AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Asian Para Games: ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಇತಿಹಾಸ ನಿರ್ಮಿಸಿದ ಭಾರತ; ಪ್ರಧಾನಿ ಮೋದಿ ಶ್ಲಾಘನೆ

Asian Para Games 2023: ವಾಸ್ತವವಾಗಿ 2018 ರಲ್ಲಿ ನಡೆದ ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಭಾರತ ಒಟ್ಟು 72 ಪದಕಗಳನ್ನು ಗೆದ್ದು ಅತ್ಯಧಿಕ ಪದಕ ಗೆದ್ದ ದಾಖಲೆ ನಿರ್ಮಿಸಿತು. ಇದೀಗ ಕ್ರೀಡಾಕೂಟದ 4ನೇ ದಿನದಂದು ಭಾರತ 73ನೇ ಪದಕವನ್ನು ತನ್ನದಾಗಿಸಿಕೊಳ್ಳುವ ತನ್ನ ಹಳೆಯ ದಾಖಲೆಯನ್ನು ಮುರಿದಿದೆ.

Asian Para Games: ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಇತಿಹಾಸ ನಿರ್ಮಿಸಿದ ಭಾರತ; ಪ್ರಧಾನಿ ಮೋದಿ ಶ್ಲಾಘನೆ
ಏಷ್ಯನ್ ಪ್ಯಾರಾ ಗೇಮ್ಸ್‌
ಪೃಥ್ವಿಶಂಕರ
|

Updated on: Oct 26, 2023 | 1:54 PM

Share

ಚೀನಾದ ಹ್ಯಾಂಗ್‌ಝೌನಲ್ಲಿ (Hangzhou) ನಡೆಯುತ್ತಿರುವ 4ನೇ ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ (Asian Para Games) ಭಾರತದ ಪದಕಗಳ ಬೇಟೆ ಮುಂದುವರಿದಿದೆ. ಕ್ರೀಡಾಕೂಟದ 4ನೇ ದಿನದಂದು ಭಾರತದ ಪ್ಯಾರಾ ಅಥ್ಲೀಟ್‌ಗಳು 16ನೇ ಚಿನ್ನದ ಪದಕವನ್ನು ಗೆಲ್ಲುವ ಮೂಲಕ ಈ ಕ್ರೀಡಾಕೂಟದ ಇತಿಹಾಸದಲ್ಲಿ ಅತಿ ಹೆಚ್ಚು ಚಿನ್ನದ ಪದಕ ಗೆದ್ದ ಹೊಸ ದಾಖಲೆ ನಿರ್ಮಿಸಿದ್ದಾರೆ. ಇದರೊಂದಿಗೆ ಏಷ್ಯನ್ ಪ್ಯಾರಾ ಗೇಮ್ಸ್‌ನ 4 ನೇ ದಿನದಂದು ಮಹಿಳೆಯರ ಸಿಂಗಲ್ಸ್ SH6 ಬ್ಯಾಡ್ಮಿಂಟನ್ ಈವೆಂಟ್‌ನಲ್ಲಿ ನಿತ್ಯಾ ಶ್ರೀ ಕಂಚಿನ ಪದಕ ಗೆಲ್ಲುವ ಮೂಲಕ ಭಾರತಕ್ಕೆ 73 ನೇ ಪದಕವನ್ನು ತಂದುಕೊಟ್ಟರು. ಈ ಮೂಲಕ ಭಾರತ ಏಷ್ಯನ್ ಪ್ಯಾರಾ ಗೇಮ್ಸ್‌ ಇತಿಹಾಸದಲ್ಲಿ ಅತ್ಯಧಿಕ ಪದಕ ಗೆದ್ದ ತನ್ನ ಹಳೆಯ ದಾಖಲೆಯನ್ನು ಮುರಿದಿದೆ.

ಪ್ರಧಾನಿ ಮೋದಿ ಅಭಿನಂದನೆ

ವಾಸ್ತವವಾಗಿ 2018 ರಲ್ಲಿ ನಡೆದ ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಭಾರತ ಒಟ್ಟು 72 ಪದಕಗಳನ್ನು ಗೆದ್ದು ಅತ್ಯಧಿಕ ಪದಕ ಗೆದ್ದ ದಾಖಲೆ ನಿರ್ಮಿಸಿತು. ಇದೀಗ ಕ್ರೀಡಾಕೂಟದ 4ನೇ ದಿನದಂದು ಭಾರತ 73ನೇ ಪದಕವನ್ನು ತನ್ನದಾಗಿಸಿಕೊಳ್ಳುವ ತನ್ನ ಹಳೆಯ ದಾಖಲೆಯನ್ನು ಮುರಿದಿದೆ. ಇನ್ನು ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಇತಿಹಾಸ ನಿರ್ಮಿಸಿರುವ ಭಾರತದ ಕ್ರೀಡಾಪಟುಗಳ ಸಾಧನೆಯನ್ನು ಪ್ರಧಾನಿ ಮೋದಿ ಹಾಡಿಹೊಗಳಿದ್ದಾರೆ.

ಗಮನಾರ್ಹವೆಂದರೆ, ಭಾರತದ ಶೂಟರ್ ಸಿದ್ಧಾರ್ಥ ಬಾಬು ಈ ಸಾಧನೆಯಲ್ಲಿ ಪ್ರಮುಖ ಪಾತ್ರವಹಿಸಿದರು. ಸಿದ್ಧಾರ್ಥ ಅವರು R6 ಮಿಶ್ರಿತ 50m ರೈಫಲ್ಸ್ ಪ್ರೋನ್ SH-1 ಈವೆಂಟ್‌ನಲ್ಲಿ ಚಿನ್ನದ ಪದಕ ಗೆದ್ದು, ಏಷ್ಯನ್ ಪ್ಯಾರಾ ಗೇಮ್ಸ್​ನಲ್ಲಿ ದಾಖಲೆ ನಿರ್ಮಿಸಿದರು. ಇದರೊಂದಿಗೆ 2024 ರಲ್ಲಿ ಪ್ಯಾರಿಸ್​ನಲ್ಲಿ ನಡೆಯಲ್ಲಿರುವ ಪ್ಯಾರಾಲಿಂಪಿಕ್ಸ್‌ಗೂ ಅವಕಾಶ ಗಿಟ್ಟಿಸಿಕೊಂಡರು.

ಬೆಳ್ಳಿ ಗೆದ್ದ ಭಾಗ್ಯಶ್ರೀ

ಮಹಿಳೆಯರ ಶಾಟ್ ಪುಟ್-ಎಫ್ 34 ಈವೆಂಟ್‌ನಲ್ಲಿ, ಭಾಗ್ಯಶ್ರೀ ಮಾಧವರಾವ್ ಜಾದವ್ ಅವರು 7.54 ಮೀಟರ್‌ ದೂರ ಎಸೆದು ಬೆಳ್ಳಿ ಪದಕವನ್ನು ಪಡೆದರೆ, ಆರ್ಚರಿ ಪುರುಷರ ಡಬಲ್ಸ್ – W1 ಓಪನ್ ಈವೆಂಟ್‌ನಲ್ಲಿ, ಆರ್ಚರ್ ಆದಿಲ್ ಮೊಹಮ್ಮದ್ ನಜೀರ್ ಅನ್ಸಾರಿ ಮತ್ತು ನವೀನ್ ದಲಾಲ್ 125 ಹಾಗೂ120 ಅಂಕಗಳೊಂದಿಗೆ ಕಂಚಿನ ಪದಕವನ್ನು ಗೆದ್ದುಕೊಂಡರು. ಹಾಗೆಯೇ ಪುರುಷರ ಬ್ಯಾಡ್ಮಿಂಟನ್ ಸಿಂಗಲ್ಸ್ SL-4 ಈವೆಂಟ್‌ನಲ್ಲಿ ಸುಕಾಂತ್ ಕದಮ್ ತಮ್ಮ ಅತ್ಯುತ್ತಮ ಪ್ರದರ್ಶನದೊಂದಿಗೆ ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡರು.

ಸಚಿನ್ ಖಿಲಾರಿಗೆ ಚಿನ್ನ

ಕ್ರೀಡಾಕೂಟದ 4 ನೇ ದಿನದಂದು ಭಾರತವು ಅಥ್ಲೆಟಿಕ್ಸ್‌ ವಿಭಾಗದಲ್ಲಿ ಮಿಂಚಿನ ಪ್ರದರ್ಶನ ನೀಡಿತು. ಪುರುಷರ ಶಾಟ್‌ಪುಟ್-ಎಫ್ 46 ಈವೆಂಟ್‌ನಲ್ಲಿ ಸಚಿನ್ ಖಿಲಾರಿ 16.03 ಮೀಟರ್‌ ದೂರ ಎಸೆದು ಚಿನ್ನದ ಪದಕ ಗೆದ್ದರೆ, ರೋಹಿತ್ ಹೂಡಾ 14.56 ಮೀಟರ್‌ ದೂರ ಎಸೆದು ಕಂಚಿನ ಪದಕ ಪಡೆದರು. ಹಾಗೆಯೇ ಪುರುಷರ 100 ಮೀಟರ್ ಟಿ-37 ಸ್ಪರ್ಧೆಯಲ್ಲಿ ಶ್ರೇಯಾಂಶ್ ತ್ರಿವೇದಿ 12.24 ಸೆಕೆಂಡ್‌ಗಳಲ್ಲಿ ಗುರಿ ಮುಟ್ಟಿ ಕಂಚಿನ ಪದಕಕ್ಕೆ ಕೊರಳೊಡ್ಡಿದರು. ಪ್ಯಾರಾ ಅಥ್ಲೀಟ್ ನಾರಾಯಣ್ ಠಾಕೂರ್ ಪುರುಷರ 100 ಮೀಟರ್ ಟಿ-35 ಸ್ಪರ್ಧೆಯಲ್ಲಿ 14.37 ಸೆಕೆಂಡ್‌ಗಳಲ್ಲಿ ಗುರಿ ಮುಟ್ಟಿ ಕಂಚಿನ ಪದಕ ಗೆದ್ದು, ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಎರಡನೇ ಪದಕವನ್ನು ತಮ್ಮದಾಗಿಸಿಕೊಂಡರು.

ಚೀನಾದ ಪ್ರಾಬಲ್ಯ

ಎಂದಿನಂತೆ ಪದಕ ಪಟ್ಟಿಯಲ್ಲಿ ಚೀನಾ ತನ್ನ ಪ್ರಾಬಲ್ಯವನ್ನು ಮುಂದುವರಿಸಿದೆ. ಆತಿಥೇಯ ರಾಷ್ಟ್ರವು 336 ಪದಕಗಳೊಂದಿಗೆ (133 ಚಿನ್ನ, 110 ಬೆಳ್ಳಿ, 93 ಕಂಚು) ಪದಕ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದರೆ, ಚೀನಾ ನಂತರ ಕ್ರಮವಾಗಿ ಇರಾನ್ (28, 34, 26), ಜಪಾನ್ (23, 25, 31), ಥೈಲ್ಯಾಂಡ್ (20, 14, 32) ಉಜ್ಬೇಕಿಸ್ತಾನ(19, 18, 22), ಭಾರತ (18, 21, 34)  ನಂತರದ ಸ್ಥಾನ ಪಡೆದಿವೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ