ಚೀನಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್‌ನಲ್ಲಿ (Asian Games 2023) ಭಾರತದ ಪುರುಷರ ಬ್ಯಾಡ್ಮಿಂಟನ್ ತಂಡ ಇತಿಹಾಸ ಸೃಷ್ಟಿಸಿ ಬೆಳ್ಳಿ ಪದಕ ಗೆದ್ದುಕೊಂಡಿದೆ. ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ತಂಡಕ್ಕೆ ಚಿನ್ನದ ಪದಕ ಗೆಲ್ಲುವ ಅವಕಾಶವಿದ್ದರೂ ಚೀನಾ ಅದನ್ನು ತಡೆಯಿತು. ಭಾರತೀಯ ಪುರುಷರ ತಂಡವು (Indian Badminton team) ಮೊದಲ ಬಾರಿಗೆ ಏಷ್ಯನ್ ಗೇಮ್ಸ್‌ನ ಫೈನಲ್‌ಗೆ ಪ್ರವೇಶಿಸಿ ಐತಿಹಾಸಿಕ ಬೆಳ್ಳಿ ಪದಕಕ್ಕೆ ಮುತ್ತಿಟ್ಟಿದೆ. ಭಾರತ ಆರಂಭಿಸಿದ ರೀತಿಯನ್ನು ನೋಡಿದಾಗ ಚಿನ್ನ ಖಚಿತ ಎಂದು ತೋರುತ್ತಿತ್ತು. ಆದರೆ ಅದು ಸಾಧ್ಯವಾಗಲಿಲ್ಲ.
ಈ ಕಠಿಣ ಪಂದ್ಯದಲ್ಲಿ ಚೀನಾ, ಭಾರತವನ್ನು 3-2 ಅಂತರದಿಂದ ಸೋಲಿಸಿ ಚಿನ್ನದ ಪದಕ ಗೆದ್ದುಕೊಂಡಿತು. ಇನ್ನು ಪುರುಷರ ಸಿಂಗಲ್ಸ್ ಫೈನಲ್‌ನಲ್ಲಿ ಚೀನಾದ ವಾಂಗ್ ಹಾಂಗ್ ಯಾಂಗ್ ಅವರನ್ನು ಎದುರಿಸಿದ್ದ ಭಾರತದ ಮಿಥುನ್ ಮಂಜುನಾಥ್ ಕೂಡ ಈ ಪಂದ್ಯವನ್ನು ಗೆಲ್ಲಲು ಸಾಧ್ಯವಾಗದೆ ಬೆಳ್ಳಿ ಪದಕಕ್ಕೆ ತೃಪ್ತಿಪಡಬೇಕಾಯಿತು.
Asian Games: ಟ್ರ್ಯಾಪ್ ಶೂಟಿಂಗ್ ಪುರುಷರ ವಿಭಾಗದಲ್ಲಿ ಚಿನ್ನ ಗೆದ್ದ ಭಾರತ ತಂಡ..!
ಫೈನಲ್‌ನಲ್ಲಿ ಮೊದಲ ಪಂದ್ಯದಲ್ಲಿ ಕಣಕ್ಕಿಳಿದಿದ್ದ ಭಾರತದ ಲಕ್ಷ್ಯ ಸೇನ್, ಚೀನಾದ ಶಿ ಯುಕಿಯನ್ನು ಎದುರಿಸಿದರು. ಲಕ್ಷ್ಯ ಮೊದಲ ಗೇಮ್ ಅನ್ನು 22-20ರಲ್ಲಿ ಗೆದ್ದುಕೊಂಡರೂ ಚೀನಾದ ಆಟಗಾರ ಎರಡನೇ ಗೇಮ್ ಗೆದ್ದು ತಿರುಗೇಟು ನೀಡಿದರು. ಆದರೆ ಮೂರನೇ ಗೇಮ್ ಗೆಲ್ಲುವಲ್ಲಿ ಯಶಸ್ವಿಯಾದ ಲಕ್ಷ್ಯ ಅಂತಿಮವಾಗಿ 22-20, 14-21, 21-18 ರಿಂದ ಪಂದ್ಯವನ್ನು ಗೆಲ್ಲುವಲ್ಲಿ ಯಶಸ್ವಿಯಾದರು. ಇದರೊಂದಿಗೆ ಭಾರತ 1-0 ಮುನ್ನಡೆ ಸಾಧಿಸಿತ್ತು. ಮುಂದಿನ ಪಂದ್ಯದಲ್ಲಿ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಜೋಡಿಯು ಲಿಯಾಂಗ್ ವೈಕೆಂಗ್ ಮತ್ತು ವಾಂಗ್ ಚಾಂಗ್ ಜೋಡಿಯನ್ನು ನೇರ ಗೇಮ್‌ಗಳಲ್ಲಿ ಸುಲಭವಾಗಿ ಸೋಲಿಸಿತು.
INDIA’S BEST-EVER FINISH IN TEAM EVENTS OF ASIAN GAMES 🔥👏
Proud of you boys 🙌
📸: @badmintonphoto @himantabiswa | @sanjay091968 | @lakhaniarun1 #AsianGames2022#AsianGames#TeamIndia#IndiaontheRise#BadmintonTwitter#Badminton pic.twitter.com/diLJrFL6VW
— BAI Media (@BAI_Media) October 1, 2023
ಬಳಿಕ ಮೂರನೇ ಪಂದ್ಯದಲ್ಲಿ ಕಣಕ್ಕಿಳಿದಿದ್ದ ವಿಶ್ವದ ಮಾಜಿ ನಂಬರ್-1 ಆಟಗಾರ ಕಿಡಂಬಿ ಶ್ರೀಕಾಂತ್ ಅವರ ಮೇಲೆ ಸಾಕಷ್ಟು ನಿರೀಕ್ಷೆಗಳಿದ್ದವು. ಈ ಪಂದ್ಯದಲ್ಲಿ ಶ್ರೀಕಾಂತ್ ಗೆದ್ದಿದ್ದರೆ ಭಾರತಕ್ಕೆ ಚಿನ್ನದ ಪದಕ ಖಚಿತವಾಗಿತ್ತು. ಆದರೆ ಲಿ ಶಿಫೆಂಗ್ ಇದಕ್ಕೆ ಅವಕಾಶ ನೀಡಲಿಲ್ಲ. ಶ್ರೀಕಾಂತ್ ಅವರನ್ನು 24-22, 21-9ರಿಂದ ಸೋಲಿಸಿ ಭಾರತಕ್ಕೆ ಆಘಾತ ನೀಡಿದರು. ಶ್ರೀಕಾಂತ್ ಸೋಲಿನ ನಂತರ, ಧ್ರುವ ಸಾಯಿ ಕಪಿಲ ಮತ್ತು ಸಾಯಿ ಪ್ರತೀಕ್ ಜೋಡಿ ಪುರುಷರ ಡಬಲ್ಸ್‌ನಲ್ಲಿ ಪಂದ್ಯವನ್ನು ಗೆಲ್ಲಲು ಸಾಧ್ಯವಾಗಲಿಲ್ಲ. ಈ ಜೋಡಿಯನ್ನು ಲಿಯು-ಔ ಜೋಡಿ 21-6, 21-15 ರಿಂದ ಸೋಲಿಸಿತು ಮತ್ತು ಸ್ಕೋರ್ ಮತ್ತೆ 2-2 ರಲ್ಲಿ ಸಮವಾಯಿತು. ಕೊನೆಯ ಪಂದ್ಯ ಸಿಂಗಲ್ಸ್ ಆಗಿದ್ದು ನಿರ್ಣಾಯಕ ಪಂದ್ಯವಾಗಿತ್ತು. ಈ ಪಂದ್ಯದಲ್ಲಿ ಮಿಥುನ್ ಅವರನ್ನು ಚೀನಾದ ಆಟಗಾರ ಸುಲಭವಾಗಿ ಸೋಲಿಸಿ 21-12,21-4 ಅಂತರದಲ್ಲಿ ಜಯ ಸಾಧಿಸಿದರು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:10 am, Mon, 2 October 23