ಟಿ-20ಯಲ್ಲಿ ವಿಶ್ವವೇ ನಿಬ್ಬೆರಗಾಗುವಂತಹ ಸಾಧನೆ ಮಾಡಿದ ಮೊದಲ ಭಾರತೀಯ!

sadhu srinath

sadhu srinath |

Updated on: Nov 12, 2019 | 4:06 PM

ನಾಗ್ಪುರದಲ್ಲಿ ದೀಪಕ್ ಚಹರ್ ಮಾಡಿದ ಅದ್ಭುತ ಬೌಲಿಂಗ್ ಯಾವ ಮಟ್ಟಿಗೆ ಇತ್ತು ಅಂದ್ರೆ ಇದುವರೆಗೂ ಟಿ20 ಕ್ರಿಕೆಟ್​ನಲ್ಲಿ ಯಾರೋಬ್ಬರೂ ಮಾಡದೇ ಇರುವಂತ ವಿಶ್ವ ದಾಖಲೆಯನ್ನೇ ಮಾಡಿದ್ದಾರೆ. ಹೊಡಿ ಬಡಿ ಅನ್ನೋ ಟಿ20 ಕ್ರಿಕೆಟ್​ನಲ್ಲಿ ಕೇವಲ 7 ರನ್​ಗಳಿಗೆ 6 ವಿಕೆಟ್ ಪಡೆಯೋದು ಇಡೀ ವಿಶ್ವವೇ ನಿಬ್ಬೆರಗಾಗುವಂತ ಸಾಧನೆ ಮಾಡಿಬಿಟ್ಟಿದ್ದಾರೆ. ಅದ್ರಲ್ಲೂ ಹ್ಯಾಟ್ರಿಕ್ ವಿಕೆಟ್ ಪಡೆದಾಗ ದೀಪಕ್ ಚಹರ್ ಮುಖದಲ್ಲಿ ಪ್ರತೀಕಾರ ತೀರಿಸಿಕೊಂಡ ಸಮಾಧಾನ ಎದ್ದು ಕಾಣ್ತಿತ್ತು. 11 ವರ್ಷಗಳ ಅವಮಾನಕ್ಕೆ ಕಡೆಗೂ ನಾನು ಸೇಡು ತೀರಿಸಿಕೊಂಡ್ನಲ್ಲಾ ಅನ್ನೋ […]

ಟಿ-20ಯಲ್ಲಿ ವಿಶ್ವವೇ ನಿಬ್ಬೆರಗಾಗುವಂತಹ ಸಾಧನೆ ಮಾಡಿದ ಮೊದಲ ಭಾರತೀಯ!

ನಾಗ್ಪುರದಲ್ಲಿ ದೀಪಕ್ ಚಹರ್ ಮಾಡಿದ ಅದ್ಭುತ ಬೌಲಿಂಗ್ ಯಾವ ಮಟ್ಟಿಗೆ ಇತ್ತು ಅಂದ್ರೆ ಇದುವರೆಗೂ ಟಿ20 ಕ್ರಿಕೆಟ್​ನಲ್ಲಿ ಯಾರೋಬ್ಬರೂ ಮಾಡದೇ ಇರುವಂತ ವಿಶ್ವ ದಾಖಲೆಯನ್ನೇ ಮಾಡಿದ್ದಾರೆ. ಹೊಡಿ ಬಡಿ ಅನ್ನೋ ಟಿ20 ಕ್ರಿಕೆಟ್​ನಲ್ಲಿ ಕೇವಲ 7 ರನ್​ಗಳಿಗೆ 6 ವಿಕೆಟ್ ಪಡೆಯೋದು ಇಡೀ ವಿಶ್ವವೇ ನಿಬ್ಬೆರಗಾಗುವಂತ ಸಾಧನೆ ಮಾಡಿಬಿಟ್ಟಿದ್ದಾರೆ.

ಅದ್ರಲ್ಲೂ ಹ್ಯಾಟ್ರಿಕ್ ವಿಕೆಟ್ ಪಡೆದಾಗ ದೀಪಕ್ ಚಹರ್ ಮುಖದಲ್ಲಿ ಪ್ರತೀಕಾರ ತೀರಿಸಿಕೊಂಡ ಸಮಾಧಾನ ಎದ್ದು ಕಾಣ್ತಿತ್ತು. 11 ವರ್ಷಗಳ ಅವಮಾನಕ್ಕೆ ಕಡೆಗೂ ನಾನು ಸೇಡು ತೀರಿಸಿಕೊಂಡ್ನಲ್ಲಾ ಅನ್ನೋ ಸಾರ್ಥಕತೆ ಚಹರ್ ಮುಖದಲ್ಲಿ ಮನೆ ಮಾಡಿತ್ತು.

ತಂಡದಿಂದ ಹೊರಗಿಟ್ಟು ಚಾಪೆಲ್‌ ಮಾಡಿದ್ರು ಮೋಸ? ಟೀಮ್ ಇಂಡಿಯಾ ಕೋಚ್ ಆಗಿದ್ದಾಗ ನಾಯಕ ಸೌರವ್ ಗಂಗೂಲಿ ಕ್ರಿಕೆಟ್ ಬದುಕಿಗೆ ಬರೆ ಎಳೆದಿದ್ದ ಆಸ್ಟ್ರೇಲಿಯಾದ ಚಾಪೆಲ್, ಚಹರ್​ಗೂ ವಿಲನ್ ಆಗಿಬಿಟ್ಟಿದ್ದ. ರಾಜಸ್ಥಾನ ತಂಡದಲ್ಲಿ ಆಡೋಕೆ ಎಲ್ಲಾ ಅರ್ಹತೆಯೂ ಇದೆ ಅನ್ನೋದನ್ನ ಚಹರ್ ಪ್ರೂವ್ ಮಾಡಿದ್ದ. ಆದ್ರೆ ಕಳಪೆ ಪ್ರದರ್ಶನ ನೀಡಿದ ಆಟಗಾರರಿಗೆ ರಾಜಸ್ಥಾನ ತಂಡದಲ್ಲಿ ಮಣೆ ಹಾಕಿದ್ದ ಚಾಪೆಲ್, ಯಾವ ಕಾರಣವೂ ಕೊಡದೇ ಚಹರ್​ನನ್ನ ತಂಡದಿಂದ ಹೊರಗಿಟ್ಟುಬಿಟ್ಟಿದ್ದ.

ಚಾಪೆಲ್ ಮಾತು ಕಿಚ್ಚು ಹತ್ತಿಸಿತು: ಗ್ರೇಗ್ ಚಾಪೆಲ್ ಆಡಿದ ಮಾತು ನನ್ನನ್ನ ಕೆರಳಿಸಿತ್ತು. ಅಂದಿನಿಂದ ನಾನು ಇನ್ನಷ್ಟು ಕಠಿಣ ಅಭ್ಯಾಸ ಮಾಡೋದಕ್ಕೆ ಶುರುಮಾಡಿದೆ. ಫಿಟ್ನೆಸ್ ಕಾಪಾಡಿಕೊಳ್ಳೋ ನನ್ನ ಶೈಲಿಯನ್ನೇ ಬದಲಿಸಿದೆ. ಅದಾದ ಬಳಿಕ ನಾನು ಎರಡೇ ವರ್ಷದಲ್ಲಿ ರಣಜಿ ಕ್ರಿಕೆಟ್​ನಲ್ಲಿ ರಾಜಸ್ಥಾನ ತಂಡವನ್ನ ಪ್ರತಿನಿಧಿಸಿದೆ. ಚಾಪೆಲ್ ಆಡಿದ ಮಾತು ಪ್ರತಿ ಪಂದ್ಯದಲ್ಲೂ ಅದ್ಭುತ ಪ್ರದರ್ಶನ ನೀಡೋದಕ್ಕೆ ನನ್ನನ್ನ ಪ್ರೇರೇಪಿಸುತ್ತಿತ್ತು. ಹೀಗಾಗಿ ನನ್ನ ಬೌಲಿಂಗ್ ಶೈಲಿಯಲ್ಲಿ ಸಾಕಷ್ಟು ಬದಲಾವಣೆ ಮಾಡಿಕೊಂಡು, ಗಂಟೆಗೆ 140 ಕೀಲೋ ಮೀಟರ್ ವೇಗದಲ್ಲಿ ಬೌಲಿಂಗ್ ಮಾಡೋದನ್ನ ಕರಗತ ಮಾಡಿಕೊಂಡೆ.

ರಣಜಿಯಲ್ಲೇ 10 ರನ್​ಗೆ 8 ವಿಕೆಟ್​:  ಚಾಪೆಲ್ ಮಾಡಿದ ಅವಮಾನ ಚಹರ್​ನನ್ನ ಹೇಗೆ ಯಶಸ್ಸಿನ ಹಾದಿಯಲ್ಲಿ ಸಾಗೋದಕ್ಕೆ ಕಾರಣವಾಯ್ತು ನೋಡಿ. ರಾಜಸ್ಥಾನ ಪರ ರಣಜಿ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ ಪಂದ್ಯದಲ್ಲೇ, ದೀಪಕ್ ಚಹರ್ ಕೇವಲ 10 ರನ್​ಗಳಿಗೆ 8 ವಿಕೆಟ್ ಪಡೆದು ಸಂಭ್ರಮಿಸಿದ. ಐಪಿಎಲ್​ನಲ್ಲಿ ಚೆನ್ನೈ ತಂಡದಲ್ಲಿ ಮಿಂಚಿದ ದೀಪಕ್ ಚಹರ್, ಇಂಡಿಯಾ ಎ ತಂಡಕ್ಕೆ ಆಯ್ಕೆಯಾದ. ಎ ತಂಡದ ಪರ ದೇಶ ವಿದೇಶದಲ್ಲಿ ಅದ್ಭುತ ಸ್ಪೆಲ್ ಮಾಡಿ, ಮಿಂಚಿ ಟೀಮ್ ಇಂಡಿಯಾಕ್ಕೂ ಆಯ್ಕೆಯಾದ. ಇದೀಗ ಟಿಟ್ವೆಂಟಿ ಕ್ರಿಕೆಟ್​ನಲ್ಲಿ ಚಹರ್, ವಿಶ್ವ ದಾಖಲೆಯನ್ನೇ ಬರೆದುಬಿಟ್ಟಿದ್ದಾನೆ.

11 ವರ್ಷಗಳ ಹಿಂದೆ ಗ್ರೇಗ್ ಚಾಪೆಲ್ ಮಾಡಿದ ಅವಮಾನಕ್ಕೆ ಚಹರ್ ಇಂದು ಸೇಡು ತೀರಿಸಿಕೊಂಡಿದ್ದಾನೆ. ಅದು ಯಾವ ಮಟ್ಟಿಗೆ ಅಂದ್ರೆ ಟಿಟ್ವೆಂಟಿ ಕ್ರಿಕೆಟ್​ನಲ್ಲಿ ಸಾರ್ವಕಾಲಿಕ ದಾಖಲೆ ಬರೆದಿದ್ದಾನೆ. ಆ ಮೂಲಕ ಮಾಹಿ ಹುಡುಗನ ಮಹಿಮೆಯನ್ನ ಇಡೀ ಕ್ರಿಕೆಟ್ ಜಗತ್ತೇ ಕೊಂಡಾಡೋಕೆ ಶುರುಮಾಡಿದೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada