AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Virat Kohli: ಕೊಹ್ಲಿ ಒಬ್ಬ ನತದೃಷ್ಟ ನಾಯಕ! ಕೇವಲ ಆತನೊಬ್ಬನನ್ನು ಮಾತ್ರ ಏಕೆ ದೂಷಿಸುತ್ತಾರೆ? ವಿರಾಟ್ ಪರ ನಿಂತ ಅರುಣ್ ಲಾಲ್

Virat Kohli: ಇತರ ಬ್ಯಾಟ್ಸ್‌ಮನ್‌ಗಳು ಸಹ ಸಮಸ್ಯೆಗಳನ್ನು ಎದುರಿಸುತ್ತಿರುವ ಕಾರಣ ಕೊಹ್ಲಿಯನ್ನು ಮಾತ್ರ ದೂಷಿಸುವುದು ಸರಿಯಲ್ಲ ಎಂದು ಅರುಣ್ ಲಾಲ್ ಹೇಳಿದ್ದಾರೆ.

Virat Kohli: ಕೊಹ್ಲಿ ಒಬ್ಬ ನತದೃಷ್ಟ ನಾಯಕ! ಕೇವಲ ಆತನೊಬ್ಬನನ್ನು ಮಾತ್ರ ಏಕೆ ದೂಷಿಸುತ್ತಾರೆ? ವಿರಾಟ್ ಪರ ನಿಂತ ಅರುಣ್ ಲಾಲ್
ವಿರಾಟ್ ಕೊಹ್ಲಿ
Follow us
ಪೃಥ್ವಿಶಂಕರ
| Updated By: ಆಯೇಷಾ ಬಾನು

Updated on: Jun 27, 2021 | 7:30 AM

ಕಳೆದ ಕೆಲವು ವರ್ಷಗಳಿಂದ ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿಗೆ ಅದೃಷ್ಟ ಸರಿಯಾಗೆ ಕೈಕೊಡುತ್ತಿದೆ. ಕೊಹ್ಲಿ ನಾಯಕತ್ವದಲ್ಲಿ ಟೀಮ್ ಇಂಡಿಯಾ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ತಲುಪಿತು, ಆದರೆ ಮತ್ತೊಮ್ಮೆ ಪ್ರಶಸ್ತಿಯನ್ನು ಕಳೆದುಕೊಂಡಿತು. ಫೈನಲ್‌ನಲ್ಲಿ ನ್ಯೂಜಿಲೆಂಡ್ ಭಾರತವನ್ನು 8 ವಿಕೆಟ್‌ಗಳಿಂದ ಸೋಲಿಸಿ ಚಾಂಪಿಯನ್‌ಶಿಪ್ ಗೆದ್ದಿತು. ಇದಲ್ಲದೆ, ಭಾರತದ ನಾಯಕನ ಬ್ಯಾಟ್ ಸಹ ಅನೇಕ ಪಂದ್ಯಗಳಿಂದ ಒಂದು ಶತಕಕ್ಕಾಗಿ ಹಾತೊರೆಯುತ್ತಿದೆ. ಫೈನಲ್ ಪಂದ್ಯದಲ್ಲೂ ಸಹ ಕೊಹ್ಲಿಗೆ ಈ ಕಾಯುವಿಕೆಯನ್ನು ಕೊನೆಗೊಳಿಸಲು ಸಾಧ್ಯವಾಗಲಿಲ್ಲ. ಎರಡನೇ ಇನ್ನಿಂಗ್ಸ್‌ನಲ್ಲಿ ಕೊಹ್ಲಿ ಸೇರಿದಂತೆ ಟೀಂ ಇಂಡಿಯಾದ ಸಂಪೂರ್ಣ ಬ್ಯಾಟಿಂಗ್ ಕುಸಿಯಿತು. ಅಂದಿನಿಂದ, ಭಾರತೀಯ ಬ್ಯಾಟಿಂಗ್ ಮತ್ತು ವಿಶೇಷವಾಗಿ ವಿರಾಟ್ ಕೊಹ್ಲಿ ಅವರ ನಾಯಕತ್ವದಿಂದ ಅವರ ಬ್ಯಾಟಿಂಗ್ ವರೆಗೆ ಎಲ್ಲರನ್ನೂ ಗುರಿಯಾಗಿಸಿಕೊಂಡಿದ್ದಾರೆ, ಆದರೆ ಭಾರತದ ಮಾಜಿ ದಂತಕಥೆ ಅರುಣ್ ಲಾಲ್ ಅವರು ಕೊಹ್ಲಿಯನ್ನು ಸಮರ್ಥಿಸಿಕೊಂಡಿದ್ದಾರೆ.

ಡಬ್ಲ್ಯುಟಿಸಿ ಫೈನಲ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ವಿರಾಟ್ ಕೊಹ್ಲಿ 44 ರನ್ ಗಳಿಸಿದ್ದರು ಮತ್ತು ಉತ್ತಮ ಲಯದಲ್ಲಿದ್ದಾರೆ ಎಂದು ತೋರುತ್ತಿತ್ತು, ಆದರೆ ನಂತರ ಅವರು ಇನ್ನಿಂಗ್ಸ್ ಅನ್ನು ಹೆಚ್ಚು ವಿಸ್ತರಿಸಲು ಸಾಧ್ಯವಾಗಲಿಲ್ಲ. ಎರಡನೇ ಇನ್ನಿಂಗ್ಸ್‌ನಲ್ಲಿ ಕೇವಲ 13 ರನ್ ಗಳಿಸಿದ ನಂತರ ಔಟಾದರು. ಎರಡೂ ಇನ್ನಿಂಗ್ಸ್‌ಗಳಲ್ಲಿ, ಕಿವಿ ವೇಗಿ ಕೈಲ್ ಜಾಮಿಸನ್ ಕೊಹ್ಲಿಯನ್ನು ಬಲಿಪಶುವನ್ನಾಗಿ ಮಾಡಿಕೊಂಡರು. ಇದು ಮಾತ್ರವಲ್ಲ, ಎರಡೂ ಬಾರಿ ಜೇಮೀಸನ್ ಕೊಹ್ಲಿಯನ್ನು ವಿಭಿನ್ನ ಎಸೆತಗಳಲ್ಲಿ ಸಿಕ್ಕಿಸಿಕೊಂಡರು. ಮೊದಲ ಇನ್ನಿಂಗ್ಸ್‌ನಲ್ಲಿ ಸತತ ಔಟ್ ಸ್ವಿಂಗ್ ನಂತರ, ಕೊಹ್ಲಿ ಇನ್​ ಸ್ವಿಂಗ್‌ಗೆ ಔಟ್ ಆಗಿದ್ದರು, ಎರಡನೇ ಇನ್ನಿಂಗ್ಸ್‌ನಲ್ಲಿ ಔಟ್ ಸ್ವಿಂಗ್​ಗೆ ಬಲಿಯಾದರು.

ದುರದೃಷ್ಟವಂತ ಕೊಹ್ಲಿ ಈ ಫೈನಲ್ ಪಂದ್ಯದ ನಂತರ ಭಾರತದ ಮಾಜಿ ಬ್ಯಾಟ್ಸ್‌ಮನ್ ಅರುಣ್ ಲಾಲ್ ಅವರು ಕೊಹ್ಲಿ ಮೇಲೆ ಸುರಿಯುತ್ತಿರುವ ಟೀಕೆಗಳನ್ನು ಅಲ್ಲಗಳೆದಿದ್ದಾರೆ. ಇಂಗ್ಲಿಷ್ ಪತ್ರಿಕೆ ದಿ ಟೆಲಿಗ್ರಾಫ್ ಜೊತೆ ಮಾತನಾಡಿದ ಲಾಲ್, ವಿರಾಟ್ ತಪ್ಪು ಮಾಡಿದ್ದಾರೆ. ಅಲ್ಲದೆ ಅದು ಇಂತಹ ಪಂದ್ಯಗಳಲ್ಲಿ ನಡೆಯುವುದು ಸಹಜ. ಅವನ ಮೇಲೆ ಸಾಕಷ್ಟು ಒತ್ತಡವಿತ್ತು, ಆದರೆ ಚೆಂಡು ಸಹ ಆ ಪರಿಸ್ಥಿತಿಗಳಲ್ಲಿ ಸಾಕಷ್ಟು ಸ್ವಿಂಗ್ ಆಗುತ್ತಿತ್ತು. ಹೀಗಾಗಿ ಕೊಹ್ಲಿ ಆಕಸ್ಮಿಕವಾಗಿ ಔಟಾಗಬೇಕಾಯಿತು ಎಂದಿದ್ದಾರೆ

ಕೊಹ್ಲಿಯನ್ನು ಮಾತ್ರ ಏಕೆ ದೂಷಿಸಬೇಕು? ಇತರ ಬ್ಯಾಟ್ಸ್‌ಮನ್‌ಗಳು ಸಹ ಸಮಸ್ಯೆಗಳನ್ನು ಎದುರಿಸುತ್ತಿರುವ ಕಾರಣ ಕೊಹ್ಲಿಯನ್ನು ಮಾತ್ರ ದೂಷಿಸುವುದು ಸರಿಯಲ್ಲ ಎಂದು ಅರುಣ್ ಲಾಲ್ ಹೇಳಿದ್ದಾರೆ. ನಮ್ಮ ಎಲ್ಲಾ ಬ್ಯಾಟ್ಸ್‌ಮನ್‌ಗಳು ಡ್ಯೂಕ್ಸ್ ಚೆಂಡುಗಳ ಮುಂದೆ ದುರ್ಬಲವಾಗಿ ಕಾಣುತ್ತಿದ್ದರು. ವಿರಾಟ್‌ನನ್ನು ಮಾತ್ರ ಏಕೆ ದೂಷಿಸಬೇಕು? ಎಂದು ಪ್ರಶ್ನಿಸಿದ್ದಾರೆ.

ಇಂಗ್ಲೆಂಡ್ ಸರಣಿಯಲ್ಲಿ ಸುಧಾರಣೆ ಕಾಣಬಹುದಾ? ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಸೋಲಿನ ನಂತರ, ಭಾರತ ತಂಡವು ಪ್ರಸ್ತುತ ಕೆಲವು ದಿನಗಳ ರಜೆಯಲ್ಲಿದೆ. ಇದರ ನಂತರ, ಮುಂದಿನ ತಿಂಗಳು ಎಲ್ಲಾ ಆಟಗಾರರು ಮತ್ತೆ ಒಗ್ಗೂಡಿ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಗೆ ಸಿದ್ಧರಾಗಲಿದ್ದಾರೆ. ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯು ಆಗಸ್ಟ್ 4 ರಿಂದ ನಾಟಿಂಗ್ಹ್ಯಾಮ್ನಲ್ಲಿ ಪ್ರಾರಂಭವಾಗಲಿದೆ ಮತ್ತು ಅದಕ್ಕೂ ಮೊದಲು ಕೊಹ್ಲಿ ಸೇರಿದಂತೆ ಎಲ್ಲಾ ಭಾರತೀಯ ಬ್ಯಾಟ್ಸ್‌ಮನ್‌ಗಳು ತಮ್ಮ ದೌರ್ಬಲ್ಯಗಳನ್ನು ನಿವಾರಿಸಲು ಪ್ರಯತ್ನಿಸುವ ಸಾಧ್ಯತೆಗಳಿವೆ.

ಏಕೆ ಎಫ್‌ಐಆರ್ ಹಾಕಿಲ್ಲ?; ನ್ಯಾ. ವರ್ಮಾ ವಿವಾದದ ಬಗ್ಗೆ ಉಪರಾಷ್ಟ್ರಪತಿ ಟೀಕೆ
ಏಕೆ ಎಫ್‌ಐಆರ್ ಹಾಕಿಲ್ಲ?; ನ್ಯಾ. ವರ್ಮಾ ವಿವಾದದ ಬಗ್ಗೆ ಉಪರಾಷ್ಟ್ರಪತಿ ಟೀಕೆ
ಅಧಿಕಾರಿಗಳ ನಿರ್ಲಕ್ಷ್ಯ, ಉಡಾಫೆ ಗೊತ್ತಾಗುತ್ತಿದೆ;ಸರ್ಕಾರವೇನು ಮಾಡುತ್ತಿದೆ?
ಅಧಿಕಾರಿಗಳ ನಿರ್ಲಕ್ಷ್ಯ, ಉಡಾಫೆ ಗೊತ್ತಾಗುತ್ತಿದೆ;ಸರ್ಕಾರವೇನು ಮಾಡುತ್ತಿದೆ?
ಬಿಡದಿ ದಿವ್ಯಾಂಗ ಬಾಲಕಿ ಸಾವಿನ ಬಗ್ಗೆ ಮತ್ತಷ್ಟು ಸ್ಫೋಟಕ ಅಂಶ ಬಿಚ್ಚಿಟ್ಟ SP
ಬಿಡದಿ ದಿವ್ಯಾಂಗ ಬಾಲಕಿ ಸಾವಿನ ಬಗ್ಗೆ ಮತ್ತಷ್ಟು ಸ್ಫೋಟಕ ಅಂಶ ಬಿಚ್ಚಿಟ್ಟ SP
ಇವತ್ತೂ ನಗರದಲ್ಲಿ ಮಳೆ, ಮುಂದಿನ ಎರಡು ದಿನಗಳಲ್ಲೂ ಮಳೆ; ಬವಣೆ ತಪ್ಪಿದ್ದಲ್ಲ
ಇವತ್ತೂ ನಗರದಲ್ಲಿ ಮಳೆ, ಮುಂದಿನ ಎರಡು ದಿನಗಳಲ್ಲೂ ಮಳೆ; ಬವಣೆ ತಪ್ಪಿದ್ದಲ್ಲ
ಹಬ್ಬಕ್ಕೆಂದು ಬೆಂಗಳೂರಿನಿಂದ ಬಂದವರು ಮಸಣಕ್ಕೆ: ಇಲ್ಲಿದೆ ಕೊನೆಯ ಕ್ಷಣ
ಹಬ್ಬಕ್ಕೆಂದು ಬೆಂಗಳೂರಿನಿಂದ ಬಂದವರು ಮಸಣಕ್ಕೆ: ಇಲ್ಲಿದೆ ಕೊನೆಯ ಕ್ಷಣ
ಹೊಸಪೇಟೆಯಿಂದ ಬೆಂಗಳೂರಿಗೆ ವಾಪಸ್ಸು ಹೋಗುತ್ತಿದ್ದೇನೆ: ಶಿವಕುಮಾರ್
ಹೊಸಪೇಟೆಯಿಂದ ಬೆಂಗಳೂರಿಗೆ ವಾಪಸ್ಸು ಹೋಗುತ್ತಿದ್ದೇನೆ: ಶಿವಕುಮಾರ್
ಹಂತಕನಿಗೆ ಕಠಿಣ ಶಿಕ್ಷೆಯಾಗಬೇಕು ಎನ್ನುತ್ತಾರೆ ಮೃತನ ಸಂಬಂಧಿ ಶಂಕರ್
ಹಂತಕನಿಗೆ ಕಠಿಣ ಶಿಕ್ಷೆಯಾಗಬೇಕು ಎನ್ನುತ್ತಾರೆ ಮೃತನ ಸಂಬಂಧಿ ಶಂಕರ್
ಗೃಹಲಕ್ಷ್ಮಿ ಹಣ ಪ್ರತಿ ತಿಂಗಳು ಕೊಡ್ತೀವಿ ಅಂತ ಹೇಳಿಲ್ಲ: ಡಿಕೆ ಶಿವಕುಮಾರ್​
ಗೃಹಲಕ್ಷ್ಮಿ ಹಣ ಪ್ರತಿ ತಿಂಗಳು ಕೊಡ್ತೀವಿ ಅಂತ ಹೇಳಿಲ್ಲ: ಡಿಕೆ ಶಿವಕುಮಾರ್​
ತಂದೆ-ತಾಯಿ ಇಲ್ಲದ ನನಗೆ ಶಿವಣ್ಣ-ಗೀತಕ್ಕನೇ ದೇವರು: ಕಾಫಿನಾಡು ಚಂದು
ತಂದೆ-ತಾಯಿ ಇಲ್ಲದ ನನಗೆ ಶಿವಣ್ಣ-ಗೀತಕ್ಕನೇ ದೇವರು: ಕಾಫಿನಾಡು ಚಂದು
ಅಧಿಕಾರಿಗಳನ್ನು ಬಯ್ಯುವುದು ಬಿಟ್ರೆ ಸಿದ್ದರಾಮಯ್ಯ ಏನು ಮಾಡಿದ್ದಾರೆ? ಸಿಂಹ
ಅಧಿಕಾರಿಗಳನ್ನು ಬಯ್ಯುವುದು ಬಿಟ್ರೆ ಸಿದ್ದರಾಮಯ್ಯ ಏನು ಮಾಡಿದ್ದಾರೆ? ಸಿಂಹ