CWG 2022: ಬಾಕ್ಸಿಂಗ್ನಲ್ಲಿ ಭಾರತಕ್ಕೆ ಮತ್ತೊಂದು ಪದಕ: ಬೆಳ್ಳಿ ಗೆದ್ದು ಬೀಗಿದ ಸಾಗರ್ ಅಹ್ಲಾವತ್
ಭಾನುವಾರ ರಾತ್ರಿ ಬಾಕ್ಸಿಂಗ್ನಲ್ಲಿ ಭಾರತಕ್ಕೆ ಸಾಕಷ್ಟು ಪದಕಗಳು ಒಲಿದುಬಂತು. ಇದೀಗ ಭಾರತದ ಬಾಕ್ಸರ್ ಸಾಗರ್ ಅಹ್ಲಾವತ್ (Sagar Ahlawat) ಪುರುಷರ 92kg ಫೈನಲ್ ವಿಭಾಗದಲ್ಲಿ ಸೋಲು ಕಂಡರೂ ಬೆಳ್ಳಿ ಪದಕ ಬಾಜಿಕೊಂಡಿದ್ದಾರೆ.
ಬರ್ಮಿಂಗ್ಹ್ಯಾಮ್ನಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್ ಗೇಮ್ಸ್ 2022 ರಲ್ಲಿ (Commonwealth Games 2022) ಭಾರತದ (India) ಪದಕದ ಬೇಟೆ ಅರ್ಧಶತಕದ ಗಡಿ ದಾಟಿದೆ. ಭಾನುವಾರ ರಾತ್ರಿ ಬಾಕ್ಸಿಂಗ್ನಲ್ಲಿ ಭಾರತಕ್ಕೆ ಸಾಕಷ್ಟು ಪದಕಗಳು ಒಲಿದುಬಂತು. ಇದೀಗ ಭಾರತದ ಬಾಕ್ಸರ್ ಸಾಗರ್ ಅಹ್ಲಾವತ್ (Sagar Ahlawat) ಪುರುಷರ 92kg ಫೈನಲ್ ವಿಭಾಗದಲ್ಲಿ ಸೋಲು ಕಂಡರೂ ಬೆಳ್ಳಿ ಪದಕ ಬಾಜಿಕೊಂಡಿದ್ದಾರೆ. ಇಂಗ್ಲೆಂಡ್ನ ಡೆಲೀಶಿಯಸ್ ಓರಿಯೊ ವಿರುದ್ಧ 0-5 ಅಂತರದಿಂದ ಸೋಲು ಕಾಣುವ ಮೂಲಕ ಸಾಗರ್ ಚಿನ್ನದ ಬದಲು ಬೆಳ್ಳಿ ಪದಕಕ್ಕೆ ಕೊರಳೊಡ್ಡಬೇಕಾಯಿತು.
ಇದೀಗ ಕಾಮನ್‌ವೆಲ್ತ್ 2022 ರಲ್ಲಿ ಭಾರತದ ಪದಕದ ಸಂಖ್ಯೆ 55ಕ್ಕೇರಿದೆ. ಇದರಲ್ಲಿ 18 ಚಿನ್ನ, 15 ಬೆಳ್ಳಿ ಮತ್ತು 22 ಕಂಚನ್ನು ಭಾರತ ಬಾಚಿಕೊಂಡಿದೆ. ನಿನ್ನೆ ಒಂದೇ ದಿನದಲ್ಲಿ ಸಾಕಷ್ಟು ಪದಕಗಳನ್ನು ಬಾಚಿಕೊಂಡಿತು. ಮೊದಲು ಮಹಿಳೆಯರ (45-48 ಕೆಜಿ ವಿಭಾಗ) ಫೈನಲ್ ಪಂದ್ಯದಲ್ಲಿ ನೀತು ಗಂಗಾಸ್ ಚಿನ್ನದ ಗೆದ್ದಿದ್ದರು. ಅಲ್ಲದೇ, ಪುರುಷರ (48-51 ಕೆಜಿ ವಿಭಾಗ) ಬಾಕ್ಸಿಂಗ್ನಲ್ಲಿ ಅಮಿತ್ ಪಂಗಲ್ ಕೂಡ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದರು. ಬಳಿಕ ಮಹಿಳೆಯರ 50 ಕೆಜಿ ವಿಭಾಗದಲ್ಲಿ ನಿಖತ್ ಜರೀನ್ ಚಿನ್ನದ ಸಾಧನೆ ಮಾಡಿ ದೇಶಕ್ಕೆ ಕೀರ್ತಿ ತಂದರು. ಈ ಮೂಲಕ ಒಂದೇ ದಿನ ಭಾರತಕ್ಕೆ ಬಾಕ್ಸಿಂಗ್ನಲ್ಲಿ ಮೂರು ಚಿನ್ನದ ಪದಕಗಳು ಬಂದವು.
ಟೇಬಲ್ ಟೆನಿಸ್ನ ಪುರುಷರ ಡಬಲ್ಸ್ ಫೈನಲ್‌ನಲ್ಲಿ ಭಾರತಕ್ಕೆ ಬೆಳ್ಳಿ ಪದಕ ಬಂದಿದೆ. ಇಂಗ್ಲೆಂಡ್ನ ಪಾಲ್ ಡ್ರಿಂಕ್ಹಾಲ್ ಮತ್ತು ಲಿಯಾಮ್ ಪಿಚ್ಫೋರ್ಡ್ ವಿರುದ್ಧ ಭಾರತದ ಎ.ಶರತ್ ಕಮಲ್ ಮತ್ತು ಸತ್ಯನ್ ಜ್ಞಾನಶೇಖರನ್ 2-3 ಅಂತರದಿಂದ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಕಾಮನ್‌ವೆಲ್ತ್ ಗೇಮ್ಸ್ನ ಟೇಬಲ್ ಟೆನಿಸ್ನಲ್ಲಿ ಭಾರತಕ್ಕೆ ಎರಡನೇ ಪದಕವನ್ನು ತಂದುಕೊಟ್ಟಿದ್ದಾರೆ.
ಇನ್ನು ಎಡ್ಜ್‌ಬಾಸ್ಟನ್‌ನಲ್ಲಿ ನಡೆದ ಫೈನಲ್‌ನಲ್ಲಿ ಟಿ20 ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾ ರೋಚಕ ಪಂದ್ಯದಲ್ಲಿ ಭಾರತವನ್ನು 9 ರನ್‌ಗಳಿಂದ ಸೋಲಿಸಿತು. ಇದರೊಂದಿಗೆ ಆಸ್ಟ್ರೇಲಿಯಾ ಐತಿಹಾಸಿಕ ಚಿನ್ನದ ಪದಕವನ್ನು ಗೆದ್ದುಕೊಂಡಿತು. ಆಸ್ಟ್ರೇಲಿಯಾ ವಿರುದ್ಧ ಸತತ ಎರಡನೇ ಬಾರಿ ಟಿ20 ಫೈನಲ್‌ನಲ್ಲಿ ಸೋತ ಭಾರತ ತಂಡ ಬೆಳ್ಳಿ ಪದಕ ಗೆದ್ದುಕೊಂಡಿತು.
ಭಾರತದ ಲೆಜೆಂಡರಿ ಟೇಬಲ್ ಟೆನಿಸ್ ಆಟಗಾರ ಅಚಂತಾ ಶರತ್ ಕಮಲ್ ಮತ್ತೊಂದು ಚಿನ್ನದ ಪದಕವನ್ನು ದೇಶದ ಖಾತೆಗೆ ಹಾಕಿದ್ದಾರೆ. ಮಿಶ್ರ ಡಬಲ್ಸ್ ಫೈನಲ್‌ನಲ್ಲಿ ಹಿರಿಯ ಆಟಗಾರ ಶರತ್ ಅವರು ಯುವ ಆಟಗಾರ್ತಿ ಶ್ರೀಜಾ ಅಕುಲಾ ಅವರೊಂದಿಗೆ ಚಿನ್ನದ ಪದಕ ಗೆದ್ದರು.
ಸ್ಟಾರ್ ಷಟ್ಲರ್ ಕಿಡಂಬಿ ಶ್ರೀಕಾಂತ್ ಪುರುಷರ ಸಿಂಗಲ್ಸ್‌ನಲ್ಲಿ ಕಂಚಿನ ಪದಕ ಗೆದ್ದಿದ್ದಾರೆ. ಸಿಂಗಾಪುರದ ಜಿಯಾ ಹೆಂಗ್ ತೆಹ್ ಅವರನ್ನು 21-15, 21-18 ನೇರ ಗೇಮ್‌ಗಳಿಂದ ಕಿಡಂಬಿ ಸೋಲಿಸಿದರು. ಆದಾಗ್ಯೂ, 2018 ರ ಬೆಳ್ಳಿ ಪದಕ ವಿಜೇತ ಕಿಡಂಬಿ ಶ್ರೀಕಾಂತ್ ಈ ಕ್ರೀಡಾಕೂಟದಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ. ಏಕೆಂದರೆ ಅವರು ಚಿನ್ನದ ಪದಕ ಗೆಲ್ಲುವ ಪ್ರಬಲ ಸ್ಪರ್ಧಿ ಎಂದು ಪರಿಗಣಿಸಲ್ಪಟ್ಟಿದ್ದರು.