ಕ್ರಿಕೆಟಿಗ ವಿರಾಟ್ ಕೊಹ್ಲಿ ಹಾಗೂ ನಟಿ ಅನುಷ್ಕಾ ಶರ್ಮಾ ಕುಟುಂಬಕ್ಕೆ ಹೊಸ ಸದಸ್ಯೆಯ ಆಗಮನವಾಗಿದೆ. ಅರ್ಥಾತ್, ಅನುಷ್ಕಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಈ ವಿಚಾರ ವೈರಲ್ ಆಗುತ್ತಿದ್ದಂತೆ ಅಭಿಮಾನಿಗಳು ಹಾಗೂ ಸೆಲೆಬ್ರಿಟಿಗಳು ವಿರುಷ್ಕಾಗೆ ಶುಭಾಶಯ ಕೋರಿದ್ದಾರೆ.
2020ರಲ್ಲಿ ಅನುಷ್ಕಾ ಶರ್ಮಾ ಗರ್ಭ ಧರಿಸಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದರು. ಅಷ್ಟೇ ಅಲ್ಲ ಜನವರಿ ತಿಂಗಳಲ್ಲಿ ಮನೆಗೆ ಹೊಸ ಸದಸ್ಯನ ಆಗಮನವಾಗಲಿದೆ ಎಂದು ಅವರು ಅಧಿಕೃತಗೊಳಿಸಿದ್ದರು.
ಆ ವಿಶೇಷ ಕ್ಷಣ ಮಿಸ್ ಮಾಡಿಕೊಳ್ಳದ ಕೊಹ್ಲಿ
ಟೀಂ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ ಟೂರ್ ಆಡಲು ಕಾಂಗರೂಗಳ ನಾಡಿಗೆ ತೆರಳಿದೆ. ವಿರಾಟ್ ಟಿ20 ಹಾಗೂ ಏಕದಿನ ಹಾಗೂ ಒಂದು ಟೆಸ್ಟ್ ಪಂದ್ಯ ಮುಗಿಸಿ ವಿರಾಟ್ ಕೊಹ್ಲಿ ಭಾರತಕ್ಕೆ ಮರಳಿದ್ದರು. ಎಷ್ಟೇ ಕೋಟಿ ಕೊಟ್ಟರೂ ನಾನು ವಿಶೇಷ ಕ್ಷಣವನ್ನು ಮಿಸ್ ಮಾಡಿಕೊಳ್ಳುವುದಿಲ್ಲ ಎಂದು ಕೊಹ್ಲಿ ಹೇಳಿದ್ದರು. ಅದೇ ರೀತಿ, ವಿರಾಟ್ ಭಾರತಕ್ಕೆ ವಾಪಾಸಾಗಿ, ಅನುಷ್ಕಾ ಜೊತೆ ಸಮಯ ಕಳೆದಿದ್ದಾರೆ. ಹೆಣ್ಣು ಮಗು ಆಗಿರುವ ಬಗ್ಗೆ ಅವರು ಇನ್ಸ್ಟಾಗ್ರಾಂನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಇಂದು ಮಧ್ಯಾಹ್ನ ಅನುಷ್ಕಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ತಾಯಿ ಹಾಗೂ ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ಆಸ್ಪತ್ರೆಯಲ್ಲಿ ಹಾಜರಿದ್ದ ವಿರಾಟ್ ಕೊಹ್ಲಿ ಸಂತಸ ವ್ಯಕ್ತಪಡಿಸಿದ್ದಾರೆ.
30 ನಿಮಿಷಕ್ಕೆ 12 ಲಕ್ಷ ಲೈಕ್ಸ್:
ಅನುಷ್ಕಾ ಮಗಳು ದಾಖಲೆ ಬರೆದಿದ್ದಾಳೆ. ಅನುಷ್ಕಾ ಮಗಳ ಕುರಿತು ವಿರಾಟ್ ಕೊಹ್ಲಿ ಇನ್ಸ್ಟಾಗ್ರಾಂನಲ್ಲಿ ಹಾಕಿರುವ ಫೋಟೋ 30 ನಿಮಿಷಕ್ಕೆ ಬರೋಬ್ಬರಿ 12 ಲಕ್ಷ ಲೈಕ್ಸ್ ಪಡೆದುಕೊಂಡಿದೆ. ಅಲ್ಲದೆ ಸಾವಿರಾರು ಮಂದಿ ಕಮೆಂಟ್ ಮಾಡಿ ವಿರುಷ್ಕಾ ದಂಪತಿಗೆ ಶುಭಾಶಯ ಕೋರಿದ್ದಾರೆ.
Twitter India ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಅಮ್ಮ ಆಗುತ್ತಿದ್ದಾರೆ: 2020ರ ಅತಿಹೆಚ್ಚು ಲೈಕ್ ಪಡೆದ ಟ್ವೀಟ್
Published On - 4:20 pm, Mon, 11 January 21