AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2023 Mini Auction Live Streaming: ಐಪಿಎಲ್ ಮಿನಿ ಹರಾಜು ಯಾವ ಚಾನೆಲ್​ನಲ್ಲಿ ಎಷ್ಟು ಗಂಟೆಗೆ ನೇರ ಪ್ರಸಾರ? ಇಲ್ಲಿದೆ ವಿವರ

IPL Auction 2023 Live Updates: ಈ ಬಾರಿ ಐಪಿಎಲ್ ಮಿನಿ ಹರಾಜು ಪೂಲ್‌ನಲ್ಲಿ 405 ಆಟಗಾರರಿದ್ದಾರೆ. ಈ 405 ಆಟಗಾರರಲ್ಲಿ 273 ಭಾರತೀಯರು ಮತ್ತು 132 ವಿದೇಶಿ ಆಟಗಾರರು ಸೇರಿದ್ದಾರೆ.

IPL 2023 Mini Auction Live Streaming: ಐಪಿಎಲ್ ಮಿನಿ ಹರಾಜು ಯಾವ ಚಾನೆಲ್​ನಲ್ಲಿ ಎಷ್ಟು ಗಂಟೆಗೆ ನೇರ ಪ್ರಸಾರ? ಇಲ್ಲಿದೆ ವಿವರ
ಪ್ರಾತಿನಿಧಿಕ ಚಿತ್ರImage Credit source: insidesport
TV9 Web
| Edited By: |

Updated on:Dec 22, 2022 | 1:47 PM

Share

2023ರ ಇಂಡಿಯನ್ ಪ್ರೀಮಿಯರ್ ಲೀಗ್ ಮಿನಿ ಹರಾಜು (IPL Auction 2023) ಇದೇ ಶುಕ್ರವಾರ ಕೊಚ್ಚಿಯಲ್ಲಿ ಮಧ್ಯಾಹ್ನ 2.30ರಿಂದ ಆರಂಭವಾಗಲಿದೆ. ಕಳೆದ ವರ್ಷ ಮೆಗಾ ಹರಾಜು ನಡೆದಿದ್ದರಿಂದ ಈ ಬಾರಿ ಮಿನಿ ಹರಾಜು ನಡೆಸಲಾಗುತ್ತಿದೆ. ಹೀಗಾಗಿ ಈ ಹರಾಜಿನಲ್ಲಿ 900 ಕ್ಕೂ ಹೆಚ್ಚು ಆಟಗಾರರು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದರು ಆದರೆ ಅಂತಿಮವಾಗಿ 405 ಹೆಸರುಗಳು ಮಾತ್ರ ಅಂತಿಮ ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ಈಗ 10 ತಂಡಗಳು ಈ ಆಟಗಾರರ ಭವಿಷ್ಯವನ್ನು ನಿರ್ಧರಿಸಲಿವೆ. ಈ ಬಾರಿಯ ಐಪಿಎಲ್ ಹರಾಜು ಒಂದು ದಿನ ಮಾತ್ರ ನಡೆಯಲಿದ್ದು, ಯಾವ ತಂಡಕ್ಕೆ ಯಾವ ಆಟಗಾರ ಸೇರಲಿದ್ದಾನೆ ಎಂಬುದು ಎಲ್ಲರಲ್ಲೂ ಕುತೂಹಲ ಕೆರಳಿಸಿದೆ.

ಈ ಬಾರಿ ಐಪಿಎಲ್ ಮಿನಿ ಹರಾಜು ಪೂಲ್‌ನಲ್ಲಿ 405 ಆಟಗಾರರಿದ್ದಾರೆ. ಈ 405 ಆಟಗಾರರಲ್ಲಿ 273 ಭಾರತೀಯರು ಮತ್ತು 132 ವಿದೇಶಿ ಆಟಗಾರರು ಸೇರಿದ್ದಾರೆ. ಟೆಸ್ಟ್ ಆಡುವ ದೇಶಗಳ ಹೊರತಾಗಿ, ನಾಲ್ಕು ಸಹವರ್ತಿ ರಾಷ್ಟ್ರಗಳ ಆಟಗಾರರ ಹೆಸರನ್ನು ಸಹ ಸೇರಿಸಲಾಗಿದೆ. ಇದರಲ್ಲಿ 119 ಕ್ಯಾಪ್ಡ್ ಆಟಗಾರರು, 282 ಅನ್‌ಕ್ಯಾಪ್ಡ್ ಆಟಗಾರರು ಮತ್ತು 4 ಅಸೋಸಿಯೇಟ್ ದೇಶಗಳ ಆಟಗಾರರಿದ್ದಾರೆ. ಹರಾಜಿನಲ್ಲಿ ಒಟ್ಟು 87 ಸ್ಥಾನಗಳಿಗೆ ಬಿಡ್ಡಿಂಗ್ ನಡೆಯಲಿದ್ದು, ಈ ಪೈಕಿ 30 ಸ್ಥಾನಗಳು ವಿದೇಶಿ ಆಟಗಾರರಿಗೆ ಮೀಸಲಾಗಿವೆ.

ಯಾವ ತಂಡದಲ್ಲಿ ಎಷ್ಟು ಹಣವಿದೆ?

ಎಲ್ಲಾ ತಂಡಗಳು ಈಗಾಗಲೇ ತಮ್ಮಲ್ಲಿ ಉಳಿಸಿಕೊಂಡಿರುವ ಮತ್ತು ಬಿಡುಗಡೆಯಾದ ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಿವೆ. ಹಿಂದಿನ ಮೆಗಾ ಹರಾಜಿನಲ್ಲಿ ಎಲ್ಲಾ ತಂಡಗಳು ಒಂದೇ ಪರ್ಸ್‌ನೊಂದಿಗೆ ಹರಾಜಿಗೆ ಎಂಟ್ರಿಕೊಟ್ಟಿದ್ದವು. ಆದರೆ ಈ ಬಾರಿ ಪರಿಸ್ಥಿತಿ ವಿಭಿನ್ನವಾಗಿದೆ. ಸನ್ ರೈಸರ್ಸ್ ಹೈದರಾಬಾದ್ ಬಳಿ ಅತ್ಯಧಿಕ 42.25 ಕೋಟಿ ರೂ. ಇದ್ದರೆ, 32.2 ಕೋಟಿ ರೂಗಳೊಂದಿಗೆ ಪಂಜಾಬ್ ಕಿಂಗ್ಸ್ ಎರಡನೇ ಸ್ಥಾನದಲ್ಲಿದೆ. ಹಾಗೆಯೇ ಲಕ್ನೋ ಸೂಪರ್‌ಜೈಂಟ್ಸ್ ಬಳಿ 23.35 ಕೋಟಿ ರೂ., ಕೆಕೆಆರ್ ಬಳಿ ರೂ. 7.05 ಕೋಟಿ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಬಳಿ ರೂ. 8.75 ಕೋಟಿ ಹಣ ಮಿಕ್ಕಿದೆ. ಹೀಗಾಘಿ ಇರುವ ಹಣದಲ್ಲೇ ಎಲ್ಲಾ 10 ತಂಡಗಳು ತಮ್ಮಲ್ಲಿ ಖಾಲಿ ಇರುವ ಜಾಗಗಳನ್ನು ಭರ್ತಿ ಮಾಡಿಕೊಳ್ಳಬೇಕಿದೆ.

IPL: ಮಿಲಿಯನ್ ಡಾಲರ್ ಟೂರ್ನಿ ಐಪಿಎಲ್​ನ ಬ್ರಾಂಡ್ ಮೌಲ್ಯ ಎಷ್ಟು ಸಾವಿರ ಕೋಟಿ ಗೊತ್ತಾ? ಇಲ್ಲಿದೆ ವಿವರ

2 ಕೋಟಿ ಮೂಲ ಬೆಲೆ ಹೊಂದಿರುವ ಆಟಗಾರರಿವರು

ಕೇನ್ ವಿಲಿಯಮ್ಸನ್, ರೈಲೀ ರುಸ್ಸೋ, ಜೇಸನ್ ಹೋಲ್ಡರ್, ಸ್ಯಾಮ್ ಕರನ್, ಕ್ಯಾಮೆರಾನ್ ಗ್ರೀನ್, ಟಾಮ್ ಬ್ಯಾಂಟನ್, ನಿಕೋಲಸ್ ಪೂರನ್, ಫಿಲ್ ಸಾಲ್ಟ್, ಕ್ರಿಸ್ ಜೋರ್ಡಾನ್, ಆಡಮ್ ಮಿಲ್ನೆ, ಆದಿಲ್ ರಶೀದ್, ಕ್ರಿಸ್ ಜೋರ್ಡಾನ್, ಟ್ರಾವಿಸ್ ಹೆಡ್, ಜಿಮ್ಮಿ ನೀಶಮ್, ರಾಸ್ಸಿ ವ್ಯಾನ್ ಡೆರ್ ಡುಸ್ಸೆನ್, ಕ್ರಿಸ್ಸೆನ್, ಜೇಮಿ ಓವರ್ಟನ್, ಕ್ರೇಗ್ ಓವರ್ಟನ್, ಟೈಮಲ್ ಮಿಲ್ಸ್ ಅವರಂತಹ ಆಟಗಾರರ ಹೆಸರುಗಳು ಎರಡು ಕೋಟಿ ಮೂಲ ಬೆಲೆಯಲ್ಲಿ ಹರಾಜಿಗೆ ಎಂಟ್ರಿಕೊಡಲಿವೆ.

ಮಿನಿ ಹರಾಜಿನ ಬಗ್ಗೆ ಪೂರ್ಣ ವಿವರ ಇಲ್ಲಿದೆ.

ಐಪಿಎಲ್ ಮಿನಿ ಹರಾಜು ಯಾವಾಗ ನಡೆಯುತ್ತದೆ?

ಐಪಿಎಲ್ 2023ರ ಮಿನಿ ಹರಾಜು 23 ಡಿಸೆಂಬರ್ 2022 ರಂದು ಶುಕ್ರವಾರ ನಡೆಯಲಿದೆ.

ಮಿನಿ ಹರಾಜು ಎಲ್ಲಿ ನಡೆಯಲಿದೆ?

ಈ ಮಿನಿ ಹರಾಜು ಕೊಚ್ಚಿಯಲ್ಲಿ ನಡೆಯಲಿದೆ.

ಯಾವಾಗ ಪ್ರಾರಂಭವಾಗುತ್ತದೆ?

ಮಧ್ಯಾಹ್ನ 02:30 ಕ್ಕೆ ಮಿನಿ ಹರಾಜು ಪ್ರಾರಂಭವಾಗುತ್ತದೆ.

ಮಿನಿ ಹರಾಜಿನ ನೇರ ಪ್ರಸಾರವನ್ನು ಯಾವ ಚಾನಲ್​ನಲ್ಲಿ ವೀಕ್ಷಿಸಬಹುದು?

ಮಿನಿ ಹರಾಜಿನ ನೇರ ಪ್ರಸಾರವು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನ ಚಾನಲ್‌ನಲ್ಲಿ ಇರಲಿದೆ.

ಮಿನಿ ಹರಾಜಿನ ಲೈವ್ ಸ್ಟ್ರೀಮಿಂಗ್ ಅನ್ನು ಎಲ್ಲಿ ವೀಕ್ಷಿಸಬಹುದು?

ಐಪಿಎಲ್ ಮಿನಿ ಹರಾಜಿನ ಲೈವ್ ಸ್ಟ್ರೀಮಿಂಗ್ Viacom 18 ನ ಅಪ್ಲಿಕೇಶನ್ Voot ನಲ್ಲಿ ಇರುತ್ತದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:43 pm, Thu, 22 December 22