ಚೀನಾದ ಹ್ಯಾಂಗ್ಝೌನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ನ ಸೈಲಿಂಗ್ನಲ್ಲಿ (ನೌಕಾಯಾನ ಸ್ಪರ್ಧೆ) ಭಾರತ ಎರಡು ಪದಕಗಳನ್ನು ಗೆದ್ದುಕೊಂಡಿದೆ. ಮಂಗಳವಾರ ನಡೆದ ಈ ಸ್ಪರ್ಧೆಯ ಬಾಲಕಿಯ ವಿಭಾಗದಲ್ಲಿ 17ರ ಹರೆಯದ ನೇಹಾ ಠಾಕೂರ್ ಬೆಳ್ಳಿ ಪದಕ ಗೆದ್ದರೆ, ಪುರುಷರ ವಿಭಾಗದಲ್ಲಿ ಇಯಾಬಾದ್ ಅಲಿ ಕಂಚಿನ ಪದಕಕ್ಕೆ ಕೊರೊಳೊಡ್ಡಿದರು.
ಪುರುಷರ ವಿಂಡ್‌ಸರ್ಫರ್ ಆರ್‌ಎಸ್: ಎಕ್ಸ್ ಈವೆಂಟ್‌ನಲ್ಲಿ ಇಯಾಬಾದ್ ಅಲಿ 52 ಅಂಕಗಳು ಮತ್ತು ನೆಟ್ ಸ್ಕೋರ್‌ನೊಂದಿಗೆ ಮೂರನೇ ಸ್ಥಾನ ಪಡೆದರು. ಈ ಮೂಲಕ ಸೈಲಿಂಗ್ನಲ್ಲಿ ಭಾರತಕ್ಕೆ ಕಂಚಿನ ಪದಕ ತಂದುಕೊಡುವಲ್ಲಿ ಯಶಸ್ವಿಯಾದರು. ಇನ್ನು ಸ್ಪರ್ಧೆಯಲ್ಲಿ ಕೊರಿಯಾದ ವೊನ್ವೂ ಚೋ ಚಿನ್ನದ ಪದಕ ಗೆದ್ದರೆ, ಥಾಯ್ಲೆಂಡ್‌ನ ನಟ್ಟಾಫೊಂಗ್ ಫೋನೊಫ್ಫರತ್ ಬೆಳ್ಳಿ ಪದಕವನ್ನು ತಮ್ಮದಾಗಿಸಿಕೊಂಡರು.
🇮🇳’s Eabad Ali has set sail to success at the #AsianGames2022!🥉⛵
He’s won a BRONZE MEDAL in the RS:X Men category, showcasing his remarkable windsurfing skills. Let’s celebrate this incredible achievement and the winds of victory in his favor! 🏆🇮🇳
Kudos, Champ!!… pic.twitter.com/NbIHGwGGog
— SAI Media (@Media_SAI) September 26, 2023
ಬಾಲಕಿಯರ ಡಿಂಗಿ ಐಎಲ್‌ಸಿಎ-4 ಸ್ಪರ್ಧೆಯಲ್ಲಿ 17 ವರ್ಷದ ನೇಹಾ ಎರಡನೇ ಸ್ಥಾನ ಪಡೆದು ಭಾರತಕ್ಕೆ ದಿನದ ಮೊದಲ ಪದಕವನ್ನು ತಂದುಕೊಟ್ಟರು. ಭೋಪಾಲ್‌ನ ನ್ಯಾಷನಲ್ ಸೈಲಿಂಗ್ ಸ್ಕೂಲ್‌ನ ಉದಯೋನ್ಮುಖ ನಾವಿಕೆಯಾಗಿ ಗುರುತಿಸಿಕೊಂಡಿರುವ ನೇಹಾ ಒಟ್ಟು 32 ಅಂಕಗಳೊಂದಿಗೆ ಗುರಿ ಮುಟ್ಟಿದ್ದರು. ಅಲ್ಲದೆ 27 ನೆಟ್ ಸ್ಕೋರ್ಗಳೊಂದಿಗೆ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡರು.
ಈ ಸ್ಪರ್ಧೆಯಲ್ಲಿ ಥಾಯ್ಲೆಂಡ್‌ನ ನೊಪಾಸ್ಸೋರ್ನ್ ಖುನ್‌ಬೂಂಜಾನ್ ಚಿನ್ನ ಪದಕ ತಮ್ಮದಾಗಿಸಕೊಂಡರೆ, ಸಿಂಗಾಪುರದ ಕೀರಾ ಮೇರಿ ಕಾರ್ಲೈಲ್ ಕಂಚಿಗೆ ತೃಪ್ತಿಪಟ್ಟರು.
ಪ್ರಸ್ತುತ ಪದಕ ಪಟ್ಟಿಯಲ್ಲಿ ಭಾರತ ತಂಡವು 6ನೇ ಸ್ಥಾನದಲ್ಲಿದೆ. ಭಾರತೀಯ ಕ್ರೀಡಾಪಟುಗಳು ಒಟ್ಟು 3 ಚಿನ್ನದ ಪದಕ, 4 ಬೆಳ್ಳಿ ಪದಕ ಮತ್ತು 7 ಕಂಚಿನ ಪದಕಗಳನ್ನು ತೆಗೆದುಕೊಂಡಿದ್ದಾರೆ.
ಇದನ್ನೂ ಓದಿ: ಏಷ್ಯನ್ ಗೇಮ್ಸ್: ಚಿನ್ನದ ಪದಕ ಗೆದ್ದ ಟೀಮ್ ಇಂಡಿಯಾ
ಇನ್ನು 40 ಚಿನ್ನದ ಪದಕ, 21 ಬೆಳ್ಳಿ ಪದಕ ಮತ್ತು 9 ಕಂಚಿನ ಪದಕಗಳನ್ನು ಗೆದ್ದಿರುವ ಚೀನಾ ಪದಕ ಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸಿದೆ.