ದಾಂಪತ್ಯ ಜೀವನಕ್ಕೆ ಕಾಲಿಟ್ಟ 19 ವರ್ಷದ ಕ್ರಿಕೆಟಿಗ ಮುಜೀಬ್.. ಮದ್ವೆ ವಿಡಿಯೋ ಆಯ್ತು ಫುಲ್ ವೈರಲ್!
ದೂರದ ಅಫ್ಘಾನಿಸ್ತಾನದಿಂದ ಬಂದು IPLನಲ್ಲಿ ತನ್ನದೇ ಛಾಪು ಮೂಡಿಸಿದ ಕ್ರಿಕೆಟಿಗ ಮುಜೀಬ್ ಉರ್ ರಹಮಾನ್ ಇದೀಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಹೌದು, ಕೇವಲ 19ರ ಪ್ರಾಯದ ಮುಜೀಬ್ IPL ಮುಗಿಸಿ ತಮ್ಮ ಮನೆ ಸೇರುತ್ತಿದ್ದಂತೆಯೇ ಅವರ ವಿವಾಹದ ಸುದ್ದಿ ಹೊರಬಿದ್ದಿದೆ. ಇದೀಗ, ಮುಜೀಬ್ ವಿವಾಹ ಸಂಭ್ರಮದಲ್ಲಿ ಅಫ್ಘಾನಿಸ್ತಾನದ ಸ್ಟಾರ್ ಕ್ರಿಕೆಟ್ ಆಟಗಾರರು ಕುಣಿದು ಕುಪ್ಪಳಿಸಿರುವ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ಅತಿ ಕಿರಿಯ ವಯಸ್ಸಿನಲ್ಲೇ 20-20ಕ್ರಿಕೆಟ್ ಫಾರ್ಮ್ಯಾಟ್ನ ಎರಡನೇ ಶ್ರೇಷ್ಠ ಸ್ಪಿನ್ ಬೌಲರ್ ಆಗಿ ಮುಜೀಬ್ ಹೊರಹೊಮ್ಮಿದ್ದಾರೆ. […]
ದೂರದ ಅಫ್ಘಾನಿಸ್ತಾನದಿಂದ ಬಂದು IPLನಲ್ಲಿ ತನ್ನದೇ ಛಾಪು ಮೂಡಿಸಿದ ಕ್ರಿಕೆಟಿಗ ಮುಜೀಬ್ ಉರ್ ರಹಮಾನ್ ಇದೀಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಹೌದು, ಕೇವಲ 19ರ ಪ್ರಾಯದ ಮುಜೀಬ್ IPL ಮುಗಿಸಿ ತಮ್ಮ ಮನೆ ಸೇರುತ್ತಿದ್ದಂತೆಯೇ ಅವರ ವಿವಾಹದ ಸುದ್ದಿ ಹೊರಬಿದ್ದಿದೆ. ಇದೀಗ, ಮುಜೀಬ್ ವಿವಾಹ ಸಂಭ್ರಮದಲ್ಲಿ ಅಫ್ಘಾನಿಸ್ತಾನದ ಸ್ಟಾರ್ ಕ್ರಿಕೆಟ್ ಆಟಗಾರರು ಕುಣಿದು ಕುಪ್ಪಳಿಸಿರುವ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ಅತಿ ಕಿರಿಯ ವಯಸ್ಸಿನಲ್ಲೇ 20-20ಕ್ರಿಕೆಟ್ ಫಾರ್ಮ್ಯಾಟ್ನ ಎರಡನೇ ಶ್ರೇಷ್ಠ ಸ್ಪಿನ್ ಬೌಲರ್ ಆಗಿ ಮುಜೀಬ್ ಹೊರಹೊಮ್ಮಿದ್ದಾರೆ. IPLನಲ್ಲಿ ಕಿಂಗ್ಸ್ ಇಲೆವನ್ ಪಂಜಾಬ್ ತಂಡದಲ್ಲಿದ್ದರೂ ಮುಜೀಬ್ಗೆ ಈ ಬಾರಿ ಹೆಚ್ಚಿನ ಅವಕಾಶ ಸಿಗಲಿಲ್ಲ. ಇದೀಗ, ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಬಿಗ್ ಬ್ಯಾಶ್ ಲೀಗ್ನಲ್ಲಿ ಮುಜೀಬ್ ತಮ್ಮ ಟ್ಯಾಲೆಂಟ್ ಪ್ರದರ್ಶಿಸುವ ವಿಶ್ವಾಸದಲ್ಲಿದ್ದಾರೆ.
21ನೇ ಶತಮಾನದಲ್ಲಿ ಜನಿಸಿ ಅಂತಾರಾಷ್ಟ್ರೀಯ ಕ್ರಿಕೆಟ್ ಲೋಕಕ್ಕೆ ಪಾದಾರ್ಪಣೆ ಮಾಡಿರುವ ಮೊದಲ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಮುಜೀಬ್ ಪಾತ್ರರಾಗಿದ್ದಾರೆ. ತಮ್ಮ 16ನೇ ವಯಸ್ಸಿನಲ್ಲೇ ಅಂತಾರಾಷ್ಟ್ರೀಯ ಏಕದಿನ ಪಂದ್ಯದಲ್ಲಿ 5 ವಿಕೆಟ್ ಪಡೆದಿರುವ ಸಾಧನೆ ಅವರದ್ದಾಗಿದೆ. ಮುಜೀಬ್ ಸಾಧನೆಯನ್ನು ಗುರುತಿಸಿದ ICC, ಅವರನ್ನು ಅಫ್ಘಾನಿಸ್ತಾನ ತಂಡದ ‘ರೈಸಿಂಗ್ ಸ್ಟಾರ್’ ಎಂದು ಸಹ ಘೋಷಿಸಿದೆ.
ಹಾಗಾಗಿ, ಇಷ್ಟು ಕಿರಿಯ ವಯಸ್ಸಿನಲ್ಲೇ ಸಾಧನೆಗೈದಿರುವ ಮುಜೀಬ್ ಮದುವೆಯಾಗುವುದರಲ್ಲಿ ತಪ್ಪೇನು ಇಲ್ಲ ಎಂದು ಹಲವು ಕ್ರಿಕೆಟಿಗರು ಸಮರ್ಥಿಸಿಕೊಂಡಿದ್ದಾರೆ. ಅಂದ ಹಾಗೆ, ಅಫ್ಘಾನಿಸ್ತಾನದ ಸಂವಿಧಾನದ ಕಲಂ 70ರ ಪ್ರಕಾರ ಪುರುಷರು 18ನೇ ವಯಸ್ಸಿಗೆ ಮದುವೆಯಾಗಬಹುದು ಎಂದು ಉಲ್ಲೇಖಿಸಲಾಗಿದೆ.
#Afghanistan cricket players dancing in @Mujeeb_R88 wedding’s party. @GbNaib pic.twitter.com/7ZC4nzphNR
— Jafar Haand (@jafarhaand) November 13, 2020