ICC WTC Final 2021: ನಾಳೆಯಿಂದ ಸಾಂಪ್ರದಾಯಿಕ ಕ್ರಿಕೆಟ್​ ರಸದೌತಣ; ಈ ಆಟಗಾರರು ವಿಜೃಂಭಿಸಬಹುದು.. ತಪ್ಪದೇ ನೋಡಿ

World Test Championship Final 2021: ವಿರಾಟ್​​ ಕೊಹ್ಲಿ ಸಾರಥ್ಯದಲ್ಲಿ ಭಾರತ ತಂಡ ಮತ್ತು ಕೇನ್​ ವಿಲಿಯಮ್ಸ್​ ನಾಯಕತ್ವದ ನ್ಯೂಜಿಲ್ಯಾಂಡ್​ ತಂಡ ಸೆಣಸಲಿವೆ. ಎರಡೂ ತಂಡಗಳಲ್ಲಿ ಪ್ರತಿಭೆಗಳ ಗಣಿಯಿದೆ. ಹೈ ಪ್ರೊಫೈಲ್​ ಆಟಗಾರರಿದ್ದಾರೆ. ಸ್ಪೆಷಲಿಸ್ಟ್​ ಬ್ಯಾಟ್ಸ್​​ಮನ್​ಗಳಿದ್ದಾರೆ; ಸ್ಪೆಷಲಿಸ್ಟ್​ ಬೌಲರ್​ಗಳಿದ್ದಾರೆ. ಆಲ್​ರೌಂಡರ್​ಗಳೂ ಇದ್ದಾರೆ ಎರಡೂ ತಂಡದಲ್ಲಿ. ಹಾಗಾಗಿ ನಾಳೆಯಿಂದ ಸಾಂಪ್ರದಾಯಿಕ ಕ್ರಿಕೆಟ್​ ರಸದೌತಣ ಗ್ಯಾರೆಂಟಿ ಅಂತಾ ಹೇಳಬಹುದು.

ICC WTC Final 2021: ನಾಳೆಯಿಂದ ಸಾಂಪ್ರದಾಯಿಕ ಕ್ರಿಕೆಟ್​ ರಸದೌತಣ; ಈ ಆಟಗಾರರು ವಿಜೃಂಭಿಸಬಹುದು.. ತಪ್ಪದೇ ನೋಡಿ
ನಾಳೆಯಿಂದ ಸಾಂಪ್ರದಾಯಿಕ ಕ್ರಿಕೆಟ್​ ರಸದೌತಣ; ಭಾರತ-ನ್ಯೂಜಿಲ್ಯಾಂಡ್​ ತಂಡದ ಈ ಆಟಗಾರರು ವಿಜೃಂಭಿಸಬಹುದು.. ತಪ್ಪದೇ ನೋಡಿ
sadhu srinath

|

Jun 17, 2021 | 2:47 PM

ಸೌಥಾಂಪ್ಟನ್ (Ageas Bowl, Southampton)​: ಚೊಚ್ಚಲ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​​ ಫೈನಲ್​ ಪಂದ್ಯ ನಾಳೆಯಿಂದ (June 18) ಆರಂಭವಾಗಲಿದೆ. ವಿರಾಟ್​​ ಕೊಹ್ಲಿ ಸಾರಥ್ಯದಲ್ಲಿ ಭಾರತ ತಂಡ ಮತ್ತು ಕೇನ್​ ವಿಲಿಯಮ್ಸ್​ ನಾಯಕತ್ವದ ನ್ಯೂಜಿಲ್ಯಾಂಡ್​ ತಂಡ ಸೆಣಸಲಿವೆ. ಎರಡೂ ತಂಡಗಳು ಇತ್ತೀಚೆಗೆ ಜಯಭೇರಿ ಪ್ರದರ್ಶನಗಳೇ ನೀಡಿವೆ. ಎರಡೂ ತಂಡಗಳಲ್ಲಿ ಪ್ರತಿಭೆಗಳ ಗಣಿಯಿದೆ. ಹೈ ಪ್ರೊಫೈಲ್​ ಆಟಗಾರರಿದ್ದಾರೆ. ಸ್ಪೆಷಲಿಸ್ಟ್​ ಬ್ಯಾಟ್ಸ್​​ಮನ್​ಗಳಿದ್ದಾರೆ; ಸ್ಪೆಷಲಿಸ್ಟ್​ ಬೌಲರ್​ಗಳಿದ್ದಾರೆ. ಇನ್ನು ತಮ್ಮ ಶಕ್ತಿ ಸಾಮರ್ಥ್ಯ ಧಾರೆಯೆರೆಯಲು ಆಲ್​ರೌಂಡರ್​ಗಳೂ ಇದ್ದಾರೆ ಎರಡೂ ತಂಡದಲ್ಲಿ. ಹಾಗಾಗಿ ನಾಳೆಯಿಂದ ಸಾಂಪ್ರದಾಯಿಕ ಕ್ರಿಕೆಟ್​ ರಸದೌತಣ ಗ್ಯಾರೆಂಟಿ ಅಂತಾ ಹೇಳಬಹುದು.

ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಚೇತೇಶ್ವರ ಪೂಜಾರ, ರಿಷಬ್ ಪಂತ್, ಜಸ್ಪ್ರೀತ್ ಬೂಮ್ರಾ ಅವರಂತಹ ಘಟಾನುಘಟಿಗಳು ಇದ್ದರೆ ನ್ಯೂಜಿಲ್ಯಾಂಡ್​ ತಂಡದಲ್ಲಿ ಕೇನ್​ ವಿಲಿಯಮ್ಸ್​ (Kane Williamson), ನೀಲ್​ ವ್ಯಾಗ್ನರ್ (Neil Wagner), ಟಿಮ್​ ಸೌಥೀ (Tim Southee), ಟಾಮ್ ತಥಾಂ (Tom Latham) ಅವರಂತಹ ಅಪ್ರತಿಮ ಆಟಗಾರರಿದ್ದಾರೆ. ಒಬ್ಬೊಬ್ಬರ ಆಟವನ್ನು ಗಮನಿಸುವುದಾದರೆ…

ಕ್ಯಾಪ್ಟನ್​ ವಿರಾಟ್ ಕೊಹ್ಲಿ (Virat Kohli): ವಿರಾಟ್ ಕೊಹ್ಲಿ ಅದ್ಭುತ ಪ್ರದರ್ಶನದ ದಾಖಲೆಗಳ ಮೂಟೆಯನ್ನೇ ಹೊತ್ತಿದ್ದಾರೆ. ಬಲಗೈ ಬ್ಯಾಟ್ಸ್​​ಮನ್ ಕೊಹ್ಲಿ ಭಾರತದಲ್ಲಿ ಇತ್ತೀಚೆಗೆ ಉತ್ತಮ ಪ್ರದರ್ಶನ ನೀಡಿದ್ದು, ಒಳ್ಳೆಯ ಬ್ಯಾಟಿಂಗ್​ ಲಹರಿಯಲ್ಲಿದ್ದಾರೆ. ಚೊಚ್ಚಲ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​​ ಫೈನಲ್​ ಪಂದ್ಯದಲ್ಲಿ ತಂಡದ ಸಾರಥ್ಯ ಹೊರುವ ಗೌರವವೂ ಅವರ ಪಾಲಿನದ್ದಾಗಿದೆ. ಹಾಗಾಗಿ ಮೊದಲ ಎಸೆತದಿಂದಲೂ ಕಣ್ಣಲ್ಲಿ ಕಣ್ಣಿಟ್ಟು ಆಡಿದ್ದೇ ಆದರೆ ಅವರ ಅಭಿಮಾನಿಗಳಿಗೆ ಹಬ್ಬದೂಟ ಖಚಿತ ಅನ್ನಬಹುದು. ಈ ಹಿಂದೆ ವಿರಾಟ್ ಕೊಹ್ಲಿ ಇಂಗ್ಲೆಂಡ್​ ಪ್ರವಾಸದಲ್ಲಿ ಆಡಿರುವ 10 ಟೆಸ್ಟ್​ ಮ್ಯಾಚ್​ಗಳಲ್ಲಿ 727 ರನ್​ ಬಾರಿಸಿದ್ದಾರೆ.

ರಿಷಬ್ ಪಂತ್ (Rishabh Pant): ಸ್ಫೋಟಕ ಬ್ಯಾಟ್ಸ್​ಮನ್​ ಕಮ್ ವಿಕೆಟ್​ ಕೀಪರ್​ ರಿಷಬ್ ಪಂತ್ ಇತ್ತೀಚೆಗೆ ವಿಶ್ವ ಕ್ರಿಕೆಟ್​​ನಲ್ಲಿ ಮೇಲ್ಮಟ್ಟದ ಪ್ರದರ್ಶನ ನೀಡುತ್ತಿರುವ ಪ್ರಮುಖ ಆಟಗಾರ. ಎಂತಹುದೇ ಕ್ಲಿಷ್ಟ ಪರಿಸ್ಥಿತಿಯಲ್ಲಿ ರಿಷಬ್ ಪಂತ್ ಬ್ಯಾಟ್ ಮಾತನಾಡುತ್ತದೆ. ರಿಷಬ್ ಪಂತ್ ಅವರ ಅಸಾಂಪ್ರದಾಯಿಕ ಬ್ಯಾಟಿಂಗ್​ ಪ್ರದರ್ಶನ ಎದುರಾಳಿ ತಂಡದಲ್ಲಿ ನಡುಕ ಹುಟ್ಟಿಸಬಲ್ಲದು. ​ಬಲಿಷ್ಠ ನ್ಯೂಜಿಲ್ಯಾಂಡ್​ ಬೌಲರ್​​ಗಳ ವಿರುದ್ಧವೂ ರಿಷಬ್ ವಿಜೃಂಭಿಸಬಲ್ಲರು ಎಂಬುದು ಆಶಾದಾಯಕ.

ಯುವ ಸ್ಫೋಟಕ ಬ್ಯಾಟ್ಸ್​ಮನ್​ ಆಗಿ ರಿಷಬ್ ಪಂತ್ ತಮ್ಮ ಚೊಚ್ಚಲ ಟೆಸ್ಟ್​ ಪಂದ್ಯದಲ್ಲೇ ಆದಿಲ್​ ರಶೀದ್​ ಅವರ ಎಸೆತವನ್ನು ಲಾಂಗ್ಆನ್​ ದಿಕ್ಕಿನಲ್ಲಿ ನೇರವಾಗಿ ಸಿಕ್ಸರ್​​ಗೆ ಎತ್ತಿ ಟೆಸ್ಟ್​ ರಂಗಕ್ಕೆ ತಮ್ಮ ಎಂಟ್ರಿ ಘೋಷಿಸಿದ್ದರು. ಇಂಗ್ಲಂಡ್​​ ಪ್ರವಾಸದಲ್ಲಿ 3 ಟೆಸ್ಟ್​ ಪಂದ್ಯಗಳಲ್ಲಿ 162 ರನ್​ ಬಾರಿಸುವ ಮೂಲಕ ತಮ್ಮ ಸ್ಥಾನವನ್ನು ಸುಭ್ರದಗೊಳಿಸಿದರು. ಓವಲ್​ ಮೈದಾನದಲ್ಲಿ ತಮ್ಮ ಅತ್ಯಧಿಕ 114 ರನ್​ ಗಳಿಸಿದ್ದರು.

ಜಸ್ಪ್ರೀತ್ ಬೂಮ್ರಾ (Jasprit Bumrah): ಜಸ್ಪ್ರೀತ್ ಬೂಮ್ರಾ ಬೌಲಿಂಗ್​ ಮಾಡುತ್ತಿದ್ದಾರೆ ಅಂದ್ರೆ ಭಾರತ ತಂಡಕ್ಕೆ ಹೆಚ್ಚಿನ ಬಲ ಬರುತ್ತದೆ. ಮತ್ತೊಂದು ತುದಿಯಲ್ಲಿ ಮೊಹಮದ್​ ಶಮಿ ಅವರಂತಹ ಸಹ ಬೌಲರ್​​ಗಳ ಸಾಥ್​ ಇದ್ದರೆ ಬೂಮ್ರಾ ಮ್ಯಾಜಿಕ್​ ಯಾವುದೇ ಎದುರಾಳಿ ಬ್ಯಾಟ್ಸ್​​ಮನ್​ಗಳನ್ನು ಪತರುಗುಟ್ಟುವಂತೆ ಮಾಡಬಲ್ಲದು. ಅವರ ವಿಚಿತ್ರ ಬೌಲಿಂಗ್​ ಶೈಲಿ ನೆಲದಿಂದ ಚೆಂಡು ಪುಟಿದೇಳುವ ಮ್ಯಾಜಿಕ್ ಅವರ ಬೌಲಿಂಗ್​ ಮಾತ್ರ ನೋಡಲು ಸಾಧ್ಯ. ಅದು ಎದುರಾಳಿ ಬ್ಯಾಟ್ಸ್​​ಮನ್​ ಎದೆಯಲ್ಲಿ ಭತ್ತ ಕುಟ್ಟುವ ಅನುಭವ ತರುವುದಂತೂ ನಿಶ್ಚಿತ. ಜಸ್ಪ್ರೀತ್ ಬೂಮ್ರಾ ಸಹ ಇಂಗ್ಲಂಡ್​​ ವಿರುದ್ಧದ ಪ್ರವಾಸದಲ್ಲಿ 3 ಟೆಸ್ಟ್​ ಪಂದ್ಯಗಳಲ್ಲಿ 14 ವಿಕೆಟ್​ ಕಬಳಿಸಿದ್ದರು. ಅದರಲ್ಲೂ ನಾಟಿಂಗ್​ಹ್ಯಾಮ್​ನಲ್ಲಿ ಐದು ವಿಕೆಟ್​ ಕಿತ್ತಿದ್ದು ಅವರ ಸಾಮರ್ಥ್ಯಕ್ಕೆ ಸಾಣೆ ಹಿಡಿದಂತಿತ್ತು.

ಇನ್ನು ನ್ಯೂಜಿಲ್ಯಾಂಡ್​ ತಂಡದಲ್ಲಿರುವ ಕೆಲ ಆಟಗಾರರನ್ನು ಗಮನಿಸುವುದಾದರೆ… ಕೇನ್​ ವಿಲಿಯಮ್ಸ್​ (Kane Williamson): ನ್ಯೂಜಿಲ್ಯಾಂಡ್​ ತಂಡದ ಹಾಲಿ ಕ್ಯಾಪ್ಟನ್​ ವಿಶ್ವದ ಅಗ್ರ ಶ್ರೇಯಾಂಕಿತ ಟೆಸ್ಟ್​ ಬ್ಯಾಟ್ಸ್​​ಮನ್. ಇತ್ತೀಚೆಗೆ ಅವರಿಗೆ ಇಂಜ್ಯುರಿ ತೊಡಕಾಗಿತ್ತಾದರೂ ಅವರ ಬ್ಯಾಟ್​ ಮತ್ತೆ​ ಸದ್ದು ಮಾಡುತ್ತಿದೆ. ವಿಂಡೀಸ್​ ಮತ್ತು ಪಾಕಿಸ್ತಾನ ತಂಡಗಳ ವಿರುದ್ಧದ ಇತ್ತೀಚೆಗಿನ 2020-21 ಪ್ರವಾಸಗಳಲ್ಲಿ ಎರಡು ಡಬಲ್​ ಸೆಂಚುರಿಗಳನ್ನು ಬಾರಿಸಿದ (251 ರನ್ ಮತ್ತು 238 ರನ್) ಶ್ರೇಷ್ಠ ದಾಖಲೆ ಅವರ ಹೆಸರಿನಲ್ಲಿದೆ. ಕೇನ್​ ವಿಲಿಯಮ್ಸ್​ ಒಟ್ಟು ಮೂರು ಸೆಂಚುರಿಗಳನ್ನು ನಾಲ್ಕು ಇನ್ನಿಂಗ್ಸ್​​ಗಳಲ್ಲಿ ಬಾರಿಸಿ, ತಮ್ಮ ಪ್ರಭುತ್ವವನ್ನು ಸಾಬೀತುಪಡಿಸಿದ್ದರು. ಎದುರಾಳಿ ಭಾರತ ತಂಡಕ್ಕೆ ನಾಯಕ ವಿಲಿಯಮ್ಸ್​ ನಿಜಕ್ಕೂ ಕಬ್ಬೀನದ ಕಡಲೆಯೇ! ಆದರೂ ಇಂಗ್ಲೆಂಡ್​​ನಲ್ಲಿ ಕೇನ್​ ವಿಲಿಯಮ್ಸ್​ ಸಾಧನೆ ತುಸು ಕಳಪೆಯಾಗಿದೆ. ಲಾರ್ಡ್ಸ್​​​ ಮೈದಾನದಲ್ಲಿ ಶತಕ ಗಳಿಸಿದರಾದರೂ ಒಟ್ಟು 5 ಟೆಸ್ಟ್​ ಮ್ಯಾಚ್​​ಗಳಲ್ಲಿ ಕೇನ್​ ವಿಲಿಯಮ್ಸ್​ ಕೇವಲ 26.10 ರನ್ ಸರಾಸರಿಯಲ್ಲಿ 261 ರನ್​ ಕಲೆಹಾಕಲು ಶಕ್ಯರಾಗಿದ್ದರು.

ರಾಸ್​ ಟೇಲರ್ (Ross Taylor)​: ನ್ಯೂಜಿಲ್ಯಾಂಡ್​ ತಂಡದಲ್ಲಿರುವ ಅತ್ಯಂತ ಅನುಭವೀ ಆಟಗಾರ. ತಂಡದ ಮಧ್ಯಮ ಕ್ರಮಾಂಕದ ಬ್ಯಾಟಿಂಗ್​​ ಬೆನ್ನೆಲುಬು. ಸ್ಪಿನ್​ ಮತ್ತು ಸ್ಪೀಡ್​ ಬೌಲಿಂಗ್​ ಎರಡನ್ನೂ ಗೇರ್​ ಬದಲಿಸಿಕೊಂಡು ಸಮರ್ಥವಾಗಿ ಆಡಬಲ್ಲರು. ರವಿಂದ್ರನ್​ ಅಶ್ವಿನ್​ ಮತ್ತು ರವೀಂದ್ರ ಜಡೇಜಾ ಬೌಲಿಂಗ್​ ಅನ್ನು ಸಮರ್ಥವಾಗಿ ಎದುರಿಸುವ ಚಾಕಚಕ್ಯತೆ ಅವರಿಗಿದೆ. ಹಾಗಾಗಿ ಮಧ್ಯದಲ್ಲಿ ರೋಚಕ ಹಣಾಹಣಿ ನಿರೀಕ್ಷಿಸಬಹುದು.

ಅನುಭವೀ ರಾಸ್​ ಟೇಲರ್ ಇಂಗ್ಲೆಂಡ್ ಟೆಸ್ಟ್​ ಸರಣಿಯಲ್ಲಿ ಸರಾಸರಿ 40 ರನ್​ ಬಾರಿಸಿದ್ದರು. ಇಂಗ್ಲೆಂಡ್ ನಲ್ಲಿ ಇದುವರೆಗೂ 9 ಟೆಸ್ಟ್ ಪಂದ್ಯಗಳನ್ನು ಆಡಿರುವ ​ರಾಸ್, 650 ರನ್​ ಬಾರಿಸಿದ್ದಾರೆ. 2008ರಲ್ಲಿ ಮ್ಯಾಚೆಂಸ್ಟರ್​​ನಲ್ಲಿ ಅಜೇಯರಾಗಿ 154 ರನ್ ಗಳಿಸಿದ್ದರು.

ಬೌಲ್ಟ್​ (Boult): ಇತ್ತೀಚೆಗಿನ ಇಂಗ್ಲೆಂಡ್ ಟೆಸ್ಟ್​ ಸರಣಿಯಲ್ಲಿ ಬೌಲ್ಟ್​ ಮೊದಲ ಟೆಸ್ಟ್​ ಆಡಿರಲಿಲ್ಲ. ಆದರೆ ಎರಡನೆಯ ಟೆಸ್ಟ್​​ ಪಂದ್ಯದಲ್ಲಿ ಬಾಲ್​ ಹಿಡಿದು, ಮೈದಾನಕ್ಕಿಳಿಲಿದ ಬೌಲ್ಟ್​ ತಮ್ಮ ತಾಕತ್ತು ಏನು ಎಂಬುದನ್ನು ತಂಡಕ್ಕೆ ಪರಿಚಯಿಸಿದರು. ಅವರ ಬೌಲಿಂಗ್​ ನೆರವಿನಿಂದ ತಂಡ ಸರಣಿ ಗೆಲ್ಲುವಂತಾಯಿತು. ಸಾಂಪ್ರದಾಯಿಕ ಎಡಗೈ ಬೌಲರ್ ಬೌಲ್ಟ್ ಎಸೆಯುವ ಇನ್​ಸ್ವಿಂಗರ್​​ಗಳು ಎಡಗೈ ಬ್ಯಾಟ್ಸ್​​ಮನ್​ಗಳನ್ನು ಕಟ್ಟಿಹಾಕಬಲ್ಲದು. ಭಾರತ ತಂಡದ ಬ್ಯಾಟ್ಸ್​​ಮನ್​ಗಳು ಈ ಬೌಲರ್​ನನ್ನು ಹೆಚ್ಚು ಗೌರವದೊಂದಿಗೆ ನೋಡಿಕೊಂಡು ಆಡಬೇಕಾದೀತು.

ಇಂಗ್ಲೆಂಡ್ ಟೆಸ್ಟ್​ ಅಂಕಣಗಳು ಬೌಲ್ಟ್​ ಹೆಚ್ಚು ಯಶಸ್ಸು ತಂದುಕೊಡುವಂತಹುದು. 5 ಟೆಸ್ಟ್​ ಮ್ಯಾಚ್​​ನಲ್ಲಿ 27 ವಿಕೆಟ್​ ಕಬಳಿಸಿದ್ದಾರೆ. ಎರಡು ಬಾರಿ ಐದೈದು ವಿಕೆಟ್ ಪಡೆದಿದ್ದಾರೆ.

ವಿಶ್ವ ಟೆಸ್ಟ್ ಚಾಂಪಿಯನ್​ ಫೈನಲ್​ ನಾಳೆಯಿಂದ: ಫೇವರೀಟ್​ ಭಾರತ ತಂಡವನ್ನ ಸೋಲಿಸಲು ನ್ಯೂಜಿಲ್ಯಾಂಡ್​​ಗೆ ಈ ಒಂದು ಕಾರಣ ಸಾಕು! (World Test Championship Final 2021 India Versus New Zealand the Players who can contribute with their might)

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada