ಇನ್ನು ಪುರುಷರ ಇಂಡಿಯನ್ ಪ್ರೀಮಿಯರ್ ಲೀಗ್ ಹಾಗೂ ಪಾಕಿಸ್ತಾನ್ ಸೂಪರ್ ಲೀಗ್ನ ಮಾಧ್ಯಮ ಹಕ್ಕುಗಳ ಆದಾಯವನ್ನು ಗಮನಿಸಿದರೆ ಅಜಗಜಾಂತರ ವ್ಯತ್ಯಾಸವಿದೆ. ಇಲ್ಲಿ ಪಾಕ್ ಕ್ರಿಕೆಟ್ ಮಂಡಳಿ ಪಿಎಸ್ಎಲ್ನ ಪ್ರತಿ ಪಂದ್ಯದಿಂದ 2.44 ಕೋಟಿಗಳಿಸಿದರೆ, ಬಿಸಿಸಿಐ ಐಪಿಎಲ್ ಮೂಲಕ ಪ್ರತಿ ಪಂದ್ಯದಿಂದ ಬರೋಬ್ಬರಿ 107.5 ಕೋಟಿ ಆದಾಯಗಳಿಸುತ್ತಿದೆ. ಅಂದರೆ ಪಿಎಸ್ಎಲ್ಗಿಂತ ಐಪಿಎಲ್ ನೂರು ಪಟ್ಟು ಹೆಚ್ಚು ಮೌಲ್ಯವನ್ನು ಹೊಂದಿದೆ.