87 ಸ್ಲಾಟ್ಗಳಿಗೆ 405 ಆಟಗಾರರ ಹರಾಜು; ಯಾವ ತಂಡಕ್ಕೆ ಎಷ್ಟು ಆಟಗಾರರು ಬೇಕು? ಇಲ್ಲಿದೆ ವಿವರ
IPL 2023 Mini Auction: ಮಿನಿ ಹರಾಜಿಗೆ ಆಯ್ಕೆಯಾದ 405 ಮಂದಿಯಲ್ಲಿ 273 ಮಂದಿ ಭಾರತೀಯ ಆಟಗಾರರಾಗಿದ್ದರೆ, 132 ಮಂದಿ ವಿದೇಶಿ ಆಟಗಾರರಾಗಿದ್ದಾರೆ.
ಐಪಿಎಲ್ ಮಿನಿ ಹರಾಜಿಗೆ (IPL 2023 Auction) ಇನ್ನ ಕೇವಲ ಒಂದು ದಿನ ಮಾತ್ರ ಉಳಿದಿದೆ. ಡಿಸೆಂಬರ್ 23ರಂದು ಮಧ್ಯಾಹ್ನ 2.30ರಿಂದ ಹರಾಜು ಪ್ರಕ್ರಿಯೆ ಆರಂಭವಾಗಲಿದೆ. ಈ ಬಾರಿ ಹರಾಜಿನಲ್ಲಿ 405 ಆಟಗಾರರು ಹರಾಜಾಗಲಿದ್ದು, ಈ ಪೈಕಿ ಗರಿಷ್ಠ 87 ಆಟಗಾರರು ಖರೀದಿದಾರರನ್ನು ಪಡೆಯಲಿದ್ದಾರೆ. ಈ ಬಾರಿ ವಿಶ್ವದಾದ್ಯಂತ 991 ಆಟಗಾರರು ಈ ಹರಾಜಿಗೆ ತಮ್ಮ ಹೆಸರನ್ನು ನೋಂದಣಿ ಮಾಡಿಕೊಂಡಿದ್ದರು. ಆದರೆ ಅಂತಿಮ ಪಟ್ಟಿಯಲ್ಲಿ 405 ಆಟಗಾರರು ಮಾತ್ರ ಸ್ಥಾನ ಪಡೆದಿದ್ದಾರೆ. ಮಿನಿ ಹರಾಜಿಗೆ ಆಯ್ಕೆಯಾದ 405 ಮಂದಿಯಲ್ಲಿ 273 ಮಂದಿ ಭಾರತೀಯ ಆಟಗಾರರಾಗಿದ್ದರೆ, 132 ಮಂದಿ ವಿದೇಶಿ ಆಟಗಾರರಾಗಿದ್ದಾರೆ. 132 ವಿದೇಶಿ ಆಟಗಾರರ ಪೈಕಿ 4 ಆಟಗಾರರು ಅಸೋಸಿಯೇಟ್ ನೇಷನ್‌ನವರು. ಒಟ್ಟು 119 ಕ್ಯಾಪ್ಡ್ ಅಂದರೆ ಅಂತಾರಾಷ್ಟ್ರೀಯ ಕ್ರಿಕೆಟ್ ಆಟಗಾರರು ಮತ್ತು 282 ಅನ್ ಕ್ಯಾಪ್ಡ್ ಆಟಗಾರರಿದ್ದಾರೆ.
87 ಸ್ಲಾಟ್ಗಳನ್ನು ತುಂಬಬೇಕಿದೆ
ಆರಂಭದಲ್ಲಿ, 10 ಫ್ರಾಂಚೈಸಿಗಳು 991 ಆಟಗಾರರ ಪೈಕಿ 369 ಆಟಗಾರರನ್ನು ಶಾರ್ಟ್‌ಲಿಸ್ಟ್ ಮಾಡಿದ್ದವು. ಆದರೆ ನಂತರ ತಂಡದ ಇಚ್ಛೆಯ ಮೇರೆಗೆ 36 ಆಟಗಾರರನ್ನು ಈ ಪಟ್ಟಿಗೆ ಸೇರಿಸಲಾಯಿತು. ಈ ಮೂಲಕ ಒಟ್ಟು 405 ಆಟಗಾರರು ಈ ಬಾರಿಯ ಹರಾಜಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ 405 ಆಟಗಾರರಲ್ಲಿ ಖಾಲಿ ಇರುವ 87 ಸ್ಲಾಟ್ಗಳನ್ನು ತುಂಬಬೇಕಿದೆ. ಹೀಗಾಗಿ ಯಾವ ತಂಡಕ್ಕೆ ಎಷ್ಟು ಆಟಗಾರರು ಬೇಕಾಗಿದ್ದಾರೆ. ಅವರ ಬಳಿ ಎಷ್ಟು ಹಣವಿದೆ ಎಂಬುದರ ವಿವರ ಇಲ್ಲಿದೆ.
IPL: ಮಿಲಿಯನ್ ಡಾಲರ್ ಟೂರ್ನಿ ಐಪಿಎಲ್ನ ಬ್ರಾಂಡ್ ಮೌಲ್ಯ ಎಷ್ಟು ಸಾವಿರ ಕೋಟಿ ಗೊತ್ತಾ? ಇಲ್ಲಿದೆ ವಿವರ
ಎಲ್ಲಾ ತಂಡಗಳ ವಿವರ ಇಲ್ಲಿದೆ
ಫ್ರಾಂಚೈಸಿ |
ಬಾಕಿ ಉಳಿದಿರುವ ಹಣ | ಖರೀದಿಸಬೇಕಾದ ಆಟಗಾರರ ಸಂಖ್ಯೆ | ಖಾಲಿ ಇರುವ ವಿದೇಶಿ ಆಟಗಾರರ ಸ್ಲಾಟ್ |
ಚೆನ್ನೈ ಸೂಪರ್ ಕಿಂಗ್ಸ್ | 20.45 ಕೋಟಿ. ರೂ | 7 |
2 |
ದೆಹಲಿ ಕ್ಯಾಪಿಟಲ್ಸ್ |
19.45 ಕೋಟಿ. ರೂ | 5 | 2 |
ಗುಜರಾತ್ ಟೈಟಾನ್ಸ್ | 19.25 ಕೋಟಿ. ರೂ | 7 |
3 |
ಕೋಲ್ಕತ್ತಾ ನೈಟ್ ರೈಡರ್ಸ್ |
7.05 ಕೋಟಿ. ರೂ | 11 | 3 |
ಲಕ್ನೋ ಸೂಪರ್ ಜೈಂಟ್ಸ್ | 23.35 ಕೋಟಿ. ರೂ | 10 |
4 |
ಮುಂಬೈ ಇಂಡಿಯನ್ಸ್ |
20.55 ಕೋಟಿ. ರೂ | 9 | 3 |
ಪಂಜಾಬ್ ಕಿಂಗ್ಸ್ | 32.2 ಕೋಟಿ. ರೂ | 9 |
3 |
ರಾಯಲ್ ಚಾಲೆಂಜರ್ಸ್ ಬೆಂಗಳೂರು |
8.75 ಕೋಟಿ. ರೂ | 7 | 2 |
ರಾಜಸ್ಥಾನ್ ರಾಯಲ್ಸ್ | 13.2 ಕೋಟಿ. ರೂ | 9 |
4 |
ಸನ್ರೈಸರ್ಸ್ ಹೈದರಾಬಾದ್ |
42.25 ಕೋಟಿ. ರೂ | 13 |
4 |
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:45 am, Thu, 22 December 22