Novak Djokovic: ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ನೋವಾಕ್ ಜೊಕೊವಿಚ್

| Updated By: ಝಾಹಿರ್ ಯೂಸುಫ್

Updated on: Jun 18, 2023 | 6:20 PM

Australian Open: ಸ್ಟೆಫಾನೋಸ್ ವಿರುದ್ಧದ ಗೆಲುವಿನೊಂದಿಗೆ 22 ಗ್ರ್ಯಾಂಡ್ ಸ್ಲಾಮ್​ ಗೆದ್ದ ಸಾರ್ವಕಾಲಿಕ ಟೆನಿಸ್ ಆಟಗಾರ ರಾಫೆಲ್ ನಡಾಲ್ ಅವರ ದಾಖಲೆಯನ್ನೂ ಕೂಡ ಸರಿಗಟ್ಟಿದರು.

Novak Djokovic: ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ನೋವಾಕ್ ಜೊಕೊವಿಚ್
novak djokovic
Follow us on

Australian Open 2023: ಮೆಲ್ಬೋರ್ನ್​ನಲ್ಲಿ ಭಾನುವಾರ ನಡೆದ ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯ ಪುರುಷ ಸಿಂಗಲ್ಸ್​ ಫೈನಲ್​ನಲ್ಲಿ ಸರ್ಬಿಯಾದ ನೋವಾಕ್ ಜೊಕೊವಿಚ್ (novak djokovic) ಭರ್ಜರಿ ಜಯ ಸಾಧಿಸಿದ್ದಾರೆ. ಭಾರೀ ಕುತೂಹಲಕ್ಕೆ ಕಾರಣವಾಗಿದ್ದ ಅಂತಿಮ ಹಣಾಹಣಿಯಲ್ಲಿ ಸ್ಟೆಫಾನೋಸ್ ಸಿಟ್ಸಿಪಾಸ್ ಅವರನ್ನು ಜೊಕೊವಿಕ್​ 6-3, 7-6 (4), 7-6 (5) ಸೆಟ್​ಗಳಿಂದ ಸೋಲಿಸಿದರು. ಇದರೊಂದಿಗೆ 10ನೇ ಬಾರಿ ಆಸ್ಟ್ರೇಲಿಯನ್ ಓಪನ್ ಕಿರೀಟವನ್ನು ತಮ್ಮದಾಗಿಸಿಕೊಂಡಿದ್ದರು. ಅಲ್ಲದೆ 22ನೇ ಗ್ರ್ಯಾಂಡ್ ಸ್ಲಾಮ್​ ಗೆದ್ದ ವಿಶೇಷ ದಾಖಲೆಯನ್ನೂ ಕೂಡ ನಿರ್ಮಿಸಿದರು.

ಫೈನಲ್ ಪಂದ್ಯದಲ್ಲಿ ಮೊದಲ ಸೆಟ್ ಅನ್ನು​ 6-3 ಅಂತರದಿಂದ ಸುಲಭವಾಗಿ ಗೆದ್ದ ನೋವಾಕ್​ಗೆ 2ನೇ ಸುತ್ತಿನಲ್ಲಿ ಕಠಿಣ ಪೈಪೋಟಿ ಎದುರಾಯಿತು. ಅದರಲ್ಲೂ ರಿವರ್ಸ್ ಸರ್ವ್​ ಮೂಲಕ ಸ್ಟೆಫಾನೋಸ್ ಸಿಟ್ಸಿಪಾಸ್ 2ನೇ ಸುತ್ತಿನಲ್ಲಿ ಹಿಡಿತ ಸಾಧಿಸಿದರು. ಪರಿಣಾಮ 7-6 ಅಂತರದಿಂದ 2ನೇ ಸೆಟ್​ ಅನ್ನು ಗೆದ್ದುಕೊಂಡರು. ಇನ್ನು ಮೂರನೇ ಹಂತದಲ್ಲೂ ಇಬ್ಬರಿಂದ ಭರ್ಜರಿ ಪೈಪೋಟಿ ಕಂಡು ಬಂತು. ಆದರೆ ತಮ್ಮ ಅನುಭವವನ್ನು ಧಾರೆಯೆರೆ ನೋವಾಕ್ ಜೊಕೊವಿಕ್ ಸ್ಟೆಫಾನೋಸ್ ಸಿಟ್ಸಿಪಾಸ್ ಅವರನ್ನು 7-6 ಅಂತರದಿಂದ ಸೋಲಿಸಿದರು. ಈ ಮೂಲಕ ಆಸ್ಟ್ರೇಲಿಯನ್ ಓಪನ್ ಕಿರೀಟವನ್ನು ತಮ್ಮದಾಗಿಸಿಕೊಂಡರು.

ಇದನ್ನೂ ಓದಿ
IPLನ ಒಂದು ಪಂದ್ಯಕ್ಕೆ 107 ಕೋಟಿ ರೂ: PSL ನ 1 ಪಂದ್ಯಕ್ಕೆ ಎಷ್ಟು ಗೊತ್ತಾ?
ಟೀಮ್ ಇಂಡಿಯಾ ಪರ ಅತೀ ಹೆಚ್ಚು ಬಾರಿ 150 ಕ್ಕೂ ಅಧಿಕ ರನ್ ಬಾರಿಸಿದ್ದು ಯಾರು ಗೊತ್ತಾ?
Team India: ಏಕದಿನ ಕ್ರಿಕೆಟ್ ಇತಿಹಾಸದಲ್ಲೇ ಹೊಸ ವಿಶ್ವ ದಾಖಲೆ ನಿರ್ಮಿಸಿದ ಟೀಮ್ ಇಂಡಿಯಾ
Virat Kohli: ಕಿಂಗ್ ಕೊಹ್ಲಿಯ ಅಬ್ಬರಕ್ಕೆ ಸಚಿನ್ ದಾಖಲೆ ಉಡೀಸ್

ಸ್ಟೆಫಾನೋಸ್ ವಿರುದ್ಧದ ಗೆಲುವಿನೊಂದಿಗೆ 22 ಗ್ರ್ಯಾಂಡ್ ಸ್ಲಾಮ್​ ಗೆದ್ದ ಸಾರ್ವಕಾಲಿಕ ಟೆನಿಸ್ ಆಟಗಾರ ರಾಫೆಲ್ ನಡಾಲ್ ಅವರ ದಾಖಲೆಯನ್ನೂ ಕೂಡ ಸರಿಗಟ್ಟಿದರು. ಸದ್ಯ ಖ್ಯಾತ ಟೆನಿಸ್ ಆಟಗಾರರಾದ ಜೊಕೊವಿಕ್ ಮತ್ತು ರಾಫೆಲ್ ನಡಾಲ್ ತಲಾ 22 ಗ್ರ್ಯಾಂಡ್ ಸ್ಲಾಮ್‌ಗಳಲ್ಲಿ ಸಮಬಲ ಸಾಧಿಸಿದ್ದಾರೆ. ಇನ್ನು ಕೆಲವೇ ತಿಂಗಳುಗಳಲ್ಲಿ ಫ್ರೆಂಚ್ ಓಪನ್ ಆರಂಭವಾಗಲಿದ್ದು, ಇವರಿಬ್ಬರಲ್ಲಿ ಯಾರು 23ನೇ ಬಾರಿ ಕಿರೀಟ ಮುಡಿಗೇರಿಸಲಿದ್ದಾರೆ ಎಂಬುದೇ ಕುತೂಹಲ.

ಟೆನಿಸ್ ಅಂಗಳದ ವಿಶ್ವ ದಾಖಲೆ:

ಟೆನಿಸ್ ಅಂಗಳದಲ್ಲಿ ಅತೀ ಹೆಚ್ಚು ಗ್ರ್ಯಾಂಡ್ ಸ್ಲಾಮ್ ಗೆದ್ದ ವಿಶ್ವ ದಾಖಲೆ ಸೆರೆನಾ ವಿಲಿಯಮ್ಸ್​ ಹೆಸರಿನಲ್ಲಿದೆ. ಅಮೆರಿಕದ ಟೆನಿಸ್ ಆಟಗಾರ್ತಿ ಒಟ್ಟು 23 ಬಾರಿ ಗ್ರ್ಯಾಂಡ್ ಸ್ಲಾಮ್ ಟ್ರೋಫಿಗೆ ಮುತ್ತಿಕ್ಕಿದ್ದರು. ಇನ್ನು ಪುರುಷರ ವಿಭಾಗದಲ್ಲಿ ಇದೀಗ ನೋವಾಕ್ ಜೊಕೊವಿಚ್ ಹಾಗೂ ರಾಫೆಲ್ ನಡಾಲ್ 22 ಬಾರಿ ಗ್ರ್ಯಾಂಡ್​ ಸ್ಲಾಮ್ ಪ್ರಶಸ್ತಿ ಗೆದ್ದಿದ್ದಾರೆ. ಇನ್ನು ಶ್ರೇಷ್ಠ ಟೆನಿಸ್ ಆಟಗಾರರಲ್ಲಿ ಒಬ್ಬರಾಗಿರುವ ರೋಜರ್ ಫೆಡರರ್ 20 ಬಾರಿ ಗ್ರ್ಯಾಂಡ್ ಸ್ಲಾಮ್ ಟ್ರೋಫಿಗೆ ಮುತ್ತಿಕ್ಕಿದ್ದರು. ಇದೀಗ ಸೆರೆನಾ ವಿಲಿಯಮ್ಸ್​ ಬರೆದಿರುವ ವಿಶ್ವ ದಾಖಲೆಯನ್ನು ಸರಿಗಟ್ಟಲು ಜೊಕೊವಿಕ್ ಹಾಗೂ ನಾಡಾಲ್​ಗೆ ಉತ್ತಮ ಅವಕಾಶವಿದೆ. ಈ ದಾಖಲೆ ಫ್ರೆಂಚ್ ಓಪನ್ ಮೂಲಕ ಮೂಡಿ ಬರಲಿದೆಯಾ ಕಾದು ನೋಡಬೇಕಿದೆ.

 

 

Published On - 6:14 pm, Sun, 29 January 23