CWG 2022 Hockey: ಹರ್ಮನ್‌ಪ್ರೀತ್ ಸಿಂಗ್ ಹ್ಯಾಟ್ರಿಕ್ ಗೋಲು; ಸೆಮಿಫೈನಲ್​ ಪ್ರವೇಶಿಸಿದ ಭಾರತ ಪುರುಷ ಹಾಕಿ ತಂಡ

CWG 2022 Hockey: 2022 ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಐತಿಹಾಸಿಕ ಕಂಚಿನ ಪದಕವನ್ನು ಗೆದ್ದು ಒಂದು ವರ್ಷ ಪೂರ್ಣಗೊಳ್ಳುವ ಒಂದು ದಿನ ಮುಂಚಿತವಾಗಿ, ಭಾರತೀಯ ಪುರುಷರ ಹಾಕಿ ತಂಡವು 2022 ರ ಕಾಮನ್‌ವೆಲ್ತ್ ಗೇಮ್ಸ್‌ನ ಸೆಮಿಫೈನಲ್‌ಗೆ ಭರ್ಜರಿ ಗೆಲುವಿನೊಂದಿಗೆ ಪ್ರವೇಶಿಸಿತು.

CWG 2022 Hockey: ಹರ್ಮನ್‌ಪ್ರೀತ್ ಸಿಂಗ್ ಹ್ಯಾಟ್ರಿಕ್ ಗೋಲು; ಸೆಮಿಫೈನಲ್​ ಪ್ರವೇಶಿಸಿದ ಭಾರತ ಪುರುಷ ಹಾಕಿ ತಂಡ
men's hockey team
Updated By: ಪೃಥ್ವಿಶಂಕರ

Updated on: Aug 04, 2022 | 9:08 PM

2022 ಟೋಕಿಯೊ ಒಲಿಂಪಿಕ್ಸ್‌ನಲ್ಲಿ (Tokyo Olympics 2022) ಐತಿಹಾಸಿಕ ಕಂಚಿನ ಪದಕವನ್ನು ಗೆದ್ದು ಒಂದು ವರ್ಷ ಪೂರ್ಣಗೊಳ್ಳುವ ಒಂದು ದಿನ ಮುಂಚಿತವಾಗಿ, ಭಾರತೀಯ ಪುರುಷರ ಹಾಕಿ ತಂಡವು (Indian men’s hockey team) 2022 ರ ಕಾಮನ್‌ವೆಲ್ತ್ ಗೇಮ್ಸ್‌ನ (Commonwealth Games 2022) ಸೆಮಿಫೈನಲ್‌ಗೆ ಭರ್ಜರಿ ಗೆಲುವಿನೊಂದಿಗೆ ಪ್ರವೇಶಿಸಿತು. ಸ್ಟಾರ್ ಡಿಫೆಂಡರ್ ಹರ್ಮನ್‌ಪ್ರೀತ್ ಸಿಂಗ್ ಅವರ ಅಮೋಘ ಹ್ಯಾಟ್ರಿಕ್ ಹಿನ್ನಲೆಯಲ್ಲಿ ಭಾರತ ತನ್ನ ಕೊನೆಯ ಪೂಲ್ ಬಿ ಪಂದ್ಯದಲ್ಲಿ ವೇಲ್ಸ್ ತಂಡವನ್ನು 4-1 ಗೋಲುಗಳಿಂದ ಸೋಲಿಸಿತು. ಪೂಲ್ ಹಂತದಲ್ಲಿ 4 ಪಂದ್ಯಗಳಲ್ಲಿ ಟೀಂ ಇಂಡಿಯಾ ಒಟ್ಟು 3 ಪಂದ್ಯಗಳನ್ನು ಗೆದ್ದಿದ್ದರೆ, 1 ಡ್ರಾ ಆಗಿತ್ತು.

ಘಾನಾ ತಂಡವನ್ನು 11-0 ಮತ್ತು ಕೆನಡಾವನ್ನು 8-0 ಅಂತರದಿಂದ ಸೋಲಿಸಿದ ಭಾರತ ತಂಡ ಸೆಮಿಫೈನಲ್ ತಲುಪುವುದು ಬಹುತೇಕ ಖಚಿತವಾಗಿತ್ತು. ಇಂಗ್ಲೆಂಡ್ ವಿರುದ್ಧದ ಪಂದ್ಯ 4-4ರಲ್ಲಿ ಡ್ರಾ ಆಗಿತ್ತು. ವೇಲ್ಸ್ ವಿರುದ್ಧದ ದೊಡ್ಡ ಗೆಲುವು ಭಾರತಕ್ಕೆ ತನ್ನ ಪೂಲ್ ಅಗ್ರಸ್ಥಾನವನ್ನು ಬಹುತೇಕ ಖಚಿತಪಡಿಸಿದೆ. ಏಕೆಂದರೆ ಭಾರತದ ಗೋಲುಗಳ ಅಂತರ ಒಟ್ಟು 14 ತಲುಪಿದೆ. ಎರಡನೇ ಸ್ಥಾನದಲ್ಲಿರುವ ಇಂಗ್ಲೆಂಡ್ ತನ್ನ ಕೊನೆಯ ಪಂದ್ಯವನ್ನು ಗೆಲ್ಲಲು ಮಾತ್ರವಲ್ಲದೆ, ಭಾರತದ ಗೋಲು ವ್ಯತ್ಯಾಸವನ್ನು ಮೇಲುಗೈ ಸಾಧಿಸಲು ಸಹ ಅಗತ್ಯವಿದೆ. ಹೀಗಾಗಿ ಅಗ್ರಸ್ಥಾನದಲ್ಲಿರುವ ಟೀಂ ಇಂಡಿಯಾ ಸೆಮಿಫೈನಲ್‌ನಲ್ಲಿ 6 ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾವನ್ನು ಎದುರಿಸಬೇಕಾಗಿಲ್ಲ.

ಹರ್ಮನ್‌ಪ್ರೀತ್ ದಾಖಲೆ

ಇದನ್ನೂ ಓದಿ
CWG 2022: ಹೀಟ್‌ನಲ್ಲಿ ಮೊದಲ ಸ್ಥಾನ; 200 ಮೀಟರ್ ಓಟದಲ್ಲಿ ಸೆಮಿಫೈನಲ್​ಗೇರಿದ ಹಿಮಾ ದಾಸ್
CWG 2022: ಕಾಮನ್​ವೆಲ್ತ್ ಗೇಮ್ಸ್​ನಲ್ಲಿ ನೀಡುವ ಚಿನ್ನದ ಪದಕದಲ್ಲಿ ಎಷ್ಟು ಗ್ರಾಂ ಚಿನ್ನವಿರುತ್ತೆ ಗೊತ್ತಾ?
CWG 2022 Squash: ಸ್ಕ್ವಾಷ್​ನಲ್ಲಿ ಕಂಚು ಗೆದ್ದು ಇತಿಹಾಸ ನಿರ್ಮಿಸಿದ ಸೌರವ್ ಘೋಷಾಲ್..!

ಅನುಭವಿ ಡಿಫೆಂಡರ್ ಹರ್ಮನ್‌ಪ್ರೀತ್ ವೇಲ್ಸ್ ವಿರುದ್ಧ ಭಾರತದ ಅದ್ಭುತ ಗೆಲುವಿನ ಸ್ಟಾರ್ ಆದರು. ಹರ್ಮನ್‌ಪ್ರೀತ್ ಪಂದ್ಯಾವಳಿಯಲ್ಲಿ ತಮ್ಮ ಎರಡನೇ ಹ್ಯಾಟ್ರಿಕ್ ಅನ್ನು ಪೂರ್ಣಗೊಳಿಸಿದ್ದು ಮಾತ್ರವಲ್ಲದೆ, ಪೆನಾಲ್ಟಿ ಕಾರ್ನರ್‌ನಲ್ಲಿ ತಮ್ಮ ಪ್ರಬಲ ಡ್ರ್ಯಾಗ್-ಫ್ಲಿಕ್ ಆಧಾರದ ಮೇಲೆ 3 ಪ್ರಚಂಡ ಗೋಲುಗಳನ್ನು ಗಳಿಸುವ ಮೂಲಕ ದಾಖಲೆ ಮಾಡಿದರು. ಒಟ್ಟು 9 ಗೋಲುಗಳೊಂದಿಗೆ, ಅವರು CWG ನಲ್ಲಿ ಅತಿ ಹೆಚ್ಚು ಗೋಲು ಗಳಿಸಿದ ಭಾರತೀಯರಾಗಿದ್ದಾರೆ. ಈ ಪಂದ್ಯದ ಎರಡನೇ ಕ್ವಾರ್ಟರ್‌ನಲ್ಲಿ ಎರಡು ನಿಮಿಷಗಳಲ್ಲಿ ಎರಡು ಗೋಲುಗಳನ್ನು (18 ಮತ್ತು 19 ನಿಮಿಷಗಳು) ಗಳಿಸುವ ಮೂಲಕ ಹರ್ಮನ್‌ಪ್ರೀತ್ ಭಾರತಕ್ಕೆ ಉತ್ತಮ ಆರಂಭವನ್ನು ನೀಡಿದರು. ಮೂರನೇ ಕ್ವಾರ್ಟರ್‌ನ ಕೊನೆಯಲ್ಲಿ ಮತ್ತೊಂದು ಗೋಲು (45 ನೇ ನಿಮಿಷ) ಗಳಿಸುವ ಮೂಲಕ ತಮ್ಮ ಹ್ಯಾಟ್ರಿಕ್ ಪೂರ್ಣಗೊಳಿಸಿದರು.

ನಾಲ್ಕನೇ ಕ್ವಾರ್ಟರ್‌ನಲ್ಲಿ ಗುರ್ಜಂತ್ ಸಿಂಗ್ ಉತ್ತಮ ಫೀಲ್ಡ್ ಗೋಲು ಗಳಿಸಿ ಭಾರತದ ಮುನ್ನಡೆಯನ್ನು 4-0ಗೆ ತಗ್ಗಿಸಿದರು. ಇಂಗ್ಲೆಂಡ್ ವಿರುದ್ಧ ಮುನ್ನಡೆ ಕಳೆದುಕೊಂಡು ಡ್ರಾ ಮಾಡಿಕೊಳ್ಳಬೇಕಾದ ಅನಿವಾರ್ಯತೆಗೆ ಸಿಲುಕಿದ್ದ ಭಾರತ ತಂಡ ಈ ಬಾರಿ ಯಾವುದೇ ತಪ್ಪು ಮಾಡದೆ ವೇಲ್ಸ್​ಗೆ ಅವಕಾಶ ನೀಡಲಿಲ್ಲ. 55 ನೇ ನಿಮಿಷದಲ್ಲಿ ವೆಲ್ಸ್ ತನ್ನ ಏಕೈಕ ಗೋಲು ಗಳಿಸಿದರು, ಆದರೆ ಅದು ಸಾಕಾಗಲಿಲ್ಲ.

ಮಹಿಳಾ ತಂಡ ಈಗಾಗಲೇ ಸೆಮಿಫೈನಲ್‌ನಲ್ಲಿದೆ

ಒಂದು ದಿನ ಮುಂಚಿತವಾಗಿ, ಭಾರತದ ಮಹಿಳಾ ತಂಡವೂ ಸೆಮಿಫೈನಲ್‌ಗೆ ಪ್ರವೇಶಿಸಿತ್ತು. ಹಿಂದಿನ ಪಂದ್ಯಗಳಲ್ಲಿ ಉಭಯ ತಂಡಗಳು ನಾಲ್ಕನೇ ಸ್ಥಾನ ಪಡೆದಿದ್ದವು. 2002ರಲ್ಲಿ ಮಹಿಳಾ ತಂಡ ಐತಿಹಾಸಿಕ ಚಿನ್ನದ ಪದಕ ಗೆದ್ದಿದ್ದರೆ, ಪುರುಷರ ತಂಡ ಚೊಚ್ಚಲ ಚಿನ್ನಕ್ಕಾಗಿ ಕಾಯುತ್ತಿದೆ. ಭಾರತ ತಂಡ 2010 ಮತ್ತು 2014ರಲ್ಲಿ ಸತತ ಎರಡು ಬಾರಿ ಆಸ್ಟ್ರೇಲಿಯ ವಿರುದ್ಧ ಫೈನಲ್‌ನಲ್ಲಿ ಸೋತಿತ್ತು. ಈ ಬಾರಿ ಟೀಂ ಇಂಡಿಯಾ ಆ ಕೊರತೆಯನ್ನು ತುಂಬುವ ನಿರೀಕ್ಷೆಯಲ್ಲಿದೆ.

Published On - 8:41 pm, Thu, 4 August 22