ರೈನಾರಂತೆ ಹರಭಜನ್ ಸಿಂಗ್ ಸಹ ಈ ಬಾರಿ ಐಪಿಎಲ್ನಲ್ಲಿ ಆಡುತ್ತಿಲ್ಲ
ಚೆನೈ ಸೂಪರ್ ಕಿಂಗ್ಸ್ ತಂಡಕ್ಕೆ ಮತ್ತೊಂದು ಆಘಾತ ಎದುರಾಗಿದೆ. ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ಸುರೇಶ್ ರೈನಾ ಅವರು ವೈಯಕ್ತಿಕ ಕಾರಣಗಳಿಗಾಗಿ ಇಂಡಿಯನ್ ಪ್ರೀಮಿಯರ್ ಲೀಗ್ನ 13ನೇ ಆವೃತಿಯಿಂದ ಹಿಂದೆ ಸರಿದ ನಂತರ ಅದರ ಮತ್ತೊಬ್ಬ ಸ್ಟಾರ್ ಆಟಗಾರ ಹಾಗೂ ಬೌಲಿಂಗ್ ವಿಭಾಗದಲ್ಲಿ ಪ್ರಮುಖ ಅಸ್ತ್ರವಾಗಿದ್ದ ಹರಭಜನ್ ಸಿಂಗ್ ಸಹ ವೈಯಕ್ತಿಕ ಕಾರಣಗಳಿಂದಾಗಿ ಈ ಬಾರಿ ಆಡುತ್ತಿಲ್ಲವೆಂದು ಹೇಳಿದ್ದಾರೆ. ಶುಕ್ರವಾರದಂದು ಟ್ವೀಟ್ ಮೂಲಕ ತಮ್ಮ ನಿರ್ಧಾರ ಪ್ರಕಟಿಸಿರುವ ಭಜ್ಜಿ, ಸಿಎಸ್ಕೆ ಮ್ಯಾನೇಜ್ಮೆಂಟ್ ಸ್ಥಿತಿಯನ್ನು ಅರ್ಥಮಾಡಿಕೊಂಡು ತನಗೆ ಬೆಂಬಲ ಸೂಚಿಸಿದೆ […]
ಚೆನೈ ಸೂಪರ್ ಕಿಂಗ್ಸ್ ತಂಡಕ್ಕೆ ಮತ್ತೊಂದು ಆಘಾತ ಎದುರಾಗಿದೆ. ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ಸುರೇಶ್ ರೈನಾ ಅವರು ವೈಯಕ್ತಿಕ ಕಾರಣಗಳಿಗಾಗಿ ಇಂಡಿಯನ್ ಪ್ರೀಮಿಯರ್ ಲೀಗ್ನ 13ನೇ ಆವೃತಿಯಿಂದ ಹಿಂದೆ ಸರಿದ ನಂತರ ಅದರ ಮತ್ತೊಬ್ಬ ಸ್ಟಾರ್ ಆಟಗಾರ ಹಾಗೂ ಬೌಲಿಂಗ್ ವಿಭಾಗದಲ್ಲಿ ಪ್ರಮುಖ ಅಸ್ತ್ರವಾಗಿದ್ದ ಹರಭಜನ್ ಸಿಂಗ್ ಸಹ ವೈಯಕ್ತಿಕ ಕಾರಣಗಳಿಂದಾಗಿ ಈ ಬಾರಿ ಆಡುತ್ತಿಲ್ಲವೆಂದು ಹೇಳಿದ್ದಾರೆ.
ಶುಕ್ರವಾರದಂದು ಟ್ವೀಟ್ ಮೂಲಕ ತಮ್ಮ ನಿರ್ಧಾರ ಪ್ರಕಟಿಸಿರುವ ಭಜ್ಜಿ, ಸಿಎಸ್ಕೆ ಮ್ಯಾನೇಜ್ಮೆಂಟ್ ಸ್ಥಿತಿಯನ್ನು ಅರ್ಥಮಾಡಿಕೊಂಡು ತನಗೆ ಬೆಂಬಲ ಸೂಚಿಸಿದೆ ಎಂದಿದ್ದಾರೆ.
‘‘ವೈಯಕ್ತಿಕ ಕಾರಣಗಳಿಗಾಗಿ ನಾನು ಈ ಬಾರಿಯ ಐಪಿಎಲ್ನಲ್ಲಿ ಆಡುತ್ತಿಲ್ಲ. ಕೆಲವು ಬಾರಿ ಸಂಕಷ್ಟಗಳು ಎದುರಾಗುತ್ತವೆ, ನಾನೀಗ ಕುಟುಂಬದೊಂದಿಗೆ ಸಮಯ ಕಳೆಯುತ್ತಿರುವುದರಿಂದ ಏಕಾಂತವನ್ನು ಬಯಸುತ್ತೇನೆ. ನನ್ನ ನಿರ್ಧಾರಕ್ಕೆ ಸಿಎಸ್ಕೆ ತಂಡದ ಆಡಳಿತ ವರ್ಗ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದೆ, ಐಪಿಎಲ್ನಲ್ಲಿ ಯಶ ಹಾರೈಸುತ್ತಾ ಅವರಿಗೆ ಶುಭ ಕೋರುತ್ತೇನೆ, ಸುರಕ್ಷಿತವಾಗಿರಿ, ಜೈ ಹಿಂದ್,’’ ಎಂದು ಟರ್ಬನೇಟರ್ ಟ್ವೀಟ್ ಮಾಡಿದ್ದಾರೆ.
ಹರಭಜನ್ ಟ್ವೀಟ್ಗೆ ಕೂಡಲೇ ಪ್ರತಿಕ್ರಿಯಿಸಿರುವ ಸಿಎಸ್ಕೆ ತಂಡದ ಸಿಈಒ ಕಾಶಿ ವಿಶ್ವನಾಥನ್, ಅವರು ತಮ್ಮ ಅಲಭ್ಯತೆಯ ಬಗ್ಗೆ ನಮಗೆ ತಿಳಿಸಿದ್ದಾರೆ. ಟೀಮ್ ಚೆನೈ ಅವರ ಅವರ ನಿರ್ಧಾರವನ್ನು ಬೆಂಬಲಿಸುತ್ತದೆ ಮತ್ತು ಸಂಕಷ್ಟದ ಸಮಯದಲ್ಲಿ ಅವರೊಂದಿಗೆ ನಿಲ್ಲುತ್ತದೆ ಎಂದಿದ್ದಾರೆ.
ಮೊದಲು ಮುಂಬೈ ಇಂಡಿಯನ್ಸ್ ಪರ ಆಡುತ್ತಿದ್ದ 40ರ ಹರೆಯದ ಭಜ್ಜಿ ಕಳೆದೆರಡು ಸೀಸನ್ಗಳಿಂದ ಚೆನೈ ಕ್ಲಬ್ಗೆ ಆಡುತ್ತಿದ್ದಾರೆ. ಸದ್ಯಕ್ಕೆ ಜಲಂಧರ್ನಲ್ಲಿರುವ ಅವರು, ಏಕಾಂತ ಬಯಸಿದ್ದಾರೆ.