ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ಅರುಣ್ ಜೇಟ್ಲಿ ಪ್ರತಿಮೆ; ಸ್ಪಿನ್ ಮಾಂತ್ರಿಕ ಬಿಶನ್ ಸಿಂಗ್ ಬೇಡಿಗೆ ಬೇಸರ, ಕಾರಣವೇನು?

ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಅಸೋಸಿಯೇಷನ್‌ನ (ಡಿಡಿಸಿಎ) ಸಂಸ್ಕೃತಿಯನ್ನು ಖಂಡಿಸಿರುವ ಬಿಶನ್ ಸಿಂಗ್ ಬೇಡಿ, ಡಿಡಿಸಿಎ ಸ್ವಜನಪಕ್ಷಪಾತವನ್ನು ಉತ್ತೇಜಿಸುತ್ತಿದೆ ಜೊತೆಗೆ ನಿರ್ವಾಹಕರನ್ನು ಕ್ರಿಕೆಟಿಗರಿಗಿಂತ ಮುಂದಿಡುತ್ತಿದೆ ಎಂದು ಆರೋಪಿಸಿದ್ದಾರೆ.

ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ಅರುಣ್ ಜೇಟ್ಲಿ ಪ್ರತಿಮೆ; ಸ್ಪಿನ್ ಮಾಂತ್ರಿಕ ಬಿಶನ್ ಸಿಂಗ್ ಬೇಡಿಗೆ ಬೇಸರ, ಕಾರಣವೇನು?
ಬಿಶನ್ ಸಿಂಗ್ ಬೇಡಿ ಮತ್ತು ಅರುಣ್ ಜೇಟ್ಲಿ
Follow us
ಪೃಥ್ವಿಶಂಕರ
|

Updated on: Dec 23, 2020 | 1:39 PM

ನವದೆಹಲಿ: ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ದಿವಂಗತ ಮಾಜಿ ಅಧ್ಯಕ್ಷ ಅರುಣ್ ಜೇಟ್ಲಿಯ ಪ್ರತಿಮೆ ಸ್ಥಾಪನೆಗೆ ಡಿಡಿಸಿಎ ವಿರುದ್ಧ ಸ್ಪಿನ್ ದಂತಕಥೆ ಬಿಶನ್ ಸಿಂಗ್ ಬೇಡಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲ.. ಕೋಟ್ಲಾ ಮೈದಾನದಲ್ಲಿ 2017 ರಲ್ಲಿ ಪ್ರೇಕ್ಷಕರ ಸ್ಟಾಂಡ್​ಗೆ ತಮ್ಮ ಹೆಸರಿಡಲಾಗಿದ್ದು, ಅದನ್ನು ತೆಗೆದುಹಾಕುವಂತೆ ಸೂಚಿಸಿದ್ದಾರೆ.

DDCA ಸದಸ್ಯತ್ವವನ್ನೂ ತ್ಯಜಿಸುವೆ ಬಿಡಿ ಎಂದ ಬೇಡಿ ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಅಸೋಸಿಯೇಷನ್‌ನ (ಡಿಡಿಸಿಎ) ಸಂಸ್ಕೃತಿಯನ್ನು ಖಂಡಿಸಿರುವ ಬಿಶನ್ ಸಿಂಗ್ ಬೇಡಿ, ಡಿಡಿಸಿಎ ಸ್ವಜನ ಪಕ್ಷಪಾತವನ್ನು ಉತ್ತೇಜಿಸುತ್ತಿದೆ. ಜೊತೆಗೆ ಆಡಳಿತ ನಿರ್ವಾಹಕರನ್ನು ಆಟಗಾರರಿಗಿಂತ ಹೆಚ್ಚು ಎಂದು ಬಿಂಬಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಅಲ್ಲದೆ, ನನ್ನ ಡಿಡಿಸಿಎ ಸದಸ್ಯತ್ವವನ್ನೂ ನಾನು ತ್ಯಜಿಸುತ್ತೇನೆ ಎಂದು ಬೇಡಿ ತಮ್ಮ ಪತ್ರದಲ್ಲಿ ಬರೆದಿದ್ದಾರೆ.

ತಾನು ಎಂದಿಗೂ ಅರುಣ್ ಜೇಟ್ಲಿ ಕಾರ್ಯಶೈಲಿಯ ಅಭಿಮಾನಿಯಲ್ಲ ಬೇಡಿ ಇನ್ನೂ ಮುಂದುವರೆದು, ತನ್ನ ನಿರ್ಧಾರವನ್ನು ಸಂದರ್ಭಕ್ಕೆ ತಕ್ಕಂತೆ ಹೇಳುವುದಾದರೆ.. ತಾನು ಎಂದಿಗೂ ಅರುಣ್ ಜೇಟ್ಲಿ ಕಾರ್ಯಶೈಲಿಯ ಅಭಿಮಾನಿಯಲ್ಲ ಮತ್ತು ನನಗೆ ಒಪ್ಪದ ಯಾವುದೇ ನಿರ್ಧಾರವನ್ನು ನಾನು ಯಾವಾಗಲೂ ವಿರೋಧಿಸುತ್ತೇನೆ ಎಂದಿದ್ದಾರೆ.

ದಿವಂಗತ ಅರುಣ್ ಜೇಟ್ಲಿ 1999 ರಿಂದ 2013 ರವರೆಗೆ ಅಂದರೆ 14 ವರ್ಷಗಳ ಕಾಲ ಡಿಡಿಸಿಎ ಅಧ್ಯಕ್ಷರಾಗಿದ್ದರು. ಅವರ ಸ್ಮರಣೆಯನ್ನು ಗೌರವಿಸಲು ಕೋಟ್ಲಾದಲ್ಲಿ ಆರು ಅಡಿ ಪ್ರತಿಮೆಯನ್ನು ಸ್ಥಾಪಿಸಲು ಡಿಡಿಸಿಎ ಯೋಜಿಸಿದೆ. ಈ ತೀರ್ಮಾನದಿಂದ ಕೋಪಗೊಂಡಿರುವ ಬಿಶನ್ ಸಿಂಗ್ ಬೇಡಿ ಪ್ರೇಕ್ಷಕರ ಗ್ಯಾಲರಿಯಲ್ಲಿರುವ ತಮ್ಮ ಹೆಸರನ್ನು ತೆಗೆಯುವಂತೆ ಡಿಡಿಸಿಎಗೆ ಇದೀಗ ಮನವಿ ಮಾಡಿದ್ದಾರೆ.

ಅರುಣ್ ಜೇಟ್ಲಿ ಮೈದಾನ ಉದಯ, ಭಾವುಕ ಪತ್ನಿ ಕಣ್ಣೀರು

ಫಿರೋಜ್ ಷಾ ಕೋಟ್ಲಾ ಇನ್ನು ಅರುಣ್ ಜೇಟ್ಲಿ ಸ್ಟೇಡಿಯಂ

ಕ್ಷಣಾರ್ಧದಲ್ಲಿ ಅತ್ಯಾದ್ಭುತ ಕ್ಯಾಚ್ ಹಿಡಿದ ಮ್ಯಾಕ್ಸ್​ವೆಲ್
ಕ್ಷಣಾರ್ಧದಲ್ಲಿ ಅತ್ಯಾದ್ಭುತ ಕ್ಯಾಚ್ ಹಿಡಿದ ಮ್ಯಾಕ್ಸ್​ವೆಲ್
ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ