ರೋಹಿತ್ ಶರ್ಮಾ ಎರಡು ವಾರ ಸಿಡ್ನಿಯಲ್ಲಿ ಕ್ವಾರಂಟೈನ್ ನಲ್ಲಿ ಇರಲಿದ್ದಾರೆ. ಕ್ವಾರಂಟೈನ್ ಮುಗಿದ ಮೇಲೆ ಭಾರತದ ವೈದ್ಯಕೀಯ ಸಿಬ್ಬಂದಿ ಅವರನ್ನು ಮತ್ತೆ ಪರೀಕ್ಷೆಗೆ ಒಳಪಡಿಸಲಿದ್ದಾರೆ. ಈ ಪರೀಕ್ಷೆಯಲ್ಲಿ ಪಾಸ್ ಆದ ನಂತರವೇ ರೋಹಿತ್ ಟೀಂ ಇಂಡಿಯಾ ಸೇರಿಕೊಳ್ಳಲಿದ್ದಾರೆ. ಹೀಗಾಗಿ, ಎರಡು ವಾರ ಕ್ವಾರಂಟೈನ್ ಹಾಗೂ ಒಂದು ದಿನ ಪರೀಕ್ಷೆಗೆ ಒಳಪಡೋದು ಸೇರಿದರೆ ರೋಹಿತ್ 15 ದಿನ ಅಲಭ್ಯರಾಗಿರುತ್ತಾರೆ.