WTC: ಜಸ್ಪ್ರೀತ್ ಬುಮ್ರಾರಂತೆ ಅವರ ಪತ್ನಿ ಸಂಜನಾ ಗಣೇಶನ್ ಸಹ ಇಂಗ್ಲೆಂಡ್​ನಲ್ಲಿ ಮಿಷನ್ ಮೇಲಿದ್ದಾರೆ

|

Updated on: Jun 16, 2021 | 10:19 PM

ಬುಮ್ರಾರೊಂದಿಗೆ ಮೊದಲ ಬಾರಿಗೆ ಸಂಜನಾ ಅವರು ವಿದೇಶವೊಂದಕ್ಕೆ ಕ್ರಿಕೆಟ್ ಪ್ರವಾಸದ ಮೇಲೆ ತೆರಳಿದ್ದಾರೆ. ನವದಂಪತಿಗಳು ಕಳೆದ ವಾರವನ್ನು ಸೌತಾಂಪ್ಟನ್​ನಲ್ಲಿರುವ ಹಿಲ್ಟನ್ ಎಟ್​ ದಿ ಏಜಿಸ್ ಬೋಲ್ ಐಷಾರಾಮಿ ಹೋಟೆಲ್​ನಲ್ಲಿ ಕಳೆದರು. ಬುಮ್ರಾ ಫೀಲ್ಡಿಗೆ ತೆರಳುವ ಮುನ್ನ ಅವರಿಬ್ಬರು ಕ್ವಾರಂಟೀನ್ ಅವಧಿಯನ್ನು ಪೂರೈಸಿದ್ದಾರೆ.

WTC: ಜಸ್ಪ್ರೀತ್ ಬುಮ್ರಾರಂತೆ ಅವರ ಪತ್ನಿ ಸಂಜನಾ ಗಣೇಶನ್ ಸಹ ಇಂಗ್ಲೆಂಡ್​ನಲ್ಲಿ ಮಿಷನ್ ಮೇಲಿದ್ದಾರೆ
ಸಂಜನಾ ಗಣೇಶನ್
Follow us on

ಇಂಗ್ಲೆಂಡ್ ಪ್ರವಾಸದಲ್ಲಿರುವ ಟೀಮ್ ಇಂಡಿಯಾದ ಸದಸ್ಯರೊಂದಿಗೆ ಅವರ ಪತ್ನಿಯರನ್ನು ಇಲ್ಲವೇ ಗರ್ಲ್​ಫ್ರೆಂಡ್​​ಗಳು ಸಹ ಹೋಗಿದ್ದಾರೆ. ಅವರೆಲ್ಲ ತಮ್ಮ ಪಾರ್ಟ್​ನರ್​ಗಳೊಂದಿಗೆ ಇಂಗ್ಲೆಂಡಿನ ಪಾಶ್​ ಹೋಟೆಲ್​ಗಳಲ್ಲಿ ಸಂತೋಷವಾಗಿ ಸಮಯ ಕಳೆಯುತ್ತಿದ್ದರೆ, ಒಬ್ಬ ಆಟನಾರನ ಪತ್ನಿಗೆ ಮಾತ್ರ ಈ ಭಾಗ್ಯವಿಲ್ಲ. ಯಾಕೆಂದರೆ ಈ ನವವಿವಾಹಿತೆಯು ತನ್ನ ಪತಿಯ ಹಾಗೆ ಕ್ರಿಕೆಟ್​ನೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದಾರೆ. ವೃತ್ತಿಧರ್ಮವನ್ನು ಪಾಲಿಸಬೇಕಾದರೆ ಆಕೆ ಪತಿಯೊಂದಿಗೂ ಹೋಗಬೇಕು ಮತ್ತು ಪತಿ ಇಲ್ಲದೆಡೆಯೂ ಹೋಗಬೇಕು. ಆಕೆ ಮಾಡುವ ಕೆಲಸವೇ ಹಾಗಿರುವಾಗ ಬೇರೇನು ತಾನೆ ಮಾಡಲು ಸಾಧ್ಯ? ನಾವು ಯಾರ ಬಗ್ಗೆ ಮಾತಾಡುತ್ತಿದ್ದೇವೆ ಅಂತ ನಿಮಗೆ ಗೊತ್ತಾಗಿರಬಹುದು. ಹೌದು ನಿಮ್ಮ ಊಹೆ ನಿಜ.

ಕ್ರೀಡಾ ನಿರೂಪಕಿ ಆಗಿರುವ ಶ್ರೀಮತಿ ಜಸ್ಪ್ರೀತ್ ಬುಮ್ರಾ (ಸಂಜನಾ ಗಣೇಶನ್) ಪತಿಯೊಂದಿಗೆ ಸೌತಾಂಪ್ಟನ್​ನಲ್ಲಿದ್ದಾರೆ. ಜೂನ್ 18ರಿಂದ ಆರಂಭವಾಗಲಿರುವ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್ ಪಂದ್ಯವನ್ನು ಬಾರತದಲ್ಲಿ ಪ್ರಸಾರ ಮಾಡುವ ಹಕ್ಕುಗಳನ್ನು ಪಡೆದಿರುವ ಸ್ಟಾರ್ ಸ್ಪೋರ್ಟ್​ಗೆ ಸಂಜನಾ ನಿರೂಪಕಿಯಾಗಿ ಕೆಲಸ ಮಾಡುತ್ತಿರುವುದು ಕ್ರಿಕೆಟ್​ ಪ್ರೇಮಿಗಳಿಗೆ ಗೊತ್ತಿದೆ. ಅವರು ಆಯೋಜಿಸುತ್ತಿರುವ ಕಾರ್ಯಕ್ರಮಗಳು ಟಿವಿಯಲ್ಲಿ ಪ್ರತಿದಿನ ಪ್ರಸಾರಗೊಳ್ಳುತ್ತಿವೆ.

ಪತಿ ಮಹಾಶಯ ಬುಮ್ರಾರೊಂದಿಗೆ ಮೊದಲ ಬಾರಿಗೆ ಸಂಜನಾ ಅವರು ವಿದೇಶವೊಂದಕ್ಕೆ ಕ್ರಿಕೆಟ್ ಪ್ರವಾಸದ ಮೇಲೆ ತೆರಳಿದ್ದಾರೆ. ನವದಂಪತಿಗಳು ಕಳೆದ ವಾರವನ್ನು ಸೌತಾಂಪ್ಟನ್​ನಲ್ಲಿರುವ ಹಿಲ್ಟನ್ ಎಟ್​ ದಿ ಏಜಿಸ್ ಬೋಲ್ ಐಷಾರಾಮಿ ಹೋಟೆಲ್​ನಲ್ಲಿ ಕಳೆದರು. ಬುಮ್ರಾ ಫೀಲ್ಡಿಗೆ ತೆರಳುವ ಮುನ್ನ ಅವರಿಬ್ಬರು ಕ್ವಾರಂಟೀನ್ ಅವಧಿಯನ್ನು ಪೂರೈಸಿದ್ದಾರೆ.

ಬುಮ್ರಾ ಮತ್ತು ಸಂಜನಾ

ಏತನ್ಮಧ್ಯೆ, ಸಂಜನಾ ಅವರು, ಹೋಟೆಲ್ ರೂಮಿನಲ್ಲಿ ಕುಳಿತು ತಮ್ಮ ಸುಂದರ ಮತ್ತು ಆಕರ್ಷಕ ಚಿತ್ರಗಳನ್ನು ಸೋಷಿಯಲ್ ಮೀಡಿಯಾಗಳಲ್ಲಿ ಪೋಸ್ಟ್​ ಮಾಡುತ್ತಾ ಚಿಲ್ ಮಾಡುತ್ತಿದ್ದಾರೆ. ಜೂನ್ 15ರಂದು ಅವರು ಒಂದೆರಡು ಪಿಕ್ಚರ್​ಗಳನ್ನು ಪೋಸ್ಟ್​ ಮಾಡಿ ತಾವು ಕೆಲಸಕ್ಕೆ ವಾಪಸ್ಸಾಗಿರುವ ಬಗ್ಗೆ ಅಭಿಮಾನಿಗಳಿಗೆ ತಿಳಿಸಿ ಮಾಸ್ಕ್ ಧರಿಸುವಂತೆ ಹೇಳಿದ್ದಾರೆ. ‘ಮಾಸ್ಕ್ ಧರಿಸಿ, ಸುರಕ್ಷಿತವಾಗಿರಿ.’ ಎಂಬ ಶೀರ್ಷಿಕೆಯೊಂದಿಗೆ ಅವರು ಪೋಸ್ಟ್​ಗಳನ್ನು ಮಾಡಿದ್ದಾರೆ.

ಅತ್ತ ಬುಮ್ರಾ ಅವರು ವಿಶ್ವ ಟೆಸ್ಟ್​ ಚಾಂಪಿಯನನ್​ಶಿಪ್​ ಫೈನಲ್ ಪಂದ್ಯಕ್ಕೆ ಟೀಮಿನ ಇತರ ಸದಸ್ಯರೊಂದಿಗೆ ಬಿರುಸಿನ ತಯಾರಿಯಲ್ಲಿ ತಲ್ಲೀನರಾಗಿದ್ದಾರೆ. ಮುಂಬೈ ಇಂಡಿಯನ್ಸ್ ತಂಡಕ್ಕೆ ಆಡುವಾಗ ಅವರೊಂದಿಗೆ ಬೌಲಿಂಗ್ ದಾಳಿ ಆರಂಭಿಸುವ ನ್ಯೂಜಿಲೆಂಡ್​ನ ಟ್ರೆಂಟ್​ ಬೌಲ್ಟ್ ಸೌತಾಂಪ್ಟ್​ನ್​ನಲ್ಲಿ ಅವರ ಎದುರಾಳಿಯಾಗಲಿದ್ದಾರೆ. ಇಬ್ಬರೂ ಪ್ರಚಂಡ ವೇಗದ ಬೌಲರ್​ಗಳು ಎನ್ನುವುದರಲ್ಲಿ ಸಂಶಯವಿಲ್ಲ. ಆದರೆ, ಈ ಅತ್ಯಂತ ಮಹತ್ವಪೂರ್ಣ ಪಂದ್ಯದಲ್ಲಿ ಯಾರು ಹೆಚ್ಚು ಪರಿಣಾಮಕಾರಿಯಾಗಿ ಬೌಲಿಂಗ್ ಮಾಡುತ್ತಾರೆನ್ನುವುದು ಕಾದು ನೋಡಬೇಕಿದೆ.

ಏತನ್ಮಧ್ಯೆ, ಭಾರತೀಯ ಕ್ರಿಕೆಟ್​ ನಿಯಂತ್ರಣ ಮಂಡಳಿಯು ಶುಕ್ರವಾರ ಅರಂಭವಾಗಿರುವ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್ ಪಂದ್ಯಕ್ಕೆ 15 ಸದಸ್ಯರ ತಂಡವನ್ನು ಪ್ರಕಟಿಸಿದ್ದು ಕರ್ನಾಟಕದ ಕೆ ಎಲ್ ರಾಹುಲ್ ಮತ್ತು ಮಾಯಾಂಕ್ ಅಗರ್​ವಾಲ್ ಅವರನ್ನು ಆಯ್ಕೆಗೆ ಪರಿಗಣಸಿಲಾಗಿಲ್ಲ.

ಬಿಸಿಸಿಐ ಅಂತಿಮಗೊಳಿಸಿರುವ 15 ಆಟಗಾರರ ಪಟ್ಟಿಯಲ್ಲಿ ಐವರು ವೇಗದ ಬೌಲರ್​ಗಳಿದ್ದಾರೆ-ಬುಮ್ರಾ, ಇಶಾಂತ್ ಶರ್ಮ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್ ಮತ್ತು ಉಮೇಶ್ ಯಾದವ್.

15 ಸದಸ್ಯರ ತಂಡ ಹೀಗಿದೆ:

ವಿರಾಟ್​ ಕೊಹ್ಲಿ (ನಾಯಕ), ಅಜಿಂಕ್ಯಾ ರಹಾನೆ (ಉಪನಾಯಕ), ರೋಹಿತ್ ಶರ್ಮ, ಶುಭ್ಮನ್ ಗಿಲ್, ಚೇತೇಶ್ವರ ಪೂಜಾರಾ, ಹನುಮ ವಿಹಾರಿ, ರಿಷಭ್ ಪಂತ್, ವೃದ್ಧಿಮಾನ್ ಸಹಾ, ರವಿಚಂದ್ರನ್ ಅಶ್ವಿನ್, ರವಿಂದ್ರ ಜಡೇಜಾ, ಜಸ್ಪ್ರೀತ ಬುಮ್ರಾ, ಇಶಾಂತ್ ಶರ್ಮ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್ ಮತ್ತು ಉಮೇಶ್ ಯಾದವ್.

ಇದನ್ನೂ ಓದಿ: WTC Final: ಡಬ್ಲ್ಯೂಟಿಸಿ ಫೈನಲ್ ನಡೆಯುವ ಮೈದಾನ ಭಾರತಕ್ಕೆ ಕಂಟಕವಾಗಿದ್ಯಾಕೆ? ಇಲ್ಲಿದೆ ಸೌತಾಂಪ್ಟನ್‌ ಗ್ರೌಂಡ್ ಇತಿಹಾಸ