ಬರೋಬ್ಬರಿ 345 ರನ್​: ಆದರೆ ಒಂದೇ ಒಂದು ಸಿಕ್ಸ್ ಇಲ್ಲ..!

| Updated By: ಝಾಹಿರ್ ಯೂಸುಫ್

Updated on: Jul 24, 2022 | 1:32 PM

Cricket Records: 3 ಬಾರಿ ತಂಡಗಳು ಏಕದಿನ ಇನಿಂಗ್ಸ್​​ನಲ್ಲಿ ಸಿಕ್ಸರ್ ಬಾರಿಸದೆಯೇ ಅತಿ ದೊಡ್ಡ ಮೊತ್ತವನ್ನು ಗಳಿಸಿವೆ. ಆ ತಂಡಗಳು ಯಾವುವು ಎಂದರೆ...

ಬರೋಬ್ಬರಿ 345 ರನ್​: ಆದರೆ ಒಂದೇ ಒಂದು ಸಿಕ್ಸ್ ಇಲ್ಲ..!
ಸಾಂದರ್ಭಿಕ ಚಿತ್ರ
Follow us on

Cricket Records: ಏಕದಿನ ಕ್ರಿಕೆಟ್‌ನ (ODI Cricket) ಆರಂಭಿಕ ದಿನಗಳಲ್ಲಿ ಸಿಕ್ಸ್​-ಫೋರ್​ಗಳು ಬಲು ಅಪರೂಪವಾಗಿತ್ತು. ಇದಾಗ್ಯೂ ಕಾಲ ಬದಲಾದಂತೆ ಬ್ಯಾಟಿಂಗ್ ಶೈಲಿ ಕೂಡ ಬದಲಾಯಿತು. ಅದರಲ್ಲೂ ಟಿ20 ಕ್ರಿಕೆಟ್ (T20 Cricket) ಬಂದ ಮೇಲೆ ಆಕ್ರಮಣಕಾರಿ ಕ್ರಿಕೆಟ್ ರೂಪ ತಾಳಿತು. ಹೀಗಾಗಿಯೇ ಇಂದು ಏಕದಿನ ಕ್ರಿಕೆಟ್​ನಲ್ಲಿ ಸಿಕ್ಸ್​-ಫೋರ್​ಗಳ ಸುರಿಮಳೆಯಾಗುತ್ತಿರುತ್ತವೆ. ಅಷ್ಟೇ ಅಲ್ಲದೆ ಬೃಹತ್ ಮೊತ್ತಗಳು ಕೂಡ ಮೂಡಿ ಬರುತ್ತಿವೆ. ಇದಕ್ಕೆ ತಾಜಾ ಉದಹಾರಣೆ ಎಂದರೆ ಇತ್ತೀಚೆಗೆ ಇಂಗ್ಲೆಂಡ್ (England) ತಂಡವು ನೆದರ್​ಲ್ಯಾಂಡ್ಸ್​ ವಿರುದ್ದ 4 ವಿಕೆಟ್ ವಿಕೆಟ್ ನಷ್ಟಕ್ಕೆ 498 ರನ್ ಬಾರಿಸಿರುವುದು. ಇದು ಏಕದಿನ ಕ್ರಿಕೆಟ್​ನ ಅತ್ಯಧಿಕ ಮೊತ್ತ ಕೂಡ ಆಗಿದೆ.

ಇದಲ್ಲದೆ ಇತ್ತೀಚೆಗೆ ಇಂಗ್ಲೆಂಡ್ ವಿರುದ್ದ ಸೌತ್ ಆಫ್ರಿಕಾ (South Africa) ತಂಡ 333 ರನ್​ ಬಾರಿಸಿತ್ತು. ಈ ಇನಿಂಗ್ಸ್​ನ ವಿಶೇಷತೆ ಎಂದರೆ ಈ ವೇಳೆ ಯಾವುದೇ ಬ್ಯಾಟ್ಸ್​ಮನ್ ಸಿಕ್ಸ್​ ಬಾರಿಸಿಲ್ಲ ಎಂಬುದು. ಅಂದರೆ ಸಿಕ್ಸ್​ ಬಾರಿಸದೇ ಬೃಹತ್ ಮೊತ್ತ ಪೇರಿಸಲಾಗಿತ್ತು. ಏಕದಿನ ಕ್ರಿಕೆಟ್​ ಇತಿಹಾಸದಲ್ಲಿ ಇಂತಹ ಮೂರು ಇನಿಂಗ್ಸ್​ಗಳು ಮೂಡಿಬಂದಿವೆ. ಆ ಇನಿಂಗ್ಸ್​ಗಳು ಯಾವುವು? ಯಾವ ತಂಡದ ವಿರುದ್ದ ಎಂಬುದರ ಕಂಪ್ಲೀಟ್ ಮಾಹಿತಿ ಈ ಕೆಳಗಿನಂತಿವೆ.

3 ಬಾರಿ ತಂಡಗಳು ಏಕದಿನ ಇನಿಂಗ್ಸ್​​ನಲ್ಲಿ ಸಿಕ್ಸರ್ ಬಾರಿಸದೆಯೇ ಅತಿ ದೊಡ್ಡ ಮೊತ್ತವನ್ನು ಗಳಿಸಿವೆ. ಆ ತಂಡಗಳು ಯಾವುವು ಎಂದರೆ….

ಇದನ್ನೂ ಓದಿ
Team India: 7 ತಿಂಗಳಲ್ಲಿ 7 ನಾಯಕರು: ವಿಶೇಷ ದಾಖಲೆ ಬರೆದ ಟೀಮ್ ಇಂಡಿಯಾ
ಸಚಿನ್, ಧೋನಿಗೂ ಸಿಕ್ಕಿಲ್ಲ ಈ ಗೌರವ: ಇಂಗ್ಲೆಂಡ್ ಕ್ರಿಕೆಟ್ ಸ್ಟೇಡಿಯಂಗೆ ಭಾರತೀಯ ಕ್ರಿಕೆಟಿಗನ ಹೆಸರು..!
Cheteshwar Pujara: ಒಟ್ಟು 997 ರನ್​: ಕೌಂಟಿ ಕ್ರಿಕೆಟ್​ನಲ್ಲಿ ಹೊಸ ಇತಿಹಾಸ ಬರೆದ ಪೂಜಾರ
T20 World Cup 2022: ಟಿ20 ವಿಶ್ವಕಪ್​ನಲ್ಲಿ ಕಣಕ್ಕಿಳಿಯುವ 16 ತಂಡಗಳು ಫೈನಲ್
  • #3 ಇಂಗ್ಲೆಂಡ್ (England) – ಫೆಬ್ರವರಿ 2011 ರಲ್ಲಿ ಏಕದಿನ ಸರಣಿಯಲ್ಲಿ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ಮುಖಾಮುಖಿಯಾಗಿತ್ತು. ಈ ಪಂದ್ಯದಲ್ಲಿ ಇಂಗ್ಲೆಂಡ್​ ತಂಡ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿತು. ಜೊನಾಥನ್ ಟ್ರಾಟ್ (137) ಅವರ ಶತಕದ ನೆರವಿನಿಂದ ಇಂಗ್ಲೆಂಡ್ ತಂಡವು 6 ವಿಕೆಟ್ ನಷ್ಟಕ್ಕೆ 333 ರನ್ ಗಳಿಸಿತು. ಈ ಇನ್ನಿಂಗ್ಸ್‌ನಲ್ಲಿ ಬರೋಬ್ಬರಿ 29 ಫೋರ್​ಗಳು ಮೂಡಿಬಂದಿದ್ದರೂ, ಇಂಗ್ಲೆಂಡ್​ನ ಯಾವುದೇ ಬ್ಯಾಟ್ಸ್‌ಮನ್ ಒಂದೇ ಒಂದು ಸಿಕ್ಸ್ ಬಾರಿಸಿರಲಿಲ್ಲ. ಇನ್ನು ಈ ಪಂದ್ಯವನ್ನು ಆಸ್ಟ್ರೇಲಿಯಾ ತಂಡವು 2 ವಿಕೆಟ್​ಗಳಿಂದ ಗೆದ್ದುಕೊಂಡಿತ್ತು.
  • #2 ದಕ್ಷಿಣ ಆಫ್ರಿಕಾ (South Africa) – ಜುಲೈ 19ರಂದು ಡರ್ಹಾಮ್ ನಲ್ಲಿ ನಡೆದ ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಏಕದಿನ ಪಂದ್ಯದಲ್ಲಿ ಆಫ್ರಿಕನ್ ತಂಡ ಇಂಗ್ಲೆಂಡ್ ತಂಡವನ್ನು 62 ರನ್ ಗಳಿಂದ ಸೋಲಿಸಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ ನಿಗದಿತ 50 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 333 ರನ್​ಗಳಿಸಿತು. ವಿಶೇಷ ಎಂದರೆ ಈ ಪಂದ್ಯದಲ್ಲಿ ಸೌತ್ ಆಫ್ರಿಕಾದ ಯಾವುದೇ ಬ್ಯಾಟ್ಸ್​ಮನ್ ಒಂದೇ ಒಂದು ಸಿಕ್ಸ್ ಬಾರಿಸಿರಲಿಲ್ಲ. ಇದಾಗ್ಯೂ 32 ಫೋರ್​ಗಳೊಂದಿಗೆ ಒಟ್ಟು 333 ರನ್​ ಕಲೆಹಾಕಿದ್ದರು.
  • #1 ಶ್ರೀಲಂಕಾ (Sri Lanka) – 2020 ರಲ್ಲಿ ವೆಸ್ಟ್ ಇಂಡೀಸ್ ವಿರುದ್ದದ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ಶ್ರೀಲಂಕಾ ತಂಡವು ಮೊದಲು ಬ್ಯಾಟ್ ಮಾಡಿತು. ಈ ಪಂದ್ಯದಲ್ಲಿ ಕುಸಾಲ್ ಮೆಂಡಿಸ್ ಮತ್ತು ಅವಿಷ್ಕಾ ಫೆರ್ನಾಂಡೋ ಶತಕ ಬಾರಿಸುವ ಮೂಲಕ ತಂಡದ ಮೊತ್ತವನ್ನು 345 ರನ್​ಗೆ ತಂದು ನಿಲ್ಲಿಸಿದ್ದರು. ವಿಶೇಷ ಎಂದರೆ ಈ ಪಂದ್ಯದಲ್ಲಿ 33 ಫೋರ್​ಗಳು ಮೂಡಿಬಂದರೂ ಲಂಕಾ ಬ್ಯಾಟ್ಸ್​ಮನ್​ಗಳ ಬ್ಯಾಟ್​ನಿಂದ ಒಂದೇ ಒಂದು ಸಿಕ್ಸ್ ಸಿಡಿದಿರಲಿಲ್ಲ. ಇನ್ನು ಈ ಬೃಹತ್ ಮೊತ್ತವನ್ನು ಬೆನ್ನತ್ತಿದ ವೆಸ್ಟ್ ಇಂಡೀಸ್ ತಂಡವು 184 ರನ್​ಗಳಿಗೆ ಆಲೌಟ್​ ಆಯಿತು. ಅಂದರೆ ಸಿಕ್ಸ್ ಬಾರಿಸದೇ ಅತ್ಯಧಿಕ ರನ್​ಗಳಿಸಿದ ದಾಖಲೆ ಶ್ರೀಲಂಕಾ ತಂಡದ ಹೆಸರಿನಲ್ಲಿದೆ.

ಈ ಮೂರು ಬೃಹತ್ ಮೊತ್ತದ ಇನಿಂಗ್ಸ್​ ಇದೀಗ ಸಿಕ್ಸ್​ ಇಲ್ಲದ ಏಕದಿನ ಕ್ರಿಕೆಟ್ ಇತಿಹಾಸ ಅಪರೂಪದ ಇನಿಂಗ್ಸ್​ ಆಗಿ ಗುರುತಿಸಿಕೊಂಡಿದೆ.

 

 

Published On - 1:31 pm, Sun, 24 July 22