Commonwealth Games 2022 Medal Tally: ಟಾಪ್-8ರಲ್ಲಿ ಭಾರತ, ಆಸ್ಟ್ರೇಲಿಯಾ ನಂ.1; ಪದಕ ಪಟ್ಟಿ ಹೀಗಿದೆ

| Updated By: ಪೃಥ್ವಿಶಂಕರ

Updated on: Jul 31, 2022 | 2:23 PM

Commonwealth Games 2022 Medal Tally: ಎರಡನೇ ದಿನದ ಅಂತ್ಯಕ್ಕೆ ಒಟ್ಟು 115 ಪದಕಗಳನ್ನು ವಿತರಿಸಲಾಗಿದ್ದು, 22 ದೇಶಗಳು ಖಾತೆ ತೆರೆದಿವೆ. ಈ 115 ಪದಕಗಳಲ್ಲಿ 39 ಚಿನ್ನ, 39 ಬೆಳ್ಳಿ ಮತ್ತು 37 ಕಂಚಿನ ಪದಕಗಳನ್ನು ಗೆದ್ದಿದ್ದಾರೆ.

Commonwealth Games 2022 Medal Tally: ಟಾಪ್-8ರಲ್ಲಿ ಭಾರತ, ಆಸ್ಟ್ರೇಲಿಯಾ ನಂ.1; ಪದಕ ಪಟ್ಟಿ ಹೀಗಿದೆ
ಮೀರಾಬಾಯಿ ಚಾನು
Follow us on

ಬರ್ಮಿಂಗ್ಹ್ಯಾಮ್ ಕಾಮನ್ವೆಲ್ತ್ ಗೇಮ್ಸ್ 2022 (Commonwealth Games 2022 )ರ ಎರಡನೇ ದಿನ ಪೂರ್ಣಗೊಂಡಿದ್ದು, ಭಾರತ ತನ್ನ ಪದಕದ ಖಾತೆ ತೆರೆದಿದೆ. ಜುಲೈ 30 ರ ಶನಿವಾರ, ಗೇಮ್ಸ್‌ನ ಎರಡನೇ ದಿನ, ಭಾರತವು ವೇಟ್‌ಲಿಫ್ಟಿಂಗ್​ನಲ್ಲಿ (weightlifting) ಚಿನ್ನ, ಬೆಳ್ಳಿ ಮತ್ತು ಕಂಚು ಗೆದ್ದಿತು. ಈ ಮೂಲಕ ಭಾರತ ತಂಡವೂ ಪದಕ ಪಟ್ಟಿಗೆ ಪ್ರವೇಶಿಸಿದೆ. ಅದೇ ಸಮಯದಲ್ಲಿ, ನಿರೀಕ್ಷೆಯ ಪ್ರಕಾರ, ಆಸ್ಟ್ರೇಲಿಯಾ ಮೊದಲ ಸ್ಥಾನವನ್ನು ಉಳಿಸಿಕೊಂಡಿದೆ. ಈಜು ವಿಭಾಗದಲ್ಲಿ ಆಸ್ಟ್ರೇಲಿಯಾ ಒಟ್ಟು 13 ಚಿನ್ನದೊಂದಿಗೆ ಅಗ್ರಸ್ಥಾನದಲ್ಲಿ ಉತ್ತಮ ಮುನ್ನಡೆ ಸಾಧಿಸಿದೆ.

ಟಾಪ್ 10 ರಲ್ಲಿ ಭಾರತ

ಇದನ್ನೂ ಓದಿ
CWG 2022: ಭಾರತಕ್ಕೆ ಮೊದಲ ಚಿನ್ನದ ಪದಕ; ವೇಟ್‌ಲಿಫ್ಟಿಂಗ್​ನಲ್ಲಿ ಚಿನ್ನ ಗೆದ್ದ ಮೀರಾಬಾಯಿ ಚಾನು
CWG 2022: ಕಾಮನ್​ವೆಲ್ತ್​​ನಲ್ಲಿ ಕಂಚು ಗೆದ್ದ ಡ್ರೈವರ್ ಮಗ; ಕನ್ನಡಿಗನ ಸಾಧನೆಯ ಬಗ್ಗೆ ನಿಮಗೆಷ್ಟು ಗೊತ್ತು?
CWG 2022: ಕೇವಲ ಒಂದೇ ಒಂದು ಕೆ.ಜಿ ಭಾರ ಪದಕದ ಬಣ್ಣವನ್ನೇ ಬದಲಾಯಿಸಿತು..!

ಶನಿವಾರ, ಭಾರತ ಎಲ್ಲಾ ನಾಲ್ಕು ವೇಟ್‌ಲಿಫ್ಟಿಂಗ್ ಸ್ಪರ್ಧೆಗಳಲ್ಲಿ ಪದಕಗಳೊಂದಿಗೆ ಪದಾರ್ಪಣೆ ಮಾಡಿತು. ಭಾರತ ಇದುವರೆಗೆ 1 ಚಿನ್ನ, 2 ಬೆಳ್ಳಿ ಹಾಗೂ 1 ಕಂಚಿನ ಪದಕ ಗೆದ್ದಿದೆ. ಈ ಮೂಲಕ ಭಾರತ ಟಾಪ್ 10ರಲ್ಲಿ ಸ್ಥಾನ ಪಡೆದಿದ್ದು, ಪ್ರಸ್ತುತ ಎಂಟನೇ ಸ್ಥಾನದಲ್ಲಿದೆ. ಸ್ಟಾರ್ ವೇಟ್‌ಲಿಫ್ಟರ್ ಮೀರಾಬಾಯಿ ಚಾನು 49 ಕೆಜಿ ವಿಭಾಗದಲ್ಲಿ ಭಾರತಕ್ಕೆ ಏಕೈಕ ಚಿನ್ನದ ಪದಕವನ್ನು ಗೆದ್ದುಕೊಟ್ಟರು.

ಕಾಂಗರೂಗಳು ನಂ.1

ಆಸ್ಟ್ರೇಲಿಯಾ 13 ಚಿನ್ನ ಸೇರಿದಂತೆ ಒಟ್ಟು 32 ಪದಕಗಳೊಂದಿಗೆ ಮೊದಲ ಸ್ಥಾನದಲ್ಲಿದೆ. ಚಿನ್ನ ಮತ್ತು ಒಟ್ಟು ಪದಕಗಳೆರಡರಲ್ಲೂ ಆಸ್ಟ್ರೇಲಿಯಾ ಮೊದಲ ಸ್ಥಾನದಲ್ಲಿದೆ. ಆಸ್ಟ್ರೇಲಿಯದ ಯಶಸ್ಸಿಗೆ 8 ಚಿನ್ನ ಸೇರಿದಂತೆ ಒಟ್ಟು 22 ಪದಕಗಳು ಎಂದಿನಂತೆ ಈಜು ವಿಭಾಗದಲ್ಲಿ ಬಂದವು. ನ್ಯೂಜಿಲೆಂಡ್ ಎರಡನೇ ಸ್ಥಾನದಲ್ಲಿದ್ದು, ಆತಿಥೇಯ ಇಂಗ್ಲೆಂಡ್ ಮೂರನೇ ಸ್ಥಾನದಲ್ಲಿದೆ.

ಎರಡನೇ ದಿನದ ಅಂತ್ಯಕ್ಕೆ ಒಟ್ಟು 115 ಪದಕಗಳನ್ನು ವಿತರಿಸಲಾಗಿದ್ದು, 22 ದೇಶಗಳು ಖಾತೆ ತೆರೆದಿವೆ. ಈ 115 ಪದಕಗಳಲ್ಲಿ 39 ಚಿನ್ನ, 39 ಬೆಳ್ಳಿ ಮತ್ತು 37 ಕಂಚಿನ ಪದಕಗಳನ್ನು ಗೆದ್ದಿದ್ದಾರೆ.

ಇವರು ಭಾರತದ ಪದಕ ವಿಜೇತರು

ಸಂಕೇತ್ ಸರ್ಗರ್ ಭಾರತಕ್ಕೆ ಮೊದಲ ಪದಕ ಗೆದ್ದುಕೊಟ್ಟರು. 21ರ ಹರೆಯದ ವೇಟ್ ಲಿಫ್ಟರ್ 55 ಕೆಜಿ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ. ಇದಾದ ಬಳಿಕ ಪುರುಷರ ವಿಭಾಗದಲ್ಲಿ ಗುರುರಾಜ ಪೂಜಾರಿ 61 ಕೆಜಿ ವಿಭಾಗದಲ್ಲಿ ಕಂಚು ಗೆದ್ದರು. ಮೀರಾಬಾಯಿ ಚಾನು ಮೂರನೇ ಪದಕ ಮತ್ತು ದೊಡ್ಡ ಯಶಸ್ಸನ್ನು ಪಡೆದರು. ಟೋಕಿಯೊ ಒಲಿಂಪಿಕ್ ಪದಕ ವಿಜೇತೆ ಮೀರಾಬಾಯಿ ಸತತ ಎರಡನೇ ಗೇಮ್ಸ್‌ನಲ್ಲಿ ಚಿನ್ನ ಮತ್ತು ಸತತ ಮೂರನೇ ಪದಕ ಗೆಲ್ಲುವ ಮೂಲಕ ತಮ್ಮ ಯಶಸ್ಸಿನ ಕಥೆಯನ್ನು ಮುಂದುವರೆಸಿದರು. ನಂತರ ದಿನದ ಕೊನೆಯ ಸ್ಪರ್ಧೆಯಲ್ಲಿ ಬಿಂದಿಯಾರಾಣಿ ಮಹಿಳೆಯರ 55 ಕೆಜಿಯಲ್ಲಿ 202 ಕೆಜಿ ತೂಕದೊಂದಿಗೆ ಬೆಳ್ಳಿ ಪದಕ ಗೆದ್ದು ಭಾರತಕ್ಕೆ ಶುಭ ದಿನವನ್ನು ಕೊನೆಗೊಳಿಸಿದರು.

Published On - 2:23 pm, Sun, 31 July 22