ಮುಂಬೈ: ಪ್ರಖ್ಯಾತ ಒಳ ಉಡುಪುಗಳ ಬ್ರ್ಯಾಂಡ್ ಹೊಂದಿರುವ ವಿಐಪಿ ಕ್ಲೋಥಿಂಗ್ ಸಂಸ್ಥೆ ತನ್ನ ಬಹುನಿರೀಕ್ಷಿತ ‘ಚಡ್ಡಿ ಕೊಳ್ಳಿರಿ, ರಾಶಿರಾಶಿ ವಾಹನಗಳನ್ನು ಗೆಲ್ಲಿರಿ’ ಎನ್ನುವ ಪ್ರಚಾರ ಅಭಿಯಾನ ಆರಂಭಿಸಿದೆ. ವಿಐಪಿ ಬ್ರ್ಯಾಂಡ್ನ ಅಭಿಯಾನದಲ್ಲಿ ಗ್ರಾಹಕರಿಗೆ ಆಕರ್ಷಕ ಗಿಫ್ಟ್ಗಳ ಆಫರ್ ಇದೆ. ಒಂದು ಕಾರು, ನೂರು ಸ್ಕೂಟರ್ ಮತ್ತು ಸಾವಿರ ಅಚ್ಚರಿ ಉಡುಗೊರೆಗಳು ಕಾದಿವೆ. 2024ರ ಆಗಸ್ಟ್ 1ರಂದು ಆರಂಭವಾಗಿರುವ ಈ ಆಫರ್ 2024ರ ಡಿಸೆಂಬರ್ 31ರವರೆಗೂ ಇದೆ.
‘ಚಡ್ಡಿ ಕೊಳ್ಳಿರಿ, ರಾಶಿರಾಶಿ ವಾಹನಗಳನ್ನು ಗೆಲ್ಲಿರಿ’ ಆಫರ್ನಲ್ಲಿ ವಿಐಪಿ ಕ್ಲೋಥಿಂಗ್ನ ಯಾವುದೇ ಬ್ರ್ಯಾಂಡ್ಗಳಿಂದ ಒಳ-ಉಡುಪು ಅಥವಾ ಹೊರ-ಉಡುಪಿನ ಯಾವುದೇ ಎರಡು ಬಟ್ಟೆಗಳನ್ನು ಖರೀದಿಸುವ ಗ್ರಾಹಕರಿಗೆ ಒಂದು ಸ್ಕ್ರ್ಯಾಚ್ ಕೂಪನ್ ಸಿಗುತ್ತದೆ. ಆ ತತ್ಕ್ಷಣದಲ್ಲಿ ಅಚ್ಚರಿ ಬಹುಮಾನಗಳನ್ನು ಗೆಲ್ಲುವ ಅವಕಾಶ ಈ ಕೂಪನ್ನಿಂದ ಸಿಗುತ್ತದೆ. ನೂರು ಮಂದಿ ಅದೃಷ್ಟವಂತರಿಗೆ ಹೊಸ ಸ್ಕೂಟರ್ ಸಿಗುತ್ತದೆ. ಈ ಅಭಿಯಾನದ ಕೊನೆಯಲ್ಲಿ ಬಂಪರ್ ಲಕ್ಕಿ ಡ್ರಾ ನಡೆಯಲಿದೆ. ಆಗ ಒಬ್ಬ ಅದೃಷ್ಟಶಾಲಿಗೆ ಕಾರು ಗೆಲ್ಲುವ ಅವಕಾಶ ಸಿಗಲಿದೆ. ಕಾರು ಮತ್ತು ಸ್ಕೂಟರ್ಗಳು ಸಿಗದಿರುವ ಗ್ರಾಹಕರಿಗೆ 1,000 ಸರ್ಪ್ರೈಸ್ ಗಿಫ್ಟ್ಗಳನ್ನು ಗೆಲ್ಲುವ ಅವಕಾಶ ಇರುತ್ತದೆ.
ಇದರಲ್ಲಿ ಭಾಗವಹಿಸುವುದಕ್ಕೆ ಗ್ರಾಹಕರು ರೀಟೇಲ್ ಸ್ಟೋರ್ ಮತ್ತು ಇ-ಕಾಮರ್ಸ್ ಪ್ಲಾಟ್ಫಾರ್ಮ್ಗಳ ಮೂಲಕ, ಅಥವಾ ನೇರವಾಗಿ ಕಂಪನಿಯ ವೆಬ್ಸೈಟ್ನಿಂದ ವಿಐಪಿಯ ಪ್ರಾಡಕ್ಟ್ಗಳನ್ನು ಖರೀದಿಸಿದರೆ ಕೂಪನ್ ಸಿಗುತ್ತದೆ. ಅದನ್ನು ಸ್ಕ್ರ್ಯಾಚ್ ಮಾಡಿದಾಗ ಆ ಕ್ಷಣವೇ ಇನ್ಸ್ಟೆಂಟ್ ಬಹುಮಾನ ಸಿಕ್ಕಿದೆಯಾ ಇಲ್ಲವಾ ಎಂಬುದು ಗೊತ್ತಾಗುತ್ತದೆ. ಬಹುಮಾನ ಗೆಲ್ಲದವರು ಕಂಪನಿಯ ವೆಬ್ಸೈಟ್ಗೆ ಹೋಗಿ ಬಂಪರ್ ಲಕ್ಕಿ ಡ್ರಾಗೆ ರಿಜಿಸ್ಟರ್ ಮಾಡಬಹುದು. ಅವರಿಗೆ ಕಾರು ಗೆಲ್ಲುವ ಅದೃಷ್ಟ ಇದ್ದರೂ ಇದ್ದೀತು ಎಂದು ವಿಐಪಿ ಕ್ಲೋಥಿಂಗ್ ಲಿ ಸಂಸ್ಥೆ ಮಾಹಿತಿ ನೀಡಿದೆ.
‘ಚಡ್ಡಿ ಕೊಳ್ಳಿರಿ, ರಾಶಿರಾಶಿ ವಾಹನಗಳನ್ನು ಗೆಲ್ಲಿರಿ’ ಎಂಬುದು ವಿಐಪಿ ಕ್ಲೋಥಿಂಗ್ ಸಂಸ್ಥೆಯ ರಾಷ್ಟ್ರಮಟ್ಟದ ಪ್ರಚಾರದ ಭಾಗವಾಗಿದೆ. ಇಂಥ ಆಫರ್ಗಳನ್ನು ಕಾನೂನಾತ್ಮಕವಾಗಿ ನಿಷೇಧಿಸಿರುವ ತಮಿಳುನಾಡಿನಂತಹ ಕೆಲ ರಾಜ್ಯಗಳನ್ನು ಬಿಟ್ಟು ಭಾರತದ ಉಳಿದೆಡೆ ಈ ಆಫರ್ ಲಭ್ಯ ಇದೆ.
ಈ ಸರ್ಪ್ರೈಸ್ ಗಿಫ್ಟ್ಗಳ ಆಫರ್ ವಿಐಪಿ ಉತ್ಪನ್ನಗಳ ಪ್ರಚಾರ ಮಾತ್ರವಲ್ಲ, ತನ್ನ ಗ್ರಾಹಕರಿಗೆ ತೋರಿಸುವ ಕೃತಜ್ಞತೆಯೂ ಹೌದು ಎಂದು ಸಂಸ್ಥೆ ಹೇಳಿಕೊಂಡಿದೆ. ‘ಚಡ್ಡಿ ಕೊಳ್ಳಿರಿ, ರಾಶಿರಾಶಿ ವಾಹನಗಳನ್ನು ಗೆಲ್ಲಿರಿ’ ಎನ್ನುವ ಆಫರ್ ಅನ್ನು ಇನ್ನೂ ಹೆಚ್ಚು ರೋಚಕ ಬಹುಮಾನಗಳೊಂದಿಗೆ ಮರಳಿ ತರಲು ಹರ್ಷಿಸುತ್ತೇವೆ,’ ಎಂದು ವಿಐಪಿ ಕ್ಲೋಥಿಂಗ್ನ ಮ್ಯಾನೇಜಿಂಗ್ ಡೈರೆಕ್ಟರ್ ಮತ್ತು ಚೇರ್ಮನ್ ಆದ ಸುನೀಲ್ ಪಠಾರೆ ಹೇಳಿದ್ದಾರೆ.
ಪ್ರಖ್ಯಾತ ಬ್ರ್ಯಾಂಡ್ ಆದ ವಿಐಪಿಯ ಒಳ ಉಡುಪು ಮತ್ತು ಹೊರ ಉಡುಪನ್ನು ಖರೀದಿಸಿದಾಗ ದೊಡ್ಡ ಬಹುಮಾನಗಳನ್ನು ಗೆಲ್ಲುವ ಅವಕಾಶ ಡಿಸೆಂಬರ್ 31ರವರೆಗೆ ಮಾತ್ರ ಇದೆ. ಈ ಆಫರ್ನ ನಿಯಮ ಮತ್ತು ಷರತ್ತುಗಳ ಬಗ್ಗೆ ಪೂರ್ಣ ಮಾಹಿತಿಗೆ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡುವಂತೆ ಕೋರಲಾಗಿದೆ:
vipinners.com/pages/chaddi-pe-gaddi-terms-condition
ಇನ್ನಷ್ಟು ಮಾಹಿತಿಯನ್ನು vipinners.com/ ವೆಬ್ಸೈಟ್ನಲ್ಲಿ ಕಾಣಬಹುದು. ಅಥವಾ ವಿಐಪಿಯ ಕಸ್ಟಮರ್ ಸರ್ವಿಸ್ ಟೀಮ್ ಅನ್ನು ಸಂಪರ್ಕಿಸಬಹುದು.
(ಗಮನಿಸಿ: ಇದು ಪ್ರಾಯೋಜಿತ ಲೇಖನ)