AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

17 ಆಟಗಾರರಿಗೆ 60 ರೂಮ್: ಇದುವೇ ಪಾಕಿಸ್ತಾನ್ ತಂಡದ ಸಾಧನೆ..!

T20 World Cup 2024: ಟಿ20 ವಿಶ್ವಕಪ್​ನ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 176 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಸೌತ್ ಆಫ್ರಿಕಾ ತಂಡವು 169 ರನ್​ಗಳಿಸಲಷ್ಟೇ ಶಕ್ತರಾಗಿದ್ದಾರೆ. ಈ ಮೂಲಕ ಟೀಮ್ ಇಂಡಿಯಾ 7 ರನ್​ಗಳ ರೋಚಕ ಜಯ ಸಾಧಿಸಿದೆ. ಈ ಗೆಲುವಿನ ಬೆನ್ನಲ್ಲೇ ಪಾಕ್ ತಂಡದ ಮಾಜಿ ಆಟಗಾರರು ಬಾಬರ್ ಪಡೆಯ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ.

17 ಆಟಗಾರರಿಗೆ 60 ರೂಮ್: ಇದುವೇ ಪಾಕಿಸ್ತಾನ್ ತಂಡದ ಸಾಧನೆ..!
Pakistan Team
ಝಾಹಿರ್ ಯೂಸುಫ್
|

Updated on:Jul 02, 2024 | 3:14 PM

Share

ಟಿ20 ವಿಶ್ವಕಪ್​ನಲ್ಲಿ ಭಾರತ ತಂಡ (Team India) ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಇತ್ತ ಫೈನಲ್​ ಗೆಲುವಿನ ಬೆನ್ನಲ್ಲೇ ಟೀಮ್ ಇಂಡಿಯಾಗೆ ಅಭಿನಂದನೆಗಳ ಮಹಾಪೂರ ಹರಿದುಬಂದರೆ, ಅತ್ತ ಪಾಕಿಸ್ತಾನ್ ತಂಡ ಭಾರೀ ಟೀಕೆಗೆ ಗುರಿಯಾಗುತ್ತಿದೆ. ಇದಕ್ಕೆ ಮುಖ್ಯ ಕಾರಣ ಟೂರ್ನಿ ಆರಂಭಕ್ಕೂ ಮುನ್ನ ಪಾಕಿಸ್ತಾನ್ ಪ್ರಶಸ್ತಿಯೊಂದಿಗೆ ಮರಳುವುದಾಗಿ ಕೊಚ್ಚಿಕೊಂಡಿದ್ದು.

ಪಾಕಿಸ್ತಾನ್ ತಂಡವು ವಿಶ್ವಕಪ್​ ಟೂರ್ನಿಗಾಗಿ ತೆರಳುವ ನಡೆಸಿದ ಸುದ್ದಿಗೋಷ್ಠಿಯಲ್ಲಿ ನಾಯಕ ಬಾಬರ್ ಆಝಂ ಸೇರಿದಂತೆ ತಂಡದ ಪ್ರಮುಖ ಆಟಗಾರರು ಈ ಬಾರಿ ಕಪ್ ಗೆದ್ದೇ ಹಿಂತಿರುಗುತ್ತೇವೆ ಎಂದು ತಿಳಿಸಿದ್ದರು. ಕಳೆದ ಎರಡು ಟಿ20 ವಿಶ್ವಕಪ್​ನಲ್ಲಿ ಸೆಮಿಫೈನಲ್ ಹಾಗೂ ಫೈನಲ್ ಆಡಿರುವ ಕಾರಣ ಈ ಸಲ ಕಪ್ ಗೆದ್ದೇ ಗೆಲ್ಲುತ್ತೇವೆ ಎಂದು ಬಾಬರ್ ಆಝಂ ಹೇಳಿದ್ದರು.

ಆದರೆ ಈ ಬಾರಿಯ ಟಿ20 ವಿಶ್ವಕಪ್​ನಲ್ಲಿ ಪಾಕಿಸ್ತಾನ್ ತಂಡವು ಅತ್ಯಂತ ಕಳಪೆ ಪ್ರದರ್ಶನ ನೀಡಿತ್ತು. ಮೊದಲ ಸುತ್ತಿನಲ್ಲಿ ಯುಎಸ್​ಎ ವಿರುದ್ಧ ಸೋತಿದ್ದ ಪಾಕ್ ಪಡೆ, ಆ ಬಳಿಕ ಟೀಮ್ ಇಂಡಿಯಾ ವಿರುದ್ಧ ಮಂಡಿಯೂರಿತು. ಅಲ್ಲದೆ ಮೊದಲ ಸುತ್ತಿನಲ್ಲೇ ನಿರ್ಗಮಿಸುವ ಮೂಲಕ ಭಾರೀ ಮುಖಭಂಗಕ್ಕೆ ಒಳಗಾಗಿತ್ತು.

ಇದೀಗ ಟೀಮ್ ಇಂಡಿಯಾ ವಿಶ್ವಕಪ್ ಗೆಲ್ಲುತ್ತಿದ್ದಂತೆ, ಪಾಕ್ ತಂಡದ ಮೇಲೆ ಟೀಕಾಸ್ತ್ರಗಳ ಪ್ರಯೋಗ ಮತ್ತೆ ಶುರುವಾಗಿದೆ. ಅದರಲ್ಲೂ ಪಾಕ್ ತಂಡದ ಮಾಜಿ ಆಟಗಾರ ಅತೀಕ್-ಉಝ್-ಝಮಾನ್ ಭಾರತ ತಂಡದ ಪ್ರದರ್ಶನವನ್ನು ಶ್ಲಾಘಿಸಿ, ಪಾಕಿಸ್ತಾನ್ ವಿರುದ್ಧ ಕಿಡಿಕಾರಿದ್ದಾರೆ.

ಈ ಬಗ್ಗೆ ಮಾತನಾಡಿರದ ಅತೀಕ್ ಝಮಾನ್, ನಮ್ಮವರು ನಾಯಕತ್ವಕ್ಕಾಗಿ ಕಿತ್ತಾಡುತ್ತಿದ್ದರೆ, ಭಾರತ ತಂಡವು ವಿಶ್ವಕಪ್ ಎತ್ತಿ ಹಿಡಿದು ಆನಂದಬಾಷ್ಫ ಸುರಿಸಿದ್ದಾರೆ. ಭಾರತ ತಂಡವನ್ನು ರೋಹಿತ್ ಶರ್ಮಾ ಯಾವ ರೀತಿಯಾಗಿ ಮುನ್ನಡೆಸಿದ್ದಾರೆ ಎಂಬುದನ್ನು ಪಾಕ್ ತಂಡ ನೋಡಿ ಕಲಿಯಬೇಕು. ನಿಜಕ್ಕೂ ಅವರು ಕ್ಲಾಸ್ ಲೀಡರ್ ಎಂದು ಹಾಡಿ ಹೊಗಳಿದ್ದಾರೆ.

ಪಾಕ್ ತಂಡದ ಪ್ರದರ್ಶನ ಹೇಗಿತ್ತು ಎಂಬುದನ್ನು ನೀವೇ ನೋಡಿ, ಈ ಬಾರಿ ಪಾಕಿಸ್ತಾನ್ ಕ್ರಿಕೆಟ್ ಆಡಲು ಹೋಗಿದ್ದರು ಎಂದು ನನಗಂತು ಅನಿಸಿಲ್ಲ. ಏಕೆಂದರೆ ಯುಎಸ್​ಎನಲ್ಲಿ ಪಾಕಿಸ್ತಾನದ 17 ಆಟಗಾರರಿಗೆ 60 ರೂಮ್​ಗಳನ್ನು ಬುಕ್ ಮಾಡಿಕೊಂಡಿದ್ದರು. ತಮ್ಮ ಕುಟುಂಬದೊಂದಿಗೆ ರಜಾ ಕಳೆಯಲು ಅವರು ಟಿ20 ವಿಶ್ವಕಪ್​ಗೆ ತೆರಳಿದ್ದರು. ಅದರಂತೆ ಅಮೆರಿಕ ಸುತ್ತಾಡಿಕೊಂಡು ಬಂದಿದ್ದಾರೆ ಅಷ್ಟೇ ಎಂದು ಅತೀಕ್ ಝಮಾನ್ ವ್ಯಂಗ್ಯವಾಡಿದ್ದಾರೆ.

ಇದನ್ನೂ ಓದಿ: IPL 2025: RCB ತಂಡಕ್ಕೆ ವಿರಾಟ್ ಕೊಹ್ಲಿ ಕ್ಯಾಪ್ಟನ್..!

ಅಷ್ಟೇ ಅಲ್ಲದೆ ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ಇನ್ನೇದಾರೂ ಭಾರತವನ್ನು ನೋಡಿ ಕಲಿಯಬೇಕು. ಅವರ ತಂಡದ ಆಯ್ಕೆ ಹೇಗಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಿ. ನಮ್ಮಲ್ಲಿ ಆಟಗಾರರು ಅರ್ಹತೆಗಿಂತ ಆತ್ಮೀಯತೆಯ ಮೇಲೆ ಆಯ್ಕೆಯಾಗುತ್ತಿದ್ದಾರೆ ಎಂದು ಪಿಸಿಬಿ ವಿರುದ್ಧ ಅತೀಕ್ ಝಮಾನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೀಗ ಅತೀಕ್ ಅವರ ಹೇಳಿಕೆಯು ವೈರಲ್ ಆಗಿದ್ದು, ಪಾಕ್ ಕ್ರಿಕೆಟ್ ಪ್ರೇಮಿಗಳು ಮಾಜಿ ಕ್ರಿಕೆಟಿಗನ ಮಾತುಗಳಿಗೆ ಸಹಮತಿ ವ್ಯಕ್ತಪಡಿಸುತ್ತಿದ್ದಾರೆ.

Published On - 3:14 pm, Tue, 2 July 24

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ