AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸ್ಕೇಟಿಂಗ್​ನಲ್ಲಿ ಗಿನ್ನಿಸ್​ ದಾಖಲೆ ನಿರ್ಮಿಸಿದ ಕುಂದಾನಗರಿ ಕುವರ ಅಭಿಷೇಕ್ ನವಲೆ; ದರ್ಶನ್​ ನೀಡಿದ್ದರು ನೆರವು

ಅಭಿಷೇಕ್​ ನವಲೆ ಸದ್ಯ ಬೆಳಗಾವಿಯ ಖಾಸಗಿ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದಾರೆ. ಈವರೆಗೆ ಅಂತಾರಾಷ್ಟ್ರೀಯ ಸ್ಕೇಟಿಂಗ್​ನ ವಿವಿಧ ವಿಭಾಗಗಳಲ್ಲಿ ಮೂರು ಬಾರಿ ವಿಶ್ವದಾಖಲೆ, 2 ಸಲ ಲಿಮ್ಕಾ ದಾಖಲೆ ನಿರ್ಮಿಸಿದ್ದಾರೆ.

ಸ್ಕೇಟಿಂಗ್​ನಲ್ಲಿ ಗಿನ್ನಿಸ್​ ದಾಖಲೆ ನಿರ್ಮಿಸಿದ ಕುಂದಾನಗರಿ ಕುವರ ಅಭಿಷೇಕ್ ನವಲೆ; ದರ್ಶನ್​ ನೀಡಿದ್ದರು ನೆರವು
ಅಭಿಷೇಕ್​ ನವಲೆ
Follow us
Lakshmi Hegde
| Updated By: ಸಾಧು ಶ್ರೀನಾಥ್​

Updated on: Jan 06, 2021 | 3:41 PM

ಕುಂದಾನಗರಿಯ ಕುವರನೊಬ್ಬ ಇನ್​ಲೈನ್ ಸ್ಕೇಟಿಂಗ್​ನ 100 ಮೀಟರ್​ ವಿಭಾಗದಲ್ಲಿ ಗಿನ್ನಿಸ್​ ದಾಖಲೆ ನಿರ್ಮಿಸಿದ್ದಾನೆ. ಚಿಕ್ಕಂದಿನಿಂದಲೂ ಸ್ಕೇಟಿಂಗ್​ನಲ್ಲಿ ತುಂಬ ಆಸಕ್ತಿ ಹೊಂದಿದ್ದ ಯುವಕ, ಇದೀಗ 100 ಮೀಟರ್​ ದೂರವನ್ನು 12.97 ಫ್ರಾಕ್ಷನ್​ ಆಫ್​ ಸೆಕೆಂಡ್​ನಲ್ಲಿ ಕ್ರಮಿಸುವ ಮೂಲಕ, ಈ ಹಿಂದೆ ಆಸ್ಟ್ರೇಲಿಯಾದ ಡೆವಿಡ್​ ಸೆಲ್ಸಬರಿ ಹೆಸರಲ್ಲಿದ್ದ ದಾಖಲೆಯನ್ನು ಮುರಿದಿದ್ದಾರೆ. ಡೆವಿಡ್​ ಸೆಲ್ಸಬರಿ 100 ಮೀ. ದೂರವನ್ನು 13.24 ಸೆಕೆಂಡ್​​ನಲ್ಲಿ ಕ್ರಮಿಸಿದ್ದರು.

ಇಷ್ಟು ದೊಡ್ಡ ಸಾಧನೆ ಮಾಡಿ ಗಿನ್ನಿಸ್ ದಾಖಲೆ ಪಟ್ಟಿಗೆ ಸೇರಿದವರು ಬೆಳಗಾವಿಯ ಅಭಿಷೇಕ್​ ನವಲೆ. ತಂದೆ ವಾಯವ್ಯ ಸಾರಿಗೆಯಲ್ಲಿ (ಎನ್‌ಡಬ್ಲ್ಯೂಕೆಆರ್‌ಟಿಸಿ) ಚಾಲಕರು ಮತ್ತು ತಾಯಿ ಗೃಹಿಣಿ. 14 ವರ್ಷಗಳಿಂದಲೂ ಸ್ಕೇಟಿಂಗ್ ಅಭ್ಯಾಸ ಮಾಡುತ್ತ ಬಂದಿರುವ ಈತ ಹಲವು ಸಾಧನೆಗಳನ್ನು ಮಾಡಿದ್ದಾರೆ.

ಹಾಗೇ ನವೆಂಬರ್​ 18ರಂದು ಡೆವಿಡ್​ ದಾಖಲೆಯನ್ನು ಬ್ರೇಕ್​ ಮಾಡಿದ್ದಾರೆ. ಇವರ ಸ್ಕೇಟಿಂಗ್​ ವಿಡಿಯೋ ಮತ್ತು ಸಂಬಂಧಪಟ್ಟ ದಾಖಲೆಗಳನ್ನು ಆನ್​ಲೈನ್​ ಮೂಲಕ ಸಲ್ಲಿಸಲಾಗಿತ್ತು. ಅದನ್ನು ಪರಿಶೀಲಿಸಿ, ಗಿನ್ನಿಸ್​ ದಾಖಲೆ ಪ್ರಮಾಣಪತ್ರವನ್ನು ಅಭಿಷೇಕ್​ಗೆ ನೀಡಲಾಗಿದೆ.

ನಟ ದರ್ಶನ್ ನೀಡಿದ್ದರು ನೆರವು ಅಭಿಷೇಕ್​ ಬೆಳಗಾವಿಯ ರೋಲರ್ ಸ್ಕೇಟಿಂಗ್ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದಾರೆ. 2012ರಲ್ಲಿ ಪೋರ್ಚುಗಲ್‍ನಲ್ಲಿ ನಡೆದ ಅಂತಾರಾಷ್ಟ್ರೀಯ ಸ್ಕೇಟಿಂಗ್‍ಗೂ ಆಯ್ಕೆಯಾಗಿದ್ದರು. ಇದಕ್ಕೂ ಮೊದಲು ಅವರ ಬಳಿ ಇನ್​ಲೈನ್​ ಸ್ಕೇಟಿಂಗ್ ಇರಲಿಲ್ಲ. ಈ ಬಡವರ್ಗದ ಪ್ರತಿಭಾವಂತನ ಬಗ್ಗೆ, ಆತನ ಬಳಿ ಇನ್​ಲೈನ್ ಸ್ಕೇಟ್​ ಇಲ್ಲದಿರುವ ಬಗ್ಗೆ 2011ರಲ್ಲಿ ಟಿವಿ9 ವರದಿ ಮಾಡಿತ್ತು.

ಅದನ್ನು ನೋಡಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್​ ಸಂಗೊಳ್ಳಿ ರಾಯಣ್ಣ ಚಿತ್ರದ ಶೂಟಿಂಗ್​ಗೆ ಬೆಳಗಾವಿಗೆ ಹೋಗಿದ್ದ ಸಂದರ್ಭದಲ್ಲಿ ಅಭಿಷೇಕ್​ಗೆ ಹಣ ನೀಡಿದ್ದರು. ಅವರು ನೀಡಿದ್ದ ಹಣದಲ್ಲೇ ಅಭಿಷೇಕ್​ ಇನ್​ಲೈನ್​ ಸ್ಕೇಟ್​ ಖರೀದಿಸಿದ್ದರು. ಅದಾದ ಬಳಿಕ ಪೋರ್ಚುಗಲ್‍ನಲ್ಲಿ ನಡೆದ ಅಂತಾರಾಷ್ಟ್ರೀಯ ಸ್ಕೇಟಿಂಗ್‍ನಲ್ಲಿ ಸ್ಪರ್ಧಿಸಿ, ನಾಲ್ಕನೇ ಸ್ಥಾನವನ್ನೂ ಗಳಿಸಿದ್ದಾರೆ.

ದ್ವಿತೀಯ ಪಿಯುಸಿ ವ್ಯಾಸಂಗ ಅಭಿಷೇಕ್​ ನವಲೆ ಸದ್ಯ ಬೆಳಗಾವಿಯ ಖಾಸಗಿ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದಾರೆ. ಈವರೆಗೆ ಅಂತಾರಾಷ್ಟ್ರೀಯ ಸ್ಕೇಟಿಂಗ್​ನ ವಿವಿಧ ವಿಭಾಗಗಳಲ್ಲಿ ಮೂರು ಬಾರಿ ವಿಶ್ವದಾಖಲೆ, 2 ಸಲ ಲಿಮ್ಕಾ ದಾಖಲೆ ನಿರ್ಮಿಸಿದ್ದಾರೆ.

ಬೆಳಗಾವಿಯಿಂದ -ಬೆಂಗಳೂರಿಗೆ ಹಾಗೂ ಬೆಳಗಾವಿಯಿಂದ ದೆಹಲಿಯವರೆಗೆ ಸ್ಕೇಟಿಂಗ್​ ರಿಲೆಯಲ್ಲೂ ಪಾಲ್ಗೊಂಡಿದ್ದರು. ಇದೀಗ ಇನ್​ಲೈನ್​ ಸ್ಕೇಟಿಂಗ್​ನಲ್ಲಿಯೂ ಗಿನ್ನಿಸ್ ದಾಖಲೆ ನಿರ್ಮಾಣ ಮಾಡಿದ್ದಾರೆ. ತನ್ನ ಈ ಸಾಧನೆಗೆ ತಂದೆ-ತಾಯಿ, ಮಾರ್ಗದರ್ಶಕರಾದ ಸೂರ್ಯಕಾಂತ್ ಹಿಂಡಲಗೇಕರ್ ಕಾರಣ ಎನ್ನುತ್ತಾರೆ ಅಭಿಷೇಕ್​

ಬೆಳಗಾವಿಯ ಖಾಸಗಿ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿರುವ ಅಭಿಷೇಕ ನವಲೆ ಈವರೆಗೆ ಸ್ಕೇಟಿಂಗ್‍ನಲ್ಲಿ ಅಂತಾರಾಷ್ಟ್ರೀಯ ವೇಗದ ಸ್ಕೇಟಿಂಗ್ ಸ್ಪರ್ಧೆ, ಸ್ಕೇಟಿಂಗ್‍ನ ವಿವಿಧ ವಿಭಾಗಗಳಲ್ಲಿ ಮೂರು ಸಲ ವಿಶ್ವದಾಖಲೆ, 2 ಸಲ ಲಿಮ್ಕಾ ದಾಖಲೆ, ಬೆಳಗಾವಿಯಿಂದ‌-ಬೆಂಗಳೂರಿಗೆ ಸ್ಕೇಟಿಂಗ್ ರಿಲೆ, ಬೆಳಗಾವಿಯಿಂದ ದೆಹಲಿಯವರೆಗೆ ಸ್ಕೇಟಿಂಗ್ ರಿಲೆಯಲ್ಲಿ ಪಾಲ್ಗೊಂಡಿದ್ದಾರೆ. ಇದೀಗ ಇನ್‍ಲೈನ್ ಸ್ಕೇಟಿಂಗ್‍ನಲ್ಲಿಯೂ ಗಿನ್ನಿಸ್ ದಾಖಲೆ ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.

ಹೊಸ ಪಕ್ಷ ಕಟ್ಟೇನು, ಆದರೆ ಕಾಂಗ್ರೆಸ್ ಮಾತ್ರ ಸೇರಲ್ಲ: ಬಸನಗೌಡ ಯತ್ನಾಳ್
ಹೊಸ ಪಕ್ಷ ಕಟ್ಟೇನು, ಆದರೆ ಕಾಂಗ್ರೆಸ್ ಮಾತ್ರ ಸೇರಲ್ಲ: ಬಸನಗೌಡ ಯತ್ನಾಳ್
ಕಾರಿಗೆ ಅಪರೇಷನ್ ಸಿಂಧೂರ್ ಚಿತ್ರಗಳು, ಗಮನಸೆಳೆದ ಬಿಜೆಪಿ ನಾಯಕನ ಥಾರ್
ಕಾರಿಗೆ ಅಪರೇಷನ್ ಸಿಂಧೂರ್ ಚಿತ್ರಗಳು, ಗಮನಸೆಳೆದ ಬಿಜೆಪಿ ನಾಯಕನ ಥಾರ್
ಚಿಕ್ಕಬಳ್ಳಾಪುರ ಎಸ್​ಪಿ ಕಚೇರಿಗೆ ಬಂದು ಭದ್ರತೆ ಕೋರಿದ ಯುವಕ-ಯುವತಿ
ಚಿಕ್ಕಬಳ್ಳಾಪುರ ಎಸ್​ಪಿ ಕಚೇರಿಗೆ ಬಂದು ಭದ್ರತೆ ಕೋರಿದ ಯುವಕ-ಯುವತಿ
ಪ್ರಧಾನಿ ಮೋದಿ ಪಾದಗಳಿಗೆ ಸೇನೆ ನಮಸ್ಕರಿಸುತ್ತಿದೆ ಎಂದ ಜಗದೀಶ್ ದೇವ್ಡಾ
ಪ್ರಧಾನಿ ಮೋದಿ ಪಾದಗಳಿಗೆ ಸೇನೆ ನಮಸ್ಕರಿಸುತ್ತಿದೆ ಎಂದ ಜಗದೀಶ್ ದೇವ್ಡಾ
ಸಾವಿಗೂ ಮುನ್ನ ಗೆಳೆಯನೊಟ್ಟಿಗೆ ಏನು ಮಾತನಾಡಿದ್ದ ರಾಕೇಶ್ ಪೂಜಾರಿ
ಸಾವಿಗೂ ಮುನ್ನ ಗೆಳೆಯನೊಟ್ಟಿಗೆ ಏನು ಮಾತನಾಡಿದ್ದ ರಾಕೇಶ್ ಪೂಜಾರಿ
ಸಂಪುಟ ಪುನಾರಚನೆಯಾದಾಗ ನನಗೆ ಮಂತ್ರಿ ಸ್ಥಾನ ನೀಡಬಹುದು: ಶಿವಲಿಂಗೇಗೌಡ
ಸಂಪುಟ ಪುನಾರಚನೆಯಾದಾಗ ನನಗೆ ಮಂತ್ರಿ ಸ್ಥಾನ ನೀಡಬಹುದು: ಶಿವಲಿಂಗೇಗೌಡ
ಜಗದೀಶ್ ಶೆಟ್ಟರ್ ಸಿಎಂ ಆದ ನಂತರ ಮಂತ್ರಿಯಾಗಿ ಕೆಲಸ ಮಾಡಿದವರು: ಹೆಬ್ಬಾಳ್ಕರ್
ಜಗದೀಶ್ ಶೆಟ್ಟರ್ ಸಿಎಂ ಆದ ನಂತರ ಮಂತ್ರಿಯಾಗಿ ಕೆಲಸ ಮಾಡಿದವರು: ಹೆಬ್ಬಾಳ್ಕರ್
ಹಿಂದೆ ಬರುತ್ತಿದ್ದ ಸ್ಕೂಟಿ ಮೇಲೆ ಹತ್ತಿದ ಟ್ರಕ್; ಪವಾಡದಂತೆ ಪಾರಾದ ಮಹಿಳೆ
ಹಿಂದೆ ಬರುತ್ತಿದ್ದ ಸ್ಕೂಟಿ ಮೇಲೆ ಹತ್ತಿದ ಟ್ರಕ್; ಪವಾಡದಂತೆ ಪಾರಾದ ಮಹಿಳೆ
ಸಿಂಹರಾಶಿಗೆ ಗುರುಬಲ ಶುರು; ಅದೃಷ್ಟ ಕೂಡಿ ಬರಲಿದೆ!
ಸಿಂಹರಾಶಿಗೆ ಗುರುಬಲ ಶುರು; ಅದೃಷ್ಟ ಕೂಡಿ ಬರಲಿದೆ!
ಕಳೆದ ಚುನಾವಣೆಯಲ್ಲಿ ರೆಡ್ಡಿಗೆ ಸಹಾಯ ಮಾಡಿದ ಮಾತು ಸುಳ್ಳು: ಸಿದ್ದರಾಮಯ್ಯ
ಕಳೆದ ಚುನಾವಣೆಯಲ್ಲಿ ರೆಡ್ಡಿಗೆ ಸಹಾಯ ಮಾಡಿದ ಮಾತು ಸುಳ್ಳು: ಸಿದ್ದರಾಮಯ್ಯ