ಇನ್ನು11 ಅಲ್ಲ, 15 ಆಟಗಾರರು: ಬಿಸಿಸಿಐ T20 ರೂಲ್ಸ್ ಬದಲು?

ಕಾಲ ಕಾಲಕ್ಕೆ ಕ್ರಿಕೆಟ್ ಸ್ವರೂಪ ಬದಲಾಗ್ತಾನೇ ಇದೆ. ಹಾಗೇ ಕ್ರಿಕೆಟ್​ನ ನಿಯಮಗಳು ಬದಲಾಗ್ತಾನೇ ಇರುತ್ತೆ. ಆದ್ರೀಗ ಟಿಟ್ವೆಂಟಿ ಕ್ರಿಕೆಟ್​ಗೆ ಹೊಸ ಟಚ್ ನೀಡೋದಕ್ಕೆ ಬಿಸಿಸಿಐ ಹೆಜ್ಜೆಯಿಟ್ಟಿದೆ. ಅದು ಕೂಡ ಮುಂಬರೋ ಐಪಿಎಲ್​ನಿಂದಲೇ ಆ ಹೊಸ ರೂಲ್ ಅನ್ನ ಕ್ರಿಕೆಟ್ ಜಗತ್ತಿಗೆ ಪರಿಚಯಿಸೋದಕ್ಕೆ ರೆಡಿಯಾಗಿದೆ. ಹನ್ನೊಂದು ಮಂದಿಯಲ್ಲ.. 15 ಆಟಗಾರರೂ ಆಡ್ಬಹುದು! ಬಿಸಿಸಿಐ ಐಪಿಎಲ್​ನಲ್ಲಿ ಪರಿಚಯಿಸುತ್ತಿರೋ ಹೊಸ ನಿಯಮವೇ ಇದು. ಅಂದ್ರೆ ಕ್ರಿಕೆಟ್​ ಅನ್ನೋ ಜಂಟಲ್​ಮೆನ್ ಗೇಮ್​ನಲ್ಲಿ ಆಡೋದು ಹನ್ನೊಂದು ಮಂದಿ. ಆದ್ರೆ ಮುಂದಿನ ಐಪಿಎಲ್​ನಲ್ಲಿ ಒಟ್ಟು ಹದಿನೈದು […]

ಇನ್ನು11 ಅಲ್ಲ, 15 ಆಟಗಾರರು: ಬಿಸಿಸಿಐ T20 ರೂಲ್ಸ್ ಬದಲು?
sadhu srinath

|

Nov 06, 2019 | 4:39 PM

ಕಾಲ ಕಾಲಕ್ಕೆ ಕ್ರಿಕೆಟ್ ಸ್ವರೂಪ ಬದಲಾಗ್ತಾನೇ ಇದೆ. ಹಾಗೇ ಕ್ರಿಕೆಟ್​ನ ನಿಯಮಗಳು ಬದಲಾಗ್ತಾನೇ ಇರುತ್ತೆ. ಆದ್ರೀಗ ಟಿಟ್ವೆಂಟಿ ಕ್ರಿಕೆಟ್​ಗೆ ಹೊಸ ಟಚ್ ನೀಡೋದಕ್ಕೆ ಬಿಸಿಸಿಐ ಹೆಜ್ಜೆಯಿಟ್ಟಿದೆ. ಅದು ಕೂಡ ಮುಂಬರೋ ಐಪಿಎಲ್​ನಿಂದಲೇ ಆ ಹೊಸ ರೂಲ್ ಅನ್ನ ಕ್ರಿಕೆಟ್ ಜಗತ್ತಿಗೆ ಪರಿಚಯಿಸೋದಕ್ಕೆ ರೆಡಿಯಾಗಿದೆ.

ಹನ್ನೊಂದು ಮಂದಿಯಲ್ಲ.. 15 ಆಟಗಾರರೂ ಆಡ್ಬಹುದು! ಬಿಸಿಸಿಐ ಐಪಿಎಲ್​ನಲ್ಲಿ ಪರಿಚಯಿಸುತ್ತಿರೋ ಹೊಸ ನಿಯಮವೇ ಇದು. ಅಂದ್ರೆ ಕ್ರಿಕೆಟ್​ ಅನ್ನೋ ಜಂಟಲ್​ಮೆನ್ ಗೇಮ್​ನಲ್ಲಿ ಆಡೋದು ಹನ್ನೊಂದು ಮಂದಿ. ಆದ್ರೆ ಮುಂದಿನ ಐಪಿಎಲ್​ನಲ್ಲಿ ಒಟ್ಟು ಹದಿನೈದು ಮಂದಿ ಆಟಗಾರರಿಗೆ ತಂಡದಲ್ಲಿ ಆಡೋದಕ್ಕೆ ಅವಕಾಶ ನೀಡಲಾಗಿದೆ. ಇದಕ್ಕೆ ಬಿಸಿಸಿಐ ಗೇಮ್ ಚೇಂಜರ್. ಪವರ್ ಪ್ಲೇಯರ್ ಅಂತಾ ಹೆಸರು ಕೊಟ್ಟಿದೆ.

ಏನಿದು ಗೇಮ್ ಚೇಂಜರ್. ಪವರ್ ಪ್ಲೇಯರ್ ರೂಲ್? ಗೇಮ್ ಚೇಂಜರ್.. ಪವರ್ ಪ್ಲೇಯರ್ ರೂಲ್ ಅಂದ್ರೆ ಪ್ರತಿ ತಂಡವೂ ಆಯ್ಕೆ ಮಾಡಿರೋ 15 ಮಂದಿ ಆಟಗಾರರ ಪೈಕಿ, 11 ಮಂದಿ ಆಟಗಾರರು ಮೈದಾನದಲ್ಲಿ ಆಡ್ತಿರ್ತಾರೆ. ಆದ್ರೆ ತಂಡದ ಗೆಲುವಿಗೆ ತಂಡದಲ್ಲಿರದ ಆಟಗಾರನ ಅವಶ್ಯಕತೆ ಬಿದ್ರೆ, ಅಂದ್ರೆ 12,13,14 ಮತ್ತು 15ನೇ ಆಟಗಾರ ಬಂದು ಆಡ್ಬಹುದಾಗಿದೆ. 15 ಮಂದಿ ಆಟಗಾರರ ಪೈಕಿ ಯಾವುದಾದ್ರೂ ಒಬ್ಬ ಆಟಗಾರನಿಂದ ಪಂದ್ಯದ ದಿಕ್ಕನ್ನ ಆ ಫ್ರಾಂಚೈಸಿ ಬದಲಿಸಿಕೊಳ್ಳಬಹುದು. ಇದಕ್ಕೆ ಬಿಸಿಸಿಐ ಗೇಮ್ ಚೇಂಜರ್. ಪವರ್ ಪ್ಲೇಯರ್ ರೂಲ್ ಅಂತಾ ಹೆಸರಿಟ್ಟಿದೆ. ಅಂದ್ರೆ ಗೇಮ್ ಚೇಂಜ್ ಮಾಡೋಕೆ ಒಬ್ಬ ಆಟಗಾರನ ಪವರ್ ಅನ್ನ ಉಪಯೋಗಿಸಿಕೊಳ್ಳಬಹುದಾಗಿದೆ.

ಬೂಮ್ರಾಗೆ ಲಾಸ್ಟ್ ಓವರ್ ನೀಡಿ: ‘‘ ಇನ್ನು ವಿವರವಾಗಿ ಹೇಳಬೇಕು ಅಂದ್ರೆ, ನೀವು ಗೆಲ್ಲೋದಕ್ಕೆ ಕೊನೆ ಓವರ್​ನಲ್ಲಿ ಆರು ರನ್​ಗಳನ್ನ ಕಾಪಾಡಿಕೊಳ್ಳಬೇಕು. ಆಗ ಮೈದಾನದಲ್ಲಿ ಆಡುತ್ತಿರೋ 11 ಆಟಗಾರರ ಪೈಕಿ ನಿಮಗೆ ಯಾರೂ ಲಾಸ್ಟ್ ಓವರ್ ಮಾಡೋದಕ್ಕೆ ಸೂಕ್ತ ಅನ್ನಿಸೋದಿಲ್ಲ. ಆಗ ನೀವು 15 ಮಂದಿ ಆಟಗಾರರ ಪಟ್ಟಿಯಲ್ಲಿರೋ ಇನ್ನೂ ಕಣಕ್ಕೆ ಇಳಿಯದ ಜಸ್ಪ್ರೀತ್ ಬೂಮ್ರಾರನ್ನ ಕರೆದು ಕೊನೆ ಓವರ್ ಬೌಲಿಂಗ್ ಮಾಡಿಸಬಹುದು.’’

ಇಂದು ಅಂತಿಮ ನಿರ್ಧಾರ: ‘‘ಇನ್ಮುಂದೆ ಐಪಿಎಲ್​ನಲ್ಲಿ ತಂಡ ಹನ್ನೊಂದು ಮಂದಿ ಆಟಗಾರರನ್ನಲ್ಲ. 15 ಮಂದಿ ಆಟಗಾರರ ಪಟ್ಟಿ ಮಾಡಬೇಕಾಗುತ್ತೆ. ಅಂದ್ರೆ ಮೈದಾನದಲ್ಲಿ ಆಡುತ್ತಿರೋ ಹನ್ನೊಂದು ಆಟಗಾರರಲ್ಲದೇ, ಇನ್ನುಳಿದ ನಾಲ್ವರು ಆಟಗಾರರನ್ನ ಅಗತ್ಯಕ್ಕೆ ತಕ್ಕಂತೆ ಆ ತಂಡ ಬಳಸಿಕೊಳ್ಳಬಹುದು.’’ ಎಂದು ಬಿಸಿಸಿಐ ಹೇಳಿದೆ.

ಈ ನಿಯದಮ ಬಗ್ಗೆ ಬಿಸಿಸಿಐನಲ್ಲಿ ಈಗಾಗಲೇ ಸಾಕಷ್ಟು ಚರ್ಚೆಯಾಗಿದೆ. ಎಲ್ರೂ ಇದಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಇಂದು ಬಿಸಿಸಿಐ ಕಚೇರಿಯಲ್ಲಿ ಐಪಿಎಲ್ ಗವರ್ನಿಂಗ್ ಕೌನ್ಸಿಲ್ ಸಭೆ ನಡೆಯಲಿದೆ. ಈ ಸಭೆಯಲ್ಲಿ ಗೇಮ್ ಚೇಂಜರ್. ಪವರ್ ಪ್ಲೇಯರ್ ರೂಲ್​ಗೆ ಅಂಕಿತ ಬೀಳೋ ಎಲ್ಲಾ ಸಾಧ್ಯತೆಯೂ ಇದೆ. ಹೀಗಾಗಿ ಮುಂದಿನ ಐಪಿಎಲ್ ಸೀಸನ್ ಅಭಿಮಾನಿಗಳಿಗೆ ಇನ್ನಷ್ಟು ಕಿಕ್ ಕೊಡೋದ್ರಲ್ಲಿ ಅನುಮಾನವೇ ಇಲ್ಲ. ಇನ್ನು ಬದಲಾದ ಕಾಲಕ್ಕೆ ತಕ್ಕಂತೆ ಕ್ರಿಕೆಟ್​ನ ನಿಯಮಗಳು ಬದಲಾಗ್ತಾನೇ ಇರುತ್ತೆ. ನಿಮಗೆ ಗೊತ್ತಿರೋ ಹಾಗೇ ಈ ಬಾರಿ ವಿಶ್ವಕಪ್​ನಲ್ಲಿ ಸೂಪರ್ ಓವರ್ ಬೌಂಡರಿ ನಿಯಮ ಇಂಗ್ಲೆಂಡ್ ತಂಡಕ್ಕೆ ಚಾಂಪಿಯನ್ ಪಟ್ಟವನ್ನ ತಂದುಕೊಟ್ಟಿತ್ತು.

ಆದ್ರೆ ಈ ನಿಯಮದ ಬಗ್ಗೆ ಎಲ್ಲೆಡೆಯಿಂದ ಟೀಕೆಗಳು ಬರತೊಡಗಿದ್ವು. ಬಳಿಕ ಇದರ ಬಗ್ಗೆ ಸಭೆ ನಡೆಸಿದ ಐಸಿಸಿ, ಈ ನಿಯಮವನ್ನೇ ಬದಲಾಯಿಸಿತು. ಇನ್ಮುಂದೆ ಸೂಪರ್ ಓವರ್ ಪಂದ್ಯ ಟೈ ಆದ್ರೆ, ಬೌಂಡರಿ ಲೆಕ್ಕಾಚಾರದ ಮೂಲಕ ಗೆಲುವು ನೀಡೋದಿಲ್ಲ. ಗೆಲ್ಲೋವರೆಗೂ ಸೂಪರ್ ಓವರ್ ನಡೆಸೋದಾಗಿ ಘೊಷಿಸಿತು.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada