ವಿಶ್ವಕಪ್ನಲ್ಲಿ ಬಾಬರ್ ಬೆಂಕಿ ಬ್ಯಾಟಿಂಗ್ ಪ್ರದರ್ಶಿಸುತ್ತಾರೆ: ಗೌತಮ್ ಗಂಭೀರ್ ಭವಿಷ್ಯ
Babar Azam: ಏಕದಿನ ಕ್ರಿಕೆಟ್ನಲ್ಲಿ 105 ಇನಿಂಗ್ಸ್ ಆಡಿರುವ ಬಾಬರ್ ಆಝಂ ಇದುವರೆಗೆ 6069 ರನ್ ಕಲೆಹಾಕಿದ್ದಾರೆ. ಈ ವೇಳೆ ಒಟ್ಟು 19 ಶತಕ ಹಾಗೂ 28 ಅರ್ಧಶತಕಗಳನ್ನು ಬಾರಿಸಿದ್ದಾರೆ. ಅಂದರೆ ಏಕದಿನ ಕ್ರಿಕೆಟ್ನಲ್ಲಿ 58.16 ಸರಾಸರಿಯಲ್ಲಿ ರನ್ ಪೇರಿಸಿದ್ದಾರೆ. ಹಾಗೆಯೇ ಇದೇ ಮೊದಲ ಬಾರಿಗೆ ಪಾಕಿಸ್ತಾನ್ ತಂಡವನ್ನು ಏಕದಿನ ವಿಶ್ವಕಪ್ನಲ್ಲಿ ಮುನ್ನಡೆಸಲು ಸಜ್ಜಾಗಿದ್ದಾರೆ.
ಏಕದಿನ ವಿಶ್ವಕಪ್ಗೆ ಇನ್ನು ಉಳಿದಿರುವುದು ಕೇವಲ ದಿನಗಳು ಮಾತ್ರ. ಇತ್ತ ಕ್ರಿಕೆಟ್ ಮಹಾಸಮರ ಆರಂಭಕ್ಕೂ ಮುನ್ನ ಬಲಾಢ್ಯರು ಯಾರು ಎಂಬ ಚರ್ಚೆಗಳು ಶುರುವಾಗಿದೆ. ಅದರಲ್ಲೂ ಭಾರತೀಯ ಪಿಚ್ನಲ್ಲಿ ಅಬ್ಬರಿಸಬಲ್ಲ ಬ್ಯಾಟರ್ ಯಾರು ಎಂಬ ಪ್ರಶ್ನೆಯನ್ನು ಟೀಮ್ ಇಂಡಿಯಾದ ಮಾಜಿ ಆರಂಭಿಕ ಆಟಗಾರ ಗೌತಮ್ ಗಂಭೀರ್ ಅವರ ಮುಂದಿಡಲಾಗಿದೆ.
ಖಾಸಗಿ ಚಾನೆಲ್ವೊಂದರ ಚಿಟ್ ಚಾಟ್ನಲ್ಲಿ ಕಾಣಿಸಿಕೊಂಡ ಗೌತಮ್ ಗಂಭೀರ್ಗೆ…ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಸ್ಟೀವ್ ಸ್ಮಿತ್, ಬಾಬರ್ ಆಝಂ ಕೇನ್ ವಿಲಿಯಮ್ಸನ್, ಜೋ ರೂಟ್ ಮತ್ತು ಡೇವಿಡ್ ವಾರ್ನರ್…ಇವರಲ್ಲಿ ಈ ಬಾರಿಯ ವಿಶ್ವಕಪ್ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಬಲ್ಲ ಬ್ಯಾಟರ್ ಯಾರು? ಎಂಬ ಪ್ರಶ್ನೆ ಕೇಳಲಾಯಿತು.
ಈ ಪ್ರಶ್ನೆಗೆ ತಕ್ಷಣವೇ ಗಂಭೀರ್ ಬಾಬರ್ ಆಝಂ ಎಂಬ ಉತ್ತರ ನೀಡಿದರು. ಪಾಕ್ ತಂಡದ ನಾಯಕನ ಬ್ಯಾಟಿಂಗ್ನಲ್ಲಿ ಅಂತಹ ಕ್ವಾಲಿಟಿ ಇದೆ. ಹೀಗಾಗಿ ಬಾಬರ್ ಆಝಂ ಬೆಂಕಿ ಬ್ಯಾಟಿಂಗ್ ಪ್ರದರ್ಶಿಸಲಿದ್ದಾರೆ ಎಂದು ಗೌತಿ ಅಭಿಪ್ರಾಯಪಟ್ಟಿದ್ದಾರೆ.
ನಾನು ನೋಡಿದ ಕೆಲವೇ ಕೆಲವು ಆಟಗಾರರಲ್ಲಿ ಬಾಬರ್ ಕೂಡ ಒಬ್ಬರು. ಚೆಂಡನ್ನು ಬಾರಿಸಲು ಆತ ತೆಗೆದುಕೊಳ್ಳುವ ಟೈಮಿಂಗ್ ಅತ್ಯುತ್ತಮವಾಗಿದೆ. ಹೀಗಾಗಿ ಈ ಬಾರಿಯ ವಿಶ್ವಕಪ್ನಲ್ಲಿ ಬಾಬರ್ ಆಬ್ಬರಿಸುವುದನ್ನು ಎದುರು ನೋಡಬಹುದು ಎಂದು ಗಂಭೀರ್ ತಿಳಿಸಿದ್ದಾರೆ.
ಇಲ್ಲಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಕೇನ್ ವಿಲಿಯಮ್ಸನ್ ಮತ್ತು ಡೇವಿಡ್ ವಾರ್ನರ್ ಅಂತಹ ಆಟಗಾರರಿದ್ದಾರೆ. ಆದರೆ ಬಾಬರ್ ಆಝಂ ವಿಭಿನ್ನ ಮಟ್ಟದ ಗುಣಮಟ್ಟವನ್ನು ಹೊಂದಿದ್ದಾರೆ. ಹಾಗಾಗಿ ಪಾಕ್ ತಂಡದ ನಾಯಕನಿಂದ ಬೆಂಕಿ ಬ್ಯಾಟಿಂಗ್ ನಿರೀಕ್ಷಿಸಬಹುದು ಎಂದು ಗೌತಮ್ ಗಂಭೀರ್ ತಿಳಿಸಿದ್ದಾರೆ.
ಏಕದಿನ ಕ್ರಿಕೆಟ್ನಲ್ಲಿ 105 ಇನಿಂಗ್ಸ್ ಆಡಿರುವ ಬಾಬರ್ ಆಝಂ ಇದುವರೆಗೆ 6069 ರನ್ ಕಲೆಹಾಕಿದ್ದಾರೆ. ಈ ವೇಳೆ ಒಟ್ಟು 19 ಶತಕ ಹಾಗೂ 28 ಅರ್ಧಶತಕಗಳನ್ನು ಬಾರಿಸಿದ್ದಾರೆ. ಅಂದರೆ ಏಕದಿನ ಕ್ರಿಕೆಟ್ನಲ್ಲಿ 58.16 ಸರಾಸರಿಯಲ್ಲಿ ರನ್ ಪೇರಿಸಿದ್ದಾರೆ. ಇದಾಗ್ಯೂ ಬಾಬರ್ ಆಝಂ ಇದೇ ಮೊದಲ ಬಾರಿಗೆ ಭಾರತದ ಪಿಚ್ನಲ್ಲಿ ಕಣಕ್ಕಿಳಿಯುತ್ತಿದ್ದಾರೆ. ಆದರೆ ಇದಕ್ಕೂ ಮುನ್ನವೇ ಬಾಬರ್ ಬ್ಯಾಟ್ನಿಂದ ಬೆಂಕಿ ಪ್ರದರ್ಶನ ಮೂಡಿಬರಲಿದೆ ಎಂದು ಗೌತಮ್ ಗಂಭೀರ್ ಭವಿಷ್ಯ ನುಡಿದಿರುವುದು ವಿಶೇಷ.
ಇದನ್ನೂ ಓದಿ: ಏಕದಿನ ವಿಶ್ವಕಪ್ ಗೆಲ್ಲಬಲ್ಲ 5 ತಂಡಗಳನ್ನು ಹೆಸರಿಸಿದ ಸುರೇಶ್ ರೈನಾ
ಪಾಕಿಸ್ತಾನ್ ವಿಶ್ವಕಪ್ ತಂಡ: ಬಾಬರ್ ಆಝಂ (ನಾಯಕ), ಫಖರ್ ಜಮಾನ್, ಇಮಾಮ್-ಉಲ್-ಹಕ್, ಅಬ್ದುಲ್ಲಾ ಶಫೀಕ್, ಮೊಹಮ್ಮದ್ ರಿಝ್ವಾನ್, ಇಫ್ತಿಕರ್ ಅಹ್ಮದ್, ಸೌದ್ ಶಕೀಲ್, ಸಲ್ಮಾನ್ ಅಲಿ ಅಘಾ, ಶಾದಾಬ್ ಖಾನ್, ಮೊಹಮ್ಮದ್ ನವಾಝ್, ಉಸಾಮಾ ಮಿರ್, ಶಾಹೀನ್ ಶಾ ಆಫ್ರಿದಿ, ಹಸನ್ ಅಲಿ, ಹಾರಿಸ್ ರೌಫ್, ಮೊಹಮ್ಮದ್ ವಾಸಿಂ
ಮೀಸಲು ಆಟಗಾರರು: ಝಮಾನ್ ಖಾನ್, ಅಬ್ರಾರ್ ಅಹ್ಮದ್, ಮೊಹಮ್ಮದ್ ಹ್ಯಾರಿಸ್.
Published On - 8:35 pm, Sat, 23 September 23