ಅಬ್ಬೋ.. 20 ಲಕ್ಷಕ್ಕೂ ಹೆಚ್ಚು ಜನ; ಅರ್ಜೇಂಟಿನಾದಲ್ಲಿ ಇಡೀ ರಾತ್ರಿ ಜಾಗರಣೆ! ವಿಡಿಯೋ ನೋಡಿ

| Updated By: ಪೃಥ್ವಿಶಂಕರ

Updated on: Dec 19, 2022 | 2:33 PM

FIFA World Cup 2022: ಕ್ರಿಸ್‌ಮಸ್‌ಗೂ ಮುನ್ನವೇ ಈ ವಿಶ್ವಕಪ್​ ಗೆಲುವು ಅರ್ಜೆಂಟೀನಾದಲ್ಲಿ ಸಂಭ್ರಮದ ವಾತಾವರಣವನ್ನು ಸೃಷ್ಟಿ ಮಾಡಿದೆ. ಐತಿಹಾಸಿಕ ವಿಜಯದ ನಂತರ, ಬ್ಯೂನಸ್ ಐರಿಸ್‌ನ ವೀಡಿಯೊ ವೈರಲ್ ಆಗುತ್ತಿದ್ದು, ಇದರಲ್ಲಿ ಸುಮಾರು ಎರಡು ಮಿಲಿಯನ್ ಜನರು ಒಂದೆಡೆ ಸೇರಿ ಸಂಭ್ರಮಾಚರಣೆಯನ್ನು ಮಾಡಿದ್ದಾರೆ.

ಅಬ್ಬೋ.. 20 ಲಕ್ಷಕ್ಕೂ ಹೆಚ್ಚು ಜನ; ಅರ್ಜೇಂಟಿನಾದಲ್ಲಿ ಇಡೀ ರಾತ್ರಿ ಜಾಗರಣೆ! ವಿಡಿಯೋ ನೋಡಿ
ಅರ್ಜೇಂಟಿನಾ ಫ್ಯಾನ್ಸ್
Follow us on

ಮಹಾ ಫೈನಲ್​ನಲ್ಲಿ ಫ್ರಾನ್ಸ್ ತಂಡವನ್ನು ಸೋಲಿಸುವ ಮೂಲಕ ಅರ್ಜೆಂಟೀನಾ (Argentina vs France) 2022 ರ ಫಿಫಾ ವಿಶ್ವಕಪ್ (FIFA World Cup 2022) ಪ್ರಶಸ್ತಿಯನ್ನು ಗೆದ್ದುಕೊಂಡಿದೆ. ಕಳೆದ 36 ವರ್ಷಗಳಿಂದ ಈ ಕ್ಷಣಕ್ಕಾಗಿ ಕಾಯುತ್ತಿದ್ದ ಲಿಯೋನೆಲ್ ಮೆಸ್ಸಿ (Lionel Messi) ತಂಡ ಅಂತಿಮವಾಗಿ ಕಪ್ ಎತ್ತಿಹಿಡಿದಿದೆ. ಉಸಿರು ಬಿಗಿ ಹಿಡಿಯುವಂತೆ ಮಾಡಿದ ಈ ಫೈನಲ್‌ನಲ್ಲಿ ಅರ್ಜೆಂಟೀನಾ ಪೆನಾಲ್ಟಿ ಶೂಟೌಟ್‌ನಲ್ಲಿ ಪ್ರಶಸ್ತಿ ಗೆದ್ದುಕೊಳ್ಳುವಲ್ಲಿ ಯಶಸ್ವಿಯಾಯಿತು. ಸಾಮಾನ್ಯವಾಗಿ ಫುಟ್ಬಾಲ್ ಮೇಲೆ ಹೆಚ್ಚಿನ ವ್ಯಾಮೋಹ ಹೊಂದಿರದ ಭಾರತದಲ್ಲಿಯೇ ಮೆಸ್ಸಿ ಗೆಲುವನ್ನು ಹಬ್ಬದಂತೆ ಆಚರಿಸಲಾಗುತ್ತಿದೆ. ಇನ್ನ ಫುಟ್ಬಾಲ್ ಪ್ರಿಯ ದೇಶಗಳ ಬಗ್ಗೆ ಕೇಳಬೇಕೆ. ಅದರಲ್ಲಂತೂ ಬರೋಬ್ಬರಿ 36 ವರ್ಷಗಳ ಬಳಿಕ ಈ ವಿಜಯವನ್ನು ಕಣ್ತುಂಬಿಕೊಂಡಿರುವ ಅರ್ಜೇಂಟಿನಾ ದೇಶವಾಸಿಗಳು ರಾತ್ರಿ ಇಡೀ ನಿದ್ದೆ ಮಾಡದೆ ಸಂಭ್ರಮಾಚರಣೆ ಮಾಡಿದ್ದಾರೆ. ಅದರಲ್ಲೂ ಒಂದಲ್ಲ, ಎರಡಲ್ಲ ಬರೋಬ್ಬರಿ 20 ಲಕ್ಷಕ್ಕೂ ಹೆಚ್ಚು ಜನರು ಒಂದೆಡೆ ಸೇರಿ, ಕುಣಿದು ಕುಪ್ಪಳಿಸುತ್ತಾ ಇಡೀ ರಾತ್ರಿ ಜಾಗರಣೆ ಮಾಡಿದ್ದಾರೆ.

2. 20 ಲಕ್ಷಕ್ಕೂ ಅಧಿಕ ಜನ

ಕ್ರಿಸ್‌ಮಸ್‌ಗೂ ಮುನ್ನವೇ ಈ ವಿಶ್ವಕಪ್​ ಗೆಲುವು ಅರ್ಜೆಂಟೀನಾದಲ್ಲಿ ಸಂಭ್ರಮದ ವಾತಾವರಣವನ್ನು ಸೃಷ್ಟಿ ಮಾಡಿದೆ. ಐತಿಹಾಸಿಕ ವಿಜಯದ ನಂತರ, ಬ್ಯೂನಸ್ ಐರಿಸ್‌ನ ವೀಡಿಯೊ ವೈರಲ್ ಆಗುತ್ತಿದ್ದು, ಇದರಲ್ಲಿ ಸುಮಾರು ಎರಡು ಮಿಲಿಯನ್ ಜನರು ಒಂದೆಡೆ ಸೇರಿ ಸಂಭ್ರಮಾಚರಣೆಯನ್ನು ಮಾಡಿದ್ದಾರೆ. ಇಂತಹ ಸಂಭ್ರಮಾಚರಣೆಯ ವೀಡಿಯೊವನ್ನು ಈ ಹಿಂದೆ ಯಾರೂ ಕೂಡ ನೋಡಿರಲು ಸಾಧ್ಯವೆ ಇಲ್ಲವೆಂಬಷ್ಟು ಜನಸ್ತೋಮ ನೆರೆದಿದೆ. ಇಡೀ ನಗರವೇ ಗೆಲುವಿನ ನಾದಕ್ಕೆ ಕುಣಿದು ಕುಪ್ಪಳಿಸಿದೆ. ಅರ್ಜೆಂಟಿನಾ ಪ್ರಜೆಗಳ ಈ ಸಂಭ್ರಮಾಚರಣೆಯ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ವಿಶ್ವಕಪ್ ಬಹುಮಾನದ ಮೊತ್ತ 3600 ಕೋಟಿ! ಮೆಸ್ಸಿ ತಂಡಕ್ಕೆ ಸಿಕ್ಕಿದೆಷ್ಟು? ಫ್ರಾನ್ಸ್ ಗೆದ್ದಿದ್ದೆಷ್ಟು? ಇಲ್ಲಿದೆ ವಿವರ

3. ಪೆನಾಲ್ಟಿ ಶೂಟೌಟ್‌ನಲ್ಲಿ ಗೆದ್ದ ಅರ್ಜೆಂಟೀನಾ

ಪೆನಾಲ್ಟಿಯಲ್ಲಿ ಫ್ರಾನ್ಸ್‌ನ ಕೈಲಿಯನ್ ಎಂಬಪ್ಪೆ ಮೊದಲ ಗೋಲು ಬಾರಿಸುವಲ್ಲಿ ಯಶಸ್ವಿಯಾದರು. ನಂತರ ಅರ್ಜೆಂಟೀನಾ ಪರ ಮೆಸ್ಸಿ ಕೂಡ ಗೋಲು ಬಾರಿಸಿದರು. ಇದಾದ ನಂತರ ಫ್ರಾನ್ಸ್​ ಪರ ಎರಡನೇ ಪೆನಾಲ್ಟಿ ಶೂಟೌಟ್ ಮಾಡಲು ಬಂದ ಮಾರ್ಟಿನೆಜ್ ಕೋಮನ್ ಅವರ ಕಿಕ್ ಅನ್ನು ತಡೆಯುವಲ್ಲಿ ಅರ್ಜೆಂಟೀನಾದ ಗೋಲ್‌ಕೀಪರ್ ಯಶಸ್ವಿಯಾದರು. ಬಳಿಕ ಅರ್ಜೆಂಟೀನಾ ಪರ ಡೈಬಾಲಾ ಎರಡನೇ ಗೋಲು ಗಳಿಸಿದರು.

ಹಾಗೆಯೇ ಫ್ರಾನ್ಸ್ ಪರ ಚುಮೇನಿ ಬಾರಿಸಿದ ಮೂರನೇ ಪೆನಾಲ್ಟಿ ಕಿಕ್ ಅನ್ನು ಸಹ ಅರ್ಜೆಂಟೀನಾದ ಗೋಲ್‌ಕೀಪರ್ ಮಾರ್ಟಿನೆಜ್ ತಡೆದರು. ಇದಾದ ನಂತರ ಅರ್ಜೆಂಟೀನಾ ಪರ ಪರೆಡೆಸ್ ಮೂರನೇ ಗೋಲು ಗಳಿಸಿದರು. ಆದರೆ 2 ಮತ್ತು 3 ನೇ ಪೆನಾಲ್ಟಿ ಶೂಟೌಟನ್ನು ಗೋಲಾಗಿ ಪರಿವರ್ತಿಸುವಲ್ಲಿ ವಿಫಲವಾಗಿದ್ದ ಫ್ರಾನ್ಸ್ ನಾಲ್ಕನೇ ಪೆನಾಲ್ಟಿಯನ್ನು ಗೋಲಾಗಿ ಪರಿವರ್ತಿಸುವಲ್ಲಿ ಯಶಸ್ವಿಯಾಯಿತು. ಫ್ರಾನ್ಸ್ ಪರ ಕೊಲೊ ಮುವಾನಿ 2ನೇ ಗೋಲು ಗಳಿಸಿದರು. ಅಂತಿಮವಾಗಿ ಮೊಂಟಿಯೆಲ್ ಅರ್ಜೆಂಟೀನಾ ಪರ 4ನೇ ಗೋಲು ಗಳಿಸಿ ತಂಡಕ್ಕೆ ಜಯ ತಂದುಕೊಟ್ಟರು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ