Asia Cup 2025: ಭಾರತ ಏಷ್ಯಾಕಪ್ ಗೆದ್ದರೆ ಸಿಗುವ ಹಣವೆಷ್ಟು? ಸೋತ ಪಾಕಿಸ್ತಾನಕ್ಕೆ ಸಿಗುವುದೆಷ್ಟು?

Asia Cup Prize Money: 2025ರ ಏಷ್ಯಾಕಪ್ ಫೈನಲ್‌ನಲ್ಲಿ ಭಾರತ-ಪಾಕಿಸ್ತಾನ ಮೊದಲ ಬಾರಿಗೆ ಮುಖಾಮುಖಿಯಾಗಲಿವೆ. ವಿಜೇತ ತಂಡಕ್ಕೆ 2.6 ಕೋಟಿ ರೂ. ಮತ್ತು ರನ್ನರ್‌ಅಪ್‌ಗೆ 1.3 ಕೋಟಿ ರೂ. ಬಹುಮಾನ ನೀಡಲಾಗುತ್ತದೆ. 2023ಕ್ಕೆ ಹೋಲಿಸಿದರೆ ಈ ಬಾರಿ ಬಹುಮಾನದ ಮೊತ್ತ ಹೆಚ್ಚಾಗಿದೆ. ಸರಣಿ ಶ್ರೇಷ್ಠ ಪ್ರಶಸ್ತಿಗೂ 12.5 ಲಕ್ಷ ರೂ. ಸಿಗಲಿದೆ. ಈ ಐತಿಹಾಸಿಕ ಪಂದ್ಯದಲ್ಲಿ ಯಾರು ಗೆಲ್ಲುತ್ತಾರೆ ಎಂಬುದು ಕುತೂಹಲಕಾರಿಯಾಗಿದೆ.

Asia Cup 2025: ಭಾರತ ಏಷ್ಯಾಕಪ್ ಗೆದ್ದರೆ ಸಿಗುವ ಹಣವೆಷ್ಟು? ಸೋತ ಪಾಕಿಸ್ತಾನಕ್ಕೆ ಸಿಗುವುದೆಷ್ಟು?
Asia Cup Final

Updated on: Sep 27, 2025 | 4:33 PM

ಸೆಪ್ಟೆಂಬರ್ 9 ರಂದು ಅಬುಧಾಬಿಯಲ್ಲಿ ಪ್ರಾರಂಭವಾದ 2025 ರ ಏಷ್ಯಾಕಪ್ (Asia Cup 2025) ಇದೀಗ ಅಂತಿಮ ಹಂತ ತಲುಪಿದೆ. ಪಂದ್ಯಾವಳಿಯ ಇತಿಹಾಸದಲ್ಲಿ ಮೊದಲ ಬಾರಿಗೆ ಭಾರತವು ಫೈನಲ್‌ನಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು (India vs Pakistan) ಎದುರಿಸಲಿದೆ. ಟೂರ್ನಿಯಲ್ಲಿ ಹಾಲಿ ಚಾಂಪಿಯನ್ ಆಗಿರುವ ಟೀಂ ಇಂಡಿಯಾ ತನ್ನ ಪ್ರಶಸ್ತಿ ಉಳಿಸಿಕೊಳ್ಳಲು ಹೋರಾಡಿದರೆ, ಇತ್ತ ಪಾಕಿಸ್ತಾನ ಹ್ಯಾಟ್ರಿಕ್ ಸೋಲಿನ ಮುಜುಗರದಿಂದ ಪಾರಾಗಲು ಪ್ರಯತ್ನಿಸಲಿದೆ. ಈ ಐತಿಹಾಸಿಕ ಪಂದ್ಯ ನಡೆಯುವುದಕ್ಕೂ ಮುನ್ನ ಈ ಟೂರ್ನಿಯ ವಿಜೇತ ಮತ್ತು ರನ್ನರ್-ಅಪ್ ತಂಡಗಳಿಗೆ ಸಿಗುವ ಬಹುಮಾನದ ಹಣ (Asia Cup Prize Money) ಎಷ್ಟು ಎಂಬುದನ್ನು ನೋಡೋಣ.

ಏಷ್ಯಾಕಪ್ ಬಹುಮಾನದ ಮೊತ್ತ ಎಷ್ಟು?

2025 ರ ಏಷ್ಯಾಕಪ್‌ನಲ್ಲಿ ಒಟ್ಟು ಎಂಟು ತಂಡಗಳು ಭಾಗವಹಿಸಿದ್ದವು. ಆದರೆ ಫೈನಲ್ ಪಂದ್ಯಕ್ಕೆ ಭಾರತ ಮತ್ತು ಪಾಕಿಸ್ತಾನ ಮಾತ್ರ ಅರ್ಹತೆ ಪಡೆದಿವೆ. ಸೆಪ್ಟೆಂಬರ್ 28 ರಂದು ನಡೆಯುವ ಪಂದ್ಯದಲ್ಲಿ ಗೆಲ್ಲುವ ತಂಡಕ್ಕೆ ಟ್ರೋಫಿಯೊಂದಿಗೆ ಕೋಟಿ ರೂ. ಮೊತ್ತದ ಬಹುಮಾನವನ್ನು ನೀಡಲಾಗುತ್ತದೆ. ವರದಿಯ ಪ್ರಕಾರ, ವಿಜೇತ ತಂಡವು 2.6 ಕೋಟಿ ರೂಗಳನ್ನು ಬಹುಮಾನವಾಗಿ ಪಡೆದರೆ, ರನ್ನರ್ ಅಪ್ ತಂಡಕ್ಕೆ 1.3 ಕೋಟಿ ರೂ. ಬಹುಮಾನ ಸಿಗಲಿದೆ.

ಕಳೆದ ಬಾರಿಗೆ ಹೊಲಿಸಿದರೆ, ಈ ಬಾರಿ ಏಷ್ಯಾಕಪ್ ಬಹುಮಾನದ ಮೊತ್ತದಲ್ಲಿ ಹೆಚ್ಚಳ ಮಾಡಲಾಗಿದೆ. 2023 ರಲ್ಲಿ ನಡೆದ ಏಷ್ಯಾಕಪ್‌ನ ಫೈನಲ್​ನಲ್ಲಿ ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡವು ಶ್ರೀಲಂಕಾವನ್ನು ಸೋಲಿಸಿ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಆ ಆವೃತ್ತಿಯಲ್ಲಿ ಚಾಂಪಿಯನ್ ಭಾರತಕ್ಕೆ 1.25 ಕೋಟಿ ರೂಗಳನ್ನು ಬಹುಮಾನವಾಗಿ ನೀಡಲಾಗಿತ್ತು. ಹೀಗಾಗಿ ಈ ಬಾರಿ ಎಸಿಸಿ ಬಹುಮಾನದ ಹಣವನ್ನು ಹೆಚ್ಚಿಸಿದ್ದು, ವಿಜೇತ ತಂಡಕ್ಕೆ 2.6 ಕೋಟಿ ರೂ. ಬಹುಮಾನ ಸಿಗಲಿದೆ. ಇದು ಮಾತ್ರವಲ್ಲದೆ 2025 ರ ಏಷ್ಯಾಕಪ್‌ನಲ್ಲಿ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಗೆಲ್ಲುವ ಆಟಗಾರನಿಗೂ ಭಾರಿ ಮೊತ್ತದ ಬಹುಮಾನ ಸಿಗಲಿದ್ದು, ಈ ಪ್ರಶಸ್ತಿ ಗೆಲ್ಲುವ ಆಟಗಾರನಿಗೆ 12.5 ಲಕ್ಷ ರೂ. ಬಹುಮಾನ ಸಿಗಲಿದೆ.

IND vs PAK: 41 ವರ್ಷಗಳಲ್ಲಿ ಮೊದಲ ಬಾರಿಗೆ ಭಾರತ- ಪಾಕ್ ಫೈನಲ್ ಪಂದ್ಯ; ಎಲ್ಲಿ, ಯಾವಾಗ, ಎಷ್ಟು ಗಂಟೆಗೆ ಆರಂಭ?

ಭಾರತ ಮತ್ತು ಪಾಕಿಸ್ತಾನ ನಡುವೆ ಫೈನಲ್

2025 ರ ಏಷ್ಯಾಕಪ್​ನ ಅಂತಿಮ ಪಂದ್ಯ ಐತಿಹಾಸಿಕವಾಗಲಿದೆ. ಏಕೆಂದರೆ ಭಾರತ ಮತ್ತು ಪಾಕಿಸ್ತಾನ ತಂಡಗಳು 41 ವರ್ಷಗಳ ಏಷ್ಯಾಕಪ್ ಇತಿಹಾಸದಲ್ಲಿ ಮೊದಲ ಬಾರಿಗೆ ಮುಖಾಮುಖಿಯಾಗಲಿವೆ. ಇದೇ ಆವೃತ್ತಿಯಲ್ಲಿ ಭಾರತವು ಪಾಕಿಸ್ತಾನವನ್ನು ಎರಡು ಬಾರಿ ಸೋಲಿಸಿದೆ. ಆದಾಗ್ಯೂ, ಇದು ಫೈನಲ್ ಪಂದ್ಯ ಆಗಿರುವ ಕಾರಣ ಎರಡೂ ತಂಡಗಳು ತಮ್ಮ ಅತ್ಯುತ್ತಮ ಪ್ರದರ್ಶನ ನೀಡಿ ಪಂದ್ಯವನ್ನು ಗೆಲ್ಲಲು ಪ್ರಯತ್ನಿಸಲಿವೆ. ಈ ಪಂದ್ಯದಲ್ಲಿ ಯಾವ ತಂಡ ಗೆಲ್ಲುತ್ತದೆ ಮತ್ತು ಯಾವ ತಂಡ ಸೋತು ರನ್ನರ್ ಅಪ್ ಆಗುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:30 pm, Sat, 27 September 25