CWG 2022: ಕೊರೋನಾ ಲಕ್ಷಣ: ಐಸೋಲೇಷನ್ಗೆ ಒಳಗಾದ ಪಿವಿ ಸಿಂಧು
PV Sindhu: ಜುಲೈ 28 ರಿಂದ ಶುರುವಾಗಲಿರುವ ಕಾಮನ್‌ವೆಲ್ತ್ ಗೇಮ್ಸ್ಗೆ ಆಗಸ್ಟ್ 8 ರಂದು ತೆರೆಬೀಳಲಿದೆ. 2018 ರ ಕಾಮನ್‌ವೆಲ್ತ್ ಗೇಮ್ಸ್ನಲ್ಲಿ ಒಟ್ಟು 66 ಪದಕ ಗೆದ್ದಿದ್ದ ಭಾರತವು ಈ ಬಾರಿ ಕೂಡ ಪದಕ ಪಟ್ಟಿಯಲ್ಲಿ ಟಾಪ್- 5 ನಲ್ಲಿ ಕಾಣಿಸಿಕೊಳ್ಳುವ ನಿರೀಕ್ಷೆಯಿದೆ.
ಕಾಮನ್‌ವೆಲ್ತ್ ಗೇಮ್ಸ್ ಆರಂಭಕ್ಕೂ ಮುನ್ನವೇ ಭಾರತ ಭಾರೀ ಹಿನ್ನಡೆ ಅನುಭವಿಸಿದೆ. ವರದಿಗಳ ಪ್ರಕಾರ, ಭಾರತದ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಅವರಲ್ಲಿ ಕೊರೋನಾ ಲಕ್ಷಣಗಳು ಕಂಡುಬಂದಿವೆ. ಹೀಗಾಗಿ ಅವರು ಐಸೋಲೇಷನ್ಗೆ ಒಳಗಾಗಿದ್ದಾರೆ. ಇದರ ಬೆನ್ನಲ್ಲೇ ಇಂದು ನಡೆಯಲಿರುವ ಉದ್ಘಾಟನಾ ಸಮಾರಂಭದಲ್ಲಿ ಭಾರತ ತಂಡದ ಧ್ವಜಧಾರಿ ಯಾರಾಗಲಿದ್ದಾರೆ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಏಕೆಂದರೆ ನೀರಜ್ ಚೋಪ್ರಾ ಗಾಯಗೊಂಡು ಕಾಮನ್‌ವೆಲ್ತ್ ಕ್ರೀಡಾಕೂಟದಿಂದ ಹೊರಗುಳಿದ ಕಾರಣ ಪಿವಿ ಸಿಂಧು ಅವರನ್ನು ಆಯ್ಕೆ ಮಾಡಲಾಗಿತ್ತು. ಇದೀಗ ಸಿಂಧು ಸಹ ಕೊರೋನಾ ಸೋಂಕಿಗೆ ಒಳಗಾಗಿದ್ದಾರೆ. ಹೀಗಾಗಿ ಇಂದು ನಡೆಯಲಿರುವ ಉದ್ಘಾಟನಾ ಸಮಾರಂಭದಲ್ಲಿ ಅವರು ಕಾಣಿಸಿಕೊಳ್ಳುವುದು ಅನುಮಾನ.
ಇನ್ನೊಂದೆಡೆ ಧ್ವಜಧಾರಿಯ ಪಟ್ಟಿಯಲ್ಲಿ ಹಾಕಿ ತಂಡದ ನಾಯಕ ಮನ್ಪ್ರೀತ್ ಸಿಂಗ್ ಹೆಸರು ಕೂಡ ಇದೆ. ಆದರೆ ಸಾಮಾನ್ಯವಾಗಿ ಮಹಿಳಾ ಹಾಗೂ ಪರುಷ ಸ್ಪರ್ಧಿಗಳು ಜೊತೆಯಾಗಿ ಧ್ವಜಧಾರಿಯಾಗಿ ಕಾಣಿಸಿಕೊಳ್ಳುತ್ತಾರೆ. ಹೀಗಾಗಿ ಪಿವಿ ಸಿಂಧು ಅವರ ಸ್ಥಾನದಲ್ಲಿ ಯಾರು ಕಾಣಿಸಿಕೊಳ್ಳಲಿದ್ದಾರೆ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.
ಕಾಮನ್‌ವೆಲ್ತ್ ಗೇಮ್ಸ್ ನಿಯಮಗಳ ಪ್ರಕಾರ, ಎಲ್ಲಾ ಕ್ರೀಡಾಪಟುಗಳು ಯುಕೆಗೆ ಆಗಮಿಸುವ 72 ಗಂಟೆಗಳ ಮೊದಲು ಕೋವಿಡ್-19 ಆರ್‌ಟಿ-ಪಿಸಿಆರ್ ಪರೀಕ್ಷೆಗೆ ಒಳಗಾಗಬೇಕು. ಅಲ್ಲದೆ ಬರ್ಮಿಂಗ್‌ಹ್ಯಾಮ್‌ನಲ್ಲಿ ಮತ್ತೊಂದು ಪರೀಕ್ಷೆ ಮಾಡಿಸಬೇಕು. ಏತನ್ಮಧ್ಯೆ, ಕಳೆದ ಕೆಲವು ದಿನಗಳಲ್ಲಿ ಪ್ರತಿದಿನ ಒಂದು ಡಜನ್‌ಗಿಂತಲೂ ಹೆಚ್ಚು ಸಕಾರಾತ್ಮಕ ಪ್ರಕರಣಗಳು ಕಂಡು ಬರುತ್ತಿದೆ.
ಇದೀಗ ಪಿವಿ ಸಿಂಧು ಕೊರೋನಾ ಸೋಂಕಿಗೆ ಒಳಗಾಗಿರುವುದು ಪತ್ತೆಯಾಗಿದೆ. ಇದಕ್ಕೂ ಮುನ್ನ ಟೀಮ್ ಇಂಡಿಯಾ ಆಟಗಾರ್ತಿ ಪೂಜಾ ವಸ್ತ್ರಕರ್ ಸೇರಿದಂತೆ ಇಬ್ಬರು ಮಹಿಳಾ ಕ್ರಿಕೆಟಿಗರಲ್ಲೂ ಕೊರೋನಾ ಸೋಂಕಿನ ಲಕ್ಷಣಗಳು ಕಂಡು ಬಂದಿತ್ತು. ಹೀಗಾಗಿ ಈ ಇಬ್ಬರು ಐಸೋಲೇಷನ್ನಲ್ಲಿರಿಸಲಾಗಿದೆ.
ಜುಲೈ 28 ರಿಂದ ಶುರುವಾಗಲಿರುವ ಕಾಮನ್‌ವೆಲ್ತ್ ಗೇಮ್ಸ್ಗೆ ಆಗಸ್ಟ್ 8 ರಂದು ತೆರೆಬೀಳಲಿದೆ. 2018 ರ ಕಾಮನ್‌ವೆಲ್ತ್ ಗೇಮ್ಸ್ನಲ್ಲಿ ಒಟ್ಟು 66 ಪದಕ ಗೆದ್ದಿದ್ದ ಭಾರತವು ಈ ಬಾರಿ ಕೂಡ ಪದಕ ಪಟ್ಟಿಯಲ್ಲಿ ಟಾಪ್- 5 ನಲ್ಲಿ ಕಾಣಿಸಿಕೊಳ್ಳುವ ನಿರೀಕ್ಷೆಯಿದೆ. ಈ ಬಾರಿ ಭಾರತದಿಂದ ಒಟ್ಟು 214 ಸ್ಫರ್ಧಿಗಳು ಕಣದಲ್ಲಿದ್ದು, ಹೀಗಾಗಿ ಹೆಚ್ಚಿನ ಪದಕಗಳನ್ನು ಎದುರು ನೋಡಬಹುದು.