ಕಾಡ್ಗಿಚ್ಚಿನ ಸಂತ್ರಸ್ತರಿಗಾಗಿ ಶೇನ್ ವಾರ್ನ್​ ಬ್ಯಾಗಿ ಗ್ರೀನ್ ಕ್ಯಾಪ್ ಹರಾಜಿಗೆ!

ಕಾಡ್ಗಿಚ್ಚಿನ ಸಂತ್ರಸ್ತರಿಗಾಗಿ ಶೇನ್ ವಾರ್ನ್​ ಬ್ಯಾಗಿ ಗ್ರೀನ್ ಕ್ಯಾಪ್ ಹರಾಜಿಗೆ!

ಆಸ್ಟ್ರೇಲಿಯಾ ಸ್ಪಿನ್ ದಿಗ್ಗಜ ಶೇನ್ ವಾರ್ನ್​ರ ಬ್ಯಾಗಿ ಗ್ರೀನ್ ಕ್ಯಾಪ್ ಬರೋಬ್ಬರಿ 7.16ಕೋಟಿಗೆ ಮಾರಾಟವಾಗಿ ಆಶ್ಚರ್ಯ ಮೂಡಿಸಿದೆ. ಆಸ್ಟ್ರೇಲಿಯಾದಲ್ಲಿ ಕಾಡ್ಗಿಚ್ಚಿನ ಸಂತ್ರಸ್ತರಿಗೆ ಪರಿಹಾರ ನೀಡುವ ಸಲುವಾಗಿ ವಾರ್ನ್ ಕ್ಯಾಪ್ ಹರಾಜಿಗೆ ಇಟ್ಟಿದ್ದರು. ಕ್ಯಾಪ್ 7.16ಕೋಟಿಗೆ ಮಾರಾಟವಾಗಿದ್ದಕ್ಕೆ ವಾರ್ನ್ ಸಂತಸಗೊಂಡಿದ್ದಾರೆ. 45ವರ್ಷವಾದ್ರೂ ಕ್ರಿಕೆಟ್ ಬಿಡಲ್ಲ! ವೆಸ್ಟ್ ಇಂಡೀಸ್ ಸ್ಫೋಟಕ ಬ್ಯಾಟ್ಸ್​ಮನ್ ಕ್ರಿಸ್ ಗೇಲ್, 45ನೇ ವಯಸ್ಸಿನಲ್ಲೂ ಕ್ರಿಕೆಟ್ ಆಡುವ ಬಯಕೆಯನ್ನ ವ್ಯಕ್ತಪಡಿಸಿದ್ದಾರೆ. ಕ್ರಿಕೆಟ್ ಆಡಲು ನನ್ನ ದೇಹ ಸ್ಪಂದಿಸುತ್ತೆ. ನಾನಿನ್ನೂ ಯುವಕನಂತಿದ್ದೇನೆ. 45ಕೇವಲ ನಂಬರ್ ಅಷ್ಟೇ ಅಂತ ಹೇಳಿರೋ […]

sadhu srinath

|

Jan 11, 2020 | 11:18 AM

ಆಸ್ಟ್ರೇಲಿಯಾ ಸ್ಪಿನ್ ದಿಗ್ಗಜ ಶೇನ್ ವಾರ್ನ್​ರ ಬ್ಯಾಗಿ ಗ್ರೀನ್ ಕ್ಯಾಪ್ ಬರೋಬ್ಬರಿ 7.16ಕೋಟಿಗೆ ಮಾರಾಟವಾಗಿ ಆಶ್ಚರ್ಯ ಮೂಡಿಸಿದೆ. ಆಸ್ಟ್ರೇಲಿಯಾದಲ್ಲಿ ಕಾಡ್ಗಿಚ್ಚಿನ ಸಂತ್ರಸ್ತರಿಗೆ ಪರಿಹಾರ ನೀಡುವ ಸಲುವಾಗಿ ವಾರ್ನ್ ಕ್ಯಾಪ್ ಹರಾಜಿಗೆ ಇಟ್ಟಿದ್ದರು. ಕ್ಯಾಪ್ 7.16ಕೋಟಿಗೆ ಮಾರಾಟವಾಗಿದ್ದಕ್ಕೆ ವಾರ್ನ್ ಸಂತಸಗೊಂಡಿದ್ದಾರೆ.

45ವರ್ಷವಾದ್ರೂ ಕ್ರಿಕೆಟ್ ಬಿಡಲ್ಲ! ವೆಸ್ಟ್ ಇಂಡೀಸ್ ಸ್ಫೋಟಕ ಬ್ಯಾಟ್ಸ್​ಮನ್ ಕ್ರಿಸ್ ಗೇಲ್, 45ನೇ ವಯಸ್ಸಿನಲ್ಲೂ ಕ್ರಿಕೆಟ್ ಆಡುವ ಬಯಕೆಯನ್ನ ವ್ಯಕ್ತಪಡಿಸಿದ್ದಾರೆ. ಕ್ರಿಕೆಟ್ ಆಡಲು ನನ್ನ ದೇಹ ಸ್ಪಂದಿಸುತ್ತೆ. ನಾನಿನ್ನೂ ಯುವಕನಂತಿದ್ದೇನೆ. 45ಕೇವಲ ನಂಬರ್ ಅಷ್ಟೇ ಅಂತ ಹೇಳಿರೋ ಗೇಲ್, 2020ರ ಟಿ-ಟ್ವೆಂಟಿ ವಿಶ್ವಕಪ್​ನಲ್ಲಿ ಭಾಗವಹಿಸೋದಾಗಿ ಹೇಳಿದ್ದಾರೆ.

ಭಾರತ-ಸಿ ತಂಡ ಚಾಂಪಿಯನ್: ಮಹಿಳಾ ಟಿ-ಟ್ವೆಂಟಿ ಚಾಲೆಂಜರ್ಸ್ ಟ್ರೋಫಿಯಲ್ಲಿ ಭಾರತ ಸಿ ತಂಡ ಚಾಂಪಿಯನ್ ಆಗಿದೆ. ಶಾಫಲಿ ವರ್ಮಾರ 89ರನ್​ಗಳ ನೆರವಿನಿಂದ ಭಾರತ ಸಿ ತಂಡ, ಬಿ ತಂಡದ ವಿರುದ್ಧ ವಿಕೆಟ್​ಗಳ ಗೆಲುವು ಸಾಧಿಸ್ತು. 15ಬೌಂಡರಿ, 2ಸಿಕ್ಸರ್​ಗಳನ್ನ ನೆರವಿನಿಂದ ಶಾಫಲಿ ಅಜೇಯ 89ರನ್ ಗಳಿಸಿ, ತಂಡಕ್ಕೆ ಗೆಲುವು ತಂದುಕೊಟ್ರು.

ಸಚಿನ್ ಗ್ಲೋಬಲ್ ಅಕಾಡೆಮಿಗೆ ಚಾಲನೆ: ತೆಂಡುಲ್ಕರ್ ಮಿಡಲ್​ಸೆಕ್ಸ್ ಗ್ಲೋಬರ್ ಅಕಾಡೆಮಿಗೆ, ನವಿ ಮುಂಬೈನ ಡಾ.ಡಿ.ವೈ ಪಾಟೀಲ್ ಸ್ಟೇಡಿಯಂನಲ್ಲಿ ಸಚಿನ್ ಚಾಲನೆ ನೀಡಿದ್ರು. ಇಂಗ್ಲಿಷ್ ಕೌಂಟಿ ಮಿಡಲ್​ಸೆಕ್ಸ್ ತಂಡದ ಜೊತೆ ಒಪ್ಪಂದ ಮಾಡಿಕೊಂಡಿರೊ ಸಚಿನ್, 9ರಿಂದ 14ವರ್ಷದ ಮಕ್ಕಳಿಗೆ ಕ್ರಿಕೆಟ್ ಪಾಠವನ್ನ ಹೇಳಿಕೊಡಲಾಗುತ್ತೆ.

Follow us on

Related Stories

Most Read Stories

Click on your DTH Provider to Add TV9 Kannada