AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs NZ: ಭಾರತ- ಕಿವೀಸ್ ಫೈನಲ್ ಪಂದ್ಯ ರದ್ದಾದರೆ ಯಾವ ತಂಡಕ್ಕೆ ಸಿಗಲಿದೆ ಚಾಂಪಿಯನ್ ಪಟ್ಟ?

Champions Trophy 2025: 2025ರ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯ ಮಾರ್ಚ್ 9ರಂದು ದುಬೈನಲ್ಲಿ ನಡೆಯಲಿದೆ. ಮಳೆಯಿಂದ ಪಂದ್ಯ ರದ್ದಾದರೆ, ಟ್ರೋಫಿಯನ್ನು ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ಹಂಚಿಕೊಳ್ಳುತ್ತವೆ. 2002ರಲ್ಲಿಯೂ ಒಮ್ಮೆ ಫೈನಲ್ ರದ್ದಾಗಿತ್ತು, ಆಗ ಟ್ರೋಫಿಯನ್ನು ಹಂಚಿಕೊಳ್ಳಲಾಗಿತ್ತು. ಡಕ್ವರ್ತ್-ಲೂಯಿಸ್ ನಿಯಮವನ್ನು ಕನಿಷ್ಠ 25 ಓವರ್‌ಗಳ ಆಟವಾದರೆ ಮಾತ್ರ ಬಳಸಬಹುದು.

IND vs NZ: ಭಾರತ- ಕಿವೀಸ್ ಫೈನಲ್ ಪಂದ್ಯ ರದ್ದಾದರೆ ಯಾವ ತಂಡಕ್ಕೆ ಸಿಗಲಿದೆ ಚಾಂಪಿಯನ್ ಪಟ್ಟ?
ಭಾರತ Vs ನ್ಯೂಜಿಲೆಂಡ್
ಪೃಥ್ವಿಶಂಕರ
|

Updated on: Mar 06, 2025 | 6:07 PM

Share

2025 ರ ಚಾಂಪಿಯನ್ಸ್ ಟ್ರೋಫಿಯ (Champions Trophy 2025)  ಫೈನಲ್ ಪಂದ್ಯ ಮಾರ್ಚ್ 9 ರಂದು ದುಬೈನ ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ಭಾರತ ಮತ್ತು ನ್ಯೂಜಿಲೆಂಡ್ (India vs New Zealand) ತಂಡಗಳು ಪರಸ್ಪರ ಮುಖಾಮುಖಿಯಾಗಲಿವೆ. ಈ ಆವೃತ್ತಿಯಲ್ಲಿ ಎರಡೂ ತಂಡಗಳ ನಡುವಿನ ಎರಡನೇ ಹಣಾಹಣಿ ಇದಾಗಿದೆ. ಇದಕ್ಕೂ ಮೊದಲು, ಈ ಎರಡೂ ತಂಡಗಳ ನಡುವೆ ಗುಂಪು ಹಂತದ ಕೊನೆಯ ಪಂದ್ಯವೂ ನಡೆದಿತ್ತು, ಅದರಲ್ಲಿ ಭಾರತ ಗೆದ್ದಿತ್ತು. ಆದಾಗ್ಯೂ, ಈ ಪಂದ್ಯದಲ್ಲಿ ಎರಡೂ ತಂಡಗಳ ಮೇಲೆ ಗೆಲ್ಲಲೇಬೇಕಾದ ಒತ್ತಡವಿದೆ. ಆದರೆ ಇದರ ಹೊರತಾಗಿಯೂ ನಾನಾ ಕಾರಣಗಳಿಂದ ಪಂದ್ಯ ರದ್ದಾದರೆ ಯಾವ ತಂಡ ಚಾಂಪಿಯನ್ ಆಗುತ್ತದೆ ಎಂಬ ಪ್ರಶ್ನೆ ಅಭಿಮಾನಿಗಳ ಮನದಲ್ಲಿ ಮೂಡಿದೆ. ಅದಕ್ಕೆಲ್ಲ ಉತ್ತರ ಇಲ್ಲಿದೆ.

ಫೈನಲ್ ರದ್ದಾದರೆ ಯಾರು ಚಾಂಪಿಯನ್?

2025 ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಇದುವರೆಗೆ 3 ಪಂದ್ಯಗಳು ಮಳೆಯಿಂದಾಗಿ ರದ್ದಾಗಿವೆ. ಆದರೆ ನಾಕೌಟ್ ಪಂದ್ಯಗಳಿಗಾಗಿಯೇ ಐಸಿಸಿ ಕೆಲವು ವಿಭಿನ್ನ ನಿಯಮಗಳನ್ನು ರೂಪಿಸಿದೆ. ಈ ಬಾರಿ ಐಸಿಸಿ ಎರಡೂ ಸೆಮಿಫೈನಲ್ ಪಂದ್ಯಗಳಿಗೆ ಮೀಸಲು ದಿನವನ್ನು ನಿಗದಿಪಡಿಸಿತ್ತು. ಅದರಂತೆ ಫೈನಲ್ ಪಂದ್ಯಕ್ಕೂ ಮೀಸಲು ದಿನವಿದೆ. ಅಂದರೆ ಈ ಪಂದ್ಯ ಮಾರ್ಚ್ 9 ರಂದು ಪೂರ್ಣಗೊಳ್ಳದಿದ್ದರೆ, ಪಂದ್ಯವನ್ನು ಮಾರ್ಚ್ 10 ರಂದು ಸಹ ನಡೆಸಲಾಗುತ್ತದೆ. ಆದರೆ ನಿಗದಿತ ದಿನಾಂಕದಂದು ಆಟವನ್ನು ಮುಗಿಸಲು ಎಲ್ಲ ಪ್ರಯತ್ನಗಳನ್ನು ಮಾಡಲಾಗುವುದು. ಇದು ಸಾಧ್ಯವಾಗದಿದ್ದರೆ, ಮೀಸಲು ದಿನದಂದು ಪಂದ್ಯವನ್ನು ಪ್ರಾರಂಭಿಸಲಾಗುತ್ತದ.

ಮತ್ತೊಂದೆಡೆ, ಸೆಮಿಫೈನಲ್ ನಿಯಮವೆಂದರೆ ಪಂದ್ಯ ರದ್ದಾದರೆ ಗುಂಪು ಹಂತದಲ್ಲಿ ಅಗ್ರಸ್ಥಾನ ಪಡೆಯುವ ತಂಡ ಫೈನಲ್‌ಗೆ ಅರ್ಹತೆ ಪಡೆಯುವಂತೆ ನಿಮಯ ರೂಪಿಸಲಾಗಿತ್ತು. ಆದರೆ ಈ ನಿಯಮ ಫೈನಲ್‌ ಪಂದ್ಯಕ್ಕೆ ಅನ್ವಯವಾಗುವುದಿಲ್ಲ. ಮಳೆ ಅಥವಾ ಇನ್ನಾವುದೇ ಕಾರಣದಿಂದಾಗಿ ಫೈನಲ್ ರದ್ದಾದರೆ, ಟ್ರೋಫಿಯನ್ನು ಹಂಚಿಕೊಳ್ಳಲಾಗುತ್ತದೆ. ಅಂದರೆ ಎರಡೂ ತಂಡಗಳನ್ನು ಜಂಟಿ ಚಾಂಪಿಯನ್ ಎಂದು ಪರಿಗಣಿಸಲಾಗುತ್ತದೆ. ಅದೇ ಸಮಯದಲ್ಲಿ, ಫಲಿತಾಂಶವನ್ನು ನಿರ್ಧರಿಸಲು ಡಕ್ವರ್ತ್ ಲೂಯಿಸ್ ನಿಯಮವನ್ನು ಸಹ ಬಳಸಬಹುದು, ಆದರೆ ಇದಕ್ಕಾಗಿ ಕನಿಷ್ಠ ಎರಡು ತಂಡಗಳೂ ತಲಾ 25 ಓವರ್‌ಗಳ ಆಟವನ್ನು ಆಡಿರುವುದು ಅಗತ್ಯ.

ಇದನ್ನೂ ಓದಿ
Image
2017 ರಿಂದ ಐಸಿಸಿ ಟೂರ್ನಿಗಳಲ್ಲಿ ಭಾರತದ ಪ್ರದರ್ಶನ ಹೇಗಿದೆ?
Image
ಚೋಕರ್ಸ್​ ಪಟ್ಟವನ್ನು ತನ್ನಲ್ಲೇ ಉಳಿಸಿಕೊಂಡ ದಕ್ಷಿಣ ಆಫ್ರಿಕಾ
Image
ಬಾಂಗ್ಲಾ ವಿರುದ್ಧ ಭಾರತಕ್ಕೆ ಪ್ರಯಾಸದ ಗೆಲುವು
Image
ಚಾಂಪಿಯನ್ಸ್ ಟ್ರೋಫಿ ಚೊಚ್ಚಲ ಪಂದ್ಯದಲ್ಲೇ ದಾಖಲೆ ಬರೆದ ಶಮಿ

ಇದನ್ನೂ ಓದಿ: 6-5=1..; 2017 ರಿಂದ ಐಸಿಸಿ ಟೂರ್ನಿಗಳಲ್ಲಿ ಭಾರತದ ಪ್ರದರ್ಶನ ಹೇಗಿದೆ?

ಚಾಂಪಿಯನ್ಸ್ ಟ್ರೋಫಿ ಫೈನಲ್ ಎಂದಾದರೂ ರದ್ದಾಗಿದೆಯೇ?

1998 ರಲ್ಲಿ ಪ್ರಾರಂಭವಾದ ಚಾಂಪಿಯನ್ಸ್ ಟ್ರೋಫಿಯಲ್ಲಿ ಇಲ್ಲಿಯವರೆಗೆ ಒಮ್ಮೆ ಮಾತ್ರ ಫೈನಲ್ ಪಂದ್ಯವನ್ನು ರದ್ದುಗೊಳಿಸಲಾಗಿದೆ. ವಾಸ್ತವವಾಗಿ, 2002 ರ ಚಾಂಪಿಯನ್ಸ್ ಟ್ರೋಫಿಯ ಫೈನಲ್ ಪಂದ್ಯವು ಭಾರತ ಮತ್ತು ಆತಿಥೇಯ ಶ್ರೀಲಂಕಾ ನಡುವೆ ನಡೆಯಬೇಕಿತ್ತು. ಆದರೆ ಮಳೆಯಿಂದಾಗಿ ಈ ಪಂದ್ಯವನ್ನು ಆಡಲು ಸಾಧ್ಯವಾಗಲಿಲ್ಲ, ಹೀಗಾಗಿ ಟ್ರೋಫಿಯನ್ನು ಎರಡೂ ತಂಡಗಳು ಹಂಚಿಕೊಂಡವು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ