನೆ, ಪಾರ್ಕಿಂಗ್ ಸ್ಥಳದ ಅಭಿವೃದ್ಧಿ ಸೇರಿದಂತೆ ದೇವಸ್ಥಾನದ ಸಮಗ್ರ ಅಭಿವೃದ್ಧಿಗೆ ಇದು ಸಹಾಯವಾಗುವ ನಿರೀಕ್ಷೆ ಇದೆ.

Anant Ambani Donates ₹12 Cr for Kerala's Rajarajeswara Temple Restoration

ರಾಜರಾಜೇಶ್ವರ ದೇವಸ್ಥಾನದಲ್ಲಿ ಅನಂತ್ ಅಂಬಾನಿಗೆ ಸಿಕ್ಕ ಸ್ವಾಗತ

ಅನಂತ್ ಅಂಬಾನಿ ಹಾಗೂ ಅವರ ಆಪ್ತರು ದೇವಸ್ಥಾನಕ್ಕೆ ಭೇಟಿ ನೀಡಿದಾಗ ಅವರನ್ನು ದೇವಸ್ಥಾನದ ಅಧಿಕಾರಿಗಳು ಹಾಗೂ ಅರ್ಚಕರು ಸಾಂಪ್ರದಾಯಿಕ ವಿಧಾನಗಳ ಮೂಲಕ ಸ್ವಾಗತ ಮಾಡಿದರು. ಟಿಟಿಕೆ ದೇವಸ್ವಾಮ್ ಅಧ್ಯಕ್ಷ ಟಿ.ಪಿ. ವಿನೋದ್ ಕುಮಾರ್, ಎಕ್ಸಿಕ್ಯೂಟಿವ್ ಆಫೀಸರ್ ಕೆ.ಪಿ. ವಿನಯನ್, ಮುಖ್ಯ ಅರ್ಚಕ ಇ.ಪಿ. ಕುಬೇರನ್ ನಂಬೂದಿರಿ ಮತ್ತು ದೇವಸ್ವೋಮ್ ಟ್ರಸ್ಟೀಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

(ಗಮನಿಸಿ: ಇದು ಪ್ರಾಯೋಜಿತ ಬರಹವಾಗಿದೆ)

Follow Us