Asian Wrestling Championships 2022: ಏಷ್ಯನ್ ಕುಸ್ತಿ ಚಾಂಪಿಯನ್‌ಶಿಪ್​ನಲ್ಲಿ ಫೈನಲ್‌ ಪ್ರವೇಶಿಸಿದ ಅನ್ಶು ಮಲಿಕ್..!

Asian Wrestling Championships 2022: ಏಷ್ಯನ್ ಕುಸ್ತಿ ಚಾಂಪಿಯನ್‌ಶಿಪ್ 2022 ರಲ್ಲಿ ತಾಂತ್ರಿಕ ಶ್ರೇಷ್ಠತೆಯ ಆಧಾರದ ಮೇಲೆ ಅನ್ಶು ಮಲಿಕ್ ತನ್ನ ಎಲ್ಲಾ ಮೂರು ಪಂದ್ಯಗಳನ್ನು ಗೆಲ್ಲುವ ಮೂಲಕ 57 ಕೆಜಿ ವಿಭಾಗದಲ್ಲಿ ಫೈನಲ್ ಪ್ರವೇಶಿಸಿದ್ದಾರೆ.

Asian Wrestling Championships 2022: ಏಷ್ಯನ್ ಕುಸ್ತಿ ಚಾಂಪಿಯನ್‌ಶಿಪ್​ನಲ್ಲಿ ಫೈನಲ್‌ ಪ್ರವೇಶಿಸಿದ ಅನ್ಶು ಮಲಿಕ್..!
ಅನ್ಶು ಮಲಿಕ್
Follow us
TV9 Web
| Updated By: ಪೃಥ್ವಿಶಂಕರ

Updated on: Apr 22, 2022 | 3:54 PM

ಏಷ್ಯನ್ ಕುಸ್ತಿ ಚಾಂಪಿಯನ್‌ಶಿಪ್ 2022 ( Asian Wrestling Championships 2022 ) ರಲ್ಲಿ ತಾಂತ್ರಿಕ ಶ್ರೇಷ್ಠತೆಯ ಆಧಾರದ ಮೇಲೆ ಅನ್ಶು ಮಲಿಕ್ (Anshu Malik) ತನ್ನ ಎಲ್ಲಾ ಮೂರು ಪಂದ್ಯಗಳನ್ನು ಗೆಲ್ಲುವ ಮೂಲಕ 57 ಕೆಜಿ ವಿಭಾಗದಲ್ಲಿ ಫೈನಲ್ ಪ್ರವೇಶಿಸಿದ್ದಾರೆ. ಮನೀಶಾ 62 ಕೆಜಿ ವಿಭಾಗದಲ್ಲಿ ಕಂಚಿನ ಪದಕಕ್ಕಾಗಿ ಕಣಕ್ಕೆ ಇಳಿಯಲಿದ್ದಾರೆ. ಹರಿಯಾಣದ ನಿದಾನಿ ಗ್ರಾಮದ 20 ವರ್ಷದ ಹಾಲಿ ಚಾಂಪಿಯನ್ ಅನ್ಶು ಮಲಿಕ್ ಪ್ರತಿ ಪಂದ್ಯದಲ್ಲೂ ಮೇಲುಗೈ ಸಾಧಿಸುವ ಮೂಲಕ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಮೂರನೇ ಪದಕವನ್ನು ಖಚಿತಪಡಿಸಿಕೊಂಡರು. ಅಂಶು 2020 ರಲ್ಲಿ ಭಾರತದಲ್ಲಿ ಕಂಚಿನ ಪದಕವನ್ನು ಗೆದ್ದಿದ್ದರು, ಕಳೆದ ವರ್ಷ ಅಲ್ಮಾಟಿಯಲ್ಲಿ 57 ಕೆಜಿ ವಿಭಾಗದಲ್ಲಿ ಪ್ರಶಸ್ತಿಯನ್ನು ಗೆದ್ದಿದ್ದರು.

ಕಳೆದ ವರ್ಷ, ವಿಶ್ವ ಚಾಂಪಿಯನ್‌ಶಿಪ್ ಫೈನಲ್ ತಲುಪಿದ ಮೊದಲ ಭಾರತೀಯ ಮಹಿಳಾ ಕುಸ್ತಿಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಅನ್ಶು ಮಲಿಕ್, ಉಜ್ಬೇಕಿಸ್ತಾನ್‌ನ ಶೋಖಿದಾ ಅಖ್ಮೆಡೋವಾ ವಿರುದ್ಧ ಗೆಲುವಿನೊಂದಿಗೆ ಪಂದ್ಯಾವಳಿ ಪ್ರಾರಂಭಿಸಿದರು. ನಂತರ ಅವರು ಸಿಂಗಾಪುರದ ಡೇನಿಯಲ್ ಸೂ ಚಿಂಗ್ ಲಿಮ್ ಅವರನ್ನು ಸೋಲಿಸಿದ್ದರು

ಅಂಶು ತಂತ್ರಕ್ಕೆ ಯಾರ ಬಳಿಯೂ ಉತ್ತರವಿಲ್ಲ! ಅನ್ಶು ಮಲಿಕ್ ತನ್ನ ಅದ್ಭುತ ಆಟದಿಂದ ಪ್ರತಿಸ್ಪರ್ಧಿಗಳಿಗೆ ಯೋಚಿಸಲು ಅಥವಾ ತಂತ್ರಗಾರಿಕೆ ಮಾಡಲು ಯಾವುದೇ ಅವಕಾಶವನ್ನು ನೀಡಲಿಲ್ಲ. ಅವರು ಸೆಮಿಫೈನಲ್‌ನಲ್ಲಿ ಮಂಗೋಲಿಯಾದ ಬೊಲೊರ್ತುಯಾ ಖುರೆಲ್ಖು ಅವರನ್ನು ಎರಡು ನಿಮಿಷ ಮತ್ತು 12 ಸೆಕೆಂಡುಗಳಲ್ಲಿ ಸೋಲಿಸಿದರು. ಡಬಲ್ ಲೆಗ್ ದಾಳಿಯ ಸಹಾಯದಿಂದ ನಾಲ್ಕು ಅಂಕಗಳನ್ನು ಗಳಿಸಿದ ನಂತರ, ಅನ್ಶು ಮಲಿಕ್ ಸುಲಭವಾಗಿ ಟೇಕ್-ಡೌನ್ ಮತ್ತು ಪುಶ್-ಔಟ್‌ಗಳಿಗೆ ಪಾಯಿಂಟ್‌ಗಳನ್ನು ಸಂಗ್ರಹಿಸಿದರು. ಕೆಲವು ಸಮಯದಿಂದ ದೇಶೀಯ ಸ್ಪರ್ಧೆಗಳಲ್ಲಿ 62 ಕೆಜಿ ವಿಭಾಗದಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಮನೀಶಾ, ಸೆಮಿಫೈನಲ್‌ನಲ್ಲಿ ಜಪಾನ್‌ನ ನೊನೊಕಾ ಒಜಾಕಿ ವಿರುದ್ಧ ಕೇವಲ 40 ಸೆಕೆಂಡುಗಳಲ್ಲಿ ಸೋತು ಚಿನ್ನದ ಪದಕದ ರೇಸ್​ನಿಂದ ಹೊರಗುಳಿದರು.

ಮನೀಶಾ ಕೊರಿಯಾದ ಕುಸ್ತಿಪಟು ಜೊತೆ ಸ್ಪರ್ಧಿಸಲಿದ್ದಾರೆ ಓಜಾಕಿ ಅವರು ಸ್ಪರ್ಧೆಯ ಆರಂಭದಲ್ಲಿ ಲೆಗ್-ಲೆಸ್ ಮೂವ್‌ನಲ್ಲಿ ಅವರನ್ನು ಕ್ಯಾಚ್ ಮಾಡಿ, ಪಂದ್ಯವನ್ನು ಕ್ಷಣಾರ್ಧದಲ್ಲಿ ಕೊನೆಗೊಳಿಸಿದರು. ಮನೀಶಾ ಅವರು ಕಜಕಿಸ್ತಾನದ ಅಯೌಲಿಮ್ ಕಾಸಿಮೊವಾ ವಿರುದ್ಧ 9-0 ಅಂತರದ ಜಯ ಸಾಧಿಸುವ ಮೂಲಕ ಉತ್ತಮ ಆರಂಭ ಪಡೆದರು. ಈಗ ಅವರು ಕಂಚಿನ ಪದಕಕ್ಕಾಗಿ ಕೊರಿಯಾದ ಹ್ಯಾನ್ಬಿಟ್ ಲೀ ಅವರನ್ನು ಎದುರಿಸಲಿದ್ದಾರೆ. ಏತನ್ಮಧ್ಯೆ, ಸ್ವಾತಿ ಶಿಂಧೆ (53 ಕೆಜಿ) ತಾಂತ್ರಿಕ ಶ್ರೇಷ್ಠತೆಯ ಮೇಲೆ ತಮ್ಮ ಎರಡೂ ಪಂದ್ಯಗಳನ್ನು ಕಳೆದುಕೊಂಡು ಪದಕ ರೇಸ್‌ನಿಂದ ಹೊರಬಿದ್ದರು.

ಇದನ್ನೂ ಓದಿ:IPL 2022: ಕೊನೆಯ ಎಸೆತದಲ್ಲಿ ಗೆಲುವು! ಧೋನಿಯಿಂದಾಗಿ ಐಪಿಎಲ್‌ನಲ್ಲಿ ವಿಶೇಷ ದಾಖಲೆ ಬರೆದ ಸಿಎಸ್​ಕೆ

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ