AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತ- ಇಂಗ್ಲೆಂಡ್ ವನಿತೆಯರ ಟೆಸ್ಟ್ ಪಂದ್ಯ 5 ದಿನಗಳ ಬದಲು 4 ದಿನಕ್ಕೆ ಸಿಮೀತ! ಇದಕ್ಕೆ ಕಾರಣವೇನು ಗೊತ್ತಾ?

ಮಹಿಳಾ ಕ್ರಿಕೆಟ್‌ನಲ್ಲಿ, ಒಂದು ಟೆಸ್ಟ್ ಪಂದ್ಯವು ಒಂದು ದಿನದಲ್ಲಿ 100 ಓವರ್‌ಗಳನ್ನು ಒಳಗೊಂಡಿರುತ್ತದೆ. ಈ ರೀತಿಯಾಗಿ ನಾಲ್ಕು ದಿನಗಳಲ್ಲಿ ಒಟ್ಟು 400 ಓವರ್‌ಗಳು ಪೂರ್ಣಗೊಳ್ಳುತ್ತವೆ.

ಭಾರತ- ಇಂಗ್ಲೆಂಡ್ ವನಿತೆಯರ ಟೆಸ್ಟ್ ಪಂದ್ಯ 5 ದಿನಗಳ ಬದಲು 4 ದಿನಕ್ಕೆ ಸಿಮೀತ! ಇದಕ್ಕೆ ಕಾರಣವೇನು ಗೊತ್ತಾ?
ಭಾರತದ ವನಿತೆಯರ ತಂಡ
ಪೃಥ್ವಿಶಂಕರ
| Edited By: |

Updated on: Jun 17, 2021 | 9:51 AM

Share

ಸುಮಾರು ಏಳು ವರ್ಷಗಳ ನಂತರ ಭಾರತೀಯ ಮಹಿಳಾ ಕ್ರಿಕೆಟ್ ತಂಡ ಮತ್ತು ಇಂಗ್ಲೆಂಡ್ ಮಹಿಳಾ ಕ್ರಿಕೆಟ್ ತಂಡ ನಡುವೆ ಟೆಸ್ಟ್ ಪಂದ್ಯ ನಡೆಯುತ್ತಿದೆ. ಬ್ರಿಸ್ಟಲ್‌ನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ, ಟಾಸ್ ಗೆದ್ದ ಇಂಗ್ಲೆಂಡ್ ನಾಯಕಿ ಹೀದರ್ ನೈಟ್ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. 2014 ರಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವೆ ಮೊದಲ ಟೆಸ್ಟ್ ಪಂದ್ಯ ನಡೆಯಿತು. ಇದರಲ್ಲಿ ಭಾರತೀಯ ತಂಡ ಜಯಗಳಿಸಿತು. ಆದರೆ ಮಹಿಳಾ ಕ್ರಿಕೆಟ್‌ನಲ್ಲಿ ಟೆಸ್ಟ್ ಪಂದ್ಯ ಕೇವಲ ನಾಲ್ಕು ದಿನಗಳಿಗೆ ಮಾತ್ರ ಸಿಮೀತ ಎಂಬುದು ನಿಮಗೆ ತಿಳಿದಿದೆಯೇ! ಇದು ಏಕೆ ಹೀಗೆ ಎಂದು ಎಂದಾದರೂ ಯೋಚಿಸಿದ್ದೀರಾ? ಇದಕ್ಕೆ ಯಾವುದೇ ನಿರ್ದಿಷ್ಟ ಕಾರಣವಿಲ್ಲದಿದ್ದರೂ, ಪುರುಷರ ಕ್ರಿಕೆಟ್‌ಗೆ ಹೋಲಿಸಿದರೆ ಮಹಿಳಾ ಕ್ರಿಕೆಟ್‌ನ ಕೆಲವು ನಿಯಮಗಳನ್ನು ಬದಲಾಯಿಸಲಾಗಿದೆ. ವಾಸ್ತವವಾಗಿ, ಮಹಿಳಾ ಕ್ರಿಕೆಟ್‌ನಲ್ಲಿ, ಒಂದು ಟೆಸ್ಟ್ ಪಂದ್ಯವು ಒಂದು ದಿನದಲ್ಲಿ 100 ಓವರ್‌ಗಳನ್ನು ಒಳಗೊಂಡಿರುತ್ತದೆ. ಈ ರೀತಿಯಾಗಿ ನಾಲ್ಕು ದಿನಗಳಲ್ಲಿ ಒಟ್ಟು 400 ಓವರ್‌ಗಳು ಪೂರ್ಣಗೊಳ್ಳುತ್ತವೆ. ಮತ್ತೊಂದೆಡೆ, ಪುರುಷರ ಕ್ರಿಕೆಟ್‌ನಲ್ಲಿ, ಒಂದು ದಿನದಲ್ಲಿ 90 ಓವರ್‌ಗಳನ್ನು ಆಡುವುದು ಅವಶ್ಯಕ. ಈ ಅರ್ಥದಲ್ಲಿ, ಐದು ದಿನಗಳಲ್ಲಿ 450 ಓವರ್‌ಗಳು ಎಸೆಯಲ್ಪಟ್ಟಿರುತ್ತವೆ. ಈ ರೀತಿಯಾಗಿ, 50 ಓವರ್‌ಗಳ ವ್ಯತ್ಯಾಸ ಇರುತ್ತದೆ.

ಇಬ್ಬರ ಕ್ರಿಕೆಟ್​ನಲ್ಲಿರುವ ವ್ಯತ್ಯಾಸಗಳಿವು ಮಹಿಳಾ ಟೆಸ್ಟ್ ಪಂದ್ಯಗಳಲ್ಲಿ ಹೆಚ್ಚು ಡ್ರಾ ಆಗಲು ಬಹುಶಃ ಇದು ಕಾರಣವಾಗಿದೆ. ಕೆಲವೇ ಪಂದ್ಯಗಳು ಮಾತ್ರ ಫಲಿತಾಂಶಗಳನ್ನು ಪಡೆಯಬಹುದು. ಓವರ್‌ಗಳ ಹೊರತಾಗಿ, ಮಹಿಳಾ ಮತ್ತು ಪುರುಷರ ಕ್ರಿಕೆಟ್‌ನ ಟೆಸ್ಟ್ ಪಂದ್ಯಗಳ ನಡುವೆ ಕೆಲವು ದೊಡ್ಡ ವ್ಯತ್ಯಾಸಗಳಿವೆ. ಇದರ ಅಡಿಯಲ್ಲಿ ಮಹಿಳಾ ಕ್ರಿಕೆಟ್‌ನಲ್ಲಿ ಬೌಂಡರಿ ಸ್ವಲ್ಪ ಚಿಕ್ಕದಾಗಿದೆ. ಇದರ ವ್ಯಾಪ್ತಿಯು ಸುಮಾರು 50 ರಿಂದ 64 ಮೀಟರ್. ಅದೇ ಸಮಯದಲ್ಲಿ, ಪುರುಷರ ಕ್ರಿಕೆಟ್‌ನಲ್ಲಿ 60 ರಿಂದ 90 ಮೀಟರ್ ಗಡಿ ಇದೆ. ಮಹಿಳಾ ಮತ್ತು ಪುರುಷರ ಕ್ರಿಕೆಟ್‌ನಲ್ಲಿ ಬಳಸುವ ಚೆಂಡಿನ ಗಾತ್ರದಲ್ಲೂ ವ್ಯತ್ಯಾಸವಿದೆ. ಮಹಿಳಾ ಕ್ರಿಕೆಟ್‌ನಲ್ಲಿ ಚೆಂಡಿನ ತೂಕ 140 ರಿಂದ 150 ಗ್ರಾಂ ಆಗಿದ್ದರೆ, ಪುರುಷರ ಕ್ರಿಕೆಟ್‌ನಲ್ಲಿ ಚೆಂಡಿನ ತೂಕ 163 ರಿಂದ 173 ಗ್ರಾಂ.

ಟೆಸ್ಟ್‌ನಲ್ಲಿ ಭಾರತೀಯ ಮಹಿಳಾ ತಂಡದ ದಾಖಲೆ ಹೀಗಿದೆ ಮತ್ತೊಂದೆಡೆ, ನಾವು ಭಾರತೀಯ ಮಹಿಳಾ ತಂಡದ ಟೆಸ್ಟ್ ದಾಖಲೆಯ ಬಗ್ಗೆ ಮಾತನಾಡಿದರೆ, ಅವರ ಹೆಸರಲ್ಲಿ ಒಟ್ಟು 37 ಟೆಸ್ಟ್ ಪಂದ್ಯಗಳಲ್ಲಿವೆ. ಭಾರತೀಯ ಮಹಿಳೆಯರು 37 ಟೆಸ್ಟ್ ಪಂದ್ಯಗಳಲ್ಲಿ ಐದು ಪಂದ್ಯಗಳನ್ನು ಗೆದ್ದಿದ್ದಾರೆ ಮತ್ತು ಆರು ಟೆಸ್ಟ್ ಪಂದ್ಯಗಳಲ್ಲಿ ಸೋತಿದ್ದಾರೆ. ಉಳಿದ 26 ಪಂದ್ಯಗಳನ್ನು ಡ್ರಾ ಮಾಡಲಾಗಿದೆ. ಭಾರತ ಇದುವರೆಗೆ ವೆಸ್ಟ್ ಇಂಡೀಸ್, ನ್ಯೂಜಿಲೆಂಡ್, ಆಸ್ಟ್ರೇಲಿಯಾ, ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಪಂದ್ಯಗಳನ್ನು ಆಡಿದೆ. ಈ ಪೈಕಿ ಅವರು ವೆಸ್ಟ್ ಇಂಡೀಸ್ ಮತ್ತು ನ್ಯೂಜಿಲೆಂಡ್‌ ವಿರುದ್ಧ ಸರಣಿಕಯನ್ನು ಸಮನಾಗಿಸಿದ್ದಾರೆ. ಆಸ್ಟ್ರೇಲಿಯಾ ಪ್ರತಿ ಬಾರಿಯೂ ಸೋತಿದೆ. ಅದೇ ಸಮಯದಲ್ಲಿ, ಇಂಗ್ಲೆಂಡ್ ಒಂದು ಸರಣಿಯನ್ನು ಕಳೆದುಕೊಂಡು ಎರಡು ಪಂದ್ಯಗಳನ್ನು ಗೆದ್ದಿದೆ. ದಕ್ಷಿಣ ಆಫ್ರಿಕಾ, ಭಾರತದ ವಿರುದ್ಧ ಸರಣಿ ಆಡಿ ಗೆದ್ದುಕೊಂಡಿದೆ.

ಅಶ್ವಿನಿ ಗೌಡ ಎದುರಲ್ಲೇ ಧ್ರುವಂತ್ ಓವರ್ ಆ್ಯಕ್ಟಿಂಗ್; ವಿಡಿಯೋ ನೋಡಿ
ಅಶ್ವಿನಿ ಗೌಡ ಎದುರಲ್ಲೇ ಧ್ರುವಂತ್ ಓವರ್ ಆ್ಯಕ್ಟಿಂಗ್; ವಿಡಿಯೋ ನೋಡಿ
ಮಹಿಳೆಯರಿಗೆ ಬೆಂಗಳೂರು ಫುಲ್ ಸೇಫ್: ಸಿಲಿಕಾನ್ ಸಿಟಿಯನ್ನ ಕೊಂಡಾಡಿದ ಯುವತಿ
ಮಹಿಳೆಯರಿಗೆ ಬೆಂಗಳೂರು ಫುಲ್ ಸೇಫ್: ಸಿಲಿಕಾನ್ ಸಿಟಿಯನ್ನ ಕೊಂಡಾಡಿದ ಯುವತಿ
ಕೆಎಸ್‌ ಈಶ್ವರಪ್ಪಗೆ ವಿದೇಶದಿಂದ ಜೀವ ಬೆದರಿಕೆ , ದೂರು ದಾಖಲು!
ಕೆಎಸ್‌ ಈಶ್ವರಪ್ಪಗೆ ವಿದೇಶದಿಂದ ಜೀವ ಬೆದರಿಕೆ , ದೂರು ದಾಖಲು!
ಬಾವಿಗೆ ಬಿದ್ದು ಒದ್ದಾಡುತ್ತಿದ್ದ ಚಿರತೆ ರಕ್ಷಣೆ, ವಿಡಿಯೋ ನೋಡಿ
ಬಾವಿಗೆ ಬಿದ್ದು ಒದ್ದಾಡುತ್ತಿದ್ದ ಚಿರತೆ ರಕ್ಷಣೆ, ವಿಡಿಯೋ ನೋಡಿ
‘ಜನ ನಾಯಗನ್’ಗೆ ಹೈಕೋರ್ಟ್ ಶಾಕ್: ಬೆಳಿಗ್ಗೆ ನೀಡಿದ ಆದೇಶಕ್ಕೆ ಮಧ್ಯಾಹ್ನ ತಡೆ
‘ಜನ ನಾಯಗನ್’ಗೆ ಹೈಕೋರ್ಟ್ ಶಾಕ್: ಬೆಳಿಗ್ಗೆ ನೀಡಿದ ಆದೇಶಕ್ಕೆ ಮಧ್ಯಾಹ್ನ ತಡೆ
ಆಸ್ತಿ ವಿವಾದ: ಕೆಸರು ಗದ್ದೆಯಲ್ಲೇ ನಡೀತು ಫಿಲ್ಮಿ ಸ್ಟೈಲ್​​ ಫೈಟ್​​
ಆಸ್ತಿ ವಿವಾದ: ಕೆಸರು ಗದ್ದೆಯಲ್ಲೇ ನಡೀತು ಫಿಲ್ಮಿ ಸ್ಟೈಲ್​​ ಫೈಟ್​​
ಕಳಪೆ ಕೊಟ್ಟ ರಾಶಿಕಾ ಮೇಲೆ ಉರಿದು ಬಿದ್ದ ರಕ್ಷಿತಾ, ನಕ್ಕ ಧ್ರುವಂತ್
ಕಳಪೆ ಕೊಟ್ಟ ರಾಶಿಕಾ ಮೇಲೆ ಉರಿದು ಬಿದ್ದ ರಕ್ಷಿತಾ, ನಕ್ಕ ಧ್ರುವಂತ್
ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ: ಉಪನ್ಯಾಸಕನ ವಿರುದ್ಧ ತಾಯಿ ಗಂಭೀರ ಆರೋಪ
ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ: ಉಪನ್ಯಾಸಕನ ವಿರುದ್ಧ ತಾಯಿ ಗಂಭೀರ ಆರೋಪ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಸತೀಶ್ ಜಾರಕಿಹೊಳಿ ಸ್ಫೋಟಕ ಹೇಳಿಕೆ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಸತೀಶ್ ಜಾರಕಿಹೊಳಿ ಸ್ಫೋಟಕ ಹೇಳಿಕೆ
Video: ನಿಯಂತ್ರಣ ತಪ್ಪಿ ಕೆರೆಗೆ ಜಾರಿದ ಸರ್ಕಾರಿ ಬಸ್
Video: ನಿಯಂತ್ರಣ ತಪ್ಪಿ ಕೆರೆಗೆ ಜಾರಿದ ಸರ್ಕಾರಿ ಬಸ್