8 ವರ್ಷದಲ್ಲಿ 6 ವಿಶ್ವಕಪ್, 2 ಚಾಂಪಿಯನ್ಸ್ ಟ್ರೋಫಿ: ಆತಿಥ್ಯವಹಿಸಲಿರುವ ದೇಶಗಳ ಪಟ್ಟಿ ಪ್ರಕಟ

T20 World Cup: ಚಾಂಪಿಯನ್ಸ್​ ಟ್ರೋಫಿಯನ್ನು ಹೊರತುಪಡಿಸಿದರೆ ಉಳಿದೆಲ್ಲಾ ಟೂರ್ನಿಗಳು ಜಂಟಿಯಾಗಿ ಆಯೋಜನೆಗೊಳ್ಳಲಿರುವುದು ವಿಶೇಷ. ಇನ್ನು 2022 ರ ಟಿ20 ವಿಶ್ವಕಪ್ ಆಸ್ಟ್ರೇಲಿಯಾದಲ್ಲಿ ನಡೆಯಲಿದ್ದು, ಇದರ ಬಳಿಕ 2023 ರ ಏಕದಿನ ವಿಶ್ವಕಪ್ ಭಾರತದಲ್ಲಿ ನಡೆಯಲಿದೆ.

8 ವರ್ಷದಲ್ಲಿ 6 ವಿಶ್ವಕಪ್, 2 ಚಾಂಪಿಯನ್ಸ್ ಟ್ರೋಫಿ: ಆತಿಥ್ಯವಹಿಸಲಿರುವ ದೇಶಗಳ ಪಟ್ಟಿ ಪ್ರಕಟ
ICC
Follow us
TV9 Web
| Updated By: ಝಾಹಿರ್ ಯೂಸುಫ್

Updated on:Nov 16, 2021 | 10:42 PM

2024 ರಿಂದ 2031 ರವರೆಗೆ ನಡೆಯಲಿರುವ ವಿಶ್ವಕಪ್ (World Cup) ಸೇರಿದಂತೆ ಪ್ರಮುಖ ಟೂರ್ನಿಗಳ ಆತಿಥೇಯ ರಾಷ್ಟ್ರಗಳ ಪಟ್ಟಿಯನ್ನು ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ICC) ಪ್ರಕಟಿಸಿದೆ. 2024-2031ರ ಅವಧಿಯಲ್ಲಿ ಒಟ್ಟು 8 ಟೂರ್ನಿಗಳು ನಡೆಯಲಿದ್ದು, ಅದರಲ್ಲಿ ಎರಡು ಏಕದಿನ ವಿಶ್ವಕಪ್, ನಾಲ್ಕು ಟಿ20 ವಿಶ್ವಕಪ್ ಹಾಗೂ ಎರಡು ಚಾಂಪಿಯನ್ಸ್ ಟ್ರೋಫಿ ನಡೆಯಲಿದೆ. ಈ ಟೂರ್ನಿಯನ್ನು ಆಯೋಜಿಸಲು ಆಯೋಜಿಸಲು ಐಸಿಸಿಯ 11 ಪೂರ್ಣ ಸದಸ್ಯ ರಾಷ್ಟ್ರಗಳು ಮತ್ತು ಮೂರು ಸಹಾಯಕ ಸದಸ್ಯ ರಾಷ್ಟ್ರವನ್ನು ಆಯ್ಕೆ ಮಾಡಲಾಗಿದೆ.

ಅದರಂತೆ 2024 ರ ಟಿ20 ವಿಶ್ವಕಪ್ ವೆಸ್ಟ್ ಇಂಡೀಸ್ ಹಾಗೂ ಅಮೆರಿಕದಲ್ಲಿ ಆಯೋಜನೆಯಾಗಲಿದೆ. ಹಾಗೆಯೇ 2025ರಲ್ಲಿ ಪಾಕಿಸ್ತಾನದಲ್ಲಿ ಚಾಂಪಿಯನ್ಸ್​ ಟ್ರೋಫಿ ನಡೆಯಲಿದೆ. ಇನ್ನು 2026ರ ಟಿ20 ವಿಶ್ವಕಪ್​ ಅನ್ನು ಶ್ರೀಲಂಕಾ ಹಾಗೂ ಭಾರತ ಜಂಟಿಯಾಗಿ ಆಯೋಜಿಸಲಿದೆ. 2027ರ ಏಕದಿನ ವಿಶ್ವಕಪ್​ಗೆ ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಹಾಗೂ ನಮೀಬಿಯಾ ಜಂಟಿಯಾಗಿ ಆತಿಥ್ಯವಹಿಸಲಿದೆ.

2028ರ ಟಿ20 ವಿಶ್ವಕಪ್​ ಅನ್ನು ನ್ಯೂಜಿಲೆಂಡ್ ಹಾಗೂ ಆಸ್ಟ್ರೇಲಿಯಾ ನಡೆಸಲಾಗುತ್ತದೆ. 2029ರ ಚಾಂಪಿಯನ್ಸ್​ ಟ್ರೋಫಿ ಭಾರತದಲ್ಲಿ ನಡೆಯಲಿದ್ದು, ಹಾಗೆಯೇ 2030ರ ಟಿ20 ವಿಶ್ವಕಪ್​ಗೆ ಇಂಗ್ಲೆಂಡ್-ಐರ್ಲೆಂಡ್-ಸ್ಕಾಟ್ಲೆಂಡ್ ಆತಿಥ್ಯವಹಿಸಲಿದೆ. ಅದೇ ರೀತಿ 2031 ಏಕದಿನ ವಿಶ್ವಕಪ್​ ಅನ್ನು ಭಾರತ ಹಾಗೂ ಬಾಂಗ್ಲಾದೇಶದಲ್ಲಿ ನಡೆಸಲಾಗುತ್ತದೆ. ಈ ಮೂಲಕ ಐಸಿಸಿ ಮುಂದಿನ ಟೂರ್ನಿಗಳನ್ನು ನೆರೆಹೊರೆ ದೇಶಗಳಲ್ಲಿ ಜಂಟಿಯಾಗಿ ಆಯೋಜಿಸಲು ನಿರ್ಧರಿಸಿದೆ.

ಇಲ್ಲಿ 2025ರ (ಪಾಕಿಸ್ತಾನ್) ಮತ್ತು 2029ರ (ಭಾರತ) ಚಾಂಪಿಯನ್ಸ್​ ಟ್ರೋಫಿಯನ್ನು ಹೊರತುಪಡಿಸಿದರೆ ಉಳಿದೆಲ್ಲಾ ಟೂರ್ನಿಗಳು ಜಂಟಿಯಾಗಿ ಆಯೋಜನೆಗೊಳ್ಳಲಿರುವುದು ವಿಶೇಷ. ಇನ್ನು 2022 ರ ಟಿ20 ವಿಶ್ವಕಪ್ ಆಸ್ಟ್ರೇಲಿಯಾದಲ್ಲಿ ನಡೆಯಲಿದ್ದು, ಇದರ ಬಳಿಕ 2023 ರ ಏಕದಿನ ವಿಶ್ವಕಪ್ ಭಾರತದಲ್ಲಿ ನಡೆಯಲಿದೆ. ಈ ಎರಡು ವಿಶ್ವಕಪ್​ ಬಳಿಕ ಎಲ್ಲಾ ವಿಶ್ವಕಪ್​ಗಳಿಗೆ ಎರಡು ಮತ್ತು ಮೂರು ರಾಷ್ಟ್ರಗಳು ಜಂಟಿಯಾಗಿ ಆತಿಥ್ಯವಹಿಸಲಿರುವುದು ವಿಶೇಷ.

ಇದನ್ನೂ ಓದಿ: T20 World Cup 2021: ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾಗೆ ಸಿಕ್ಕ ಪ್ರಶಸ್ತಿ ಮೊತ್ತವೆಷ್ಟು ಗೊತ್ತಾ?

ಇದನ್ನೂ ಓದಿ: T20 World Cup Winners: 7 ಟಿ20 ವಿಶ್ವಕಪ್​: ಚಾಂಪಿಯನ್​ ಪಟ್ಟಕ್ಕೇರಿದ 6 ತಂಡಗಳು

ಇದನ್ನೂ ಓದಿ:  Sourav Ganguly: ದ್ರಾವಿಡ್ ಅವರ ಮಗ ಕರೆ ಮಾಡಿ ಅಪ್ಪ ತುಂಬಾ ಕಟ್ಟುನಿಟ್ಟು, ನೀವು ಅವರನ್ನು ಕರ್ಕೊಂಡು ಹೋಗಿ ಎಂದರು..!

(14 ICC Members to host ICC men’s events post 2023)

Published On - 5:51 pm, Tue, 16 November 21