RCB vs MI, IPL 2021: ತಂದೆ ಔಟಾದಾಗ ಬೇಸರದಲ್ಲಿ ಎಬಿ ಡಿವಿಲಿಯರ್ಸ್ ಮಗ ಮಾಡಿದ್ದೇನು ನೋಡಿ
AB de Villiers son smashed hand on the chair: ಎಬಿ ಡಿವಿಲಿಯರ್ಸ್ ಐಪಿಎಲ್ 2021 ಎರನಡೇ ಚರಣದಲ್ಲಿ ಎದುರಾಳಿಗೆ ಮಾರಕವಾಗಿ ಗೋಚರಿಸಿಲ್ಲ. ಮುಂಬೈ ಇಂಡಿಯನ್ಸ್ ವಿರುದ್ಧವೂ 11 ರನ್ಗೆ ನಿರ್ಗಮಿಸಿದರು. ಎಬಿಡಿ ಔಟ್ ಆಗಿದ್ದು ಅವರ ಹೆಂಡತಿ ಡೆನಿಯಲ್ ಹಾಗೂ ಮಗನಿಗೂ ಶಾಕ್ ಆಯಿತು.

ಯುಎಇನಲ್ಲಿ (UAE) ನಡೆಯುತ್ತಿರುವ ಇಂಡಿಯಲ್ ಪ್ರೀಮಿಯರ್ ಲೀಗ್ 2021 (IPL 2021) ಎರಡನೇ ಚರಣದ ಕಾವು ನಿಧಾನವಾಗಿ ಏರುತ್ತಿದೆ. ಪ್ಲೇ ಆಫ್ ಸುತ್ತಿಗೇರಲು ತಂಡಗಳು ಹರಸಾಹಸ ಪಡುತ್ತಿದ್ದು, ಗೆಲುವಿಗಾಗಿ ಕಠಿಣ ಹೋರಾಟ ನಡೆಸುತ್ತಿದೆ. ಭಾನುವಾರ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ (Royal Challengers Bangalore vs Mumbai Indians) ನಡುವಣ ಪಂದ್ಯ ಕೂಡ ಉಭಯ ತಂಡಗಳಿಗೆ ಮುಖ್ಯವಾಗಿತ್ತು. ಆದರೆ, ಹ್ಯಾಟ್ರಿಕ್ ಸೋಲಿನಿಂದ ತಪ್ಪಿಸಿಕೊಳ್ಳಲು ರೋಹಿತ್ ಶರ್ಮಾ (Rohit Sharma) ಪಡೆಗೆ ಸಾಧ್ಯವಾಗಲಿಲ್ಲ. ಭರ್ಜರಿ ಕಮ್ಬ್ಯಾಕ್ ಮಾಡಿದ ಆರ್ಸಿಬಿ (RCB) 54 ರನ್ಗಳ ಗೆಲುವು ಸಾಧಿಸಿತು. ಈ ಬಾರಿಯ ಐಪಿಎಲ್ಗೆ ಆಟಗಾರರ ಕುಟುಂಬದವರನ್ನು ಮೈದಾನದೊಳಗೆ ಪಂದ್ಯ ವೀಕ್ಷಿಸಲು ಅವಕಾಶ ಮಾಡಿಕೊಡಲಾಗಿದೆ. ಅಂತೆಯೆ ನಿನ್ನೆಯ ಪಂದ್ಯಕ್ಕೆ ಎಬಿ ಡಿವಿಲಿಯರ್ಸ್ (AB de Villiers) ಅವರ ಮಡದಿ ಡೆನಿಯಲ್ ಮತ್ತು ಮಕ್ಕಳು ಹಾಜರಿದ್ದರು.
ಡಿವಿಲಿಯರ್ಸ್ ಎರಡನೇ ಚರಣದ ಐಪಿಎಲ್ನಲ್ಲಿ ಎದುರಾಳಿಗೆ ಮಾರಕವಾಗಿ ಗೋಚರಿಸಿಲ್ಲ. ಆಡಿದ ಮೂರು ಪಂದ್ಯಗಳಲ್ಲಿ ಎಬಿಡಿ ಬ್ಯಾಟ್ ಅಷ್ಟೊಂದು ಸದ್ದು ಮಾಡಲಿಲ್ಲ. ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲೂ ಮಿ. 360 17ನೇ ಓವರ್ನ ಜಸ್ಪ್ರೀತ್ ಬುಮ್ರಾ ಅವರ ಬೌಲಿಂಗ್ನಲ್ಲಿ ಕೀಪರ್ ಕ್ವಿಂಟನ್ ಡಿಕಾಕ್ಗೆ ಕ್ಯಾಚ್ ನೀಡಿ 11 ರನ್ಗೆ ನಿರ್ಗಮಿಸಿದರು.
ಎಬಿಡಿ ಔಟ್ ಆಗಿದ್ದು ಆರ್ಸಿಬಿ ತಂಡಕ್ಕೆ ಮಾತ್ರವಲ್ಲದೆ ಅವರ ಹೆಂಡತಿ ಡೆನಿಯಲ್ ಹಾಗೂ ಮಗನಿಗೂ ಶಾಕ್ ಆಯಿತು. ಡಿವಿಲಿಯರ್ಸ್ ಔಟಾದ ತಕ್ಷಣ ಅವರ ಮಗ ತಮ್ಮ ಕೈಯನ್ನು ಕೂತಿದ್ದ ಚೇರ್ಗೆ ಬಡಿದು ನೋವನ್ನು ಹೊರಹಾಕುತ್ತಿರುವ ದೃಶ್ಯ ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
— lawgical Anna? (@annaanupam1) September 26, 2021
ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಆರ್ಸಿಬಿ ಆರಂಭದಲ್ಲೇ ದೇವದತ್ ಪಡಿಕ್ಕಲ್(0) ವಿಕೆಟ್ ಕಳೆದುಕೊಂಡಿತು. 2ನೇ ವಿಕೆಟ್ಗೆ ನಾಯಕ ವಿರಾಟ್ ಕೊಹ್ಲಿ (51) ಹಾಗೂ ಕೆಎಸ್ ಭರತ್ (32) 69 ರನ್ಗಳ ಕಾಣಿಕೆ ನೀಡಿದರು. ಬಳಿಕ ಮ್ಯಾಕ್ಸ್ವೆಲ್ ಸ್ಫೋಟಕ ಆಟವಾಡಿ 37 ಎಸೆತಗಳಲ್ಲಿ 6 ಬೌಂಡರಿ, 3 ಸಿಕ್ಸರ್ ಸಿಡಿಸಿ 56 ರನ್ ಚಚ್ಚಿದರು. ಆರ್ಸಿಬಿ 20 ಓವರ್ನಲ್ಲಿ 6 ವಿಕೆಟ್ ನಷ್ಟಕ್ಕೆ 165 ರನ್ ಕಲೆಹಾಕಿತು.
ಟಾರ್ಗೆಟ್ ಬೆನ್ನಟ್ಟಿದ ಮುಂಬೈ ಪವರ್ ಪ್ಲೇ ಓವರ್ನಲ್ಲಿ ಮನಬಂದಂತೆ ಬ್ಯಾಟ್ ಬೀಸಿತು. ರೋಹಿತ್ ಶರ್ಮಾ (43) ಹಾಗೂ ಕ್ವಿಂಟನ್ ಡಿಕಾಕ್ (24) ಬೊಂಬಾಟ್ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಆದರೆ, ಇವರಿಬ್ಬರ ನಿರ್ಗಮನದ ನಂತರ ಮುಂಬೈ ದಿಢೀರ್ ಕುಸಿತ ಕಂಡಿತು. 18.1 ಓವರ್ನಲ್ಲಿ 111 ರನ್ಗೆ ಆಲೌಟ್ ಆಯಿತು.
ಈ ಗೆಲುವಿನೊಂದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೊನೆಗೂ ಗೆಲುವಿನ ಲಯಕ್ಕೆ ಮರಳಿಸಿದೆ. ಈವರೆಗೆ ಒಟ್ಟು 10 ಪಂದ್ಯಗಳನ್ನು ಆಡಿದ್ದು ಆರರಲ್ಲಿ ಗೆಲುವು ಕಂಡಿದೆ. ನಾಲ್ಕರಲ್ಲಿ ಸೋತಿದೆ. ಒಟ್ಟು 12 ಅಂಕ ಸಂಪಾದಿಸಿದ್ದು, ಪಾಯಿಂಟ್ ಪಟ್ಟಿಯಲ್ಲಿ -0.339 ನೆಟ್ರೇಟ್ನೊಂದಿಗೆ ಮೂರನೇ ಸ್ಥಾನದಲ್ಲಿದೆ.
(AB de Villiers son smashed hand on the chair in the row when his dad got out in IPl 2021 RCB vs MI Match)
