ಮೆಲ್ಬರ್ನ್​ನಲ್ಲಿ ಭಾರತೀಯ ಕ್ರಿಕೆಟಿಗರಿಂದ ಬೀಫ್ ಸೇವನೆ? ಟ್ವಿಟರ್​ನಲ್ಲಿ ವೈರಲ್ ಆಯ್ತು ಊಟದ ಬಿಲ್

ಟ್ವಿಟರ್​ನಲ್ಲಿ ವೈರಲ್ ಆಗಿರುವ ಬಿಲ್​ನಲ್ಲಿ ಪೋರ್ಕ್ ಕೂಡಾ ಇದೆ. ಹೋಟೆಲ್​ಗೆ ಹೋಗಿ ಬೀಫ್ ಮತ್ತು ಪೋರ್ಕ್ ತಿಂದವರು ಯಾರು? ಎಂದು ಕೆಲವು ನೆಟ್ಟಿಗರು ಪ್ರಶ್ನಿಸಿದ್ದು ಇನ್ನು ಕೆಲವರು ರೋಹಿತ್ ಶರ್ಮಾ ಬೀಫ್ ಸೇವನೆ ಮಾಡುತ್ತಾರೆಯೇ ಎಂದು ಹುಬ್ಬೇರಿಸಿದ್ದಾರೆ.

ಮೆಲ್ಬರ್ನ್​ನಲ್ಲಿ ಭಾರತೀಯ ಕ್ರಿಕೆಟಿಗರಿಂದ ಬೀಫ್ ಸೇವನೆ? ಟ್ವಿಟರ್​ನಲ್ಲಿ ವೈರಲ್ ಆಯ್ತು ಊಟದ ಬಿಲ್
ರೋಹಿತ್ ಶರ್ಮಾ (ಎಡಚಿತ್ರ) ಮತ್ತು ವೈರಲ್ ಆಗಿರುವ ಬಿಲ್
Follow us
ರಶ್ಮಿ ಕಲ್ಲಕಟ್ಟ
| Updated By: ರಾಜೇಶ್ ದುಗ್ಗುಮನೆ

Updated on:Jan 03, 2021 | 3:02 PM

ಮೆಲ್ಬರ್ನ್: ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಟೀಂ ಇಂಡಿಯಾ ಆಟಗಾರರಾದ ರೋಹಿತ್ ಶರ್ಮ, ರಿಷಭ್ ಪಂತ್, ನವದೀಪ್ ಸೈನಿ ಮತ್ತು ಶುಭಮನ್ ಗಿಲ್ ಹೊಸವರ್ಷದ ಮೊದಲ ದಿನದಂದು ಮೆಲ್ಬರ್ನ್ ನಗರದ ಹೋಟೆಲ್​ನಲ್ಲಿ ಊಟ ಮಾಡಿದ ಬಿಲ್​ನ್ನು ಅಭಿಮಾನಿಯೊಬ್ಬರು ಪಾವತಿಸಿದ್ದು ಸುದ್ದಿಯಾದ ಬೆನ್ನಲ್ಲೇ ಇದೀಗ ಅದೇ ಬಿಲ್ ಟ್ವಿಟರ್​ನಲ್ಲಿ ವೈರಲ್ ಆಗಿದೆ.

ಬಿಲ್​ನಲ್ಲಿ ಬೀಫ್ ಇದೆ. ಭಾರತೀಯ ಆಟಗಾರರು ವಿದೇಶದಲ್ಲಿ ಬೀಫ್ ತಿಂದಿದ್ದಾರೆ ಎಂದು ಆರೋಪಿಸಿ ನೆಟ್ಟಿಗರು ಕ್ರಿಕೆಟಿಗರನ್ನು ಟ್ರೋಲ್ ಮಾಡಿದ್ದಾರೆ. ಟ್ವಿಟರ್​ನಲ್ಲಿ ವೈರಲ್ ಆಗಿರುವ ಬಿಲ್ ನಲ್ಲಿ ಪೋರ್ಕ್ ಕೂಡಾ ಇದೆ. ಹೋಟೆಲ್​ಗೆ ಹೋಗಿ ಬೀಫ್ ಮತ್ತು ಪೋರ್ಕ್ ತಿಂದವರು ಯಾರು ಎಂದು ಟ್ವೀಟಿಗರು ಪ್ರಶ್ನಿಸಿದ್ದಾರೆ.

ಕ್ರಿಕೆಟಿಗರು ಹೋಟೆಲ್​ನಲ್ಲಿರುವ ವಿಡಿಯೊವನ್ನು ಕ್ರಿಕೆಟ್ ಅಭಿಮಾನಿಯೊಬ್ಬರು ಸಾಮಾಜಿಕ ಮಾಧ್ಯಮದಲ್ಲಿ ಅಪ್​ಲೋಡ್ ಮಾಡಿದ್ದರು. ಏತನ್ಮಧ್ಯೆ, ಕ್ರಿಕೆಟಿಗರು ಬಯೋ ಸೆಕ್ಯುರಿಟಿ ಪ್ರೊಟೊಕಾಲ್ (ಕೋವಿಡ್ ಸುರಕ್ಷಾ ನಿಯಮ) ಉಲ್ಲಂಘಿಸಿ ಹೋಟೆಲ್​ಗೆ ಹೋಗಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ಈ ವಿಡಿಯೊ ಬಗ್ಗೆ ಕ್ರಿಕೆಟ್ ಆಸ್ಟ್ರೇಲಿಯಾ ಮತ್ತು ಬಿಸಿಸಿಐ ತನಿಖೆ ನಡೆಸುತ್ತಿದ್ದು, ನಮ್ಮ ಆಟಗಾರರು ಯಾವುದೇ ನಿಯಮ ಉಲ್ಲಂಘಿಸಿಲ್ಲ ಎಂದು ಬಿಸಿಸಿಐ ಹೇಳಿದೆ.

India vs Australia Test Series |ಮೆಲ್ಬರ್ನ್​ನಲ್ಲಿ ಭಾರತೀಯ ಆಟಗಾರರ ಊಟದ ಬಿಲ್ ನೀಡಿದ ಭಾರತೀಯ ಅಭಿಮಾನಿ

Published On - 11:36 am, Sun, 3 January 21

ಕುಡಿದ ನಶೆಯಲ್ಲಿ ಏನೇನೋ ಮಾತನಾಡಿದ ಎನ್ನುವ ಕಾರಣಕ್ಕೆ ಹೊಡೆದು ಕೊಂದರು!
ಕುಡಿದ ನಶೆಯಲ್ಲಿ ಏನೇನೋ ಮಾತನಾಡಿದ ಎನ್ನುವ ಕಾರಣಕ್ಕೆ ಹೊಡೆದು ಕೊಂದರು!
ಶ್ರೀರಾಮುಲು-ಜನಾರ್ಧನ ರೆಡ್ಡಿ ಜಗಳದ ಹಿನ್ನೆಲೆಯಲ್ಲಿ ಹಿರಿಯರ ಸಭೆ?
ಶ್ರೀರಾಮುಲು-ಜನಾರ್ಧನ ರೆಡ್ಡಿ ಜಗಳದ ಹಿನ್ನೆಲೆಯಲ್ಲಿ ಹಿರಿಯರ ಸಭೆ?
ಯಾರು ಬಿಗ್ ಬಾಸ್ ಗೆಲ್ತಾರೆ ಅಂತ ನಾನು ಹೇಳಲ್ಲ: ಪ್ರಥಮ್ ಖಡಕ್ ಮಾತು
ಯಾರು ಬಿಗ್ ಬಾಸ್ ಗೆಲ್ತಾರೆ ಅಂತ ನಾನು ಹೇಳಲ್ಲ: ಪ್ರಥಮ್ ಖಡಕ್ ಮಾತು
ನಿಯೋಗ ಹೊತ್ತು ತಂದಿದ್ದ ಕಬ್ಬನ್ನು ಕಚೇರಿಯಲ್ಲೇ ಮುರಿದು ತಿಂದ ಸಿದ್ದರಾಮಯ್ಯ
ನಿಯೋಗ ಹೊತ್ತು ತಂದಿದ್ದ ಕಬ್ಬನ್ನು ಕಚೇರಿಯಲ್ಲೇ ಮುರಿದು ತಿಂದ ಸಿದ್ದರಾಮಯ್ಯ
ಕೆಡಿಪಿ ಸಭೆಗಳನ್ನು ಹಗುರವಾಗಿ ಪರಿಗಣಿಸುವ ಪ್ರವೃತ್ತಿ ನಿಲ್ಲಬೇಕು
ಕೆಡಿಪಿ ಸಭೆಗಳನ್ನು ಹಗುರವಾಗಿ ಪರಿಗಣಿಸುವ ಪ್ರವೃತ್ತಿ ನಿಲ್ಲಬೇಕು
ಸುದೀಪ್ ಬಿಗ್​ಬಾಸ್ ಬಿಡಲು ಅಸಲಿ ಕಾರಣ ಬಿಚ್ಚಿಟ್ಟ ಪ್ರಥಮ್
ಸುದೀಪ್ ಬಿಗ್​ಬಾಸ್ ಬಿಡಲು ಅಸಲಿ ಕಾರಣ ಬಿಚ್ಚಿಟ್ಟ ಪ್ರಥಮ್
ಬೆಂಗಳೂರಿನ ಈ ಮಾರ್ಗದಲ್ಲಿ ಫುಲ್ ಟ್ರಾಫಿಕ್ ಜಾಮ್..!
ಬೆಂಗಳೂರಿನ ಈ ಮಾರ್ಗದಲ್ಲಿ ಫುಲ್ ಟ್ರಾಫಿಕ್ ಜಾಮ್..!
ಮಂತ್ರಾಲಯ ಸಂಸ್ಕೃತ ಶಾಲೆ ವಿದ್ಯಾರ್ಥಿಗಳು ಸಾವು: ಅಪಘಾತಕ್ಕೆ ಕಾರಣವೇನು?
ಮಂತ್ರಾಲಯ ಸಂಸ್ಕೃತ ಶಾಲೆ ವಿದ್ಯಾರ್ಥಿಗಳು ಸಾವು: ಅಪಘಾತಕ್ಕೆ ಕಾರಣವೇನು?
ಒಬ್ಬನಿಗೆ ಮದುವೆಯಾಗಿ ಕೇವಲ 4 ತಿಂಗಳಾಗಿತ್ತು, ಮತ್ತೊಬ್ಬನ ಪತ್ನಿ ಗರ್ಭಿಣಿ!
ಒಬ್ಬನಿಗೆ ಮದುವೆಯಾಗಿ ಕೇವಲ 4 ತಿಂಗಳಾಗಿತ್ತು, ಮತ್ತೊಬ್ಬನ ಪತ್ನಿ ಗರ್ಭಿಣಿ!
ಜಿಟಿಡಿ ಹೇಳಿದ ಧಮ್ ಮಾತಿಗೆ ಬಿಜೆಪಿ ನಾಯಕ ರವಿ ಪ್ರತಿಕ್ರಿಯೆ ನೀಡಲಿಲ್ಲ
ಜಿಟಿಡಿ ಹೇಳಿದ ಧಮ್ ಮಾತಿಗೆ ಬಿಜೆಪಿ ನಾಯಕ ರವಿ ಪ್ರತಿಕ್ರಿಯೆ ನೀಡಲಿಲ್ಲ