Asian Games 2023: ಏಷ್ಯನ್ ಗೇಮ್ಸ್​ಗೆ ಅದ್ಧೂರಿ ಚಾಲನೆ

Asian Games 2022: 19ನೇ ಆವೃತ್ತಿಯ ಏಷ್ಯನ್ ಗೇಮ್ಸ್ 2022 ರಲ್ಲಿ ಆಯೋಜಿಸಬೇಕಿತ್ತು. ಆದರೆ ಕೊರೋನಾ ಭೀತಿ ಹಿನ್ನಲೆಯಲ್ಲಿ ಒಲಿಂಪಿಕ್ ಕೌನ್ಸಿಲ್ ಆಫ್ ಏಷ್ಯಾ ಕ್ರೀಡಾಕೂಟವನ್ನು ಈ ವರ್ಷಕ್ಕೆ ಮುಂದೂಡಲಾಗಿತ್ತು. ಅದರಂತೆ ಇದೀಗ ಚೀನಾದ ಹಾಂಗ್​ಝೌನಲ್ಲಿ ಏಷ್ಯನ್ ಗೇಮ್ಸ್​ ನಡೆಯುತ್ತಿದೆ.

Asian Games 2023: ಏಷ್ಯನ್ ಗೇಮ್ಸ್​ಗೆ ಅದ್ಧೂರಿ ಚಾಲನೆ
Asian Games
Edited By:

Updated on: Sep 23, 2023 | 7:10 PM

ಚೀನಾದ ಹಾಂಗ್​ಝೌನಲ್ಲಿ 19ನೇ ಆವೃತ್ತಿಯ ಏಷ್ಯನ್ ಗೇಮ್ಸ್​ಗೆ ಚಾಲನೆ ದೊರೆತಿದೆ. ಉದ್ಘಾಟನಾ ಸಮಾರಂಭದಲ್ಲಿ ಭಾರತೀಯ ಪುರುಷರ ಹಾಕಿ ತಂಡದ ನಾಯಕ ಹರ್ಮನ್‌ಪ್ರೀತ್ ಸಿಂಗ್ ಮತ್ತು ಒಲಿಂಪಿಕ್ಸ್​ನ ಕಂಚಿನ ಪದಕ ವಿಜೇತೆ ಲೊವ್ಲಿನಾ ಬೊರ್ಗೊಹೈನ್ ತ್ರಿವರ್ಣ ಧ್ವಜ ಹಿಡಿದು ಭಾರತ ತಂಡವನ್ನು ಮುನ್ನಡೆಸಿದರು. ವರ್ಣರಂಜಿತವಾಗಿದ್ದ ಈ ಕಾರ್ಯಕ್ರಮದಲ್ಲಿ ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ಮುಖ್ಯ ಅತಿಥಿಯಾಗಿ ಕಾಣಿಸಿಕೊಂಡರು.

ಕಣದಲ್ಲಿ 12 ಸಾವಿರ ಕ್ರೀಡಾಪಟುಗಳು:

ಈ ಬಾರಿಯ ಏಷ್ಯನ್ ಗೇಮ್ಸ್ ಕ್ರೀಡಾಕೂಟ ಸೆಪ್ಟೆಂಬರ್ 19 ರಿಂದ ಶುರುವಾಗಿದೆ. ಅಂದರೆ ಆರಂಭದಲ್ಲಿ ಕೆಲ ಪಂದ್ಯಗಳ ಅರ್ಹತಾ ಸುತ್ತುಗಳು ನಡೆದಿದ್ದು, ಕೆಲ ಪಂದ್ಯಗಳನ್ನು ಆಯೋಜಿಸಲಾಗಿದೆ. ಇದೀಗ ಉದ್ಘಾಟನಾ ಕಾರ್ಯಕ್ರಮದ ಮೂಲಕ ಎಲ್ಲಾ ಕ್ರೀಡಾಕೂಟಗಳಿಗೂ ಚಾಲನೆ ನೀಡಲಾಗಿದೆ.

ಇನ್ನು ಈ ಬಾರಿಯ ಕ್ರೀಡಾಕೂಟದಲ್ಲಿ ಒಟ್ಟು 45 ದೇಶಗಳ 12 ಸಾವಿರಕ್ಕೂ ಕ್ರೀಡಾಪಟುಗಳು ಕಾಣಿಸಿಕೊಂಡಿದ್ದಾರೆ. ಈ ಕ್ರೀಡಾಪಟುಗಳು 40 ಸ್ಪರ್ಧೆಗಳಲ್ಲಿ ಕಣಕ್ಕಿಳಿಯಲಿದ್ದು, ಈ ಮೂಲಕ ಚಿನ್ನದ ಪದಕಕ್ಕಾಗಿ ಪೈಪೋಟಿ ನಡೆಸಲಿದ್ದಾರೆ. ಹಾಗೆಯೇ ಭಾರತದ 655 ಕ್ರೀಡಾಪಟುಗಳು ಈ ಬಾರಿ ಕಣದಲ್ಲಿದ್ದು, ಅತ್ಯುತ್ತಮದ ಪ್ರದರ್ಶನವನ್ನು ನಿರೀಕ್ಷಿಸಬಹುದು.

2022 ರಲ್ಲಿ ನಡೆಯಬೇಕಿದ್ದ ಕ್ರೀಡಾಕೂಟ:

19ನೇ ಆವೃತ್ತಿಯ ಏಷ್ಯನ್ ಗೇಮ್ಸ್ 2022 ರಲ್ಲಿ ಆಯೋಜಿಸಬೇಕಿತ್ತು. ಆದರೆ ಕೊರೋನಾ ಭೀತಿ ಹಿನ್ನಲೆಯಲ್ಲಿ ಒಲಿಂಪಿಕ್ ಕೌನ್ಸಿಲ್ ಆಫ್ ಏಷ್ಯಾ ಕ್ರೀಡಾಕೂಟವನ್ನು ಈ ವರ್ಷಕ್ಕೆ ಮುಂದೂಡಲಾಗಿತ್ತು. ಅದರಂತೆ ಇದೀಗ ಚೀನಾದ ಹಾಂಗ್​ಝೌನಲ್ಲಿ ಏಷ್ಯನ್ ಗೇಮ್ಸ್​ ನಡೆಯುತ್ತಿದೆ.