ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ 2021 ಉದ್ಘಾಟನಾ ಫೈನಲ್ ಮ್ಯಾಚ್ ತಟಸ್ಥವಾಗಿ ಇಂಗ್ಲೆಂಡ್ನ ಸೌಥಾಂಪ್ಟನ್ ರೋಸ್ಬೌಲ್ನಲ್ಲಿ ಮುಂದಿನ ಜೂನ್ ಅಂತ್ಯಕ್ಕೆ ನಡೆಯಲಿದೆ. ಈ ಮಧ್ಯೆ, ಕೊರೊನಾ ಎಂಬ ಪೆಂಡಂಭೂತ ಇಡೀ ಜಗತ್ತನ್ನೇ ಕಾಡುತ್ತಿದೆ. ಅದು ಕ್ರಿಕೆಟ್ ಜಗತ್ತಿಗೂ ಕಂಟಕವಾಗಿದೆ. ಹಾಗಾಗಿ ಆಟಗಾರರು, ಆಯಾ ಕ್ರಿಕೆಟ್ ಮಂಡಳಿಗಳು ಸುರಕ್ಷತೆಯ ದೃಷ್ಟಿಯಿಂದ ವ್ಯಾಪಕ ಬಿಗಿ ಕ್ರಮಗಳನ್ನು ಕೈಗೊಂಡಿದೆ. ಇದರ ಹೊರತಾಗಿ ಮುಂದಿನ ತಿಂಗಳು ನ್ಯೂಜಿಲ್ಯಂಡ್ ವಿರುದ್ಧ WTC 2021 ಫೈನಲ್ ಆಡಲು ಭಾರತ ತಂಡ ಇಂಗ್ಲೆಂಡ್ನ ಸೌಥಾಂಪ್ಟನ್ ಪಟ್ಟಣದತ್ತ ಪ್ರಯಾಣ ಬೆಳೆಸಲು ಸಜ್ಜಾಗಿದೆ. ಈ ಮಧ್ಯೆ, ಆಟಗಾರರು ಮ್ಮ ಕುಟುಂಬಸ್ಥರನ್ನೂ ತಮ್ಮ ಜೊತೆ, ಕರೆದುಕೊಂಡು ಹೋಗುತ್ತೇವೆ ಎಂದು ಮವಿ ಸಲ್ಲಿಸಿದ್ದರು. ಆದರೆ ಅದರ ಜೊತೆಗೆ ಕೊರೊನಾ ಅಪಾಯವೂ ಇರುವುದರಿಂದ ಬಿಸಿಸಿಐ ಆತಂಕದ ಗಂಟೆ ಬಾರಿಸಿತ್ತು. ಆದರೆ ಸದ್ಯಕ್ಕೆ ಭಾರತೀಯ ಕ್ರಿಕೆಟ್ ಆಡಳಿತ ಮಂಡಳಿಯು ಆಟಗಾರರ ಕುಟುಂಬಸ್ಥರು ಮುಂಬೈನಲ್ಲಿ ಸ್ಥಾಪಿಸಲಾಗಿರುವ ಬಯೋ-ಬಬಲ್ (Mumbai bio-bubble) ನಲ್ಲಿ ಆಟಗಾರರ ಜೊತೆ ಬೆರೆಯಬಹುದು ಎಂದು ಸಮ್ಮತಿಸಿದೆ.
ಮುಂಬೈ ಬಯೋ-ಬಬಲ್ ಕೇಂದ್ರದಿಂದ ಮುಂದೆ ಇಂಗ್ಲೆಂಡ್ನ ಸೌಥಾಂಪ್ಟನ್ಗೂ ಆಟಗಾರರ ಪರಿವಾರದವರು ಪ್ರವಾಸ ಕೈಗೊಳ್ಳಬಹುದು ಎಂದೂ ಬಿಸಿಸಿಐ ಘೋಷಿಸಿದೆ. ಆದ್ರೆ ಒಂದೇ ಕಂಡೀಷನ್… ಈ ಕುರಿತು ಯುಕೆ ಸರ್ಕಾರವು ಇಂಗ್ಲೆಂಡ್ ಅಂಡ್ ವೇಲ್ಸ್ ಕ್ರಿಕೆಟ್ ಮಂಡಳಿಗೆ (England and Wales Cricket Board -ECB) ಅನುಮತಿ ನೀಡಬೇಕಿದೆ. ಇದು ತುಸು ಕಷ್ಟಸಾಧ್ಯ.
ಏಕೆಂದ್ರೆ ಪೆಡಂಭೂತ ಕೊರೊನಾದಿಂದಾಗಿ ಯುಕೆ ಸರ್ಕಾರವು ಇಡೀ ಭಾರತ ದೇಶವನ್ನು ಕೆಂಪು ಪಟ್ಟಿಯಲ್ಲಿದೆ. ಭಾರತದಿಂದ ಆಗಮಿಸುವವರಿಗೆ ಪ್ರವಾಸ ನಿರ್ಬಂಧವನ್ನು ಹೇರಿದೆ. ಇಂಗ್ಲೆಂಡ್ ಸರ್ಕಾರಕ್ಕೆ ಭಯ ಏನು ಅಂದ್ರೆ ಭಾರತದಲ್ಲಿ ಆರ್ಭಟಿಸುತ್ತಿರುವ ಹೊಸ ರೂಪಾಂತರಿ B.1.617 ಕೊರೊನಾ ಬಗ್ಗೆ. ಏಕೆಂದ್ರೆ ಇಂಗ್ಲೆಂಡ್ನಲ್ಲಿ ಈಗಾಗಲೇ 2323 ಮಂದಿಗೆ B.1.617 ರೂಪಾಂತರಿ ಕೊರೊನಾ ಅಂಟಿಕೊಂಡಿದೆ.
ಬಿಸಿಸಿಐ ಸದ್ಯಕ್ಕೆ 20 ಆಟಗಾರರನ್ನೊಳಗೊಂಡ ಭಾರತ ಟೆಸ್ಟ್ ತಂಡವನ್ನು ಪ್ರಕಟಿಸಿದೆ. ನ್ಯೂಜಿಲ್ಯಾಂಡ್ ವಿರುದ್ಧ ICC World Test Championship 2021 ಫೈನಲ್ ಪಂದ್ಯದ ನಂತರ ಆಗಸ್ಟ್ ತಿಂಗಳಿಂದ ಇಂಗ್ಲೆಂಡ್ ತಂಡದ ವಿರುದ್ಧ 5 ಟೆಸ್ಟ್ ಮ್ಯಾಚ್ಗಳನ್ನು ಆಡಬೇಕಿದೆ.
ಮುಂಬೈನಲ್ಲಿ ನೆಲೆಸಿರುವ ಆಟಗಾರರು ಇದೇ ಬುಧವಾರದಿಂದ ಬಯೋ-ಬಬಲ್ ವ್ಯವಸ್ಥೆಗೆ ಅಂಕಿತವಾಗಲಿದ್ದಾರೆ. ಉಳಿದ ಭಾಗಗಳಿಂದ ಆಗಮಿಸುವ ಇತರೆ ಆಟಗಾರರು ಮೇ 24 ರಿಂದ Mumbai bio-bubble ಪ್ರವೇಶಿಸಲಿದ್ದಾರೆ.
ಅದಾದ ಬಳಿಕ, ಜೂನ್ 18ರ ಮ್ಯಾಚ್ಗೆ ಮುನ್ನ 10 ದಿನಗಳ ಲಘು ಕ್ಯಾರಂಟೈನ್ಗೆ ಒಳಗಾಗಲಿದ್ದಾರೆ. ಫೈನಲ್ ನಡೆಯುವ ಸೌಥಾಂಪ್ಟನ್ ಸಮೀಪದ ಹೋಟೆಲ್ನಲ್ಲಿ ಬಬಲ್ ವ್ಯವಸ್ಥೆಯಲ್ಲಿ ಆಟಗಾರರು ತಂಗಲಿದ್ದಾರೆ. ಅಲ್ಲಿ ಕ್ರಿಕೆಟ್ ಪ್ರಾಕ್ಟೀಸ್ ಮಾಡಬಹುದು.
(BCCI says Indian Test team family members can be with players in Mumbai bio bubble but UK government yet to permit the family members to travel uk for WTC)
Published On - 12:27 pm, Tue, 18 May 21